ನಗರದಲ್ಲಿ ಸಂಸಾರ ಸಮೇತ ಬಿಡಾರ ಹೂಡಿರುವ ವಲಸೆ ವ್ಯಾಪಾರಿಗಳು
-ಆಕಾಶ್ ಆರ್.ಎಸ್
ಮೈಸೂರು: ಕೊರೊನಾ ಕಾರಣದಿಂದ ಎರಡು ವರ್ಷದಿಂದ ಅದ್ಧೂರಿ ದಸರಾ ಆಚರಣೆ ಇಲ್ಲದೇ ವ್ಯಾಪಾರ, ವ್ಯವಹಾರ ಮಂಗಾಗಿತ್ತು. ಅದರಲ್ಲಿಯೂ ಬೀದಿ ಬದಿಗಳಲ್ಲಿ ವ್ಯಾಪಾರ ಮಾಡುವ ವಲಸೆ ವ್ಯಾಪಾರಿಗಳ ಮುಖದಲ್ಲಿ ನಿರಾಸೆ ತುಂಬಿತ್ತು. ಆದರೆ ಈ ಬಾರಿಯ ಅದ್ಧೂರಿ ದಸರಾ ಇವರ ಬಾಳಲ್ಲಿ ಬೆಳಕು ಚೆಲ್ಲಿದೆ.
ದಸರಾ ಉತ್ಸವದ ಹಿನ್ನೆಲೆಯಲ್ಲಿ ಇಡೀ ನಗರವೇ ಮಧುವಣಗಿತ್ತಿಯಂತೆ ಸಿಂಗಾರಗೊಂಡಿದೆ. ಎಲ್ಲಿ ನೋಡಿದರೂ ದೀಪಾಲಂಕಾರ, ಜನಜಂಗುಳಿ, ಪ್ರವಾಸಿಗರಲ್ಲಿ ಹರ್ಷೋದ್ಗಾರ ಮನೆ ಮಾಡಿದೆ. ವಿಭೃಂಜಣೆಯಿಂದ ನಡೆಯುತ್ತಿರುವ ಉತ್ಸವದಲ್ಲಿ ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಗಳು, ವೇದಿಕೆ ಕಾರ್ಯಕ್ರಮಗಳೂ ಸಾಗುತ್ತಿವೆ. ಇದನ್ನು ಕಣ್ತುಂಬಿಕೊಳ್ಳಲು ಜನ ಸಾಗರವೇ ಸೇರುತ್ತಿದೆ. ಈ ವೇಳೆಯಲ್ಲಿ ರಸ್ತೆ ಬದಿ ವ್ಯಾಪಾರಿಗಳು, ಸಣ್ಣ ವ್ಯಾಪಾರಿಗಳು ಹಾಗೂ ವಲಸೆ ವ್ಯಾಪಾರಿಗಳು ಒಂದಷ್ಟು ಕಾಸು ಸಂಪಾದನೆ ಮಾಡಲು ಸಹಾಯವಾಗುತ್ತಿದೆ.
ನಗರದ ಹಾರ್ಡಿಂಗ್ ಸರ್ಕಲ್, ಅರಮನೆಯ ಕೋಟೆ ಆಂಜನೇಯ ದೇವಸ್ಥಾನದ ಮುಂಭಾಗ, ದೇವರಾಜ ಅರಸು ರಸ್ತೆ, ಚಿಕ್ಕ ಗಡಿಯಾರ ಸರ್ಕಲ್, ಗನ್ ಹೌಸ್ ಸರ್ಕಲ್, ಸಿಟಿ ಬಸ್ ನಿಲ್ದಾಣ, ಅಗ್ರಹಾರ, ಸಯ್ಯಾಜಿರಾವ್ ರಸ್ತೆ, ದೊಡ್ಡ ಕೆರೆ ಮೈದಾನ ಸೇರಿ ಎಲ್ಲ ಕಡೆಗಳಲ್ಲಿಯೂ ಪಳಪಳ ಮಿನುಗುವ ಬಲೂನ್‌ಗಳು, ಪ್ಲಾಸ್ಟಿಕ್ ಬೊಂಬೆಗಳು, ಪ್ರಾಣಿಗಳ ಮುಖವಾಡ, ಬಣ್ಣ ಬಣ್ಣ ಆಟಿಕೆಗಳು, ಪೀಪಿಗಳು ಸದ್ದು ಮಾಡುತ್ತಿವೆ.
ದಸರಾ ಕೇವಲ ಸಂಭ್ರಮದ ಗೂಡಾಗದೆ ಉತ್ತರ ಪ್ರದೇಶ, ಮಧ್ಯಪ್ರದೇಶ, ಅಸ್ಸಾಂ, ಬಿಹಾರ, ತಮಿಳುನಾಡು ಸೇರಿ ವಿವಿಧ ರಾಜ್ಯಗಳಿಂದ ಆಗಮಿಸಿರುವ ವಲಸೆ ವ್ಯಾಪಾರಿಗಳಿಗೆ ಆಸರೆಯ ಆಚರಣೆಯಾಗಿದೆ. ವಲಸೆಗಾರರು ಸ್ವತಃ ಸ್ವಂತ ಊರಿನ ಜಾತ್ರೆಗೆ ಬರುವಂತೆ ಇಡೀ ಸಂಸಾರದ ಸಮೇತವಾಗಿ ಮೈಸೂರಿಗೆ ಬಂದು ಬಿಡಾರ ಹೂಡಿದ್ದಾರೆ. ರಸ್ತೆ ಬದಿಯಲ್ಲೆ ಹಾಸಿಗೆ ಹಾಕಿಕೊಂಡು ಮಕ್ಕಳನ್ನು ಪಾಲನೆ ಪೋಷಣೆ ಮಾಡುತ್ತಾ, ಅಲ್ಲೇ ಊಟೋಪಚಾರವನ್ನೂ ನಡೆಸುತ್ತಿದ್ದಾರೆ. ಇವರಲ್ಲಿ ಮಹಿಳಾ ವ್ಯಾಪಾರಿಗಳೇ ಹೆಚ್ಚಾಗಿದ್ದು, ಪ್ರವಾಸಿಗರ ಮನವೊಲಿಸಿ ವ್ಯಾಪಾರ ಮಾಡುತ್ತಿರುವ ದೃಶ್ಯ ನಗರದ ಹೃದಯ ಭಾಗದಲ್ಲಿ ಸಾಮಾನ್ಯವಾಗಿದೆ.
ಮೈಸೂರು: ಮಾಗಿ ಉತ್ಸವದ ಅಂಗವಾಗಿ ಜಗತ್ಪ್ರಸಿದ್ಧ ಮೈಸೂರು ಅರಮನೆ ಆವರಣದಲ್ಲಿ ಇಂದು ಸಂಜೆ ಖ್ಯಾತ ಗಾಯಕ ವಿಜಯ್ ಪ್ರಕಾಶ್ ಅವರು…
ಚಾಮರಾಜನಗರ: ಬಿಆರ್‌ಟಿ ಹುಲಿ ಸಂರಕ್ಷಿತಾರಣ್ಯದಲ್ಲಿ ಪಶು ವೈದ್ಯರ ಕೊರತೆ ಎದ್ದು ಕಾಣುತ್ತಿದ್ದು, ಹೊರಗುತ್ತಿಗೆ ಆಧಾರದಲ್ಲಿ ವೈದ್ಯರ ಹುದ್ದೆಯ ನೇಮಕಾತಿಗೂ ಜಾಹೀರಾತು…
ಬೆಂಗಳೂರು: ರಾಜ್ಯದಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಿಂದ ಹಣ್ಣುಗಳ ರಾಣಿ ಎಂದು ಕರೆಯಿಸಿಕೊಳ್ಳುವ ಮಾವಿಗೆ ಅನೇಕ ರೋಗಗಳು ಕಾಣಿಸಿಕೊಂಡಿದ್ದು, ರೈತರಿಗೆ ಇಳುವರಿ…
ಗುಂಡ್ಲುಪೇಟೆ: ಗಡಿ ಜಿಲ್ಲೆ ಚಾಮರಾಜನಗರದ ಗುಂಡ್ಲುಪೇಟೆ ತಾಲ್ಲೂಕಿನಲ್ಲಿರುವ ರಾಷ್ಟ್ರೀಯ ಉದ್ಯಾನವನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕುಂದಕೆರೆ ವಲಯದ ಚಿಕ್ಕ…
ಲಕ್ನೋ: ಆಕರ್ಷಣೀಯ ಪ್ರವಾಸಿತಾಣಗಳ ಪಟ್ಟಿಯಲ್ಲಿ ಅಯೋಧ್ಯೆ ರಾಮಮಂದಿರವು ತಾಜ್‌ಮಹಲನ್ನು ಹಿಂದಿಕ್ಕಿ ನಂಬರ್ ಒನ್ ಪಟ್ಟ ಪಡೆದಿದೆ. ಈ ಮೂಲಕ ಈಗ…
ಚಿಕ್ಕಬಳ್ಳಾಪುರ: ನಂದಿಗಿರಿಧಾಮದಲ್ಲಿ ಹೊ ವರ್ಷಾಚರಣೆಗೆ ಬ್ರೇಕ್ ನೀಡಲಾಗಿದ್ದು, ಪ್ರವಾಸಿಗರಿಗೆ ಬಿಗ್ ಶಾಕ್ ಎದುರಾಗಿದೆ. ಪ್ರಕೃತಿ ಮಡಿಲಿನಲ್ಲಿ ಕುಣಿಸು ಕುಪ್ಪಳಿಸಿ ಹೊಸ…