Andolana originals

ಓದುಗರ ಪತ್ರ: ಪ್ರೀತಿಯ ಅಣ್ಣ ಪ್ರತಾಪ್ ಸಿಂಹ…

ನಾವಿಬ್ಬರು ಪ್ರೊ. ಬಿ. ಪಿ. ಮಹೇಶ್ ಚಂದ್ರ ಗುರುಗಳ ಶಿಷ್ಯರು. ನಮ್ಮಿಬ್ಬರಿಗೂ ಪ್ರೊ. ಗುರು ಇಷ್ಟ. ನೀನು ಮಂಗಳೂರು ವಿವಿ, ನಾನು ಮೈಸೂರು ವಿವಿ. ನೀನು ಕೇಸರಿ ಶಾಲು, ನಾನು ನೀಲಿ ಶಾಲು. ನೀನು ಆರ್‌ಎಸ್‌ಎಸ್ ಪರಿಪಾಲಕನ ಮಗ, ನಾನು ಕಾರ್ಮಿಕನ ಮಗ. ನೀನು ಪತ್ರಿಕೋದ್ಯಮದಲ್ಲಿ ಮಾಸ್ಟರ‍್ಸ್, ನಾನು ಪಿಎಚ್.ಡಿ. ನೀನು ರಾಜ್ಯ ಪತ್ರಿಕೆ, ನಾನು ನ್ಯಾಷನಲ್ ಮತ್ತು ಪ್ರಾದೇಶಿಕ ಪತ್ರಿಕೆ. ನೀನು ಮೈಸೂರನ್ನು ಪ್ಯಾರೀಸ್ ಮಾಡುತ್ತೀನಿ ಅಂದೆ, ನಾನು ‘ಆಂದೋಲನ’ ಪತ್ರಿಕೆಯಲ್ಲಿ ಅದು ಅಸಾಧ್ಯ ಎಂದೆ….

ನೀನು ರಾಜಕೀಯ ನಿರುದ್ಯೋಗಿ, ನಾನು ಆರ್ಥಿಕ ನಿರುದ್ಯೋಗಿ. ನೀನು ರಾಮನ ಮಡಿಲಲ್ಲಿ, ನಾನು ಬುದ್ಧನ ನೆರಳಲ್ಲಿ… ಗಣೇಶ ಚತುರ್ಥಿಯ ವಿಚಾರವಾಗಿ ನೀನು ನೀಲಿ ಶಾಲು ಹೊದಿಕೆ ಮಾಡುವವರನ್ನು ಅವಮಾನಿಸಿದ್ದೀಯ.

ನೀಲಿ ಶಾಲು ಹಾಕಿದ ನಾನು ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ೧೯೪೦ ರಲ್ಲಿ ಬರೆದ ಥಾಟ್ಸ್ ಆನ್ ಪಾಕಿಸ್ತಾನ್ ಮತ್ತು ಅದನ್ನು ಮರು ಪ್ರಕಟಿಸಿದ ಪಾಕಿಸ್ತಾನ್ ಆರ್ ಪಾರ್ಟಿಷನ್ ಆಫ್‌ ಇಂಡಿಯಾ ಓದಿದ್ದೀನಿ ಮತ್ತು ಅರ್ಥೈಸಿಕೊಂಡಿದ್ದೇನೆ.

ಅದೇ ಡಾ.ಅಂಬೇಡ್ಕರ್ ನಿಷ್ಠುರವಾಗಿ ಹಿಂದುತ್ವದ ಬಗ್ಗೆ ಬರೆದ ಪುಸ್ತಕ ಅವರು ಬದುಕಿದ್ದಾಗ ಸರ್ಕಾರಗಳು ಪ್ರಕಟಿಸಲಿಲ್ಲ.ಆದರೆ, ನೀನು ಕೇಸರಿ ಶಾಲು ಹಾಕಿ, ೧೯೮೭ ರಲ್ಲಿ ಮಹಾರಾಷ್ಟ್ರ ಸರ್ಕಾರ ಪ್ರಕಟಣೆ ಮಾಡಿದ ರಿಡಲ್ಸ್ ಇನ್ ಹಿಂದೂಯಿಸಮ್ ಓದಿದ್ದೀಯಾ? ಫ್ರೀ ಆಗಿ ಸಿಗು, ಚರ್ಚೆ ಮಾಡೋಣ… ಅಣ್ಣ….!

– ಡಾ. ದಿಲೀಪ್ ನರಸಯ್ಯ ಎಂ., ಮೈಸೂರು

 

ಆಂದೋಲನ ಡೆಸ್ಕ್

Recent Posts

ಓದುಗರ ಪತ್ರ: ನಾಡಿಗೆ ಮಾದರಿ!

ನಾಡಿಗೆ ಮಾದರಿ! ವಿವಿಧ ಧರ್ಮ ಸಮುದಾಯಗಳ ಮನಸುಗಳ ಅಕ್ಕರೆಯಲಿ ಬೆಸೆವ ಸ್ನೇಹ ಸೌಹಾರ್ದ ಸಾಮರಸ್ಯದ ಪ್ರತೀಕ, ಹಬ್ಬ ಉತ್ಸವಗಳು! ನಾಡಿಗೆ…

1 min ago

ದಸರಾ ಬರುತ್ತಿದೆ, ಮೈಸೂರು ಸಿದ್ಧವಾಗುತ್ತಿದೆಯೇ?

ಶ್ರೇಯಸ್ ದೇವನೂರು ಅಭಿವೃದ್ಧಿಯ ಹೆಸರಿನಲ್ಲಿ ಅರ್ಧ ಕಾಮಗಾರಿ, ಸಂಚಾರದ ಹೆಸರಿನಲ್ಲಿ ಹೆಚ್ಚುತ್ತಿರುವ ಸಂಕಷ್ಟ  ಮೈಸೂರು ದಸರಾ ಎಂದರೆ ಕೇವಲ ಹತ್ತು…

6 mins ago

ಫಾಲ್ಕೆ ಪ್ರಶಸ್ತಿ ಕಲಾಸೇವೆಗೆ ಸಂದ ಗೌರವ: ಅನಂತ್ ನಾಗ್‌

ಸಂದರ್ಶನ: ಬಾನಾಸು  ಇಂದು ಗುಜರಾತಿನ ಕೆವಾಡಿಯಾದಲ್ಲಿ ೭೨ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ನಡೆಯಲಿದೆ. ಚಿತ್ರರಂಗಕ್ಕೆ ಸಲ್ಲಿಸಿದ ಅಮೋಘ ಸೇವೆಗಾಗಿ…

11 mins ago

ಕೊಡಗಿನಲ್ಲಿ ಅಂದಾಜು ೨,೨೭೯ ಹೆಕ್ಟೇರ್ ಬೆಳೆ ಹಾನಿ

ನವೀನ್ ಡಿಸೋಜ ಬೆಳೆ ನಷ್ಟಕ್ಕೊಳಗಾಗಿರುವ ರೈತರಿಗೆ ೧.೯೩ ಕೋಟಿ ರೂ. ಪರಿಹಾರಕ್ಕೆ ಸರ್ಕಾರಕ್ಕೆ ವರದಿ ಮಡಿಕೇರಿ: ಸಾಮಾನ್ಯವಾಗಿ ಮುಂಗಾರು ಮಳೆಯೊಂದಿಗೆ…

18 mins ago

ದಸರಾ ಗೋಲ್ಡ್ ಕಾರ್ಡ್, ಟಿಕೆಟ್ ಮಾರಾಟ ಶುರು

ಕೆ.ಬಿ.ರಮೇಶ್ ನಾಯಕ ಟಿಕೆಟ್ ಜೀನಿ ಸಂಸ್ಥೆಗೆ ಟಿಕೆಟ್ ಮಾರಾಟದ ಹೊಣೆ; ಮೊದಲ ದಿನವೇ ಉತ್ತಮ ಪ್ರತಿಕ್ರಿಯೆ ಮೈಸೂರು: ನಾಡಹಬ್ಬ ದಸರಾ…

23 mins ago

ಸರ್ಕಾರಿ ಶಾಲಾ ಮಕ್ಕಳಿಗೆ ಕಳಪೆ ಶೂ; ಲೋಕಾಯುಕ್ತರಿಂದ ತನಿಖೆ?

ಎಸ್.ಎಸ್.ಭಟ್ ನಂಜನಗೂಡು: ರಾಜ್ಯ ಸರ್ಕಾರ ಸರ್ಕಾರಿ ಶಾಲೆಯ ಮಕ್ಕಳಿಗೆ ಪೂರೈಕೆ ಮಾಡುತ್ತಿರುವ ಶೂಗಳು ಕಳಪೆಯಾಗಿದ್ದು ಅಳತೆಯೂ ಸರಿ ಇಲ್ಲ ಎಂಬ…

28 mins ago