ಸರಗೂರು: ೫ ಕಾಡಾನೆಗಳ ಗುಂಪೊಂದು ಪ್ರತ್ಯೇಕ್ಷವಾಗಿ ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಸಿದ ಘಟನೆ ತಾಲ್ಲೂಕಿನ ನುಗು ಹಿನ್ನೀರು ಸಮೀಪ ಹೊಸಬಿರ್ವಾಳು ಗ್ರಾಮ ಹಾಗೂ ಮುಳ್ಳೂರು ಗ್ರಾಮದ ಹೊರವಯದಲ್ಲಿ ನಡೆದಿದೆ.
ತಾಲ್ಲೂಕು ಬಂಡೀಪುರ ವನ್ಯಜೀವಿ ವಲಯದಿಂದ ನುಗು ಜಲಾಶಯದ ಹಿನ್ನೀರಿನ ಮಾರ್ಗವಾಗಿ ಕಾಡಿನಿಂದ ಆಚೆ ಬಂದ ೫ ಕಾಡಾನೆಗಳ ಗುಂಪೊಂದು ಹೊಸಬಿರ್ವಾಳು ಮತ್ತು ಮುಳ್ಳುರು ಗ್ರಾಮದ ನಡುವಿನ ಬೆಟ್ಟದ ತಪ್ಪಲಿನ ಕಬ್ಬಿನ ಗದ್ದೆಯನ್ನು ಸೇರಿದ್ದು, ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿದೆ.
ಬುಧವಾರ ಬೆಳಗ್ಗೆ ೭ ಗಂಟೆಗೆ ೫ ಆನೆಗಳ ಹಿಂಡು ಪ್ರತ್ಯಕ್ಷವಾಗಿದ್ದು, ಕೂಡಲೇ ಸ್ಥಳೀಯರು ಅರಣ್ಯ ಇಲಾಖೆಯ ಮಾಹಿತಿಯನ್ನು ನೀಡಿದ್ದಾರೆ. ಕೂಡಲೇ ಸ್ತಳಕ್ಕೆ ಆಗಮಿಸಿದ ಅರಣ್ಯ ಇಲಾಖೆಯ ಸಿಬ್ಬಂದಿಗಳು ಆನೆಗಳನ್ನು ಕಾಡಿಗೆ ಓಡಿಸಲು ಸಾಕಷ್ಟು ಶ್ರಮಿಸಿದಾದರೂ ಆನೆಗಳು ಪಕ್ಕದ ಕಬ್ಬಿನ ಗದ್ದೆಯನ್ನು ಸೇರಿಕೊಂಡಿವೆ.
ಕಬ್ಬಿನ ಗದ್ದೆಯಲ್ಲಿ ಬೀಡು ಬಿಟ್ಟ ಕಾಡಾನೆಗಳು: ಕಾಡಿನಿಂದ ಹೊರಬಂದ ಆನೆಗಳ ಗುಂಪು ಕಬ್ಬಿನ ಗದ್ದೆಯನ್ನು ಸೇರಿ ರಾಗಿ ಇತರ ಬೆಳೆಗಳು ಸೇರಿದಂತೆ ಕಬ್ಬನ್ನು ಬೆಳೆಗಳನ್ನು ನಾಶ ಮಾಡಿವೆ ಎಂದು ರೈತರು ಆತಂಕ ಹೊರಹಾಕಿದ್ದಾರೆ. ಆನೆಗಳನ್ನು ಕಾಡಿಗೆ ಓಡಿಸಲು ಅರಣ್ಯ ಅಧಿಕಾರಿಗಳು ಗನ್ ಹಿಡಿದು, ಪಟಾಕಿಗಳನ್ನು ಸಿಡಿಸಿ ಓಡಿಸಲು ಪ್ರಯತ್ನಿಸಿದ್ದಾರೂ ಎರಡು ಭಾರಿ ಆನೆಗಳು ಗದ್ದೆಯಿಂದ ಹೊರ ಬಂದು ಹೋಗಲು ಯತ್ನಿಸಿದಾಗ ತಂಡೋಪ ತಂಡವಾಗಿ ಆನೆಗಳನ್ನು ನೋಡಲು ಬಂದ ಜನರ ಕಿರುಚಾಟದ ಸದ್ದನಿಂದ ಮತ್ತೇ ಆನೆಗಳು ಗದ್ದೆಯನ್ನು ಸೇರಿವೆ ಎನ್ನಲಾಗಿದೆ.
ಕಾಡಾನೆಗಳು ಆಹಾರ ಹುಡುಕುತ್ತಾ ಮುಳ್ಳೂರು ಬೆಟ್ಟದಿಂದ ಹೊಸ ಬಿರ್ವಾಳು ಕಡೆ ಬಂದಿವೆ. ಇವುಗಳನ್ನು ಕಾಡಿಗೆ ಓಡಿಸಲು ನಾವು ಮತ್ತು ನಮ್ಮ ಸಿಬ್ಬಂದಿ ಸಾಕಷ್ಟು ಪಯತ್ನ ಮಾಡಿದ್ದೇವೆ. ಆದರೆ ಸಾಕಷ್ಟು ಆನೆಗಳು ಕಾಡಿಗೆ ಹೋಗದೆ ಕಬ್ಬಿನ ಗದ್ದೆಯಲ್ಲಿ ಬೀಡು ಬಿಟ್ಟಿವೆ. ರಾತ್ರಿ ಜನರ ಸಂಖ್ಯೆ ಕಡಿಮೆ ಆದ ನಂತರ ಕಾಡಾನೆಗಳನ್ನು ಓಡಿಸಲು ಪ್ರಯತ್ನಿಸಲಾಗುವುದು.
–ನಿವೇದಿತಾ, ವಲಯ ಅರಣ್ಯಾಧಿಕಾರಿ, ನುಗು ವನ್ಯಜೀವಿ ವಲಯ.
ಮೈಸೂರು : ಮೈಸೂರು ಮಹಾನಗರಪಾಲಿಕೆ 2026-27ನೇ ಹಣಕಾಸು ವರ್ಷಕ್ಕೆ ಜಾರಿಗೊಳಿಸಲು ಘೋಷಿಸಿದ್ದ ಮೋಟಾರ್ ವಾಹನ ಸೆಸ್ ಅನ್ನು ರದ್ದುಗೊಳಿಸಿದೆ. ಇತ್ತೀಚಿಗೆ…
ಬೆಂಗಳೂರು : ಕರ್ನಾಟಕದ ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಎನ್.ಸಂತೋಷ್ ಹೆಗ್ಡೆ ಅವರ ಆರೋಗ್ಯದಲ್ಲಿ ಏರುಪೇರೆ ಉಂಟಾಗಿ ಕುಸಿದು ಬಿದ್ದಿದ್ದು, ಆಸ್ಪತ್ರೆಗೆ…
ಮೈಸೂರು : ಬಟ್ಟೆ ಬ್ಯಾಗ್ ಖರೀದಿಯಲ್ಲಿ ಆಗಿರುವ ಅವ್ಯವಹಾರದ ಬಗ್ಗೆ ತನಿಖೆ ನಡೆಸಲು ಹೈಕೋರ್ಟ್ ಅನುಮತಿ ನೀಡಿರುವ ಕುರಿತು ಪ್ರತಿಕ್ರಿಯಿಸಿದ…
ಬೆಂಗಳೂರು : ಮಹೇಂದ್ರ ಸಿಂಗ್ ಧೋನಿ ಅವರು ಚೆನ್ನೈ ಸೂಪರ್ ಕಿಂಗ್ಸ್ ಅಭಿಮಾನಿಗಳಲ್ಲಿ ಹೊಸ ಆಶಾಕಿರಣ ಮೂಡಿಸಿದ್ದಾರೆ. ಸ್ನಾಯು ಸೆಳೆತದಿಂದ…
ಟೆಹ್ರಾನ್ : ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಕಳೆದ 24 ಗಂಟೆಗಳಲ್ಲಿ ಅಮೆರಿಕದ ಎರಡು F-35 ಸ್ಟೆಲ್ತ್…
ಬಾಗಲಕೋಟೆ : ಸೋಮಣ್ಣ ಬಿಜೆಪಿಯಲ್ಲಿ ಕೆಲಸವಿಲ್ಲದಿರುವ ಮಂತ್ರಿ. ಅವರಿಗೆ ಯಾವ ಕಡತವೂ ಹೋಗುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿರುಗೇಟು ನೀಡಿದರು.…