BREAKING NEWS

ಭಾರತದ ಮೇಲೆ ಹಮಾಸ್‌ ಮಾದರಿ ದಾಳಿ ಬೆದರಿಕೆ

ನವದೆಹಲಿ : ಪಂಜಾಬ್‌ ಮೇಲೆ ಭಾರತೀಯ ಸರಕಾರ ತನ್ನ ಅಧಿಪತ್ಯ ಮುಂದುವರಿಸಿದರೆ ಇಸ್ರೇಲ್‌ ಮೇಲೆ ನಡೆದ ಹಮಾಸ್‌ ಉಗ್ರರ ದಾಳಿ ಮಾದರಿಯಲ್ಲೇ ಭಾರತದ ಮೇಲೂ ದಾಳಿ ಮಾಡಲಾಗುವುದು, ಎಂದು ಖಲಿಸ್ತಾನಿ ಬೆಂಬಲಿತ ನಿಷೇಧಿತ ಉಗ್ರಗಾಮಿ ಸಂಘಟನೆ ಸಿಖ್‌ ಫಾರ್‌ ಜಸ್ಟೀಸ್‌ (ಎಸ್‌ಎಫ್‌ಜೆ) ಸಂಘಟನೆ ಬೆದರಿಕೆ ಹಾಕಿದೆ.

ಸಾಮಾಜಿಕ ಜಾಲ ತಾಣದಲ್ಲಿ ಬೆದರಿಕೆ ಹಾಕಿರುವ ವಿಡಿಯೋ ಹಂಚಿಕೊಂಡಿರುವ ಎಸ್‌ಎಫ್‌ಜೆ ಮುಖ್ಯಸ್ಥ ಗುರುಪತ್ವಂತ್ ಸಿಂಗ್‌ ಪನ್ನು, ಇಸ್ರೇಲ್‌-ಪ್ಯಾಲೆಸ್ತೀನ್‌ ಯುದ್ಧದಿಂದ ಪ್ರಧಾನಿ ಮೋದಿ ಪಾಠ ಕಲಿಯಲಿ. ಪಂಜಾಬ್‌ ಮೇಲೆ ದೌರ್ಜನ್ಯ ಮುಂದುವರಿಸಿದರೆ ಮುಂದೊಂದು ದಿನ ಇದೇ ಸನ್ನಿವೇಶ ಭಾರತದಲ್ಲೂ ಘಟಿಸಲಿದೆ, ಎಂದು ಎಚ್ಚರಿಕೆ ನೀಡಿದ್ದಾನೆ.

ಪಂಜಾಬ್‌ನಿಂದ ಪ್ಯಾಲೆಸ್ತೀನ್‌ವರೆಗೆ ಅಕ್ರಮ ಅತಿಕ್ರಮಣದ ಅಡಿಯಲ್ಲಿರುವ ಜನರು ಪ್ರತಿಕ್ರಿಯೆ ನೀಡುತ್ತಾರೆ. ಹಿಂಸಾಚಾರವು ಹಿಂಸೆಯನ್ನೇ ಪಡೆದುಕೊಳ್ಳುತ್ತದೆ. ನಮ್ಮ ಮಾತೃಭೂಮಿ ಪಂಜಾಬ್‌ ಮೇಲಿನ ಅತಿಕ್ರಮಣ ಮಾಡುವ ಪ್ರವೃತ್ತಿಯನ್ನು ಭಾರತ ಮುಂದುವರಿಸಿದರೆ ಹಮಾಸ್‌ ದಾಳಿಯ ರೀತಿಯಲ್ಲೇ ತಕ್ಕ ಶಾಸ್ತಿ ಮಾಡಲಾಗುತ್ತದೆ. ಇದಕ್ಕೆ ಪ್ರಧಾನಿ ಮೋದಿಯೇ ಹೊಣೆ ಹೊರಬೇಕಾಗುತ್ತದೆ, ಎಂದು ವಿಡಿಯೋದಲ್ಲಿ ಉಗ್ರ ಗುರು ಪತ್ವಂತ್ ಸಿಂಗ್‌ ಪನ್ನು ಬೆದರಿಸಿದ್ದಾನೆ.

ಸಿಖ್‌ ಫಾರ್‌ ಜಸ್ಟೀಸ್‌ ಸಂಘಟನೆ ಲಿಬರೇಷನ್‌ ಆಫ್‌ ಪಂಜಾಬ್‌ ಸ್ಥಾಪನೆಗೆ ಹೋರಾಟ ಮಾಡುತ್ತಿದೆ. ಇದಕ್ಕಾಗಿ ಜನಮತಗಣನೆ ನಡೆಸುವಂತೆ ಬಹುಕಾಲದಿಂದ ಆಗ್ರಹಿಸುತ್ತಿದೆ. ಮತದಾನ ಬೇಕೋ ಅಥವ ಬುಲೆಟ್‌ ಬೇಕೋ ಎಂಬುದನ್ನು ಭಾರತ ಸರಕಾರ ಆಯ್ಕೆ ಮಾಡಿಕೊಳ್ಳಲಿ, ಎಂದು ವಿಡಿಯೋದಲ್ಲಿ ಪನ್ನು ಎಚ್ಚರಿಕೆ ಸಂದೇಶ ನೀಡಿದ್ದಾನೆ.

lokesh

Recent Posts

ಓದುಗರ ಪತ್ರ: ಪೌರಕಾರ್ಮಿಕರಿಗೆ ಉಚಿತ ಆರೋಗ್ಯ ತಪಾಸಣೆ ಸ್ವಾಗತಾರ್ಹ

ಮೈಸೂರು ನಗರದಲ್ಲಿ ಸ್ವಚ್ಛತಾ ಕಾರ್ಯ ನಿರ್ವಹಿಸುತ್ತಿರುವ ಸ್ವಚ್ಛತೆಯ ಜೀವನಾಡಿಗಳಾಗಿರುವ ಪೌರಕಾರ್ಮಿಕರಿಗೆ, ಮೈಸೂರು ಮಹಾನಗರ ಪಾಲಿಕೆ ವತಿಯಿಂದ ಮಣಿಪಾಲ್ ಆಸ್ಪತ್ರೆಯಲ್ಲಿ ಆಯೋಜಿಸಿದ್ದ…

3 hours ago

ಓದುಗರ ಪತ್ರ: ನಿಜವಾದ ಭಾವೈಕ್ಯತೆಯ ಸಂಗಮ

ಮಂಡ್ಯ ಜಿಯ ಮದ್ದೂರಿನಲ್ಲಿ ಭಾನುವಾರ ಗಣೇಶೋತ್ಸವ ಕಾರ್ಯಕ್ರಮದಲ್ಲಿ ಮುಸ್ಲಿಮರೇ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು, ಗೌರಿ -ಗಣೇಶ ಮೂರ್ತಿಗಳನ್ನು ಹೊತ್ತ ಟ್ರ್ಯಾಕ್ಟರ್…

3 hours ago

ಓದುಗರ ಪತ್ರ: ನಾಡಿಗೆ ಮಾದರಿ!

ನಾಡಿಗೆ ಮಾದರಿ! ವಿವಿಧ ಧರ್ಮ ಸಮುದಾಯಗಳ ಮನಸುಗಳ ಅಕ್ಕರೆಯಲಿ ಬೆಸೆವ ಸ್ನೇಹ ಸೌಹಾರ್ದ ಸಾಮರಸ್ಯದ ಪ್ರತೀಕ, ಹಬ್ಬ ಉತ್ಸವಗಳು! ನಾಡಿಗೆ…

3 hours ago

ಓದುಗರ ಪತ್ರ: ಪ್ರೀತಿಯ ಅಣ್ಣ ಪ್ರತಾಪ್ ಸಿಂಹ…

ನಾವಿಬ್ಬರು ಪ್ರೊ. ಬಿ. ಪಿ. ಮಹೇಶ್ ಚಂದ್ರ ಗುರುಗಳ ಶಿಷ್ಯರು. ನಮ್ಮಿಬ್ಬರಿಗೂ ಪ್ರೊ. ಗುರು ಇಷ್ಟ. ನೀನು ಮಂಗಳೂರು ವಿವಿ,…

3 hours ago

ದಸರಾ ಬರುತ್ತಿದೆ, ಮೈಸೂರು ಸಿದ್ಧವಾಗುತ್ತಿದೆಯೇ?

ಶ್ರೇಯಸ್ ದೇವನೂರು ಅಭಿವೃದ್ಧಿಯ ಹೆಸರಿನಲ್ಲಿ ಅರ್ಧ ಕಾಮಗಾರಿ, ಸಂಚಾರದ ಹೆಸರಿನಲ್ಲಿ ಹೆಚ್ಚುತ್ತಿರುವ ಸಂಕಷ್ಟ  ಮೈಸೂರು ದಸರಾ ಎಂದರೆ ಕೇವಲ ಹತ್ತು…

3 hours ago

ಫಾಲ್ಕೆ ಪ್ರಶಸ್ತಿ ಕಲಾಸೇವೆಗೆ ಸಂದ ಗೌರವ: ಅನಂತ್ ನಾಗ್‌

ಸಂದರ್ಶನ: ಬಾನಾಸು  ಇಂದು ಗುಜರಾತಿನ ಕೆವಾಡಿಯಾದಲ್ಲಿ ೭೨ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ನಡೆಯಲಿದೆ. ಚಿತ್ರರಂಗಕ್ಕೆ ಸಲ್ಲಿಸಿದ ಅಮೋಘ ಸೇವೆಗಾಗಿ…

3 hours ago