ಜಿಲ್ಲೆಗಳು

ಸಮಸ್ಯೆ ನೋಡಿ ಪರಿಹಾರ ನೀಡಿ : ಕಸದ ತೊಟ್ಟಿಯಾಯ್ತು ಟ್ಯಾಂಕ್ ಆವರಣ

ಬಿದ್ದು ಒದ್ದಾಡುತ್ತಿರುವ ಕಸ ತುಂಬಿರುವ ಪ್ಲಾಸ್ಟಿಕ್ ಕೈಚೀಲ; ಅನೈರ್ಮಲ್ಯದಿಂದ ಕೂಡಿರುವ ಖಾಲಿ ಜಾಗ

ಪ್ರಸಾದ್ ಲಕ್ಕೂರು

ಚಾಮರಾಜನಗರ: ನಗರದ ಹೌಸಿಂಗ್ ಬೋರ್ಡ್ ಕಾಲೋನಿಯಲ್ಲಿರುವ ಬೃಹತ್ ನೀರಿನ ಟ್ಯಾಂಕ್ ಆವರಣ ಕಸದ ತೊಟ್ಟಿಯಾಗಿ ಪರಿವರ್ತಗೊಂಡಿದ್ದು, ಅನೈರ್ಮಲ್ಯ ತಾಂಡವವಾಡುತ್ತಿದೆ.
ಟ್ಯಾಂಕ್ ಸುತ್ತಲೂ ಕಸ ತುಂಬಿದ ಪ್ಲಾಸ್ಟಿಕ್ ಕೈಚೀಲಗಳು ಬಿದ್ದು ಒದ್ದಾಡುತ್ತಿವೆ. ಸಮೀಪವೇ ಮೈಸೂರು ವಿಶ್ವ ವಿದ್ಯಾನಿಲಯದ ಹಾಸ್ಟೆಲ್ ಇದೆ. ಕರಿನಂಜನಪುರ ಬಡಾವಣೆ, ಬುದ್ಧನಗರ, ಹೌಸಿಂಗ್‌ಬೋರ್ಡ್ ಕಾಲೋನಿಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯಿದ್ದು ಓಡಾಡುವ ಜನರು ಕಸವನ್ನು ಎಸೆದು ಹೋಗುತ್ತಿದ್ದಾರೆ.


ನಗರಸಭೆಯ ೧೦ನೇ ವಾರ್ಡ್‌ಗೆ ಸೇರಿದ ಈ ಜಾಗದಲ್ಲಿ ಹಲವು ತಿಂಗಳುಗಳಿಂದ ಕಸದ ರಾಶಿ ರಾರಾಜಿಸುತ್ತಿದೆ. ಸಂಬಂಧಪಟ್ಟ ನಗರಸಭೆ ಅಧಿಕಾರಿಗಳಾಗಲಿ ಅಥವಾ ಈ ವಾರ್ಡ್ ಪ್ರತಿನಿಧಿಸುವ ಸದಸ್ಯರಾಗಲಿ ಇತ್ತ ಗಮನಿಸುತ್ತಿಲ್ಲ ಎಂದು ಸ್ಥಳೀಯರು ಅಸವಾಧಾನ ವ್ಯಕ್ತಪಡಿಸಿದ್ದಾರೆ.
ಬುದ್ಧನಗರ, ಕರಿನಂಜನಪುರ, ಹೌಸಿಂಗ್ ಬೋರ್ಡ್ ಕಾಲೋನಿಗಳಿಗೆ ಕಸ ಸಂಗ್ರಹದ ವಾಹನಗಳು ಆಗಮಿಸಿ ಕಸ ಸಂಗ್ರಹಿಸುತ್ತವೆ. ಈ ವಾಹನ ವಾರಕ್ಕೊಮ್ಮೆ ಬರುವುದು ಅಪರೂಪ. ಆದ್ದರಿಂದ ನಿವಾಸಿಗಳು ಕಸವನ್ನು ಟ್ಯಾಂಕ್ ಬಳಿಯ ಖಾಲಿ ಜಾಗಕ್ಕೆ ಬಿಸಾಡಿ ಹೋಗುತ್ತಾರೆ.
ಮನೆಮನೆಗಳಲ್ಲಿ ಆಟೋ ಮೂಲಕ ಕಸ ಸಂಗ್ರಹಿಸುವುದೇನು ಸರಿ. ಜೊತೆಗೆ ರಸ್ತೆ ಬದಿಗಳು, ಖಾಲಿ ನಿವೇಶನಗಳಲ್ಲಿ ಬಿದ್ದಿರುವ ಕಸ ತೆರವು ವಾಡುವುದು ಯಾವಾಗ? ಎಂದು ನಿವಾಸಿಗಳು ಪ್ರಶ್ನಿಸಿದ್ದಾರೆ.


ಸಾಂಕ್ರಾಮಿಕ ರೋಗಗಳ ಭೀತಿ
ಮಳೆಗಾಲವಾಗಿದ್ದು ಕಸ ಕೊಳೆತು ಸೊಳ್ಳೆಗಳು ಹೆಚ್ಚುತ್ತಿವೆ. ಇದರಿಂದಾಗಿ ಸಾಂಕ್ರಾಮಿಕ ರೋಗಗಳಾದ ಮಲೇರಿಯಾ, ಡೆಂಗ್ಯೂ, ಚಿಕುನ್ ಗುನ್ಯಾ, ವೈರಲ್ ಫೀವರ್, ಹಂದಿಜ್ವರದ ಸೋಂಕು ಹರಡುವ ಸಾಧ್ಯತೆಗಳು ಹೆಚ್ಚಾಗಿವೆ ಎಂದು ಸ್ಥಳೀಯರು ಕಳವಳ ವ್ಯಕ್ತಪಡಿಸಿದ್ದಾರೆ.
ಟ್ಯಾಂಕ್ ಸಮೀಪವೇ ಚರಂಡಿಯಿದ್ದು ಕಸವೆಲ್ಲ ತುಂಬಿಕೊಂಡಿದೆ. ಜೊತೆಗೆ ಮಳೆಯ ನೀರು ನಿಂತು ಸೊಳ್ಳೆಗಳ ಉತ್ಪಾದನಾ ಕೇಂದ್ರವಾಗಿ ಮಾರ್ಪಟ್ಟಿದೆ. ಟ್ಯಾಂಕ್ ಸಮೀಪದ ಜಾಗ ನಗರಸಭೆಗೆ ಸೇರಿದ್ದು ಕಸವನ್ನು ಮತ್ತು ಗಿಡ-ಗಂಟಿಗಳನ್ನು ತೆರವು ವಾಡಿ ಶುಚಿಗೊಳಿಸಿದರೆ ಆಟವಾಡಲು, ವಾುುಂ ವಿಹಾರ ವಾಡಲು ಅನುಕೂಲವಾಗಲಿದೆ. ಈ ಕುರಿತು ೧೦ನೇ ವಾರ್ಡ್ ಸದಸ್ಯರಾದ ಮನೋಜ್‌ಪಟೇಲ್ ಅವರು ಗಮನಹರಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.


ಟ್ಯಾಂಕ್ ಆವರಣದಲ್ಲಿ ಕಸ ಬಿದ್ದಿರುವ ಬಗ್ಗೆ ಸದಸ್ಯರಾದ ಮನೋಜ್‌ಪಟೇಲ್ ನಮ್ಮ ಗಮನಕ್ಕೆ ತಂದಿದ್ದಾರೆ. ನಗರಸಭೆಯ ಆರೋಗ್ಯ ನಿರೀಕ್ಷಕರಾದ ಸುಷ್ಮಾ ಅವರನ್ನು ಸ್ಥಳಕ್ಕೆ ಕಳುಹಿಸಿ ಪರಿಶೀಲಿಸಿ ಸ್ವಚ್ಛತೆಗೆ ಕ್ರಮ ವಹಿಸಲಾಗುವುದು.
ಗಿರಿಜಮ್ಮ, ಪರಿಸರ ಇಂಜಿನಿುಂರ್, ನಗರಸಭೆ. 


ಟ್ಯಾಂಕ್ ಆವರಣ ಶುಚಿಗೊಳಿಸುವಂತೆ ನಗರಸಭೆಯ ಅಧಿಕಾರಿಗಳ ಗಮನಕ್ಕೆ ತಂದಿದ್ದೇನೆ. ಸದ್ಯವೇ ಸ್ವಚ್ಛಗೊಳಿಸಲಿದ್ದಾರೆ. ಸ್ಥಳೀಯರು ಕಸವನ್ನು ಟ್ಯಾಂಕ್ ಬಳಿ ಬಿಸಾಡದೆ ಆಟೋಗೆ ನೀಡಬೇಕು. ಇದರಿಂದ ವಾತಾವರಣ ಶುಚಿಯಾಗಿ ಇರಲಿದೆ.
ಮನೋಜ್ ಪಟೇಲ್, ೧೦ನೇ ವಾರ್ಡ್ ಸದಸ್ಯರು.


ಸುಮಾರು ೨-೩ ತಿಂಗಳಿಂದ ಕಸ ಬಿದ್ದಿದೆ. ವಾರಕ್ಕೆ ೨ ಬಾರಿ ಕಸದ ಆಟೋ ಟ್ಯಾಂಕ್ ಆಸುಪಾಸಿನ ಬಡಾವಣೆಗಳಿಗೆ ಬಂದಿದ್ದರೆ ಕಸ ಬೀದಿಗೆ ಬೀಳುತ್ತಿರಲಿಲ್ಲ. ಮನೆಗಳಲ್ಲಿ ಹೆಚ್ಚಿನ ಕಸವನ್ನು ಇಟ್ಟುಕೊಳ್ಳಲಾಗದೆ ಜನರು ಖಾಲಿ ನಿವೇಶನಕ್ಕೆ ಬಿಸಾಡುತ್ತಿದ್ದಾರೆ.

ಕುಮಾರಸ್ವಾಮಿ, ಎಲ್‌ಐಸಿ ಲೇಔಟ್.

andolanait

Recent Posts

ಮೂರು ದಿನಗಳ ಕನ್ನಡ ಸಾಹಿತ್ಯ ಸಮ್ಮೇಳನ ಸಂಪನ್ನ

ಸದ್ದು ಮಾಡದ ಕನ್ನಡ ಶಾಲೆಗಳ ಉಳಿವಿನ ಯೋಜನೆ ವಿಷಯ • ಚಿರಂಜೀವಿ ಸಿ. ಹುಲ್ಲಹಳ್ಳಿ ಮಂಡ್ಯ: ಕನ್ನಡ ನಾಡು ನುಡಿಗೆ…

4 mins ago

ಎಲ್ಲರ ಪಕ್ಕ ಕೂರುವ ಸಮಾನ ಹಕ್ಕು ನಮಗೆ ಬೇಕು

'ಪುನಶ್ಚತನವಾಗಬೇಕಾಗಿರುವ ಸಾಹಿತ್ಯ ಪ್ರಕಾರಗಳು' ಕುರಿತ ವಿಚಾರಗೋಷ್ಠಿಯಲ್ಲಿ ಲಿಂಗತ್ವ ಅಲ್ಪಸಂಖ್ಯಾತರ ಹಕ್ಕುಗಳ ಹೋರಾಟಗಾರ್ತಿ ಅಕೈ ಪದ್ಮಶಾಲಿ ಆಗ್ರಹ ಜಿ.ತಂಗಂ ಗೋಪಿನಾಥಂ ಮಂಡ್ಯ:…

13 mins ago

`ವಿದೇಶಗಳಲ್ಲಿ ಕನ್ನಡ ಕಟ್ಟುವುದು ಸವಾಲಿನ ಕೆಲಸ`

ಜಾಗತಿಕ ನೆಲೆಯಲ್ಲಿ ಕನ್ನಡ ಕಟ್ಟುವ ಬಗೆ ಕುರಿತ ಗೋಷ್ಠಿಯಲ್ಲಿ ಅಮೆರಿಕ ಕನ್ನಡ ಕೂಟ (ಅಕ್ಕ)ದ ಅಧ್ಯಕ್ಷ ಅಮರ್‌ನಾಥ್‌ಗೌಡ ಹೇಮಂತ್ ಕುಮಾರ್…

27 mins ago

ವಿಭಿನ್ನ ಓದಿಗೆ ಆಹ್ವಾನಿಸುವುದೇ ಉತ್ತಮ ಸಾಹಿತ್ಯ

`ಹೊಸ ತಲೆಮಾರಿನ ಸಾಹಿತ್ಯ' ಕುರಿತ ವಿಚಾರಗೋಷ್ಠಿಯಲ್ಲಿ ವಿಮರ್ಶಕ ವಿಕ್ರಂ ವಿಸಾಜಿ ಅಭಿಮತ • ಜಿ.ತಂಗಂ ಗೋಪಿನಾಥಂ ಮಂಡ್ಯ: ಹೊಸ ತಲೆಮಾರಿನ…

39 mins ago

ಮೈಸೂರಿನಲ್ಲಿ ಮಾಗಿ ಉತ್ಸವ: ಸಂಗೀತದ ಹೊನಲು ಹರಿಸಿದ ವಿಜಯ್‌ ಪ್ರಕಾಶ್‌

ಮೈಸೂರು: ಮಾಗಿ ಉತ್ಸವದ ಅಂಗವಾಗಿ ಜಗತ್ಪ್ರಸಿದ್ಧ ಮೈಸೂರು ಅರಮನೆ ಆವರಣದಲ್ಲಿ ಇಂದು ಸಂಜೆ ಖ್ಯಾತ ಗಾಯಕ ವಿಜಯ್‌ ಪ್ರಕಾಶ್‌ ಅವರು…

11 hours ago