ಜಿಲ್ಲೆಗಳು

ನಾಗರಹೊಳೆ, ಬಂಡೀಪುರದಲ್ಲಿ ಡಬಲ್‌ ಧಮಾಕಾ…!

ಕಬಿನಿ ಹಿನ್ನೀರಿನಲ್ಲಿ 4 ಮರಿಗಳ ಜತೆ ಹುಲಿ ದರ್ಶನ, ಬಂಡೀಪುರಕ್ಕೆ ಮತ್ತೆ ಬಂದಿದ್ದಾಳೆ ಸುಂದರಿ…

ಮೈಸೂರು: ಬಂಡೀಪುರ ಮತ್ತು ನಾಗರಹೊಳೆಯ ವನ್ಯಪ್ರೇಮಿಗಳಿಗೆ ಈಗ ಖುಷಿಯೋ ಖುಷಿ. ಕಾರಣವಿಷ್ಟೆ. ಅಪರೂಪಕ್ಕೆ ಕಾಣ ಸಿಗುವ ಹುಲಿಗಳು ಈಗ ಮರಿಗಳ ಜತೆ ದರ್ಶನ ನೀಡುತ್ತಿವೆ. ಬಂಡೀಪುರ ಬಿಟ್ಟು ಮಧುಮಲೈ ಅರಣ್ಯಕ್ಕೆ ಹೋಗಿದ್ದ ಸುಂದರಿ 18 ತಿಂಗಳ ಬಳಿಕ ಮರಿಯ ಜತೆ ಮರಳಿ ಬಂದಿದ್ದಾಳೆ. ಇತ್ತ ನಾಗರಹೊಳೆಯ ಅಂತರ ಸಂತೆ ವಲಯದಲ್ಲಿ ಎರಡು ಹುಲಿಗಳು ನಾಲ್ಕು-, ನಾಲ್ಕು ಮರಿಗಳೊಂದಿಗೆ ಕಾಣಿಸಿಕೊಳ್ಳುತ್ತಿವೆ. ತಾಯಿ ಮತ್ತು ಮರಿಗಳ ಜತೆ ಎರಡು ಗಂಡು ಹುಲಿಗಳೂ ಸೇರಿಕೊಂಡಿವೆ. ಸಫಾರಿ ಪ್ರಿಯರು ಅತ್ಯಪರೂಪದ ಈ ಗ್ರೂಪ್‌ ಫೋಟೊಗಳನ್ನು ಕ್ಲಿಕ್ಕಿಸಿ ಖುಷಿಪಡುತ್ತಿದ್ದಾರೆ.

ಎಚ್.‌ ಡಿ. ಕೋಟೆ ತಾಲ್ಲೂಕಿನ ಕಬಿನಿ ಹಿನ್ನೀರಿನ ಬಳಿ ಡಿಸೆಂಬರ್‌ 10ರ ಬೆಳಿಗ್ಗೆ ವನ್ಯಜೀವಿ ಸಫಾರಿಯಲ್ಲಿ ತಾಯಿ ಹುಲಿ ಮತ್ತು ನಾಲ್ಕು ಮರಿಗಳ ದರ್ಶನವಾಗಿದೆ. ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ವ್ಯಾಪ್ತಿಯಲ್ಲಿ ಎರಡು ಹೆಣ್ಣು ಹುಲಿಗಳು ತಲಾ ನಾಲ್ಕು ಮರಿಗಳಿಗೆ ಜನ್ಮ ನೀಡಿರುವುದು ಇದೇ ಪ್ರಥಮ ಬಾರಿ ಎಂದು ಅಂತರಸಂತೆ ವನ್ಯಜೀವಿ ವಲಯ ಅರಣ್ಯ ಅಧಿಕಾರಿ ಎಸ್.ಎಸ್. ಸಿದ್ದರಾಜು ಸಂತಸ ಹಂಚಿಕೊಂಡಿದ್ದಾರೆ.


ಎಚ್.‌ಡಿ.ಕೋಟೆಯ ತಾರಕ ಹಿನ್ನೀರು ವ್ಯಾಪ್ತಿಯಲ್ಲಿ ರಸೂಲ್ ಲೈನ್ ಫೀಮೇಲ್ ಹೆಸರಿನಿಂದ ಗುರುತಿಸಿಕೊಂಡಿರುವ ಹೆಣ್ಣು ಹುಲಿಯು 11 ತಿಂಗಳ ಹಿಂದೆ ನಾಲ್ಕು ಮರಿಗಳಿಗೆ ಜನ್ಮ ನೀಡಿತ್ತು. ಈ ಹೆಣ್ಣು ಹುಲಿಗೆ ಸೀಳುತುಟಿ ಎಂಬ ಗಂಡುಹುಲಿ ಜೋಡಿಯಾಗಿದೆ. ಕಳೆದ ಅಕ್ಟೋಬರ್ 12ರಂದು ಕಬಿನಿ ಹಿನ್ನೀರಿನ ವ್ಯಾಪ್ತಿಯಲ್ಲಿ ಈ ಹೆಣ್ಣು ಹುಲಿಯು ತನ್ನ ನಾಲ್ಕು ಮರಿಗಳೊಂದಿಗೆ ವನ್ಯಪ್ರಿಯರಿಗೆ ದರ್ಶನ ನೀಡಿತ್ತು.

ಅಂತರ ಸಂತೆಯ ಕಬಿನಿ ಹಿನ್ನೀರು ಪ್ರದೇಶದ ವನ್ಯಪ್ರಿಯರು ಬ್ಯಾಕ್ ವಾಟರ್ ಫೀಮೇಲ್ ಎಂದು ಕರೆಯುತ್ತಿರುವ ಹೆಣ್ಣು ಹುಲಿಯು ಆರು ತಿಂಗಳ ಹಿಂದೆ ನಾಲ್ಕು ಮರಿಗಳಿಗೆ ಜನ್ಮ ನೀಡಿದೆ. ಈ ಹೆಣ್ಣು ಹುಲಿಗೆ ಈಗ ಟೈಗರ್ ಟ್ಯಾಂಕ್ ಗಂಡುಹುಲಿ ಜೋಡಿಯಾಗಿದೆ. ಈ ಹುಲಿಯೂ ಇತ್ತೀಚೆಗೆ ತನ್ನ ನಾಲ್ಕು ಮರಿಗಳೊಂದಿಗೆ ಕಾಣಿಸಿಕೊಂಡಿದೆ.

ಇನ್ನು ಬಂಡೀಪುರದ ರಾಯಭಾರಿ ಎಂದು ಕರೆಸಿಕೊಳ್ಳುತ್ತಿದ್ದ ” ಪ್ರಿನ್ಸ್‌ʼ ಹುಲಿಯ ಮರಣದ ಬಳಿಕ ಹುಲಿ ದರ್ಶನ ವಿರಳವಾಗಿತ್ತು. ಈ ಕೊರತೆಯನ್ನು ನೀಗಿಸಿದ್ದು ಸುಂದರಿ. ಎರಡು ಹುಲಿ ಮರಿಗಳಿಗೆ ಜನ್ಮ ನೀಡಿದ್ದ ಸುಂದರಿ ಸುಮಾರು ಎರಡು ವರ್ಷಗಳ ಕಾಲ ಆಗಾಗ ಸಫಾರಿ ಹಾದಿಯಲ್ಲಿ ದರ್ಶನ ಕೊಡುತ್ತಿದ್ದಳು. ಇದ್ದಕ್ಕಿದ್ದಂತೆ ಅದೇನಾಯಿತೋ ಗೊತ್ತಿಲ್ಲ. ಸುಂದರಿ ತನ್ನ ಮರಿಗಳನ್ನು ತೊರೆದು ಮಧುಮಲೈ ಅರಣ್ಯಕ್ಕೆ ವಾಸ್ತವ್ಯ ಬದಲಿಸಿದ್ದಳು. ಈ ಮಧ್ಯೆ ಕೆಕ್ಕನಹಳ್ಳಿ ಸಮೀಪ ಮಾಯಾರ್ ರಾಣಿ ಎಂಬ ಹುಲಿ ಆಗಾಗ ಕಾಣಿಸಿಕೊಳ್ಳುತ್ತಿದ್ದಳು. ಇತ್ತೀಚೆಗೆ ಆಕೆ ಕಾಣಿಸುತ್ತಿಲ್ಲ.

ಈ ಮಧ್ಯೆ 18 ತಿಂಗಳ ಬಳಿಕ ಸುಂದರಿ ತನ್ನ ಮರಿ ಜತೆ ಬಂಡೀಪುರಕ್ಕೆ ಮರಳಿದ್ದಾಳೆ. ಮೊನ್ನೆ ತನ್ನ ಕಂದನಿಗೆ ರಸ್ತೆ ದಾಟುವ ಬಗೆಯನ್ನು ಹೇಳಿಕೊಡುತ್ತಿದ್ದ ಸುಂದರಿ ಸಫಾರಿಗೆ ಹೊರಟವರ ಕ್ಯಾಮೆರಾದಲ್ಲಿ ಸೆರೆಯಾಗಿದ್ದಾಳೆ. ಅವಳದು ಈಗಲೂ ಅದೇ ನಿರ್ಭೀತ, ಸ್ವಚ್ಛಂದ ನೋಟ. ಆರೇಳು ತಿಂಗಳು ಪ್ರಾಯದ ಮರಿ ಜತೆ ಸುಂದರಿ ವಾಕ್‌ ಮಾಡುತ್ತಿದ್ದರೆ ಬಂಡೀಪುರದ ಸೌಂದರ್ಯ ಇಮ್ಮಡಿಸಿದಂತೆ ಕಾಣುತ್ತಿದೆ. ಒಟ್ಟಾರೆಯಾಗಿ ನಾಗರಹೊಳೆ ಮತ್ತು ಬಂಡೀಪುರಕ್ಕೆ ಸಫಾರಿಗೆ ಬಂದರೆ, ನಿಮ್ಮ ಅದೃಷ್ಟ ಚೆನ್ನಾಗಿದ್ದರೆ ಡಬಲ್‌ ಧಮಾಕಾ ಗ್ಯಾರಂಟಿ..

andolanait

Recent Posts

ಓದುಗರ ಪತ್ರ: ದಸರಾ ಚಿತ್ರೋತ್ಸವ ಮುಂದುವರಿಯಲಿ

ಮೈಸೂರು ದಸರಾ ನಮ್ಮ ನಾಡಿನ ಹೆಮ್ಮೆ. ಈ ನಾಡಹಬ್ಬದಲ್ಲಿ ದಸರಾ ಚಿತ್ರೋತ್ಸವವನ್ನು ರದ್ದುಪಡಿಸಿರುವ ನಿರ್ಧಾರ ಖಂಡನೀಯ. ಈ ನಿರ್ಧಾರವನ್ನು ಮರುಪರಿಶೀಲಿಸಿ…

3 hours ago

ಓದುಗರ ಪತ್ರ: ಫಿಲಂ ಸಿಟಿ ಯೋಜನೆ ಆದಷ್ಟು ಬೇಗ ಕಾರ್ಯರೂಪಕ್ಕೆ ಬರಲಿ

ಮೈಸೂರು ಜಿಲ್ಲೆಯ ಇಮ್ಮಾವು ಬಳಿ ಅಂತರಾಷ್ಟ್ರೀಯ ದರ್ಜೆಯ ಫಿಲಂ ಸಿಟಿ ನಿರ್ಮಿಸುವ ಬಗ್ಗೆ ಮೈಸೂರು ಜಿ ಉಸ್ತುವಾರಿ ಸಚಿವರಾದ ಯತೀಂದ್ರ…

3 hours ago

ಓದುಗರ ಪತ್ರ: ಕಾವೇರಿ:ಆದೇಶ ನಿಷ್ಪಕ್ಷಪಾತವಾಗಿರಲಿ

ಸಿಡಬ್ಲ್ಯುಆರ್‌ಸಿ ಆದೇಶದಂತೆ ಪ್ರತಿದಿನ ೬,೦೦೦ ಕ್ಯೂಸೆಕ್ಸ್‌ನಂತೆ ೧೫ ದಿನಗಳ ಕಾಲ ಕರ್ನಾಟಕ ತಮಿಳುನಾಡಿಗೆ ಕಾವೇರಿ ನದಿ ನೀರು ಹರಿಸಬೇಕಾಗುತ್ತದೆ. ಜಲಾಶಯದಲ್ಲಿ…

3 hours ago

ಮಲ್ಟಿಪ್ಲೆಕ್ಸ್: ಪ್ರಾದೇಶಿಕ ಭಾಷಾ ಚಿತ್ರಗಳಿಗೆ ಮಾರಕ ಹಂಚಿಕಾ ಸೂತ್ರ

ಬಾ.ನಾ.ಸುಬ್ರಹ್ಮಣ್ಯ ಅವರ ವಾರದ ಅಂಕಣ  ಅದೇಕೋ ಏನೋ ಕರ್ನಾಟಕಕ್ಕೂ ಇಲ್ಲಿರುವ ಮಲ್ಟಿಪ್ಲೆಕ್‌ಳಿಗೂ ಆಗಿ ಬರುತ್ತಿಲ್ಲ ಎನಿಸುತ್ತದೆ. ಅದು ಚಿತ್ರೋದ್ಯಮಕ್ಕೆ ಮಾತ್ರವಲ್ಲ,…

3 hours ago

ಕಸ್ತೂರಿ ರಂಗನ್ ವರದಿ ವಿರೋಧಿಸಿ ಇಂದು ಪ್ರತಿಭಟನೆ

ಲಕ್ಷ್ಮೀಕಾಂತ್ ಕೊಮಾರಪ್ಪ ಸುದರ್ಶನ ಸರ್ಕಲ್‌ನಿಂದ ಗಾಂಧಿ ಮೈದಾನದವರೆಗೆ ಪ್ರತಿಭಟನಾ ಮೆರವಣಿಗೆ  ಸೋಮವಾರಪೇಟೆ: ಮಲೆನಾಡ ಭಾಗದ ರೈತರ ಬದುಕಿನ ಮೇಲೆ ತೂಗುಗತ್ತಿಯಂತೆ ಪರಿಣಮಿಸಿರುವ…

3 hours ago

ಚಾ.ನಗರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ ಜೆ.ಯೋಗೇಶ್ ನೇಮಕ

ರಾಜೇಶ್ ಬೆಂಡರವಾಡಿ ಪ್ರಥಮ ಬಾರಿಗೆ ಇತರೆ ಹಿಂದುಳಿದ ವರ್ಗಕ್ಕೆ ಒಲಿದ ಡಿಸಿಸಿ ಅಧ್ಯಕ್ಷ ಸ್ಥಾನ  ಚಾಮರಾಜನಗರ: ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ…

4 hours ago