ಜಿಲ್ಲೆಗಳು

ಮೈಸೂರು ಜೆಎಸ್‌ಎಸ್‌ ಆಸ್ಪತ್ರೆ : ಪ್ರಸವಾನಂತರ ರಕ್ತಸ್ರಾವ ಕುರಿತು ಕಾರ್ಯಾಗಾರ

ಮೈಸೂರು : ನಗರದ ಜೆಎಸ್‌ ಎಸ್‌ ಆಸ್ಪತ್ರೆಯಲ್ಲಿ ಪ್ರಸೂತಿ ಮತಯ್ತು ಸ್ತ್ರೀ ರೋಗ ವಿಭಾಗದೆ ವತಿಯಿಂದ ಪ್ರಸವಾನಂತರದ ರಕ್ತಸ್ರಾವ ( NDVH+PPH)  ಎಂಬ ವಿಷಯದ ಕುರಿತು ಕಾರ್ಯಾಗಾರವನ್ನು ನಡೆಸಲಾಗಿತು.

ಕಾರ್ಯಾಗಾರದ ಉದ್ಘಾಟನೆ

ಆಸ್ಪತ್ರೆಯ ರಾಜೇಂದ್ರ ಶತಮಾನೋತ್ಸವ ಸಭಾಂಗಣದಲ್ಲಿ ಪ್ರಸೂತಿ ಮತ್ತು ಸ್ತ್ರೀ ರೋಗ ವಿಭಾಗ ಹಾಗೂ ಮೈಸೂರು ಮತ್ತು ಸ್ರ್ತೀ  ರೋಗ ಸಮಾಜದ ಸಹಯೋಗದೊಂದಿಗೆ ಪ್ರಸವಾನಂತರದ ರಕ್ತಸ್ರಾವ ( NDVH+PPH)  ಎಂಬ ವಿಷಯದ ಕುರಿತು ಕಾರ್ಯಾಗಾರವನ್ನು ಆಯೋಜನೆ ಮಾಡಲಾಗಿದ್ದು, ಈ ಕಾರ್ಯಕ್ರಮದಲ್ಲಿ ಹೆರಿಗೆಯ ನಂತರ ಗರ್ಭಿಣಿಯರ ಜೀವಕ್ಕೆ ಅಪಾಯಕಾರಿಯಾಗುವ ಅಂಶಗಳು ಮತ್ತು ತೊಂದರೆಗಳು ಹಾಗೂ ಪ್ರಸವಾನಂತರದ ರಕ್ತಸ್ರಾವವನ್ನು ನಿರ್ವಹಿಸುವ ತಂತ್ರಗಳನ್ನು ಸುಧಾರಿಸುವ ಕುರಿತು ತರಬೇತಿಯನ್ನು  ನೀಡಲಾಯಿತು.

ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ಡಾ. ಆಶಿಶ್‌ಕುಬ್ಡೆ, ಪ್ರಖ್ಯಾತ ಸ್ತ್ರೀ ರೋಗ  ತಜ್ಞರು ಹಾಗೂ ಲ್ಯಾಪ್ರೋಸ್ಕೋಪಿಕ್‌ / ಮಲ್ಟೀ ಸರ್ಜನ್‌ ಪೆಲ್ಟಿಕ್‌ ಸರ್ಜನ್‌, ಸೆವೆನ್‌ ಸ್ಟಾರ್‌ ಆಸ್ಪತ್ರೆ, ನಾಗ್ಪುರ ಮತ್ತು ಡಾ.ವೀರೇಂದ್ರಕುಮಾರ್‌, ಘಟಕದ ಮುಖ್ಯಸ್ಥರು ಸೇರಿದಂತೆ ಡಾ.ಜಯಪ್ರಕಾಶ್‌ ಪಾಟೀಲ್‌, ಲ್ಯಾಪ್ರೋಸ್ಕೋಪಿಕ್‌ ಮತ್ತು ಪೆಲ್ಟಿಕ್‌ ಸರ್ಜನ್‌, ಬೆಟ್ಟದೂರು ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ, ರಾಯಚೂರು ಇವರುಗಳು ಕಾರ್ಯಾಗಾರದಲ್ಲಿ ವಿವಿಧ ಅಂಶಗಳ ಕುರಿತು ಕಾರ್ಯಾಗಾರದಲ್ಲಿ ನೆರೆದಿದ್ದವರಿಗೆ  ತರಬೇತಿ ನೀಡಿದರು.

ಕಾರ್ಯಾಗಾರದ ಮುಖ್ಯ ಅತಿಥಿಗಳಾಗಿ ವೈದ್ಯಕೀಯ ಅಧೀಕ್ಷಕರಾದ ಡಾ.ಸಿ.ಪಿ. ಮಧು, ವಿಶೇಷ ಆಹ್ವಾನಿತರಾಗಿ ಜೆಎಸ್‌ಎಸ್‌ ಮೆಡಿಕಲ್‌ ಕಾಲೇಜಿನ ಉಪ ಪ್ರಾಂಶುಪಾಲರಾದ  ಡಾ. ಸುಮಾ, ಉಪನಿರ್ದೇಶಕರಾದ ಮಂಜುನಾಥ್‌ ಇನ್ನಿತರರು ಉಪಸ್ಥಿತರಿದ್ದರು. 

ಕಾರ್ಯಾಗಾರಕ್ಕೆ ಮೈಸೂರು, ಮಂಡ್ಯ, ಮಡಿಕೇರಿ, ಕೊಳ್ಳೆಗಾಲ ಸೇರಿದಂತೆ ಆದಿಚುಂಚನಗಿರಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಿಂದ ಸ್ತ್ರೀರೋಗ ತಜ್ಞರನ್ನು ಒಳಗೊಂಡ ಸುಮಾರು 125 ನೋಂದಾಯಿತ ಪ್ರತಿನಿಧಿಗಳು ಭಾಗವಹಿಸಿದ್ದರು.

andolanait

Recent Posts

ಶಿವಾನಂದಪುರಿ ಶ್ರೀಗಳಿಗೆ ಕನಕ ಭವನ ನಿರ್ವಹಣೆ ಹೊಣೆ

ಮಂಜು ಕೋಟೆ ಕುರುಬ ಸಮಾಜದ ಎರಡು ಬಣಗಳ ನಡುವೆ ಉಂಟಾಗಿದ್ದ ಗೊಂದಲ; ಸಿಎಂ ಸಿದ್ದರಾಮಯ್ಯ ಸೂಚನೆಯಂತೆ ಕ್ರಮ ಎಚ್.ಡಿ.ಕೋಟೆ: ಮುಖ್ಯಮಂತ್ರಿ…

2 hours ago

ರಿಂಗ್ ರಸ್ತೆಯಲ್ಲಿ ಸಿಗ್ನಲ್ ಲೈಟ್‌ಗಳ ಅಳವಡಿಕೆ

೩೫ ಕಡೆಗಳಲ್ಲಿ ಹೈಬ್ರಿಡ್ ಸಿಗ್ನಲ್ ಲೈಟ್; ವಾಹನ ಸಂಚಾರ ದಟ್ಟಣೆ ನಿಯಂತ್ರಿಸಲು ಪೊಲೀಸ್ ಇಲಾಖೆ ಕ್ರಮ ಮೈಸೂರು: ಭವಿಷ್ಯದಲ್ಲಿ ರಿಂಗ್…

2 hours ago

ಹುಲಿ ಸೆರೆಗೆ ಬಂತು ಥರ್ಮಲ್ ಡ್ರೋನ್‌

ಕಾಡಂಚಿನ ವ್ಯಾಘ್ರ ಸೆರೆಗೆ ಹಗಲು-ರಾತ್ರಿ ಕಾರ್ಯಾಚರಣೆ ಚಿರತೆ ಸೆರೆಗೆ ತಂತ್ರಜ್ಞಾನ ಬಳಕೆ ಮಾಡಿದ್ದ ಅರಣ್ಯ ಇಲಾS ಮೈಸೂರು: ಕಳೆದ ಎರಡು…

2 hours ago

ಕೃಷಿ ಮೇಳಕ್ಕೆ 10 ಲಕ್ಷ ಜನ ಭೇಟಿ

ಹೇಮಂತ್‌ಕುಮಾರ್ ದಾಖಲೆ ಸೃಷ್ಟಿ ; ಹಲವು ಅಚ್ಚರಿಗಳ ತಾಣವಾದ ಮೂರು ದಿನಗಳ ಮೇಳ  ಮಂಡ್ಯ: ಮೂರು ದಿನಗಳ ಕಾಲ ವಿ.ಸಿ.ಫಾರಂನಲ್ಲಿ…

3 hours ago

ಸೆಲ್ಫಿ ವಿಡಿಯೋ ಮಾಡಿ ಆಟೋ ಚಾಲಕ ಆತ್ಮಹತ್ಯೆಗೆ ಯತ್ನ

ನಂಜನಗೂಡು: 5 ಸಾವಿರ ರೂ ಸಾಲ ಪಾವತಿಗಾಗಿ ಮಾನಸಿಕವಾಗಿ ಕಿರುಕುಳ ನೀಡಿದ ವ್ಯಕ್ತಿ ಮನೆ ಮುಂದೆ ಸೆಲ್ಫಿ ವಿಡಿಯೋ ಮಾಡಿ…

12 hours ago