ಆಯುಧ ಪೂಜೆ ಮುನ್ನ ದಿನ ೪೦೦ ವಾಹನಗಳಿಗೆ ವಿಶೇಷ ಪೂಜೆ
ಮೈಸೂರು: ಮಹಾನಗರಪಾಲಿಕೆಯ ಸುಮಾರು ೪೦೦ ವಾಹನಗಳನ್ನು ಒಂದೆಡೆ ನಿಲ್ಲಿಸಿ ಪೂಜಾ ಕಾರ್ಯ ನಡೆಸುವ ಮೂಲಕ ಅದ್ಧೂರಿ ಯಾಗಿ ಆಯುಧ ಪೂಜೆ ಆಚರಿಸಲಾಯಿತು. ಜೊತೆಗೆ ಉತ್ತಮ ಚಾಲಕರಿಗೆ ಸನ್ಮಾನವನ್ನೂ ಮಾಡಲಾಯಿತು.
ನಗರದ ಕುಕ್ಕರಹಳ್ಳಿ ಕೆರೆ ರಸ್ತೆಯ ಮಹಾಬೋಧಿ ಶಾಲೆ ಎದುರಿನ ಮೈದಾನದಲ್ಲಿ ಏರ್ಪಡಿಸಲಾಗಿದ್ದ ಆಯುಧ ಪೂಜಾ ಕಾರ್ಯಕ್ರಮ ವನ್ನು ಮಹಾಪೌರ ಶಿವಕುಮಾರ್ ಹಾಗೂ ಆಯುಕ್ತ ಲಕ್ಷ್ಮೀಕಾಂತರೆಡ್ಡಿ ಅವರು ದೀಪ ಬೆಳಗುವ ಮೂಲಕ ಉದ್ಘಾಟಿಸಿದರು.
ನಗರಪಾಲಿಕೆಯ ೨೮೫ ಟಿಪ್ಪರ್, ೬೫ ಟ್ರಾಕ್ಟರ್, ೨೧ ಕಾಂಪ್ಯಾಕ್ಟ್ ವಾಹನ, ೯ ಜೆಸಿಬಿ, ೫ ಎಸ್ಕಾವೇಟರ್ ಸೇರಿದಂತೆ ಮೈದಾನದಲ್ಲಿ ೪೮೫ ವಾಹನ ಗಳನ್ನು ನಿಲ್ಲಿಸಲಾಗಿತ್ತು. ಅವುಗಳ ಅಲಂಕಾರಕ್ಕೆ ನಗರಪಾಲಿಕೆ ವತಿಯಿಂದ ೮೦ ಸಾವಿರ ರೂ. ಹಣ ನೀಡಲಾಗಿತ್ತು. ಹಬ್ಬದ ನಿಮಿತ್ತ ಪೂಜಾ ಕಾರ್ಯಕ್ರಮಗಳನ್ನು ನೆರವೇರಿಸಲಾಯಿತು.
ಇದೇ ವೇಳೆ ಚಾಲಕರಾದ ಜಯರಾಜ್, ಸುಧೀಂದ್ರ, ಮುರುಗೇಶ್, ವೆಂಕಟೇಶ್, ಖಲೀಲ್, ಮಂಚಣ್ಣ, ರವಿ, ರಾಜಶೇಖರಮೂರ್ತಿ, ಸುದೀಂದ್ರ ಯಾದವ್, ಯಶವಂತ್, ವಾಜಿದ್ ಅವರನ್ನು ಸನ್ಮಾನಿಸಲಾಯಿತು. ವಾಹನ ವಿಭಾಗದ ಮೇಲ್ವಿಚಾರಕ ನಸ್ರುಲ್ಲಾ ಅವರನ್ನು ವಿಶೇಷವಾಗಿ ಅಭಿನಂದಿಸಲಾಯಿತು. ಆಯುಕ್ತ ಲಕ್ಷ್ಮೀಕಾಂತರೆಡ್ಡಿ, ಉಪ ಮಹಾಪೌರರಾದ ಡಾ.ಜಿ.ರೂಪಾ, ಉಪ ಆಯುಕ್ತ ಮಹೇಶ್, ಹೆಚ್ಚುವರಿ ಆಯುಕ್ತರಾದ ರೂಪಾ, ಸವಿತಾ, ನಗರಪಾಲಿಕೆ ಸದಸ್ಯರಾದ ಅಶ್ವಿನಿ ಅನಂತು, ವೇದಾವತಿ, ಸ್ವಚ್ಛತಾ ಸಮಿತಿ ಅಧ್ಯಕ್ಷ ಶ್ರೀನಿವಾಸ್ ಮತ್ತಿತರರು ಹಾಜರಿದ್ದರು.
ಚಾಮರಾಜನಗರ: ಬಿಆರ್‌ಟಿ ಹುಲಿ ಸಂರಕ್ಷಿತಾರಣ್ಯದಲ್ಲಿ ಪಶು ವೈದ್ಯರ ಕೊರತೆ ಎದ್ದು ಕಾಣುತ್ತಿದ್ದು, ಹೊರಗುತ್ತಿಗೆ ಆಧಾರದಲ್ಲಿ ವೈದ್ಯರ ಹುದ್ದೆಯ ನೇಮಕಾತಿಗೂ ಜಾಹೀರಾತು…
ಬೆಂಗಳೂರು: ರಾಜ್ಯದಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಿಂದ ಹಣ್ಣುಗಳ ರಾಣಿ ಎಂದು ಕರೆಯಿಸಿಕೊಳ್ಳುವ ಮಾವಿಗೆ ಅನೇಕ ರೋಗಗಳು ಕಾಣಿಸಿಕೊಂಡಿದ್ದು, ರೈತರಿಗೆ ಇಳುವರಿ…
ಗುಂಡ್ಲುಪೇಟೆ: ಗಡಿ ಜಿಲ್ಲೆ ಚಾಮರಾಜನಗರದ ಗುಂಡ್ಲುಪೇಟೆ ತಾಲ್ಲೂಕಿನಲ್ಲಿರುವ ರಾಷ್ಟ್ರೀಯ ಉದ್ಯಾನವನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕುಂದಕೆರೆ ವಲಯದ ಚಿಕ್ಕ…
ಲಕ್ನೋ: ಆಕರ್ಷಣೀಯ ಪ್ರವಾಸಿತಾಣಗಳ ಪಟ್ಟಿಯಲ್ಲಿ ಅಯೋಧ್ಯೆ ರಾಮಮಂದಿರವು ತಾಜ್‌ಮಹಲನ್ನು ಹಿಂದಿಕ್ಕಿ ನಂಬರ್ ಒನ್ ಪಟ್ಟ ಪಡೆದಿದೆ. ಈ ಮೂಲಕ ಈಗ…
ಚಿಕ್ಕಬಳ್ಳಾಪುರ: ನಂದಿಗಿರಿಧಾಮದಲ್ಲಿ ಹೊ ವರ್ಷಾಚರಣೆಗೆ ಬ್ರೇಕ್ ನೀಡಲಾಗಿದ್ದು, ಪ್ರವಾಸಿಗರಿಗೆ ಬಿಗ್ ಶಾಕ್ ಎದುರಾಗಿದೆ. ಪ್ರಕೃತಿ ಮಡಿಲಿನಲ್ಲಿ ಕುಣಿಸು ಕುಪ್ಪಳಿಸಿ ಹೊಸ…
ಮಂಡ್ಯ: ಸಕ್ಕರೆ ನಾಡು ಮಂಡ್ಯದಲ್ಲಿ ನಡೆದ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಯಶಸ್ವಿಯಾಗಿ ಮುಕ್ತಾಯಗೊಂಡಿದೆ. ಕನ್ನಡ ಸಾಹಿತ್ಯ…