ಚಾ.ನಗರ ಜಿಲ್ಲೆಯಲ್ಲಿ ಒಂದೇ ದಿನ ೩೮.೬ ಮಿ.ಮೀ. ಮಳೆ!
ರಾತ್ರಿ ಇಡೀ ಸುರಿದು ಹೊಲಗದ್ದೆಗಳಲ್ಲಿ ಹರಿದಾಡಿದ ನೀರು…
ಚಾಮರಾಜನಗರ: ಜಿಲ್ಲೆಯಾದ್ಯಂತ ಹೊಲಗದ್ದೆಗಳಲ್ಲಿ ನೀರು ಹರಿದಾಡುವ ಮಟ್ಟಿಗೆ ಭಾನುವಾರ ರಾತ್ರಿ ಇಡೀ ಜೋರುಮಳೆಯಾಗಿದೆ.
ಭಾನುವಾರ ಬೆಳಿಗ್ಗೆ ೮.೩೦ರಿಂದ ಸೋಮವಾರ ಬೆಳಿಗ್ಗೆ ೮.೩೦ರವರೆಗಿನ ಕಳೆದ ೨೪ಗಂಟೆ ಅವಧಿಯಲ್ಲಿ ಜಿಲ್ಲೆಯಾದ್ಯಂತ ೩೮.೬ಮಿಮೀ ಮಳೆಯಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕ ಮಧುಸೂದನ್ ವಾಹಿತಿ ನೀಡಿದ್ದಾರೆ.
ಈ ಒಂದು ದಿನದ ಅವಧಿಯಲ್ಲಿ ವಾಡಿಕೆ ಪ್ರಕಾರ ೫.೭ಮಿಮೀ ಮಳೆಯಾಗಬೇಕಿತ್ತು. ಅದಕ್ಕಿಂತ ೩೨ಮಿಮೀ(ಶೇ.೫೭೭) ಹೆಚ್ಚುಬಿದ್ದಿದೆ! ಅನೇಕ ಕಡೆ ರಾತ್ರಿ ಶುರುವಾದ ಮಳೆ ಸೋಮವಾರ ಬೆಳಿಗ್ಗೆವರೆಗೂ ಒಂದೇ ಸಮನೆ ಧಾರಾಕಾರವಾಗಿ ಸುರಿದಿದೆ.
ಹೀಗಾಗಿ ತಗ್ಗು ಪ್ರದೇಶದ ಜಮೀನು ಮತ್ತು ಬೆಳೆಗಳಲ್ಲಿ ಮಳೆನೀರು ನಿಲ್ಲಲ್ಪಟ್ಟಿದ್ದು ಬಸಿ ಕಾಲುವೆ ಮುಖಾಂತರ ನೀರನ್ನು ರೈತರು ಹೊರಹಾಕುತ್ತಿದ್ದಾರೆ. ಸೋಮವಾರವೂ ಮೋಡಕವಿದ ವಾತಾವರಣ ಆವರಿಸಿತ್ತು. ಮಧ್ಯೆ ಮಧ್ಯೆ ಮಳೆಯೂ ಜಿನುಗಿತು. ಇಡೀದಿನ ನೇಸರನ ದರ್ಶನ ಆಗಲಿಲ್ಲ.
ಈ ಮಳೆಯಿಂದ ಭತ್ತ, ರಾಗಿ, ಮುಸುಕಿನಜೋಳ, ಕಬ್ಬು, ಬೆಳೆಗಳಿಗಲ್ಲದೆ ತೋಟಗಾರಿಕಾ ಬೆಳೆಗಳಾದ ಅರಿಶಿನ, ಬಾಳೆಗೆ ಅನುಕೂಲವಾಗಿದ್ದು ಹಸಿಕಡಲೆ ಬಿತ್ತನೆಗೂ ನೆರವಾಗಿದೆ. ಸೆಪ್ಟೆಂಬರ್ ಮೊದಲವಾರ ಮಳೆ ಅಬ್ಬರಿಸಿ ಕೆರೆ-ಕಟ್ಟೆ ಹಾಗೂ ಜಲಾಶುಂಗಳು ತುಂಬಿಹರಿದಿದ್ದವು. ಆನಂತರ ಭಾನುವಾರ ರಾತ್ರಿ ಜೋರುಮಳೆಯಾಗಿದೆ ಎಂದು ಹವಾವಾನ ಇಲಾಖೆ ಮೂಲಗಳು ತಿಳಿಸಿವೆ. ಯಳಂದೂರು ತಾಲ್ಲೂಕಿನಲ್ಲಿ ಕಳೆದ ೨೪ಗಂಟೆಯಲ್ಲಿ ವಾಡಿಕೆಗಿಂತ(೫.೪ಮಿಮೀ) ಶೇ.೮೨೦ರಷ್ಟು ಹೆಚ್ಚು ಮಳೆಯಾಗಿದೆ.
ತಾಲ್ಲೂಕುವಾರು ಮಳೆ ಬಿದ್ದ ವಿವರ
(ಕಳೆದ ೨೪ಗಂಟೆ ಅವಧಿಯಲ್ಲಿ )
ಚಾ.ನಗರ ೪೫.೯ ಮಿಮೀ
ಗುಂಡ್ಲುಪೇಟೆ ೪೦.೧ ಮಿಮೀ
ಕೊಳ್ಳೇಗಾಲ ೨೩.೪ ಮಿಮೀ
ಯಳಂದೂರು ೪೯.೭ ಮಿಮೀ
ಹನೂರು ೩೫.೧ ಮಿಮೀ
ಇನ್ನೂ ಮೂರು ದಿನಗಳ ಕಾಲ ಜಿಲ್ಲೆಯಲ್ಲಿ ಹಗುರದಿಂದ ಭಾರಿ ಮಳೆ ಆಗುವ ಸಾಧ್ಯತೆ ಇದೆ ಎಂದು ಚಾ.ನಗರ ಹರದನಹಳ್ಳಿ ಕೃಷಿ ವಿಜ್ಞಾನ ಕೇಂದ್ರದ ಹವಾವಾನ ತಜ್ಞ ಹೆಚ್.ಕೆ.ರಜತ್ ತಿಳಿಸಿದ್ದಾರೆ.
ಹನೂರು : ಅಕ್ರಮ ಗಾಂಜಾ ಮಾರಾಟ ಮಾಡುತ್ತಿದ್ದ ಮಹಿಳೆಯೋರ್ವಳನ್ನು ಮಲೆ ಮಹದೇಶ್ವರ ಬೆಟ್ಟ ಪೊಲೀಸರು ಬಂಧಿಸಿರುವ ಘಟನೆ ಜರುಗಿದೆ. ಹನೂರು…
ಹೊಸದಿಲ್ಲಿ : ದೇಶದ 140 ಕೋಟಿ ಜನರ ಮತದಾನದ ಹಕ್ಕು ಉಳಿಸಲು ನಾವು ಮತಕಳ್ಳತನದ ವಿರುದ್ಧ ಹೋರಾಟ ಮಾಡುತ್ತಿದ್ದೇವೆ. ಇದರಲ್ಲಿ…
ಚಿಕ್ಕಮಗಳೂರು : ಅದೊಂದು ಬಹುಕಾಲದ ಪ್ರೀತಿ, ಪ್ರೀತಿ ಮಾಡಿ, ಪ್ರೇಯಸಿಯಿಂದ ಹಣ ಪಡೆದು, ಇದೀಗ ಬೇರೊಂದು ಮದುವೆಗೆ ಸಿದ್ಧವಾಗಿದ್ದ ಹುಡಗ…
ಬಂಡೀಪುರ, ನಾಗರಹೊಳೆಯಲ್ಲಿ ಹೊಸ ವರ್ಷ ಆಚರಿಸಲು ಬಯಸಿದವರಿಗೆ ನಿರಾಸೆ ರೆಸಾರ್ಟ್, ಹೋಟೆಲ್ ಮಾಲೀಕರಿಂದ ಸಫಾರಿ ಪುನಾರಂಭಕ್ಕೆ ಒತ್ತಡ? ಮೈಸೂರು :…
ಎಚ್.ಡಿ.ಕೋಟೆ : ತಾಲ್ಲೂಕಿನ ಕ್ಯಾತನಹಳ್ಳಿ, ಆಲನಹಳ್ಳಿ, ಜಿ. ಬಿ. ಸರಗೂರು ವ್ಯಾಪ್ತಿಯ ಐದು ಕೆರೆಗಳಿಗೆ ನೀರು ತುಂಬಿಸಲು ಅಧಿಕಾರಿಗಳು ನಿರ್ಲಕ್ಷಿ…
ಮೈಸೂರಿನ ರಾಮಕೃಷ್ಣನಗರದಲ್ಲಿರುವ ಸುಯೋಗ್ ಆಸ್ಪತ್ರೆ ಎದುರಿನ ರಸ್ತೆಯು ಸಂಪೂರ್ಣ ಹದಗೆಟ್ಟಿದೆ. ಈ ರಸ್ತೆಯಲ್ಲಿ ಎಲ್ಲೆಡೆ ದೊಡ್ಡ ದೊಡ್ಡ ಗುಂಡಿಗಳು ನಿರ್ಮಾಣವಾಗಿದ್ದು,…