ಜಿಲ್ಲೆಗಳು

ನಾಲೆಯ ರಸ್ತೆಯಲ್ಲಿ ತ್ಯಾಜ್ಯದ ರಾಶಿ; ನೀರು ಕಲುಷಿತ

ಕಬಿನಿ ಬಲದಂಡೆ ನಾಲೆಯ ರಸ್ತೆಯುದ್ದಕ್ಕೂ ಮದ್ಯದ ಅಂಗಡಿಯ ತ್ಯಾಜ್ಯ; ಕ್ರಮ ಕೈಗೊಳ್ಳದ ಅಧಿಕಾರಿಗಳು

-ಶ್ರೀಧರ ಆರ್.ಭಟ್ಟ

ನಂಜನಗೂಡು: ತಾಲ್ಲೂಕಿನ ಹುಲ್ಲಹಳ್ಳಿ ಸಮೀಪದ ಕಬಿನಿ ಬಲದಂಡೆ ನಾಲೆಯ ಎಡ, ಬಲ ಸೇರಿದಂತೆ ನಾಲಾ ರಸ್ತೆಯುದ್ದಕ್ಕೂ ತ್ಯಾಜ್ಯಗಳು ಬಿದ್ದು ಕೊಳೆತು ನಾರಲಾರಂಭಿಸಿದೆ.
ಈ ತ್ಯಾಜ್ಯ ಪಕ್ಕದ ಕಬಿನಿ ನಾಲೆಗೂ ಸೇರಿ ನಾಲೆಯ ನೀರು ಸಹ ಕಲುಷಿತವಾಗುತ್ತಿದೆ. ವಿಶೇಷವೆಂದರೆ ಇಷ್ಟೊಂದು ಪ್ರಮಾಣದ ತ್ಯಾಜ್ಯ ಕೇವಲ ಮದ್ಯದ ಅಂಗಡಿಯದ್ದೇ ಆಗಿರುವುದು. ಇದು ಅಬಕಾರಿ ಲಾಬಿಗೆ ಸಾಕ್ಷಿ ಎನ್ನಲಾಗಿದೆ. ಜನಸಾಮಾನ್ಯರಿಗೆ ಮದ್ಯ ಕುಡಿಸಿ ಬದುಕು ಹಾಳು ಮಾಡುವ ಮದ್ಯದ ದೊರೆಗಳು ಈಗ ನಾಲಾ ಬದಿ ಮತ್ತು ರಸ್ತೆಯಲ್ಲಿ ತ್ಯಾಜ್ಯ ಸುರಿಯುವುದರ ಮೂಲಕ ಪರಿಸರ ನಾಶದೊಂದಿಗೆ ಮೂಕ ಪ್ರಾಣಿಗಳ ಜೀವಕ್ಕೆ ಕುತ್ತು ತರಲಾರಂಭಿಸಿದ್ದಾರೆ.

ರಾಶಿ ರಾಶಿ ತ್ಯಾಜ್ಯ ಕೊಳೆತು ನಾರುತ್ತಿದ್ದರೂ ನೀರಾವರಿ ಇಲಾಖೆ ಹಾಗೂ ಗ್ರಾಮ ಪಂಚಾಯಿತಿ ಅಧಿಕಾರಿಗಳು ಕಂಡೂಕಾಣದಂತೆ ಕಣ್ಮುಚ್ಚಿ ಕುಳಿತಿರುವುದು ದುರಂತ. ಖಾಲಿಯಾದ ಮದ್ಯದ ಪ್ಯಾಕೆಟ್‌ಗಳು ಮಳೆ ಬಂದರೆ ಕೊಳೆತು ನಾರುತ್ತವೆ. ಬಿಸಿಲಾದರೆ ಗಾಳಿಗೆ ಹಾರಿ ಹೋಗಿ ಅಕ್ಕಪಕ್ಕದ ಜಮೀನುಗಳಿಗೆ ಸೇರಿ ಆ ರೈತರಿಗೆ ತೊಂದರೆ ನೀಡುತ್ತವೆ.

ಕೊಳೆತು ನಾರುತ್ತಿರುವ ಈ ಮದ್ಯದ ಪ್ಲಾಸ್ಟಿಕ್ ತ್ಯಾಜ್ಯ ಸೇವಿಸಿ ಮೂಕ ಪ್ರಾಣಿಗಳಾದ ಹಸು, ಎಮ್ಮೆ, ಕರು, ಮೇಕೆಗಳು ಬಲಿಯಾಗುತ್ತಿರುವ ಘಟನೆಗಳು ವರದಿಯಾಗತೊಡಗಿವೆ.
ಕಾರ್ಯ ಗ್ರಾಮದ ಸಮೀಪವಿರುವ ಹುಲ್ಲಹಳ್ಳಿ ಹೋಬಳಿ ಕೇಂದ್ರದ ಮದ್ಯದ ಅಂಗಡಿಯ ಮಾಲೀಕರ ದುರ್ನಡತೆಯಿಂದ ಕಾರ್ಯ ಗ್ರಾಮದ ಬಲದಂಡೆ ನಾಲೆಯ ಏರಿ ಸಂಪೂರ್ಣವಾಗಿ ಮದ್ಯದ ಪ್ಲಾಸ್ಟಿಕ್ ತ್ಯಾಜ್ಯದ ಸಂಗ್ರಹ ಸ್ಥಳವಾಗಿ ಮಾರ್ಪಾಡಾಗಿದೆ.
ಹುಲ್ಲಹಳ್ಳಿಯ ನೀರಾವರಿ ಇಲಾಖೆ ಅಧಿಕಾರಿಗಳಿಗೆ ಕಾರ್ಯ ಗ್ರಾಮದ ಸುತ್ತಮುತ್ತಲ ಜಮೀನುಗಳ ರೈತರು ಮದ್ಯದಂಗಡಿಯ ಪ್ಲಾಸ್ಟಿಕ್ ಕೊಳೆತ ತ್ಯಾಜ್ಯವನ್ನು ತಡೆಹಿಡಿಯಲು ಸಾಕಷ್ಟು ಬಾರಿ ಮನವಿ ಮಾಡಿದ್ದಾರೆ. ಹಾಗೆೆುೀಂ ದುಗ್ಗಹಳ್ಳಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ತಿಳಿಸಿದ್ದಾರೆ. ಈ ತ್ಯಾಜ್ಯ ಸುರಿಯುತ್ತಿರುವವರ ಮೇಲೆ ಕಾನೂನು ಕ್ರಮ ಜರುಗಿಸಲು ಅಧಿಕಾರಿಗಳಿಗೆ ತಾಲ್ಲೂಕನ್ನು ಆವರಿಸಿಕೊಂಡಿರುವ ಅಬಕಾರಿ ಲಾಬಿಯ ಭಯ ಎನ್ನುತ್ತಾರೆ ಅಧಿಕಾರಿಗಳು.

ಅಧಿಕಾರಿಗಳ ಭಯ, ನಿರ್ಲಕ್ಷ್ಯ ನಡೆಯಿಂದ ಮೂಕ ಪ್ರಾಣಿಗಳು ಮತ್ತು ರೈತಾಪಿ ವರ್ಗ ವ್ಯಥೆ ಪಡುವಂತಾಗಿದೆ. ಇನ್ನಾದರೂ ಸಂಬಂಧಪಟ್ಟ ಉನ್ನತ ಮಟ್ಟದ ಅಧಿಕಾರಿಗಳು ಕಾರ್ಯ ಗ್ರಾಮದ ಬಲದಂಡೆ ನಾಲೆಯ ಏರಿ ಮೇಲೆ ಸಂಗ್ರಹವಾಗಿರುವ ಟನ್ ಗಟ್ಟಲೆ ಮದ್ಯದ ಅಂಗಡಿಯ ಪ್ಲಾಸ್ಟಿಕ್ ತ್ಯಾಜ್ಯವನ್ನು ತೆರವುಗೊಳಿಸಿ ರೈತರು ಮತ್ತು ಮೂಕ ಪ್ರಾಣಿಗಳ ಜೀವನವನ್ನು ರಕ್ಷಿಸಬೇಕಿದೆ.

ಈ ತ್ಯಾಜ್ಯದ ರಾಶಿಯಲ್ಲಿ ಆಹಾರ ಅರಸಿ ಬರುವ ಹಸು, ಕರುಗಳು, ಮೇಕೆಗಳು ಅದನ್ನು ತಿನ್ನುವುದರಿಂದ ಅವುಗಳ ಜೀವಕ್ಕೆ ಸಂಚಕಾರ ಎದುರಾಗಿದೆ. ದುಗ್ಗಹಳ್ಳಿ ಗ್ರಾಪಂ ಪಿಡಿಒ ಮತ್ತು ಅಧಿಕಾರಿಗಳು, ಕಬಿನಿ ನಾಲೆ  ವ್ಯಾಪ್ತಿಯ ಅಧಿಕಾರಿಗಳು ಇತ್ತ ಗಮನಹರಿಸಿ ತ್ಯಾಜ್ಯ ಬಿಸಾಡುವವರ ಮದ್ಯದ ಅಂಗಡಿಯವರ ವಿರುದ್ಧ ಕ್ರಮ ಕೈಗೊಳ್ಳಬೇಕು.
– ಬಸವರಾಜು, ಪಿಎಸಿಸಿಎಸ್‌ ಬ್ಯಾಂಕ್‌ ಮಾಜಿ ಅಧ್ಯಕ್ಷರು.

andolanait

Recent Posts

ಪಾಕಿಸ್ತಾನ ಮಧ್ಯಸ್ಥಿಕೆಯಲ್ಲಿ ಕದನ ವಿರಾಮ ಮಾತುಕತೆ: ಇರಾನಿನ ಕೆಲ ಬೇಡಿಕೆಗಳಿಗೆ ಅಮೇರಿಕಾ ತಾತ್ವಿಕ ಒಪ್ಪಿಗೆ

ಇಸ್ಲಾಮಾಬಾದ್:‌ ಪಶ್ಚಿಮ ಏಷ್ಯಾ ಯುದ್ಧವನ್ನು ಕೊನೆಗೊಳಿಸಲು ಇಸ್ಲಾಮಾಬಾದ್‌ನಲ್ಲಿ ಅಮೇರಿಕಾ-ಇರಾನ್‌ ನಡುವೆ ಕದನ ವಿರಾಮ ಮಾತುಕತೆ ನಡೆದಿದೆ. ಸಂಸದೀಯ ಸ್ಪೀಕರ್‌ ಮೊಹಮ್ಮದ್‌…

7 hours ago

ಬೆಂಗಳೂರಿನಲ್ಲಿ ದಾಖಲೆ ಪ್ರಮಾಣದ ಉಷ್ಣಾಂಶ: ಜನತೆಗೆ ಆರೋಗ್ಯ ಇಲಾಖೆ ಸೂಚನೆ

ಬೆಂಗಳೂರು: ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಬಿಸಿಲಿನ ತಾಪಮಾನ ಏರಿಕೆಯಾಗುತ್ತಿದ್ದು, ಭಾರತೀಯ ಹವಾಮಾನ ಇಲಾಖೆ ಹೀಟ್‌ ವೇವ್‌ ಎಚ್ಚರಿಕೆ…

10 hours ago

ಆರು ಹಸುಗಳ ಸಜೀವ ದಹನ ಪ್ರಕರಣ: ಆರೋಪಿ ಬಂಧನ

ಬೆಂಗಳೂರು: ಇಲ್ಲಿನ ಡಿ.ಜೆ.ಹಳ್ಳಿ ಬಳಿಯ ಶಾಂಪುರ ರಸ್ತೆಯಲ್ಲಿ ಕಿಡಿಗೇಡಿಯೊಬ್ಬ ಬೆಂಕಿ ಹಚ್ಚಿ ಆರು ಹಸುಗಳನ್ನು ಸಜೀವ ದಹನ ಮಾಡಿದ್ದ ಪ್ರಕರಣಕ್ಕೆ…

10 hours ago

ಅಮರನಾಥ ಯಾತ್ರೆಗೆ ಏಪ್ರಿಲ್.15ರಿಂದ ನೋಂದಣಿ‌

ನವದೆಹಲಿ: ಇದೇ ಏಪ್ರಿಲ್.‌15ರಿಂದ ಈ ವರ್ಷದ ಅಮರನಾಥ ಯಾತ್ರೆಗೆ ಮುಂಗಡ ನೋಂದಣಿ ಆರಂಭವಾಗಲಿದೆ. ಭಾರತದಾದ್ಯಂತ ಒಂದೇ ಸಮಯಕ್ಕೆ ಬುಕಿಂಗ್ ಪ್ರಾರಂಭವಾಗಲಿದ್ದು,…

10 hours ago

ಕಾಫಿ ತೋಟದಲ್ಲಿ ನವಜಾತ ಹೆಣ್ಣು ಶಿಶು ಪತ್ತೆ

ಕೊಡಗು: ಕಾಫಿ ತೋಟದಲ್ಲಿ ನವಜಾತ ಹೆಣ್ಣು ಶಿಶು ಪತ್ತೆಯಾಗಿರುವ ಘಟನೆ ಕೊಡಗು ಜಿಲ್ಲೆ ವಿರಾಜಪೇಟೆ ತಾಲ್ಲೂಕಿನ ಬೇತ್ರಿ ಗ್ರಾಮದಲ್ಲಿ ನಡೆದಿದೆ.…

10 hours ago

ಪ್ರಧಾನಿ ಮೋದಿ-ರಾಹುಲ್ ಗಾಂಧಿ ಮಾತುಕತೆ: ವಿಡಿಯೋ ವೈರಲ್

ನವದೆಹಲಿ: ಸಂಸತ್ತಿನ ಆವರಣದಲ್ಲಿ ಕಾರಿನಿಂದ ಇಳಿದು ಬಂದ ಪ್ರಧಾನಿ ನರೇಂದ್ರ ಮೋದಿ ಅವರು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್‌ಗಾಂಧಿ…

10 hours ago