ನೇತ್ರಾರಾಜು ಕೊನೆಯವರೆಗೆ ತಾನು ತೆಗೆದ ಚಿತ್ರಗಳನ್ನು ಉತ್ತಮ ಎಂದು ಹೇಳಿಕೊಳ್ಳಲಿಲ್ಲ: ಕೃಪಾಕರ
ಮೈಸೂರು: ನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿ ಮಂಗಳವಾರ ಸಂಜೆ ‘ನೇತ್ರರಾಜು ಸ್ಮರಣೆ’ಯಲ್ಲಿ ಪತ್ರಿಕಾ ಛಾಯಾಗ್ರಾಹಕ ಎಸ್.ಆರ್.ಮಧುಸೂದನ್ ಹೊರ ತಂದಿರುವ ೨೦೨೩ರ ಕ್ಯಾಲೆಂಡರ್ ಅನ್ನು ಜಿಲ್ಲಾ ಪತ್ರಕರ್ತರ ಭವನದಲ್ಲಿ ಮಂಗಳವಾರ ಖ್ಯಾತ ವನ್ಯಜೀವಿ ತಜ್ಞರಾದ ಕೃಪಾಕರ-ಸೇನಾನಿ ಲೋಕಾರ್ಪಣೆಗೊಳಿಸಿದರು.
ನಂತರ ಮಾತನಾಡಿದ ಕೃಪಾಕರ ಅವರು, ನಮ್ಮ ನಡುವೆ ನೇತ್ರರಾಜು ಇಲ್ಲ ಅನ್ನಿಸುವುದಿಲ್ಲ. ಅವರೊಂದಿಗೆ ದೀರ್ಘ ಸಮಯ ಒಡನಾಟ ಇತ್ತು. ಟೋಪಿ ಹಾಕಿಸಿಕೊಳ್ಳುವುದು ಅವರ ಹವ್ಯಾಸವಾಗಿತ್ತು. ಹುಡುಕಿ ಹುಡುಕಿ ಟೋಪಿ ಹಾಕಿಸಿಕೊಳ್ಳುತ್ತಿದ್ದರು ಎಂದು ಹೇಳಿದರು.
ಕುತೂಹಲ ಇದ್ದವರಿಗೆ ಶಿಕ್ಷಣ ಬೇಕಿಲ್ಲ. ನೇತ್ರಾರಾಜು ಅವರಿಗೆ ಅಪರಿಮಿತವಾದ ಕುತೂಹಲ ಇತ್ತು. ಶಿಕ್ಷಣ ಪಡೆಯದಿದ್ದರೂ ಟೆಕ್ನಾಲಜಿ ಬಗ್ಗೆ ತಿಳಿವಳಿಕೆ ಇತ್ತು. ಹೊಸ ಹೊಸ ಸಾಫ್ಟ್‌ವೇರ್ ತರಿಸಿ ಪ್ರಯೋಗ ಮಾಡುತ್ತಿದ್ದರು. ಪ್ರಯೋಗ ಮಾಡುತ್ತಲೇ ಸಾಲಕ್ಕೆ ಸಿಲುಕಿದರು. ಕೊನೆಯವರೆಗೆ ತಾನು ತೆಗೆದ ಚಿತ್ರಗಳನ್ನು ಉತ್ತಮ ಎಂದು ಹೇಳಿಕೊಳ್ಳಲಿಲ್ಲ. ಇನ್ನೂ ಉತ್ತಮ ಚಿತ್ರ ತೆಗೆಯಬೇಕೆಂದು ಹಂಬಲಿಸುತ್ತಿದ್ದರು ಎಂದು ತಿಳಿಸಿದರು.
ಸೇನಾನಿ ಮಾತನಾಡಿ, ಛಾಯಾಗ್ರಾಹಕ ನೇತ್ರರಾಜು ಅಸಂಗತ ಕತೆಯಂತೆ ಕಾಣುತ್ತಾರೆ. ಝೆನ್ ವರ್ಣಿಸಲಾಗದಂತೆಯೇ ನೇತ್ರಾ ಕ್ಯಾರೆಕ್ಟರ್ ಹಿಡಿದಿಡುವುದು ಕಷ್ಟ. ನೇತ್ರರಾಜು ಇಲ್ಲದ ಕಲಾಮಂದಿರ ಕಲ್ಪಿಸಿಕೊಳ್ಳುವುದು ಕಷ್ಟವಾಗುತ್ತದೆ ಎಂದರಲ್ಲದೆ, ಸಾಹಿತ್ಯದ ಕಾರ್ಯಕ್ರಮಗಳು, ಚಳವಳಿಗಳಲ್ಲಿ ಅವರೊಂದಿಗಿನ ಒಡನಾಟವನ್ನು ಸ್ಮರಿಸಿದರು.
ಹಿರಿಯ ಸಾಹಿತಿ ದೇವನೂರ ಮಹಾದೇವ ಅವರು ನೇತ್ರರಾಜು ಅವರನ್ನು ಒಂದು ಬೆರಗು ಎಂದಿದ್ದರು. ಅವರಿಗೆ ಭೂತವೇ ಇಲ್ಲ. ಭವಿಷ್ಯದ ಬಗ್ಗೆ ಚಿಂತೆ ಇಲ್ಲ. ನಿಜವಾದ ದಿಗಂಬರ ಜೈನ ಎಂದು ನುಡಿದಿದ್ದಾರೆ ಎಂದು ಹೇಳಿದರು.
ಪತ್ರಿಕಾ ಛಾಯಾಗ್ರಾಹಕ ಎಸ್.ಆರ್.ಮಧುಸೂದನ್, ನೇತ್ರರಾಜು ಅವರ ಪುತ್ರಿ ಛಾಯಾಗ್ರಾಹಕಿ ನಿತ್ಯಾ, ನಗರ ಪಾಲಿಕೆ ಮಾಜಿ ಸದಸ್ಯ ಸ್ನೇಕ್ ಶ್ಯಾಂ ಹಾಜರಿದ್ದರು.
ಮೈಸೂರು : ಮೈಸೂರು ಅರಮನೆ ಮಂಡಳಿ ವತಿಯಿಂದ ಕ್ರಿಸ್‌ಮಸ್ ಹಾಗೂ ಹೊಸವರ್ಷದ ಪ್ರಯುಕ್ತ 10 ದಿನಗಳ ‘ಅರಮನೆ ಫಲಪುಷ್ಪ ಪ್ರದರ್ಶನ’…
ಹಲಗೂರು : ಎತ್ತಿನ ಗಾಡಿ ತೆರಳುತ್ತಿದ್ದ ವೇಳೆ ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಎತ್ತು ಸ್ಥಳದಲ್ಲೇ ಮೃತಪಟ್ಟ ಘಟನೆ…
ಹಲಗೂರು : ಇಲ್ಲಿಗೆ ಸಮೀಪದ ಮುತ್ತತ್ತಿ ಕಾವೇರಿ ನದಿಯಲ್ಲಿ ಈಜಾಡುತ್ತಿದ್ದ ವೇಳೆ ನೀರಿನ ಸೆಳೆತಕ್ಕೆ ಸಿಲುಕಿ ಯುವಕ ಮೃತಪಟ್ಟಿರುವ ಘಟನೆ…
ಭಾರತೀನಗರ : ಇಲ್ಲಿಗೆ ಸಮೀಪದ ಕೆ.ಶೆಟ್ಟಹಳ್ಳಿ ಗ್ರಾಮದಲ್ಲಿ ಪೊಲೀಸರ ಭದ್ರತೆಯೊಂದಿಗೆ ಗ್ರಾಮದ ಪರಿಶಿಷ್ಟ ಜಾನಾಂಗದ ಮಹಿಳೆಯರು, ಪುರುಷರು ದೇವಾಲಯಗಳಿಗೆ ಪ್ರವೇಶಿಸಿದರು.…
ಮೈಸೂರು : ಅಕ್ರಮವಾಗಿ ವಿದ್ಯುತ್ ಸಂಪರ್ಕ ಪಡೆದಿರುವ ಸಂಬಂಧ ಯಶಸ್ವಿ ಕಾರ್ಯಾಚರಣೆ ನಡೆಸಿದ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ(ಚಾವಿಸನಿನಿ)…
ಬೆಂಗಳೂರು : ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್ ಪಂದ್ಯ ನಡೆಸುವ ಕುರಿತಂತೆ ಪರಿಶೀಲಿಸಲು ಸಮಿತಿ ರಚಿಸಲಾಗಿದೆ ಎಂದು ಗೃಹ ಸಚಿವರಾದ…