ರಾಜ್ಯ

ಕರ್ನಾಟಕ ವಿರೋಧಿ ಬಜೆಟ್‌ : ಎಚ್‌ಸಿಎಂ ವ್ಯಂಗ್ಯ

ಬೆಂಗಳೂರು : ಹಣಕಾಸು ತಜ್ಞೆ ಅಲ್ಲದ ಕೇಂದ್ರದ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸುತ್ತಿರುವ ೯ನೇ ಕಳಪೆ ಬಜೆಟ್ ಇದಾಗಿದೆ. ಪ್ರತಿ ಬಾರಿಯೂ ದೊಡ್ಡ ದೊಡ್ಡ ಅಂಕಿ ಅಂಶಗಳನ್ನು ಹೊತ್ತು ತರುವ ನಿರ್ಮಲಾ ಸೀತಾರಾಮನ್ ಅವರು ಪ್ರತಿ ಬಾರಿಯೂ ತಾವೇ ಮಂಡಿಸಿದ ಬಜೆಟ್ ಅನ್ನು ಸಮರ್ಪಕವಾಗಿ ಜಾರಿ ಮಾಡದೇ ಇನ್ನೊಂದು ಬಜೆಟ್ ಮಂಡಿಸುವುದು ಅತ್ಯಂತ ಹಾಸ್ಯಾಸ್ಪದ ಸಂಗತಿ ಆಗಿದೆ ಎಂದು ಸಚಿವ ಡಾ.ಎಚ್.ಸಿ.ಮಹದೇವಪ್ಪ ವ್ಯಂಗ್ಯವಾಡಿದ್ದಾರೆ.

ದೇಶದಲ್ಲಿ ಆಡಳಿತ ಮಾಡುವ ಸರ್ಕಾರದ ರೀತಿ ನೀತಿಗಳು, ಅಲ್ಲಿನ ಜನರ ಆಶೋತ್ತರಗಳನ್ನು ಎಷ್ಟರ ಮಟ್ಟಿಗೆ ಈಡೇರಿಸಿದೆ ಎಂಬುದನ್ನು ಸರ್ಕಾರವು ಮಂಡಿಸುವAತಹ ಬಜೆಟ್ ಸೂಚ್ಯವಾಗಿ ಹೇಳುತ್ತದೆ. ಬಜೆಟ್ ಎಂದರೆ ಶ್ರೀಮಂತರ ಅನುಕೂಲಕ್ಕಾಗಿ ಇರುವ ವ್ಯವಸ್ಥೆ ಎಂದುಕೊAಡು ಬಜೆಟ್ ತಯಾರಿಸುವ ಕೇಂದ್ರ ಸರ್ಕಾರವು, ಕಾರ್ಪೊರೇಟ್ ಉದ್ಯಮಿಗಳಿಗೆ, ಎನ್‌ಆರ್‌ಐಗಳಿಗೆ ಮತ್ತು ಶ್ರೀಮಂತರಿಗೆ ಪೂರಕವಾಗಿ ಬಜೆಟ್ ರೂಪಿಸುತ್ತಿದೆಯೇ ವಿನಃ ಜನ ಸಾಮಾನ್ಯರ ಪರವಾಗಿ ಯಾವುದೇ ರೀತಿಯ ಯೋಜನೆಗಳನ್ನು ರೂಪಿಸದೇ ಇರುವುದು ಇವರ ಜನ ವಿರೋಽ ನೀತಿಗೆ ಹಿಡಿದ ಕನ್ನಡಿ ಎಂದಿದ್ದಾರೆ.

ದೇಶದ ಜನಸಂಖ್ಯೆಯಲ್ಲಿ ಶೇ.೨೪ ಇರುವಂತಹ ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಬಜೆಟ್‌ನಲ್ಲಿ ಏನಾದರೂ ಅನುಕೂಲ ಮಾಡಿದ್ದಾರಾ ಎಂದು ಹುಡುಕಿದರೆ, ಅಲ್ಲಿ ಎಂದಿನAತೆ ದೊಡ್ಡ ಸೊನ್ನೆಯೊಂದು ನಮಗೆ ಕಾಣುತ್ತಿದೆ. ಇನ್ನು ಕರ್ನಾಟಕದಿಂದಲೇ ರಾಜ್ಯಸಭೆಗೆ ಆಯ್ಕೆಯಾಗಿ ಸಚಿವರಾಗಿರುವ ನಿರ್ಮಲಾ ಸೀತಾರಾಮನ್ ಅವರು ಕರ್ನಾಟಕದ ಬಹು ನಿರೀಕ್ಷಿತ ಮೇಕೆದಾಟು ಮತ್ತು ಭದ್ರಾ ಮೇಲ್ದಂಡೆ ಯೋಜನೆಗಳನ್ನು ಕಡೆಗಣಿಸಿದ್ದು ತಮ್ಮ ಕರ್ನಾಟಕ ವಿರೋಽ ನೀತಿಯನ್ನು ಮುಂದುವರೆಸಿದ್ದಾರೆ ಎಂದು ಹೇಳಿದ್ದಾರೆ.

ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆಂದು ನಿರೀಕ್ಷಿಸಿದ್ದ ಸುಮಾರು ೫,೦೦೦ ಕೋಟಿ ರೂ. ಅನುದಾನದ ಕನಿಷ್ಠ ಪ್ರಸ್ತಾಪವನ್ನೂ ಮಾಡದ ಕೇಂದ್ರ ಸರ್ಕಾರವು, ರೈತರಿಂದ ಬೆಂಬಲ ಬೆಲೆ ಅಡಿಯಲ್ಲಿ ಪಡೆದ ಉತ್ಪನ್ನಗಳಿಗೆ ನೀಡಬೇಕಿದ್ದ ೨,೪೬೧ ಕೋಟಿ ರೂ. ಬಗ್ಗೆ ಕನಿಷ್ಠ ಪ್ರಸ್ತಾಪ ಮಾಡದೇ ಇರುವುದು ಅತ್ಯಂತ ಬೇಸರದ ಸಂಗತಿಯಾಗಿದೆ. ಜನ ಬದುಕನ್ನು ಮರೆತು ಮತ್ತೆ ೧೫ ಲಕ್ಷ ಕೋಟಿಗೂ ಹೆಚ್ಚಿನ ಸಾಲ ಮಾಡುತ್ತಿರುವ ಕೇಂದ್ರ ಸರ್ಕಾರ, ಆ ಹಣವನ್ನು ಯಾರಿಗೆ ನೀಡುತ್ತಿದೆ ಎಂಬುದೇ ನಿಗೂಢ ಪ್ರಶ್ನೆಯಾಗಿದೆ. ಎಲ್ಲ ಇಲಾಖೆಗಳನ್ನೂ ಪರಿಗಣಿಸದೆ. ಮನಸ್ಸಿಗೆ ಬಂದAತೆ ರಾಜಕೀಯ ಪ್ರೇರಿತವಾಗಿ ಹಣಕಾಸಿನ ಹಂಚಿಕೆ ಮಾಡಲಾಗಿದ್ದು ಇದರಿಂದ ದೇಶದ ವಿವಿಧ ಕ್ಷೇತ್ರಗಳಿಗೆ ಅನ್ಯಾಯ ಎಸಗಿಂತೆ ಆಗಿದೆ ಎಂದಿದ್ದಾರೆ.

ಚಂದು ಸಿಎನ್

ಮೈಸೂರು ಜಿಲ್ಲೆಯ ಹುಣಸೂರಿನ ಚಲ್ಲಹಳ್ಳಿ ಗ್ರಾಮದವನಾದ ನಾನು ಒಂದು ದಶಕದಿಂದ ಮೈಸೂರಿನಲ್ಲಿ ನೆಲೆಸಿದ್ದೇನೆ. ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪತ್ರಿಕೋದ್ಯಮ ಪದವಿ ಪಡೆದು ಅಂದಿನಿಂದಲೇ ಹವ್ಯಾಸಿ ಪತ್ರಕರ್ತನಾಗಿ ವೃತ್ತಿ ಆರಿಸಿಕೊಂಡೆ. ನಂತರ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ವಿಷಯದಲ್ಲಿ ಸ್ನಾತಕೋತ್ತರ ಪದವಿ ಮುಗಿಸಿದ ಬಳಿಕ ಪತ್ರಿಕೋದ್ಯಮ ಕ್ಷೇತ್ರದಲ್ಲಿ 2 ವರ್ಷಗಳ ಕಾಲ ಅನುಭವ ಪಡೆದಿದ್ದೇನೆ. ಸದ್ಯ ಮೈಸೂರಿನ ಪ್ರತಿಷ್ಠಿತ ಆಂದೋಲನ ಪತ್ರಿಕೆಯ ಡಿಜಿಟಲ್‌ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಪ್ರಾಚೀನ ಪಳಿಯುಳಿಕೆ ಹಾಗೂ ಇತಿಹಾಸದ ಕಡೆ ಎಲ್ಲಿಲ್ಲದ ಒಲವು. ಪ್ರವಾಸ, ಪುಸ್ತಕ ಓದುವುದು ನೆಚ್ಚಿನ ಹವ್ಯಾಸಗಳಾಗಿವೆ. ಮೊಬೈಲ್‌ ಸಂಖ್ಯೆ: 9164535321.

Recent Posts

ನಾಳೆ ಅರಮನೆಗೆ ಅಭಿಮನ್ಯು ಪ್ರವೇಶ

ಚಿರಂಜೀವಿ ಸಿ.ಹುಲ್ಲಹಳ್ಳಿ ಸತತ ಆರು ಬಾರಿ ಅಂಬಾರಿ ಹೊತ್ತಿದ್ದ ಆನೆ; ಈ ಬಾರಿ ನಿಶಾನೆ ಆನೆಯಾಗಿ ಭಾಗಿಯಾಗುವ ಸಾಧ್ಯತೆ ಮೈಸೂರು:…

4 mins ago

ಮೈಸೂರು | ನಾಲ್ಕೇ ದಿನಕ್ಕೆ ಮುರಿದು ಬಿದ್ದ ದಸರಾ ದೀಪಾಲಂಕಾರ ಕಟೌಟ್

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ದಸರಾ ದೀಪಾಲಂಕಾರ ಕಾಮಗಾರಿಯಲ್ಲೇ ಯಡವಟ್ಟಾಗಿದ್ದು, ನಗರದ ಗನ್ ಹೌಸ್ ವೃತ್ತದಲ್ಲಿ ಕಟ್ಟಲಾಗಿದ್ದ ದಸರಾ ದೀಪಾಲಂಕಾರದ…

14 hours ago

ಕಮಿಷನ್ ಆರೋಪ ಸುಳ್ಳು, ಎಸ್‌ಐಆರ್ ರದ್ದಾಗಬೇಕು: ಸಚಿವ ಪುಟ್ಟರಂಗಶೆಟ್ಟಿ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ಶಾಸಕರು ಕಮಿಷನ್ ಕೇಳುತ್ತಿದ್ದಾರೆ ಎಂಬ ಗುತ್ತಿಗೆದಾರರ ಆರೋಪ ಸುಳ್ಳು,ಮತದಾರರ ಪಟ್ಟಿಯ…

15 hours ago

ಯಳಂದೂರು ತಾಲ್ಲೂಕಿನಲ್ಲಿ ವರುಣನ ಕೃಪೆ: ಭತ್ತದ ನಾಟಿಗೆ ಮುಂದಾದ ರೈತರು

ಯಳಂದೂರು: ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಕಳೆದ ಕೆಲ ದಿನಗಳಿಂದ ಸತತವಾಗಿ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ರೈತರು ಭತ್ತದ ನಾಟಿ ಕಾರ್ಯದಲ್ಲಿ…

15 hours ago

ಕಾವೇರಿ ತೀರ್ಥೋದ್ಭವಕ್ಕೆ ದಿನಗಣನೆ: ಕಾವೇರಿ ನೀರಾವರಿ ನಿಗಮದಿಂದ 2 ಕೋಟಿ ರೂ ಬಿಡುಗಡೆ

ಮಡಿಕೇರಿ: ನಾಡಿನ ಜೀವನದಿ ಕಾವೇರಿ ಉಗಮಸ್ಥಾನ ತಲಕಾವೇರಿಯಲ್ಲಿ ನಡೆಯಲಿರುವ ಪವಿತ್ರ ತೀರ್ಥೋದ್ಭವಕ್ಕೆ ದಿನಗಣನೆ ಶುರುವಾಗಿದ್ದು, ಇನ್ನೇನು ಕೇವಲ 15 ದಿನಗಳಷ್ಟೇ…

15 hours ago