ಆಂದೋಲನ ವಿಶೇಷ
ಮೈಸೂರು: ಕನ್ಯಾಕುಮಾರಿಯಿಂದ ಕಾಶ್ಮೀರದ ತನಕ ಭಾರತ್ ಜೋಡೋ ಯಾತ್ರೆ ಹಮ್ಮಿಕೊಂಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತಮ್ಮ ದೇಹಕ್ಷಮತೆಗೆ ಹಸರಾದವರು. ಕರಾಟೆಯಲ್ಲಿ ಬ್ಲ್ಯಾಕ್ ಬೆಲ್ಟ್ ಪಡೆದಿರುವ ರಾಹುಲ್ ಗಾಂಧಿ ನುರಿತ ಈಜುಪಟುವು ಹೌದು. ಪ್ರತಿದಿನ ಜಿಮ್ಗೆ ಹೋಗಿ ವರ್ಕೌಟ್ ಮಾಡುವ ರಾಹುಲ್ ಗಾಂಧಿ ತಮ್ಮ 52ನೇ ವಯಸ್ಸಿನಲ್ಲೂ ಯುವಕನಂತೆ ಕಾಣಿಸುತ್ತಿದ್ದಾರೆ. ಈ ಕಾರಣಕ್ಕಾಗಿಯೇ ದೀರ್ಘವಾದ ಪಾದಯಾತ್ರೆ ಕೈಗೊಂಡರೂ ಅವರ ಮುಖದಲ್ಲಿ ಎಂದೂ ಸುಸ್ತು ಕಂಡಿಲ್ಲ.
ಆದರೆ ಕಾಂಗ್ರೆಸ್ ನಾಯಕನ ಈ ಫಿಟ್ನೆಸ್ ಮಂತ್ರ ರಾಜ್ಯ ನಾಯಕರಿಗೆ ಪೀಕಲಾಟ ತಂದಿದೆ. ಭಾರತ್ ಜೋಡೋ ಯಾತ್ರೆಯಲ್ಲಿ ವೇಗದ ಹೆಜ್ಜೆ ಹಾಕುವ ರಾಹುಲ್ ಜತೆಗೆ ನಡೆಯುವುದೇ ರಾಜ್ಯ ನಾಯಕರಿಗೆ ಸವಾಲಾಗಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮತ್ತು ಮಾಜಿ ಸಿಎಂ ಸಿದ್ದರಾಮಯ್ಯ ಅವರು ರಾಹುಲ್ಗೆ ಜತೆಜತೆಯಾಗಿ ಹೆಜ್ಜೆ ಹಾಕುತ್ತಾ ಬಂದಿದ್ದಾರೆ.
ಆದರೆ ಪಕ್ಷದ ಪಾಲಿಗೆ ಇನ್ನೂ ಯುವ ನಾಯಕನಾಗಿರುವ ರಾಹುಲ್ ಜತೆ ಹೆಜ್ಜೆ ಹಾಕುವುದು ಇಬ್ಬರೂ ನಾಯಕರಿಗೂ ತುಸು ಕಷ್ಟವೆನಿಸಿದೆ. ಇ.ಡಿ ವಿಚಾರಣೆಯ ಸಂದರ್ಭದಲ್ಲಿ ಗೈರುಹಾಜರಾಗಿದ್ದು ಬಿಟ್ಟರೆ ಡಿಕೆಶಿ ಅವರು ರಾಹುಲ್ ಜತೆಗೆ ಸಾಗುತ್ತಾ ಬಂದಿದ್ದಾರೆ.
ಸಿದ್ದರಾಮಯ್ಯ ಅವರು ಸಿಎಂ ಜತೆಗಿನ ಮೀಸಲಾತಿ ಸಭೆ ಸೇರಿದಂತೆ ಒಂದಷ್ಟು ನೆಪ ಇಟ್ಟುಕೊಂಡು ಮಧ್ಯೆ, ಬಿಡುವು ಮಾಡಿಕೊಂಡಿದ್ದಾರೆ.
ಕೋಟೆ ನಾಡು ಚಿತ್ರದುರ್ಗದಲ್ಲಿ ಜೋಡೋ ಯಾತ್ರೆ ಸಾಗುತ್ತಿದ್ದಾಗ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರಿಗೂ ಇದೇ ಅನುಭವವಾಯಿತು. ಕಾಂಗ್ರೆಸ್ ಧ್ವಜ ಹಿಡಿದು ಮುಂದೆ ಸಾಗುತ್ತಿದ್ದ ಡಿಕೆಶಿ ಅವರ ಕೈ ಹಿಡಿದ ರಾಹುಲ್ ಓಟ ಆರಂಭಿಸಿದರು. ಕೈ ಬೆರಳಿಗೆ ಗಾಯ ಮಾಡಿಕೊಂಡಿರುವ ಡಿಕೆಶಿ ಓಡಿದರಾದರೂ ಅವರ ಮುಖದಲ್ಲಿ ಸುಸ್ತು ಎದ್ದು ಕಾಣುತ್ತಿತ್ತು. ಮರು ದಿನ ಯಾತ್ರೆಯ ಮಧ್ಯೆ ಸಿಕ್ಕ ಸಣ್ಣ ಹುಡುಗನೊಬ್ಬನ ಜತೆ ಸ್ಪರ್ಧೆಗೆ ಇಳಿದ ರಾಹುಲ್ ಆತನ ಜತೆ ʼದಂಡʼ ತೆಗೆದು ಖುಷಿಪಟ್ಟರು. ಆದರೆ ಆಟದಲ್ಲಿ ಭಾಗಿಯಾದ ಡಿಕೆಶಿ ಪಾಲಿಗೆ ಇದು ನಿಜಕ್ಕೂʼದಂಡʼನೆಯಂತಿತ್ತು.
ಬೆಂಗಳೂರು: ರಾಜ್ಯದ ಹಲವೆಡೆ ಇಂದು ಧಾರಾಕಾರ ಮಳೆಯಾಗಿದ್ದು, ಭಾರೀ ಅವಾಂತರ ಸೃಷ್ಟಿ ಮಾಡಿದೆ. ಚಿಕ್ಕಮಗಳೂರು, ಶಿವಮೊಗ್ಗ ಸೇರಿದಂತೆ ರಾಜ್ಯದ ಹಲವೆಡೆ…
ಮಹಾದೇಶ್ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ಮಾರ್ಟಳ್ಳಿ, ಕೌದಳ್ಳಿ, ಶೆಟ್ಟಳ್ಳಿ, ಕುರಟ್ಟಿ ಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ…
ಮೈಸೂರು: ಅರಮನೆಗಳ ನಗರಿ ಮೈಸೂರಿನಲ್ಲಿ ಅವೈಜ್ಞಾನಿಕವಾಗಿ ಟ್ರಾಫಿಕ್ ಸಿಗ್ನಲ್ ಅಳವಡಿಸಲಾಗಿದೆ ಎಂದು ಸಾರ್ವಜನಿಕರು ಕಿಡಿಕಾರುತ್ತಿರುವ ವಿಚಾರಕ್ಕೆ ಸಂಬಂಧಿಸಿದಂತೆ ಸಚಿವ ಮಹದೇವಪ್ಪ…
ಕೋಲ್ಕತ್ತಾ: ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ದಿನಗಣನೆ ಶುರುವಾಗಿರುವ ಹಿನ್ನೆಲೆಯಲ್ಲಿ ಸಿಎಂ ಮಮತಾ ಬ್ಯಾನರ್ಜಿ ವಿರುದ್ಧ ಕೇಂದ್ರ ಗೃಹ ಸಚಿವ…
ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಗಂಧರ್ಬಾಲ್ ಜಿಲ್ಲೆಯ ಝೋಜಿಲಾ ಪಾಸ್ ಬಳಿಯ ಝೀರೋ ಪಾಯಿಂಟ್‌ನಲ್ಲಿ ಸಂಭವಿಸಿದ ಭೀಕರ ಹಿಮಪಾತದಲ್ಲಿ ಹಲವಾರು…
ವಾಷಿಂಗ್ಟನ್: ಇರಾನ್ ಬಳಿಕ ಇದೀಗ ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೊಂದು ದೇಶದ ಮೇಲೆ ಕಣ್ಣಿಟ್ಟಿದ್ದಾರೆ. ಕ್ಯೂಬಾ ದೇಸದ ಮೇಲೆ…