ಮೈಸೂರು

ಮೈಸೂರು ; ಇಂದು, ನಾಳೆ ದೀಪಾಲಂಕಾರ ಮುಂದುವರಿಕೆ

ಮೈಸೂರು: ದಸರಾ ಹಬ್ಬಕ್ಕೂ ಮುನ್ನವೇ ದೀಪಾಲಂಕಾರದಿಂದ ಝಗಮಗಿಸುತ್ತಿದ್ದ ಮೈಸೂರು ನಗರಿ, ಮಂಗಳವಾರ, ಬುಧವಾರ ಕೂಡ ಅದೇ ರೀತಿ ಬೆಳಗಲಿದೆ.ಪೂರ್ವ ನಿರ್ಧಾರದಂತೆ, ಭಾನುವಾರಕ್ಕೆ ದೀಪಾಲಂಕಾರ ಮುಗಿಯಬೇಕಿತ್ತು. ಆದರೆ, ಅದನ್ನು ಅ. 12ರವರೆಗೆ ಮುಂದುವರಿಸಲು ತೀರ್ಮಾನಿಸಲಾಗಿದೆ.

ಈಗಲೂ ಸಾವಿರಾರು ಜನರು ಮೈಸೂರಿನ ರಸ್ತೆಗಳಲ್ಲಿ ಸಂಚರಿಸುತ್ತಾ ದಾರಿಯ ಇಕ್ಕೆಲಗಳಲ್ಲಿಯೂ ಇರುವ ದೀಪಾಲಕಾರಗಳನ್ನು ಕಂಡು ಆನಂದಿಸುತ್ತಿದ್ದಾರೆ. ಇದನ್ನು ಮನಗಂಡ ಮೈಸೂರು ದಸರಾ ದೀಪಾಲಂಕಾರ ಉಪ ಸಮಿತಿಯ ಅಧ್ಯಕ್ಷ ಟಿ. ರಮೇಶ್ ಹಾಗೂ ಸೆಸ್ಕ್ ನ ನಿರ್ದೇಶಕ ಜಯ ವಿಭವ ಸ್ವಾಮಿ ಅವರು, ದೀಪಾಲಂಕಾರವನ್ನು ಇನ್ನೆರಡು ದಿನ (ಅ. 12ರವರೆಗೆ) ವಿಸ್ತರಿಸಲು ನಿರ್ಧರಿಸಿರುವುದಾಗಿ ತಿಳಿಸಿದ್ದಾರೆ. ಆದರೆ, ಈ ಅಲಂಕಾರವು ನಗರದ ಮಧ್ಯಭಾಗದಲ್ಲಿ ಹಾಗೂ ಕೆಲವು ಪ್ರಮುಖ ರಸ್ತೆ, ವೃತ್ತಗಳಲ್ಲಿ ಮಾತ್ರ ಸಂಜೆಯ 6:30ರಿಂದ ರಾತ್ರಿ 10:30ರವರೆಗೆ ಮಾತ್ರ ಮುಂದುವರಿಸಲಾಗುತ್ತದೆ.

ಅರಮನೆ ಸೇರಿದಂತೆ ಹಲವಾರು ಪಾರಂಪರಿಕ ಕಟ್ಟಡಗಳು, ರಸ್ತೆಗಳು, ರಸ್ತೆ ಪಕ್ಕದ ಮರ, ಪಾರ್ಕು ಎಲ್ಲವೂ ವಿದ್ಯುತ್ ದೀಪಗಳಿಂದ ಕಂಗೊಳಿಸುವಂತೆ ಮಾಡಲಾಗಿತ್ತು. ಇಂಥ ದೀಪಾಲಂಕಾರಗಳಿಂದಾಗಿ ಇಡೀ ನಗರಕ್ಕೆ ಸ್ವರ್ಗವೇ ಇಳಿದು ಬಂದಂತಾಗಿ ರಾತ್ರಿಯ ವೇಳೆ ಇಡೀ ಊರಲ್ಲಿ ಸಂಚರಿಸುವುದೇ ಒಂದು ಸಡಗರ ಎನ್ನುವಂತೆ ಮಾಡಿತ್ತು.

andolana

Recent Posts

ಓದುಗರ ಪತ್ರ: ಇನ್ಸ್‌ಪೆಕ್ಟರ್ ಧನಂಜಯರ ಹೇಳಿಕೆಯಲ್ಲಿ ತಪ್ಪಿಲ್ಲ

ತಿ.ನರಸೀಪುರ ಪಟ್ಟಣದಲ್ಲಿ ನಡೆದ ಗಣೇಶೋತ್ಸವ ಪೂರ್ವಭಾವಿ ಸಭೆಯಲ್ಲಿ ಇನ್ಸ್ ಪೆಕ್ಟರ್ ಧನಂಜಯ ಅವರು ಪ್ರಚೋದನಕಾರಿಯಾಗಿ ಮಾತನಾಡಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ…

1 hour ago

ಓದುಗರ ಪತ್ರ: ದಸರಾ ಬಂದಾಗ ಮಾತ್ರ ಮೈಸೂರಿಗೆ ಸಿಂಗಾರ

ವಿಶ್ವವಿಖ್ಯಾತ ಮೈಸೂರು ದಸರಾಕ್ಕೆ ದಿನಗಣನೆ ಆರಂಭವಾಗಿದ್ದು, ಈ ನಿಟ್ಟಿನಲ್ಲಿ ಜಿಲ್ಲಾ ಆಡಳಿತ ಸಕಲ ಸಿದ್ಧತೆಗಳನ್ನೂ ಮಾಡುತ್ತಿದೆ. ದಸರಾ ಆನೆಗಳು ಅರಮನೆ…

1 hour ago

ಓದುಗರ ಪತ್ರ: ತ್ಯಾಜ್ಯದಿಂದ ವಿದ್ಯುತ್ ಉತ್ಪಾದನೆ ಕಡ್ಡಾಯವಾಗಲಿ

ರಾಜ್ಯದ ನಗರ ಪ್ರದೇಶಗಳಲ್ಲಿ ದಿನಂಪ್ರತಿ ಶೇ.೭೦ ಕ್ಕೂ ಹೆಚ್ಚು ಹಸಿ ತ್ಯಾಜ್ಯ ಸೃಷ್ಟಿಯಾಗುತ್ತಿದೆ. ಈ ತ್ಯಾಜ್ಯವನ್ನು ಸುಮ್ಮನೆ ಸುರಿಯುವ ಬದಲು…

1 hour ago

ಓದುಗರ ಪತ್ರ: ಯುಪಿಐ ವಹಿವಾಟು ಶುಲ್ಕ; ಹೊರೆಯಾಗದಿರಲಿ

ಇತ್ತೀಚಿನ ದಿನಗಳಲ್ಲಿ ಡಿಜಿಟಲ್ ಇಂಡಿಯಾ ಯೋಜನೆಯಡಿ ಯುಪಿಐ ಪಾವತಿ ವ್ಯವಸ್ಥೆಯು ಭಾರತೀಯರ ದೈನಂದಿನ ಜೀವನದ ಅವಿಭಾಜ್ಯ ಅಂಗವಾಗಿದೆ. ಜೇಬಿನಲ್ಲಿ ಹಣವಿಲ್ಲದಿದ್ದರೂ…

1 hour ago

ಮೋದಿ ಅಧಿಕಾರ ಪರ್ವ ರಜತ ಮಹೋತ್ಸವ: ಏನಿತ್ತು? ಏನಿಲ್ಲ?

ನರೇಂದ್ರ ಮೋದಿ ಅವರು ೨೦೦೧ರಲ್ಲಿ ಮೊದಲ ಬಾರಿಗೆ ಗುಜರಾತ್ ಸಿಎಂ ಆಗಿ ಅಧಿಕಾರ ಸ್ವೀಕರಿಸಿದರು. ಸತತ ೧೫ ವರ್ಷಗಳು ಅಲ್ಲಿ…

1 hour ago

ತನ್ನನ್ನು ತಾನೇ ಚಿವುಟಿ ಎಚ್ಚರಿಸಿದ್ದ ನೆಹರೂ

ಜವಾಹರಲಾಲ್ ಎಂಬ ಅಪಾಯಕಾರಿ ಮನುಷ್ಯ ೬ ಬಾರಿ ಕಾಂಗ್ರೆಸ್ ಪಕ್ಷದ ರಾಷ್ಟ್ರಾಧ್ಯಕ್ಷರಾಗಿ ೩ ಬಾರಿ ಸತತವಾಗಿ ದೇಶದ ಪ್ರಧಾನಿಯಾಗಿದ್ದ ಜವಾಹರಲಾಲ್…

1 hour ago