ಚಿತ್ರ ಮಂಜರಿ

ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟ ಒಳ್ಳೆ ಪ್ರಥಮ್

ದೊಡ್ಮನೆಗೆ ಮತ್ತೊಂದು ಸಲ ಒಳ್ಳೆ ಹುಡುಗ ಪ್ರಥಮ್ ಎಂಟ್ರಿ ಕೊಟ್ಟಿದ್ದಾರೆ. ಬಿಗ್ ಬಾಸ್ ಸೀಸನ್ 4ರಲ್ಲಿ ಕಂಟೆಸ್ಟೆಂಟ್ ಆಗಿ ಹೋದವರು, ಟ್ರೋಫಿ ಗೆದ್ದುಕೊಂಡು ಹೊರ ಬಂದರು. ಇದೀಗ ಪ್ರಥಮ್ ಟಾಸ್ಕ್ ಆಡಿಸುವುದಕ್ಕಾಗಿ ಮನೆ ಒಳಗೆ ಎಂಟ್ರಿ ಕೊಟ್ಟಿದ್ದಾರೆ. ಲಾರ್ಡ್ ಪ್ರಥಮ್ ಹೆಸರಿನಲ್ಲಿ ಬಿಗ್ ಬಾಸ್ ಮನೆ ಪ್ರವೇಶ ಮಾಡಿದ್ದಾರೆ. ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡುತ್ತಲೇ ಗತ್ತಿನ ಮಾತುಗಳಿಂದ ಒಂದು ರೀತಿಯಲ್ಲಿ ಕುತೂಹಲ ಮೂಡಿಸಿದ್ದಾರೆ.

ದೊಡ್ಮನೆಯ ಆಟ ಜೋರಾಗಿದೆ. ದಿನದಿಂದ ದಿನಕ್ಕೆ ಮನೆಯ ರಂಗು ಬದಲಾಗುತ್ತಿದೆ. ಈಗ ಮನೆಯ ಅಸಲಿ ಆಟ ಶುರುವಾಗಿದೆ. ಬಿಗ್ ಮನೆಗೆ ಗನ್‌ಮ್ಯಾನ್‌ಗಳು ದಿಢೀರ್ ಎಂದು ಎಂಟ್ರಿ ಕೊಟ್ಟಿದ್ದಾರೆ. ಗನ್ ಮ್ಯಾನ್‌ಗಳ ಎಂಟ್ರಿ ನೋಡಿ ಮನೆಮಂದಿ ಶಾಕ್ ಆಗಿದ್ದಾರೆ.

ಬಿಗ್ ಬಾಸ್ ಮನೆಗೆ 8 ಜನ ಗನ್ ಮ್ಯಾನ್‌ಗಳ ಆಗಮನವಾಗಿದೆ. ಸಡನ್ ಆಗಿ ಗನ್ ಮ್ಯಾನ್‌ಗಳು ಎಂಟ್ರಿ ಕೊಟ್ಟಿರೋದು ನೋಡಿ ಮನೆ ಮಂದಿ ಒಮ್ಮೆ ಸೈಲೆಂಟ್ ಆಗಿದ್ದಾರೆ. ಬಳಿಕ ಚಪ್ಪಾಳೆ ಹೊಡೆದು ಸ್ಪರ್ಧಿಗಳು ಸ್ವಾಗತ ಕೋರಿದ್ದಾರೆ. ಅವರ ಮುಖದಲ್ಲಿರೋ ಮಂದಹಾಸ ನೋಡಿ ಮನೆಗೆ ಹೊಸ ಸೆಲೆಬ್ರಿಟಿ ಎಂಟ್ರಿ ಕೊಡ್ತಿದ್ದಾರಾ ಎಂಬ ಅನುಮಾನ ಮೂಡಿದೆ.

ಅಕ್ಟೋಬರ್ 9ರ ಎಪಿಸೋಡ್‌ನಲ್ಲಿ ಶಾಸಕ ಪ್ರದೀಪ್ ಈಶ್ವರ್ ಅವರು ಆಗಮಿಸುವ ಮೂಲಕ ಅಚ್ಚರಿ ಮೂಡಿಸಿದ್ದರು. ಬಿಗ್ ಮನೆಯಲ್ಲಿ 3 ಗಂಟೆಗಳ ಕಾಲ ಕಳೆಯುವ ಮೂಲಕ ಸ್ಪರ್ಧಿಗಳಿಗೆ ಸ್ಪೂರ್ತಿ ತುಂಬಿದ್ದರು. ಪ್ರದೀಪ್ ಈಶ್ವರ್ ಅವರ ಎಂಟ್ರಿಗೆ ರಾಜಕೀಯ ರಂಗದಲ್ಲಿ ಕೋಲಾಹಲ ಎಬ್ಬಿಸಿದ್ದರೂ ಕೂಡ ಪ್ರೇಕ್ಷಕರಿಗೆ ಮನರಂಜನೆ ನೀಡಿತ್ತು.

lokesh

Recent Posts

ಓದುಗರ ಪತ್ರ: ಪೌರಕಾರ್ಮಿಕರಿಗೆ ಉಚಿತ ಆರೋಗ್ಯ ತಪಾಸಣೆ ಸ್ವಾಗತಾರ್ಹ

ಮೈಸೂರು ನಗರದಲ್ಲಿ ಸ್ವಚ್ಛತಾ ಕಾರ್ಯ ನಿರ್ವಹಿಸುತ್ತಿರುವ ಸ್ವಚ್ಛತೆಯ ಜೀವನಾಡಿಗಳಾಗಿರುವ ಪೌರಕಾರ್ಮಿಕರಿಗೆ, ಮೈಸೂರು ಮಹಾನಗರ ಪಾಲಿಕೆ ವತಿಯಿಂದ ಮಣಿಪಾಲ್ ಆಸ್ಪತ್ರೆಯಲ್ಲಿ ಆಯೋಜಿಸಿದ್ದ…

4 hours ago

ಓದುಗರ ಪತ್ರ: ನಿಜವಾದ ಭಾವೈಕ್ಯತೆಯ ಸಂಗಮ

ಮಂಡ್ಯ ಜಿಯ ಮದ್ದೂರಿನಲ್ಲಿ ಭಾನುವಾರ ಗಣೇಶೋತ್ಸವ ಕಾರ್ಯಕ್ರಮದಲ್ಲಿ ಮುಸ್ಲಿಮರೇ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು, ಗೌರಿ -ಗಣೇಶ ಮೂರ್ತಿಗಳನ್ನು ಹೊತ್ತ ಟ್ರ್ಯಾಕ್ಟರ್…

4 hours ago

ಓದುಗರ ಪತ್ರ: ನಾಡಿಗೆ ಮಾದರಿ!

ನಾಡಿಗೆ ಮಾದರಿ! ವಿವಿಧ ಧರ್ಮ ಸಮುದಾಯಗಳ ಮನಸುಗಳ ಅಕ್ಕರೆಯಲಿ ಬೆಸೆವ ಸ್ನೇಹ ಸೌಹಾರ್ದ ಸಾಮರಸ್ಯದ ಪ್ರತೀಕ, ಹಬ್ಬ ಉತ್ಸವಗಳು! ನಾಡಿಗೆ…

4 hours ago

ಓದುಗರ ಪತ್ರ: ಪ್ರೀತಿಯ ಅಣ್ಣ ಪ್ರತಾಪ್ ಸಿಂಹ…

ನಾವಿಬ್ಬರು ಪ್ರೊ. ಬಿ. ಪಿ. ಮಹೇಶ್ ಚಂದ್ರ ಗುರುಗಳ ಶಿಷ್ಯರು. ನಮ್ಮಿಬ್ಬರಿಗೂ ಪ್ರೊ. ಗುರು ಇಷ್ಟ. ನೀನು ಮಂಗಳೂರು ವಿವಿ,…

4 hours ago

ದಸರಾ ಬರುತ್ತಿದೆ, ಮೈಸೂರು ಸಿದ್ಧವಾಗುತ್ತಿದೆಯೇ?

ಶ್ರೇಯಸ್ ದೇವನೂರು ಅಭಿವೃದ್ಧಿಯ ಹೆಸರಿನಲ್ಲಿ ಅರ್ಧ ಕಾಮಗಾರಿ, ಸಂಚಾರದ ಹೆಸರಿನಲ್ಲಿ ಹೆಚ್ಚುತ್ತಿರುವ ಸಂಕಷ್ಟ  ಮೈಸೂರು ದಸರಾ ಎಂದರೆ ಕೇವಲ ಹತ್ತು…

4 hours ago

ಫಾಲ್ಕೆ ಪ್ರಶಸ್ತಿ ಕಲಾಸೇವೆಗೆ ಸಂದ ಗೌರವ: ಅನಂತ್ ನಾಗ್‌

ಸಂದರ್ಶನ: ಬಾನಾಸು  ಇಂದು ಗುಜರಾತಿನ ಕೆವಾಡಿಯಾದಲ್ಲಿ ೭೨ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ನಡೆಯಲಿದೆ. ಚಿತ್ರರಂಗಕ್ಕೆ ಸಲ್ಲಿಸಿದ ಅಮೋಘ ಸೇವೆಗಾಗಿ…

5 hours ago