Andolana originals

ಮೈಮುಲ್ : ಆಡಳಿತಾಧಿಕಾರಿ ನೇಮಕಕ್ಕೆ ಹೈ ತಡೆ

ಚುನಾವಣೆ ನಡೆಯುವ ತನಕ ಹಾಲಿ ಆಡಳಿತ ಮಂಡಳಿ ಮುಂದುವರಿಕೆ

ಕೆ.ಬಿ.ರಮೇಶನಾಯಕ

ಮೈಸೂರು: ಐದು ವರ್ಷಗಳ ಅವಧಿ ಮುಗಿದ ಮೈಸೂರು ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ಮೈಮುಲ್) ಆಡಳಿತ ಮಂಡಳಿಯ ನಿರ್ದೇಶಕರ ಸ್ಥಾನಕ್ಕೆ ಸಕಾಲಕ್ಕೆ ಚುನಾವಣೆ ನಡೆಸದೆ ಆಡಳಿತಾಧಿಕಾರಿ ನೇಮಕ ಮಾಡುವ ಪ್ರಯತ್ನಕ್ಕೆ ಹೈಕೋರ್ಟ್ ತಡೆ ನೀಡಿದೆ. ಇದರಿಂದ ಚುನಾವಣೆ ನಡೆಯುವ ತನಕ ಹಾಲಿ ಆಡಳಿತ ಮಂಡಳಿಯೇ ಅಧಿಕಾರದಲ್ಲಿ ಮುಂದು ವರಿಯಲು ಅವಕಾಶ ದೊರಕಿದಂತಾಗಿದೆ.

ಕಡಿಮೆ ಅವಧಿಗೆ ಅಧ್ಯಕ್ಷರಾಗಿ ನಿರ್ಗಮಿಸ ಬೇಕಿದ್ದ ಕೆ. ಈರೇಗೌಡ ಸೇರಿದಂತೆ ಹಾಲಿ ನಿರ್ದೇಶಕರಿಗೆ ಹೈಕೋರ್ಟ್ ಆದೇಶದಿಂದಾಗಿ ಮತ್ತಷ್ಟು ದಿನಗಳ ಅಧಿಕಾರದಲ್ಲಿ ಮುಂದುವರಿಯುವ ಅವಕಾಶ ಸಿಕ್ಕಿದ್ದು, ಪರೋಕ್ಷವಾಗಿ ಆಡಳಿತಾಧಿಕಾರಿಯ ಮೂಲಕ ಆಡಳಿತ ನಡೆಸಲು ಬಯಸಿದ್ದ ರಾಜ್ಯಸರ್ಕಾರಕ್ಕೆ ಕೊಂಚ ಹಿನ್ನಡೆಯಾಗಿದೆ.

ಐದು ವರ್ಷಗಳಲ್ಲಿ ಏನೇನು ಬೆಳವಣಿಗೆ : 2021ರ ಮಾರ್ಚ್ ಎರಡರಂದು ನಡೆದಿದ ಮೈಮುಲ್ ಆಡಳಿತ ಮಂಡಳಿ ನಿರ್ದೇಶಕರ ಚುನಾವಣೆಯಲ್ಲಿ ಮಾಜಿ ಸಚಿವ ಜಿ. ಟಿ. ದೇವೇ ಗೌಡರ ಬಣದ ಅಭ್ಯರ್ಥಿಗಳು ಗೆಲುವು ಸಾಧಿಸಿ ದ್ದರು. ನಂತರ,ಮಾ. 16ರಂದು ನಡೆದಿದ್ದ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಪಿರಿಯಾಪಟ್ಟಣ ಕ್ಷೇತ್ರದ ಮಾಜಿ ಶಾಸಕ ಕೆ. ಮಹದೇವು ಪುತ್ರ ಪಿ. ಎಂ. ಪ್ರಸನ್ನ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದರು. ಆದರೆ, ಬದಲಾದ ರಾಜಕೀಯ ಬೆಳವಣಿಗೆಯಲ್ಲಿ 2024ರ ಆಗಸ್ಟ್ ತಿಂಗಳಲ್ಲಿ ತಮ್ಮಸ್ಥಾನಕ್ಕೆ ರಾಜೀನಾಮೆ ನೀಡಿದ್ದರಿಂದಾಗಿ ತೆರವಾದ ಸ್ಥಾನಕ್ಕೆ ಚುನಾವಣೆ ನಡೆದು ಕಾಂಗ್ರೆಸ್ ಬೆಂಬಲಿತ, ಸಮಾಜ ಕಲ್ಯಾಣ ಸಚಿವ ಡಾ. ಎಚ್. ಸಿ. ಮಹದೇವಪ್ಪ ಅವರ ಆರ್. ಚೆಲುವರಾಜು ಪರಮಾಪ್ತ ಅಧ್ಯಕ್ಷರಾಗಿದ್ದರು.

ಈ ವೇಳೆ ಅಧ್ಯಕ್ಷ ಸ್ಥಾನಕ್ಕೆ ಎಚ್. ಡಿ. ಕೋಟೆ ತಾಲ್ಲೂಕಿನ ಕೆ. ಈರೇಗೌಡರು ತೀವ್ರ ಪೈಪೋಟಿ ನೀಡಿದ್ದರಿಂದಾಗಿ ಆರ್. ಚೆಲುವರಾಜು ಹಾಗೂ ಕೆ. ಈರೇಗೌಡರ ನಡುವೆ ಅಧಿಕಾರ ಹಂಚಿಕೆಯ ಒಪ್ಪಂದ ಮಾಡಲಾಗಿತ್ತು. ಹೀಗಾಗಿ, ಸಕಾಲಕ್ಕೆ ರಾಜೀನಾಮೆ ಕೊಡಲು ಬಯಸದ ಆರ್. ಚೆಲುವರಾಜು ಅವರ ಮೇಲೆ ಶಾಸಕರು, ಮುಖಂಡರು ಒತ್ತಡ ಹೇರಿದ್ದರಿಂದಾಗಿ 2025ರ ಸೆಪ್ಟೆಂಬರ್ ತಿಂಗಳ 9ರಂದು ರಾಜೀ ನಾಮೆ ಕೊಟ್ಟಿದ್ದರು. ನಂತರ, ತೆರವಾದ ಅಧ್ಯಕ್ಷ ಸ್ಥಾನಕ್ಕೆ ಅ. 23ರಂದು ನಡೆದ ನಡೆದ ಚುನಾವಣೆಯಲ್ಲಿ ಕೆ. ಈರೇಗೌಡರು ಅವಿರೋಧವಾಗಿ ಆಯ್ಕೆಯಾಗುವ ಮೂಲಕ ಎರಡು ದಶಕಗಳಿಂದ ಕಾದಿದ್ದ ಅಧ್ಯಕ್ಷಗಾದಿಯ ಕನಸನ್ನು ನನಸಾಗಿಸಿಕೊಂಡಿದ್ದರು.

ಮಾರ್ಚ್15ರಂದು ಆಡಳಿತ ಮಂಡಳಿಯ ಐದು ವರ್ಷಗಳ ಅವಧಿ ಮುಗಿದಿರುವ ಪರಿಣಾಮವಾಗಿ ಐದು ತಿಂಗಳು ಕಳೆದಿದ್ದ ಕೆ. ಈರೇಗೌಡರು ಮಾಜಿಯಾಗಬೇಕಿತ್ತು. ಆದರೆ, ರಾಜ್ಯ ಸರ್ಕಾರ ಸಕಾಲದಲ್ಲಿ ಚುನಾವಣೆ ನಡೆಸದೆ ಇರುವ ಕಾರಣ ಆಡಳಿತ ಮಂಡಳಿ ಯನ್ನು ಮುಂದುವರಿಸಬೇಕೆಂದು ಅಧ್ಯಕ್ಷ ಕೆ. ಈರೇಗೌಡ ಅವರು ಹೈಕೋರ್ಟ್ ಮೊರೆ ಹೋಗಿ ಆಡಳಿತಾಧಿಕಾರಿಗಳ ನೇಮಕಕ್ಕೆ ತಡೆಯಾಜ್ಞೆ ತರುವ ಜತೆಗೆ, ಹಾಲಿ ಮಂಡಳಿ ಯನ್ನೇ ಮುಂದುವರಿಸಲು ಆದೇಶ ಹೊರಡಿಸಿ ರುವ ಪರಿಣಾಮ ಎಲ್ಲರ ಲೆಕ್ಕಚಾರ ತಲೆ ಕೆಳಗಾಗಿದೆ.

ಚುನಾವಣೆ ನಡೆಸುವ ತನಕವೂ ಮುಂದುವರಿಕೆ: ಹೈಕೋರ್ಟ್ ಚುನಾವಣೆ ನಡೆಸುವ ತನಕವು ಹಾಲಿ ಆಡಳಿತ ಮಂಡಳಿ ನಿರ್ದೇಶಕರನ್ನೇ ಮುಂದುವರಿಸುವಂತೆ ನೀಡಿರುವುದರಿಂದ ನೀಡಿರುವುದರಿಂದ ಎಲ್ಲರ ಮುಖದಲ್ಲಿ ಮಂದಹಾಸ ಮೂಡಿಸಿದೆ. ಇದರಿಂದಾಗಿ ಆದೇಶ ಅಧ್ಯಕ್ಷ ಕೆ. ಈರೇಗೌಡರು ಅಧ್ಯಕ್ಷರಾಗಿ ನಿರಾಂತಕ ವಾಗಿ ಕೆಲಸ ಮಾಡುವ ಅವಕಾಶ ದೊರೆತಿದೆ.

ಐದು ವರ್ಷಗಳ ಅವಧಿ ಮುಗಿಯುವ ಹೊತ್ತಲ್ಲೇ ಚುನಾವಣೆ ನಡೆಸ ಬೇಕಿತ್ತಾದರೂ ನಡೆಯದೆ ಹೋಗಿದ್ದರಿಂದ ನ್ಯಾಯಾಲಯದ ಮೊರೆ ಹೋಗ ಬೇಕಾಯಿತು. ಚುನಾವಣೆ ನಡೆಸುವ ತನಕ ಹಾಲಿ ಆಡಳಿತ ಮಂಡಳಿಯನ್ನೇ ಮುಂದುವರಿಸುವಂತೆ ಹೇಳಿರುವ ಕಾರಣ ನಾವು ಅಧಿಕಾರದಲ್ಲಿ ಮುಂದುವ ರಿಯುತ್ತೇವೆ. ಚುನಾವಣೆ ನಡೆಯುವ ತನಕವೂ ನಾವೇ ಇರುತ್ತೇವೆ.
-ಕೆ. ಈರೇಗೌಡ, ಮೈಮುಲ್ ಅಧ್ಯಕ್ಷರು

ಅವಧಿ ಮುಗಿಯುವ ನಿರ್ದೇಶಕರ ಸ್ಥಾನಗಳಿಗೆ ಚುನಾವಣೆ ನಡೆಸಬೇಕಾಗಿದ್ದು ಸಹಕಾರ ಇಲಾಖೆ ಜವಾಬ್ದಾರಿ. ಸಹಕಾರ ಇಲಾಖೆ ಅಂದರೆ ಸರ್ಕಾರದ ಕೈಕೆಳಗೆ ಇರುತ್ತದೆ. ಚುನಾವಣೆ ನಡೆಸಿದ್ದರೆ ಯಾರು ಬೇಕಾದರೂ ಆಯ್ಕೆಯಾಬಹುದು. ಆಡಳಿತಾಧಿಕಾರಿ ನೇಮಿಸದೆ ಹಾಲಿ ಮಂಡಳಿ ಮುಂದುವರಿಸಲು ಆದೇಶ ನೀಡಿರುವುದರಿಂದ ಸರ್ಕಾರ ಚುನಾವಣೆ ನಡೆಸಬೇಕಿದೆ. ಅಲ್ಲಿಯವರೆಗೂ ನಮ್ಮ ಅಧಿಕಾರ ಇರುತ್ತದೆ.

-ಕೆ. ಉಮಾಶಂಕರ್, ನಿರ್ದೇಶಕರು

 

ಆಂದೋಲನ ಡೆಸ್ಕ್

Recent Posts

ಭಾರೀ ಮಳೆಗೆ ಕೊಚ್ಚಿ ಹೋದ ಚೆಕ್ ಡ್ಯಾಂ: 15 ಅಡಿಗೂ ಹೆಚ್ಚು ಪ್ರವಾಹ

ಹನೂರು: ತಾಲ್ಲೂಕಿನ ಶಾಗ್ಯ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಲಾಜರ್ ದೊಡ್ಡಿ ಗ್ರಾಮದಲ್ಲಿ ಒಡಿಪಿ ಸಂಸ್ಥೆಯಿಂದ ನಿರ್ಮಾಣ ಮಾಡಿದ್ದ ಚೆಕ್ ಡ್ಯಾಂ…

5 hours ago

ಭಾರೀ ಮಳೆಗೆ ಮನೆ ಕುಸಿತ: ಲಕ್ಷಾಂತರ ರೂ. ನಷ್ಟ

ಹನೂರು: ತಾಲ್ಲೂಕಿನ ಎಲ್ಲೇಮಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವೈಶಂಪಾಳ್ಯ ಗ್ರಾಮದಲ್ಲಿ ಭಾನುವಾರ ರಾತ್ರಿ ಸುರಿದ ಭಾರೀ ಮಳೆಗೆ ಮನೆ ಸಂಪೂರ್ಣ…

5 hours ago

ಧರ್ಮಸ್ಥಳ ಸೌಜನ್ಯ ಪ್ರಕರಣ: ಮರು ತನಿಖೆಗೆ ಸುಪ್ರೀಂಕೋರ್ಟ್ ಮಹತ್ವದ ಆದೇಶ

ನವದೆಹಲಿ: ಧರ್ಮಸ್ಥಳ ಸೌಜನ್ಯ ಪ್ರಕರಣದ ಮರು ತನಿಖೆಗೆ ಸುಪ್ರೀಂ ಕೋರ್ಟ್ ಮಹತ್ವದ ಆದೇಶ ನೀಡಿದೆ. ನವದೆಹಲಿಯಲ್ಲಿ ನಡೆದ ವಿಚಾರಣೆಯಲ್ಲಿ, ಹಲವು…

7 hours ago

ಕಾಡಾನೆ ದಾಳಿ: ವ್ಯಕ್ತಿ ಸಾವು

ಸರಗೂರು: ಆಸ್ಪತ್ರೆಗೆ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿ ನಡೆಸಿದ ಪರಿಣಾಮ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಸರಗೂರು ತಾಲ್ಲೂಕಿನ ಕಾಡಗೆರೆ ಗ್ರಾಮದ…

9 hours ago

ಗಣೇಶ ವಿಸರ್ಜನೆ ಮೆರವಣಿಗೆ ರಾಜಕೀಯ ದಾಳವಾಗದಿರಲಿ…

ಬ್ರಿಟೀಷರ ವಿರುದ್ಧ ಸಮಾಜವನ್ನು ಅದರಲ್ಲೂ ಯುವಜನರನ್ನು ಸಂಘಟಿಸಿ, ದೇಶಭಕ್ತಿಯನ್ನು ಜಾಗೃತಿಗೊಳಿಸುವ ಮೂಲಕ ಅವರನ್ನು ಸ್ವಾತಂತ್ರ್ಯಸಂಗ್ರಾಮಕ್ಕೆ ಸಜ್ಜುಗೊಳಿಸುವ ಉದ್ದೇಶದಿಂದ ಆರಂಭವಾದ ಸಾರ್ವಜನಿಕ…

12 hours ago

ಕಾಂಗ್ರೆಸ್‌ನಲ್ಲೀಗ ಆತಂಕದ ಕಾರ್ಮೋಡ…

ಬೆಂಗಳೂರು ಡೈರಿ: ಆರ್.ಟಿ.ವಿಠ್ಠಲಮೂರ್ತಿ ಅವರ ವಾರದ ಅಂಕಣ  ಕಳೆದ ಮೂರು ವರ್ಷಗಳಿಂದ ಅಧಿಕಾರ ಹಂಚಿಕೆಯ ಸಂಘರ್ಷದಲ್ಲಿ ಮುಳುಗಿದ್ದ ಆಡಳಿತಾರೂಢ ಕಾಂಗ್ರೆಸ್…

12 hours ago