ಹುಣಸೂರು ತಾಲೂಕಿನ ರತ್ನಪುರಿ ಎಂಬ ಗ್ರಾಮದಲ್ಲಿ ನೆಲೆಸಿದ್ದ ಸಂತ್ರಸ್ಥೆ ಯುವತಿಯನ್ನು ಮದುವೆಯಾಗುವುದಾಗಿ ನಂಬಿಸಿ ಮೋಸ ಮಾಡಿದ್ದ ಸಲ್ಮಾನ್ ಖಾನ್ ಎಂಬ ಅತ್ಯಾಚಾರ ಆರೋಪಿಗೆ ಮೈಸೂರು ಕೋರ್ಟ್ 10 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿದೆ.
ಈತ ಅದೇ ಗ್ರಾಮದ ಯುವತಿಯೋರ್ವಳನ್ನು ಮದುವೆಯಾಗುವುದಾಗಿ ನಂಬಿಸಿ ಆಕೆಯ ಇಷ್ಟಕ್ಕೆ ವಿರುದ್ಧವಾಗಿ ಅತ್ಯಾಚಾರ ನಡೆಸಿದ್ದ ಎಂಬ ಆರೋಪದಡಿಯಲ್ಲಿ ಯುವತಿ ದೂರನ್ನು ನೀಡಿದ್ದಳು. ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅಲ್ಲಿನ ತನಿಖಾಧಿಕಾರಿ ಕೆ.ಸಿ ಪೂವಯ್ಯ ಈ ಪ್ರಕರಣದ ತನಿಖೆಯನ್ನು ಪೂರೈಸಿ ದೋಷಾರೋಪ ಪಟ್ಟಿಯನ್ನು ಸಲ್ಲಿಸಿದ್ದರು.
ಈ ಪ್ರಕರಣದ ವಿಚಾರಣೆಯನ್ನು ನಡೆಸಿದ ಮೈಸೂರಿನ 7ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆರೋಪಿಯ ವಿರುದ್ಧ ಸಾಕ್ಷಾಧಾರಗಳು ಹೊಂದಾಣಿಕೆಯಾದ ಕಾರಣ ಆತನಿಗೆ ಐಪಿಸಿ ಸೆಕ್ಷನ್ 376/2 ಅಡಿಯಲ್ಲಿ 10 ವರ್ಷಗಳ ಸೆರೆವಾಸ ಹಾಗೂ 30 ಸಾವಿರ ರೂಪಾಯಿ ದಂಡ ಹಾಗೂ ಐಪಿಸಿ ಸೆಕ್ಷನ್ 417 ಪ್ರಕಾರ 1 ವರ್ಷ ಸೆರೆವಾಸ ಹಾಗೂ 5000 ದಂಡವನ್ನು ವಿಧಿಸಿದೆ. ಆರೋಪಿ 30000 ರೂಪಾಯಿಗಳನ್ನು ಸಂತ್ರಸ್ಥೆಗೆ ಪರಿಹಾರ ಧನವಾಗಿ ನೀಡಬೇಕು, ಉಳಿದ 5000 ರೂಪಾಯಿಗಳನ್ನು ದಂಡವಾಗಿ ಸರ್ಕಾರಕ್ಕೆ ಪಾವತಿ ಮಾಡಬೇಕು ಎಂದು ನ್ಯಾಯಾಲಯ ತೀರ್ಪು ನೀಡಿದೆ.
ಮಹಾದೇಶ್ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ಚಾಮರಾಜನಗರ ಜಿಲ್ಲೆ ಹನೂರು ತಾಲ್ಲೂಕಿನ ಹನೂರು-ಪಾಲಾರ್ (ಎಲ್ಲೇಮಾಳ-ಕೌದಳ್ಳಿ) ಜಿಲ್ಲಾ ಮುಖ್ಯ…
ಮೈಸೂರು: ಗಣೇಶ ಹಬ್ಬಕ್ಕೆ ಹಾಸನದಿಂದ ಮೈಸೂರಿಗೆ ಬಂದಿದ್ದ ಯುವಕನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನಡೆದಿದೆ. 20 ವರ್ಷದ ಗೌರವ್…
ಮೈಸೂರು ವಿಶ್ವವಿದ್ಯಾನಿಲಯಕ್ಕೆ ರಾಷ್ಟ್ರಕವಿ ಕುವೆಂಪು ಅವರು ನೀಡಿರುವ ಅಪಾರ ಕೊಡುಗೆಯ ಸ್ಮರಣಾರ್ಥ ಹಾಗೂ ಅವರ ಪರಿಕಲ್ಪನೆಯ ಮಾನಸಗಂಗೋತ್ರಿಯಲ್ಲಿ ಇರುವ ಬಯಲು…
ಕಾವೇರಿ ನದಿ ನೀರಿನ ಹಂಚಿಕೆಯ ವಿಷಯದಲ್ಲಿ ತಮಿಳುನಾಡು ಸರ್ಕಾರವು ಪದೇ ಪದೇ ಕರ್ನಾಟಕದ ಮೇಲೆ ಒತ್ತಡ ಹೇರುವುದು ಹಾಗೂ ಇದರಿಂದಾಗಿ…
ರಾಜ್ಯದ ಪ್ರಮುಖ ಬಸ್ ನಿಲ್ದಾಣಗಳಲ್ಲಿ ಅತ್ಯಾಧುನಿಕ ಡಿಜಿಟಲ್ ಲಗೇಜ್ ಲಾಕರ್ ವ್ಯವಸ್ಥೆ ಆರಂಭಿಸಿರುವುದು ಶ್ಲಾಘನೀಯ ಹೆಜ್ಜೆಯಾಗಿದೆ. ಪ್ರತಿದಿನ ರಾಜದಾದ್ಯಂತ ಹೆಚ್ಚಿನ…
ಪ್ರೊ. ಬಿ. ಜಯಪ್ರಕಾಶಗೌಡ, ಅಧ್ಯಕ್ಷರು, ಕರ್ನಾಟಕ ಸಂಘ, ಮಂಡ್ಯ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನಗದು ಪಶಸ್ತಿ ಪ್ರೋತ್ಸಾಹ ಮಂಡ್ಯದ ಕರ್ನಾಟಕ…