ಮೈಸೂರು

ಮಹಿಷಾ ಯಾವಾಗ ದಲಿತನಾದ? : ಪ್ರತಾಪ್ ಸಿಂಹ ಪ್ರಶ್ನೆ

ಮೈಸೂರು : ಮಹಿಷಾ ದಸರಾ ಹೆಸರಿನಲ್ಲಿ ತಾಯಿ ಚಾಮುಂಡೇಶ್ವರಿಗೆ ಅವಾಚ್ಯ ಶಬ್ದಗಳಿಂದ ಅಪಮಾನ ಮಾಡುತ್ತಾರೆ. ಈ ಕಾರಣಕ್ಕೆ ನಾನು ಮಹಿಷಾ ದಸರಾ ವಿರೋಧ ಮಾಡುತ್ತೇನೆ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.

ಫೇಸ್ ಬುಕ್ ಲೈವ್‌ನಲ್ಲಿ ಮಹಿಷಾ ದಸರಾ ಆಚರಣೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಸಂಸದ ಪ್ರತಾಪ್ ಸಿಂಹ, ಬೆಟ್ಟಕ್ಕೆ ಬಂದು ಮಹಿಷಾ ಒಳ್ಳೆಯವನು ಅಂದಷ್ಟೇ ಹೇಳಿ ಹೋಗುವುದಿಲ್ಲ. ಚಾಮುಂಡಿಗೆ ರವಿಕೆ ಹಾಕೋನು ಗಂಡಸು, ಸೀರೆ ಉಡಿಸೋನು ಗಂಡಸು ಅಂತ ಕೆಟ್ಟದಾಗಿ ಮಾತನಾಡುತ್ತಾರೆ. ನಿಮ್ಮ ತಾಯಿ ಬಗ್ಗೆ ಕೆಟ್ಟದಾಗಿ ಮಾತನಾಡಿದರೆ ಯಾರಾದರೂ ಒಪ್ಪಿಕೊಳ್ಳುತ್ತೀರಾ? ಮಹಿಷಾನನ್ನು ಒಳ್ಳೆಯವನನ್ನಾಗಿ ಮಾಡಲು ಚಾಮುಂಡೇಶ್ವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾರೆ. ಇಂತಹವರನ್ನು ತಡೆಯಲು ನಾನು ವಿರೋಧ ಮಾಡುತ್ತಿದ್ದೇನೆ ಎಂದರು.

ಚಾಮುಂಡೇಶ್ವರಿಗೆ ಹೋಗಿ ಬೇಡಿಕೊಳ್ಳುವ ಪ್ರತಿಯೊಬ್ಬರು ಮಹಿಷಾ ದಸರಾಕ್ಕೆ ವಿರೋಧ ಮಾಡಬೇಕು. ಇಲ್ಲದಿದ್ದರೆ ತಾಯಿ ಚಾಮುಂಡಿ ಮುಂದೆ ಬೇಡಿಕೊಳ್ಳಲು ನಿಮಗೆ ಯಾವ ನೈತಿಕ ಹಕ್ಕು ಇರುವುದಿಲ್ಲ. ನನ್ನ ದಲಿತ ವಿರೋಧಿ ಅಂತ ಹೇಳುತ್ತಾರೆ. ವಿಚಾರ ಇಲ್ಲದಾಗ ಈ ರೀತಿ ಉಗುಳುತ್ತಾರೆ. ಮಹಿಷಾನ ಬಗ್ಗೆ ಯಾವುದೇ ದಾಖಲೆ ಇಲ್ಲ. ಈಗ ದಲಿತ ಅಂತ ಬೋರ್ಡ್ ಹಾಕಿಕೊಂಡು ಓಡಾಡುತ್ತಿರೋರು ಯಾರು ಅಂತಾನು ಮೈಸೂರಿಗರಿಗೆ ಗೊತ್ತು ಎಂದು ಗುಡುಗಿದರು.

ಅಶೋಕ್ ಪುರಂನ ಪ್ರತಿಯೊಬ್ಬರ ಮನೆಯಲ್ಲಿರೋದು ಚಾಮುಂಡೇಶ್ವರಿ ಪೋಟೋ. ಮಹಿಷಾನ ಪೋಟೋ ಅಲ್ಲ. ದಲಿತರೆ ಚಾಮುಂಡಿ ಹಬ್ಬವನ್ನು ಜಾಸ್ತಿ ಮಾಡೋದು. ಈಗ ರಾಜಕೀಯಕ್ಕೆ ದಲಿತ ವಿರೋಧಿ ಅನ್ನುತ್ತಾರೆ. ಮಹಿಷಾ ಯಾವಾಗ ದಲಿತನಾದ? ಮಹಿಷಾ ಬೌದ್ಧ ಬಿಕ್ಕು ಆಗಿದ್ದ ಅಂತ ಹೇಳುತ್ತಾರೆ. ತಾಯಿ ಚಾಮುಂಡಿ ಉಲ್ಲೇಖ ಬರೋದು ಕೃತ ಯುಗದಲ್ಲಿ. ಬುದ್ಧ ಬಂದಿದ್ದು ಕಲಿಯುಗದಲ್ಲಿ. ಅಶೋಕ ಇದ್ದಿದ್ದು ಕ್ರಿ.ಪೂ. 3 ನೇ ಶತಮಾನದಲ್ಲಿ. ಇವರು ಹೇಳುವ ವಿಚಾರ ಸಮಯಕ್ಕೆ ತಾಳ ಮೇಳ ಇಲ್ಲ. ಇದೆಲ್ಲ ಕಪೋಲ ಕಲ್ಪಿತ ವಿಚಾರಗಳು ಎಂದರು.

ಹಿಂದೂ ಧರ್ಮ ಒಡೆಯುವ ಪ್ರಯತ್ನಕ್ಕೆ ಇದೆಲ್ಲ ಮಾಡುತ್ತಿದ್ದಾರೆ. ಕೆಲವರು ನನ್ನ ಬಗ್ಗೆ ವಿರೋಧ ಮಾಡುತ್ತಿದ್ದಾರೆ. ಇದೆಲ್ಲ ವೈಯಕ್ತಿಕ ಲಾಭ ನಷ್ಟದಿಂದ ಆಗಿರೋದು. ನಿಜವಾದ ದಲಿತ ವಿರೋಧಿಗಳು ನೀವುಗಳು. ಲಲಿತ ನಾಯಕರಿಂದ ಉದ್ಘಾಟನೆ ಮಾಡಿಸಲು ಮುಂದಾದ್ರಿ. ಆಕೆಯ ಪುತ್ರ ಅಂಬೇಡ್ಕರ್ ಪುತ್ಥಳಿಗೆ ಮದ್ಯ ಕುಡಿಸಿದ್ದ. ನೀವು ಅಂಬೇಡ್ಕರ್ ವಾದಿಗಳು ಅಂತೀರಾ. ಆದರೆ ಅಂಬೇಡ್ಕರ್ ಪುತ್ಥಳಿಗೆ ಹೆಂಡ ಕುಡಿಸಿದ ತಾಯಿಯಿಂದ ಉದ್ಘಾಟನೆ ಮಾಡಿಸುತ್ತಿದ್ದೀರಿ ಎಂದು ಕಿಡಿಕಾರಿದರು.

ಸುಮ್ಮನೆ ನನ್ನ ದಲಿತ ವಿರೋಧಿ ಅಂತ ಹೇಳೋದು ಬೇಡ. ಮೈಸೂರಿಗರ ಬಳಿ ಹೋರಾಟದ ಗುಣ ಇಲ್ಲ ಅಂತ ಅಂದುಕೊಳ್ಳಬೇಡಿ. ನಿಮ್ಮ ಮನೆಯಲ್ಲಿ ನಿಮ್ಮ ಹೆಂಡತಿ ಮಹಿಷಾ ಪೋಟೋ ಇಟ್ಟುಕೊಳ್ಳೊಕೆ ಬಿಡ್ತಾರ? ನಿಮ್ಮ ಮನೆಯಲ್ಲೇ ಬೇಕಾದರೆ ಮಹಿಷಾ ದಸರಾ ಮಾಡಿಕೊಳ್ಳಿ. ಬೆಟ್ಟಕ್ಕೆ ಹೋಗಿ ಚಾಮುಂಡಿಗೆ ಅಪಮಾನ ಮಾಡಬೇಕು ಅಂತ ನೀವು ಅಲ್ಲಿ ಹೋಗೋದು. ಕೆಲವರಿಗೆ ಅರ್ಥವಾಗಬೇಕು ಅಂತ ನಿಮ್ಮ ಭಾಷೆಯಲ್ಲಿ ಹೇಳಿರೋದು. ಇಂತಹವರನ್ನು ವಿರೋಧಿಸದಿದ್ದರೆ ಮುಂದೆ ಇಸ್ರೇಲ್ ಪರಿಸ್ಥಿತಿ ನಿರ್ಮಾಣ ವಾಗುತ್ತೆ ಎಂದು ಹೇಳಿದರು.

lokesh

Recent Posts

ತಿ.‌ ನರಸೀಪುರ: ಬೈಕ್ ಡಿಕ್ಕಿ ಚಿರತೆ ಸಾವು

ತಿ. ನರಸೀಪುರ: ತಾಲೂಕಿನ ಬನ್ನೂರು ಹೋಬಳಿಯ ಬಸವನಹಳ್ಳಿ ಗ್ರಾಮದ ಸಮೀಪದ ಮುಖ್ಯರಸ್ತೆಯಲ್ಲಿ ದ್ವಿಚಕ್ರ ವಾಹನ ಚಿರತೆಗೆ ಡಿಕ್ಕಿ ಹೊಡೆದ ಪರಿಣಾಮ…

7 hours ago

ತಿರುಪತಿ ಲಡ್ಡು: ತುಪ್ಪದಲ್ಲಿ ಪ್ರಾಣಿ ಕೊಬ್ಬು ಬಳಕೆ

ಅಮರಾವತಿ: ಜಗತ್‌ ಪ್ರಸಿದ್ಧ ತಿರುಪತಿ ಲಡ್ಡು ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬು ಹಾಗೂ ಕಳಪೆ ಗುಣಮಟ್ಟದ ಪದಾರ್ಥಗಳು ಪತ್ತೆಯಾಗಿದೆ ಎಂದು ತೆಲುಗು…

9 hours ago

ಬುರ್ಖಾಧಾರಿ ಮಹಿಳೆಯಿಂದ ಸಲ್ಮಾನ್‌ ಖಾನ್‌ ತಂದೆಗೆ ಜೀವ ಬೆದರಿಕೆ: ಮಹಿಳೆ ಸೇರಿ ಇಬ್ಬರ ಬಂಧನ

ಮುಂಬೈ:‌ ಬಾಲಿವುಡ್‌ನ ಭಾಯಿಜಾನ್ ಸಲ್ಮಾನ್‌ ಖಾನ್‌ ಅವರ ತಂದೆಗೆ ಬುರ್ಖಾ ಧರಿಸಿದ್ದ ಮಹಿಳೆ ಹಾಗೂ ಇನ್ನೊರ್ವ ವ್ಯಕ್ತಿ ಜೀವ ಬೆದರಿಕೆ…

9 hours ago

ಶಾಸಕ ಮುನಿರತ್ನಗೆ ಜಾಮೀನು: ಅತ್ಯಾಚಾರ ಪ್ರಕರಣದಲ್ಲಿ ಮತ್ತೆ ಬಂಧನ ಸಾಧ್ಯತೆ

ಬೆಂಗಳೂರು: ಗುತ್ತಿಗೆದಾರರೊಬ್ಬರಿಗೆ ಜಾತಿನಿಂದನೆ ಹಾಗೂ ಪ್ರಾಣ ಬೆದರಿಕೆ ಹಾಕಿದ ಪ್ರಕರಣದಲ್ಲಿ ಬೆಂಗಳೂರಿನ ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನಗೆ…

10 hours ago

ನುಡಿ ಹಬ್ಬಕ್ಕೆ ಆಹ್ವಾನಿಸಲು ಸಿದ್ಧವಾಗಿದೆ ಕನ್ನಡ ರಥ

ಮಂಡ್ಯ: ಜಿಲ್ಲೆಯಲ್ಲಿ ಡಿಸೆಂಬರ್ 20, 21, 22 ರಂದು ನಡೆಯಲಿರುವ 87 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ…

10 hours ago

ಬಸ್‌ನಲ್ಲಿ ಪ್ರಯಾಣ: ಮಹಿಳೆಯರಿಂದ ಶಕ್ತಿಯೋಜನೆಯ ಅಭಿಪ್ರಾಯ ಪಡೆದ ಪುಷ್ಪ ಅಮರನಾಥ್‌

ಮೈಸೂರು: ರಾಜ್ಯ ಸರ್ಕಾರದ ಮಹತ್ವಕಾಂಕ್ಷೆ ಯೋಜನೆಗಳಲ್ಲಿ ಒಂದಾದ ಶಕ್ತಿಯೋಜನೆ ಫಲಾನುಭವಿಗಳ ಅಭಿಪ್ರಾಯ ಸಂಗ್ರಹಿಸಲು ಗ್ಯಾರಂಟಿ ಅನುಷ್ಠಾನ ಸಮಿತಿ ಉಪಾಧ್ಯಕ್ಷೆಯಾದ ಡಾ…

11 hours ago