ಮೇಲುಕೋಟೆ: ಸಂಸದೆ ಸುಮಲತಾ ನಿಗದಿ ಮಾಡಿದ ದಿನ ನಾನು ಮೇಲುಕೋಟೆ ಶ್ರೀ ಚೆಲುವನಾರಾಯಣಸ್ವಾಮಿ ಸನ್ನಿಧಿಯಲ್ಲಿ ದಾಖಲೆಗಳೊಂದಿಗೆ ಆಣೆಪ್ರಮಾಣಕ್ಕೆ ಬದ್ಧ ಎಂದು ಶಾಸಕ ಸಿ.ಎಸ್.ಪುಟ್ಟರಾಜು ಸಂಸದರ ಪಂಥಾಹ್ವಾನ ಸ್ವೀಕರಿಸಿದ್ದಾರೆ.
ಸೋಮವಾರ ಬೆಳಿಗ್ಗೆ ಚೆಲುವನಾರಾಯಣಸ್ವಾಮಿಗೆ ಪೂಜೆ ನೆರವೇರಿಸಿದ ಶಾಸಕರು ಸುದ್ದಿಗಾರರೊಂದಿಗೆ ಮಾತನಾಡಿ, ಸಂಸದೆ ಚುನಾವಣಾ ದೃಷ್ಟಿಯಲ್ಲಿ ಆಧಾರ ರಹಿತವಾದ ಆರೋಪ ಮಾಡಿ ಚೆಲುವನಾರಾಯಣನ ಕ್ಷೇತ್ರದಲ್ಲಿ ಆಣೆ-ಪ್ರಮಾಣ ಮಾಡಲು ಆಹ್ವಾನಿಸಿದ್ದಾರೆ. ದಾಖಲೆಗಳೊಂದಿಗೆ ಅವರು ಮೇಲುಕೋಟೆಗೆ ಬರಲಿ ನೇರಾನೇರ ಬಹಿರಂಗವಾಗಿ ಚರ್ಚಿಸೋಣ, ಪ್ರಮಾಣ ಮಾಡೋಣ, ಸಂಸದರಿಗೆ ಒಳ್ಳೆಯ ಬುದ್ದಿಕೊಡಲಿ ಎಂದು ದೇವರಲ್ಲಿ ಪ್ರಾರ್ಥಿಸಿದ್ದೇನೆ ಎಂದರು.
ಅAಬರೀಶ್ ಮತ್ತು ನನ್ನ ಸಂಬಂಧ ಉತ್ತಮವಾಗಿತ್ತು. ಅವರ ಕೊನೆಯ ದೀಪಾವಳಿಯಲ್ಲಿ ನಾನೂ ಭಾಗವಹಿಸಿದ್ದೆ. ನಮ್ಮ ನಡುವಿನ ಸಂಬAಧ ಹೇಗಿತ್ತು ಎಂಬುದನ್ನು ರಾಕ್‌ಲೈನ್ ವೆಂಕಟೇಶ್‌ರನ್ನು ಕೇಳಿ ತಿಳಿದುಕೊಳ್ಳಲಿ. ಅಂಬರೀಶ್ ಗೆಲುವಿಗಾಗಿ ನಮ್ಮ ಮನೆಯ ಹಣ ಹಾಕಿ ಶ್ರಮಿಸಿದ್ದೇನೆ. ಸಮ್ಮಿಶ್ರ ಸರ್ಕಾರದ ವೇಳೆ ವಿದೇಶದಲ್ಲಿ ಅವರಿಗೆ ಚಿಕಿತ್ಸೆ ಕೊಡಿಸಲು ನಾನೇ ಮುಂದೆ ನಿಂತು ಶ್ರಮಿಸಿದ್ದೇನೆ ಎಂದು ಹೇಳಿದರು.
ನಿವೇಶನ ಮರಳಿಸಿದ್ದೇನೆ:
ಮುಡಾ ನಿವೇಶನ ನನಗೆ ಮಂಜೂರಾದ ತಕ್ಷಣ ಮರಳಿಸಿದ್ದೇನೆ. ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣಾ ಹಂತದಲ್ಲಿರುವಾಗ ಹಾದಿ ಬೀದಿಯಲ್ಲಿ ಚರ್ಚಿಸುವುದು ಒಳ್ಳೆಯ ಬೆಳವಣೆಗೆಯಲ.್ಲ ಈ ಸಂಬAಧ ನ್ಯಾಯಾಲಯ ನೀಡುವ ತೀರ್ಪಿಗೆ ಎಲ್ಲರೂ ಬದ್ಧರಾಗಿರಬೇಕಾಗುತ್ತೇವೆ ಎಂದರು. ಜನಪರವಾಗಿ ಕೆಲಸ ಮಾಡುವುದನ್ನು ಮಾಜಿ ಪ್ರದಾನಿ ದೇವೇಗೌಡರಿಂದ ಕಲಿತಿದ್ದೇನೆ. ಅವರು ಹಾಕಿಕೊಟ್ಟ ದಾರಿಯಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದೇನೆ. ಭ್ರಷ್ಟಾಚಾರ ಮಾಡಿದ್ದರೆ ರಾಜಕಾರಣದಲ್ಲಿ ಉಳಿಯುತ್ತಿರಲಿಲ್ಲ, ಚುನಾವಣೆ ಹತ್ತಿರವಾಗುತ್ತಿದ್ದಂತೆ ಸುಮಲತಾರಿಗೆ ಮುಡಾ ನಿವೇಶನ ಪ್ರಕರಣ ನೆನಪಾಗುತ್ತದೆ. ಇದೊಂದು ದೊಡ್ಡ ಷಡ್ಯಂತ್ರ ನಿಮ್ಮ ಕುಟುಂಬಕ್ಕೆ ಮಂಜೂರಾದ ಎರಡು ನಿವೇಶನವನ್ನು ನೀವೇನು ಮಾಡಿದ್ದೀರಿ? ಸಂಸದರೆ ಮಾರಾಟ ಮಾಡಿಲ್ಲವೆ ಎಂದು ಪ್ರಶ್ನಿಸಿದ ಶಾಸಕರು, ಜಾ.ದಳ ಶಾಸಕರ ಬಗ್ಗೆ ಹಗುರವಾಗಿ ಮಾತನಾಡಿ ದೊಡ್ಡವರಾಗಬೇಕು ಎಂದುಕೊಂಡಿದ್ದರೆ ಈ ಮನಸ್ಥಿತಿಯಿಂದ ಹೊರಬನ್ನಿ ಎಂದರು.
ಗಾಳಿಯಲ್ಲಿ ಗುಂಡು ಹೊಡೆಯಬೇಡಿ:
ಆಣೆ ಪ್ರಮಾಣದ ಸವಾಲು ಸ್ವೀಕರಿಸಿದ ಪುಟ್ಟರಾಜು ಇಲ್ಲಸಲ್ಲದ ಆರೋಪಮಾಡಿ ಗಾಳಿಯಲ್ಲಿ ಗುಂಡುಹೊಡೆಯುವ ಕೆಲಸವನ್ನು ಸಂಸದರು ಮಾಡಬಾರದು. ದಾಖಲೆಗಳಿದ್ದರೆ ತೆಗೆದುಕೊಂಡು ಬರಲಿ, ನನ್ನದು ಭ್ರಷ್ಟಾಚಾರರಹಿತವಾದ ಪಾರದರ್ಶಕ ರಾಜಕಾರಣ. ಮನೆಯಿಂದ ದುಡ್ಡು ತಂದು ಜನಸೇವೆ ಮಾಡುತ್ತಿದ್ದೇನೆ. ನನಗೆ ಯಾವುದೇ ಕೆಟ್ಟ ಚಟಗಳಿಲ್ಲ, ಇಸ್ಪೀಟ್ ಆಡುವುದಿಲ್ಲ, ಜೂಜಾಡೋದಿಲ್ಲ. ನನಗೆ ಜನಸೇವೆ ಒಂದೇ ಗೊತ್ತಿರೋದು. ದಾಖಲೆಗಳಿದ್ದರೆ ತನ್ನಿ, ಜಿಲ್ಲೆಗೆ ದೊಡ್ಡವರು ಸಂಸದರೇ, ಹಾಗಾಗಿ ದಿನಾಂಕ ನೀವೇ ನಿಗದಿ ಮಾಡಿ ಎಂದೂ ಸವಾಲೆಸೆದರು.
ಜಿಲ್ಲೆಗೆ ಕೊಡುಗೆ ಏನು:
ಮಾತನಾಡುವ ಬದಲು ಜಿಲ್ಲೆಗೆ ಕೊಡುಗೆ ಏನು ಎಂಬದನ್ನು ಹೇಳಬೇಕು ಎಂದು ಪ್ರಶ್ನಿಸಿದ ಶಾಸಕರು, ಕೇಂದ್ರೀಯ ವಿದ್ಯಾಲಯವನ್ನು ಜಿಲ್ಲೆಗೆ ನಾನೇ ಸಮಿತಿಯಲ್ಲಿದ್ದಾಗ ಮಂಜೂರು ಮಾಡಿಸಿದ್ದೇನೆ. ಮೈಶುಗರ್ ವಿಚಾರದಲ್ಲಿ ಸಂಸದರು ಯಾರ ಪರವಾಗಿ ಓಡಾಡಿದರು, ಕೆಆರ್‌ಎಸ್ ಬಿರುಕು ಚರ್ಚೆ ಬಂದಾಗ ಅಕ್ರಮ ಗಣಿಗಾರಿಕೆ ನಿಲ್ಲಿಸಿದ್ದೇ ನಾನು. ಯರ‍್ಯಾರ ಬಂಡವಾಳ ಏನೇನು ಎಂಬುದು ಗೊತ್ತಿದೆ ಎಂದರು. ಬೆಂಗಳೂರು-ಮೈಸೂರು ಹೆದ್ದಾರಿ ಕಮಿಷನ್ ಆರೋಪದ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಶಾಸಕರು, ಈ ವಿಚಾರವನ್ನು ಕೇಂದ್ರ ಸಚಿವ ಗಡ್ಕರಿ ಮತ್ತು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳನ್ನು ಕೇಳಿದರೆ ಬೆಳಕಿಗೆ ಬರುತ್ತದೆ ಎಂದು ಹೇಳಿದರು.
ಕುಮಾರಸ್ವಾಮಿ ನಮ್ಮ ಜನಪರ ದನಿ:
ಸಂಸದೆ ಮಾತೆತ್ತಿದರೆ ಸದನದಲ್ಲಿ ಜಿಲ್ಲೆಯ ಶಾಸಕರು ಏನು ಪ್ರಶ್ನೆ ಮಾಡಿದ್ದೀರಿ ಎನ್ನುತ್ತಾರೆ. ನಮ್ಮ ನಾಯಕ ಎಚ್.ಡಿಕುಮಾರಸ್ವಾಮಿ ಎಲ್ಲರ ಪರವಾಗಿ ಸದನದಲ್ಲಿ ಮಾತನಾಡುತ್ತಾರೆ. ಜನಪರವಾಗಿ ನಿಲ್ಲತ್ತಾರೆ, ಅಧಿವೇಶನದಲ್ಲಿ ೨೨೪ ಮಂದಿ ಶಾಸಕರೂ ಮಾತನಾಡಲು ಸಾಧ್ಯವಿಲ್ಲ ಎಂಬುದನ್ನು ಸಂಸದರು ತಿಳಿದುಕೊಳ್ಳಬೇಕು ಎಂದರು.
ಮೈಸೂರು : ಮೈಸೂರು ಸೇರಿದಂತೆ ದಕ್ಷಿಣ ಒಳನಾಡಿನ ನಾಲ್ಕು ಜಿಲ್ಲೆಗಳಲ್ಲಿ ಡಿ.31ರಿಂದ ಎರಡು ದಿನ ಹಗುರವಾಗಿ ಮಳೆಯಾಗುವ ಸಾಧ್ಯತೆ ಇದೆ…
ಹೊಸದಿಲ್ಲಿ : ಮುಂಬರುವ ಕೇಂದ್ರ ಬಜೆಟ್ ಕುರಿತು ಸಂವಾದ ನಡೆಸಲು ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಆರ್ಥಿಕ ತಜ್ಞರು…
ಮಳವಳ್ಳಿ : ತಾಲ್ಲೂಕಿನ ಗಗನಚುಕ್ಕಿ ಜಲಪಾತದ ಆವರಣಕ್ಕೆ ನುಗ್ಗಿದ್ದ ಕಾಡಾನೆಗಳು ಪ್ರವಾಸಿಗರು ಜಲಪಾತ ವೀಕ್ಷಣೆಗೆ ಇಳಿಯುವ ಎರಡು ಕಡೆಗಳಲ್ಲೂ ಹಾಕಲಾಗಿದ್ದ…
ಮೈಸೂರು : ಇನ್ನೇನು ಹೊಸ ವರ್ಷಾಚರಣೆಗೆ ಕೆಲವೇ ದಿನಗಳು ಬಾಕಿ ಇದೆ. ಆದ್ದರಿಂದ ಸಾರ್ವಜನಿಕ ಹಿತದೃಷ್ಟಿಯಿಂದ ಮೈಸೂರು ನಗರ ಪೊಲೀಸ್…
ಬೆಂಗಳೂರು : ಬೆಂಗಳೂರಿನ ಕೋಗಿಲು ಬಡಾವಣೆಯಲ್ಲಿ ಸೂರು ಕಳೆದುಕೊಂಡವರಿಗೆ ಬೈಯ್ಯಪ್ಪನಹಳ್ಳಿಯಲ್ಲಿ ಪರ್ಯಾಯ ಮನೆ ಹಂಚಿಕೆ ಮಾಡಲು ಸಿಎಂ ಸಿದ್ದರಾಮಯ್ಯ ತೀರ್ಮಾನಿಸಿದ್ದಾರೆ.…
ಚಾಮರಾಜನಗರ : ರಾಷ್ಟ್ರ ಮಟ್ಟದ ಪುರುಷರ ಮೈಕಟ್ಟು ಸ್ಪರ್ಧೆಯಲ್ಲಿ ವಿಜೇತರಾಗುವ ಮೂಲಕ ತಾಲ್ಲೂಕಿನ ಕೋಡಿಮೋಳೆ ಬಸವನಪುರ ಬಿ.ಆರ್.ಹೇಮಂತ್ ಅವರು ಮಿಸ್ಟರ್…