ಮೈಸೂರು

ಹುಲಿ ಸಾವು ಪ್ರಕರಣ : ನಾಗರಹೊಳೆ ಹುಲಿ ರಕ್ಷಿತಾರಣ್ಯದಲ್ಲಿ ಮುನ್ನೆಚ್ಚರಿಕೆ ಕ್ರಮ

ಹುಣಸೂರು: ಮಲೆ ಮಹದೇಶ್ವರ ವನ್ಯಧಾಮದಲ್ಲಿ 5 ಹುಲಿಗಳ ಹತ್ಯೆ ಬಳಿಕ ಇದೀಗ ನಾಗರಹೊಳೆ ಹುಲಿ ರಕ್ಷಿತಾರಣ್ಯದಲ್ಲಿ ಅಧಿಕಾರಿಗಳು, ಸಿಬ್ಬಂದಿ ಜಾಗೃತಗೊಂಡಿದ್ದು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದಾರೆ.

ಪ್ಯಾಟ್ರೋಲಿಂಗ್, ಉರುಳು ಪತ್ತೆ ಕಾರ್ಯ ಮುಂತಾದ ಕಾರ್ಯಗಳು ಅವಿರತವಾಗಿ ನಡೆಯುತ್ತಿವೆ. ವಾಡಿಕೆಯಂತೆ ನಡೆದುಕೊಂಡು ಬಂದಿರುವ ಪ್ಯಾಟ್ರೋಲಿಂಗ್ ಕಾರ್ಯವನ್ನು ಮತ್ತಷ್ಟು ಚುರುಕುಗೊಳಿಸಲಾಗಿದೆ. ಎಂ-ಸ್ಟೆಪ್ ತಂತ್ರಜ್ಞಾನದ ಮೂಲಕ ಪ್ಯಾಟ್ರೋಲಿಂಗ್ ಕಾರ್ಯಚಟವಟಿಕೆಗಳನ್ನು ಕೇಂದ್ರಸ್ಥಾನಕ್ಕೆ ರವಾನಿಸುವ ಕಾರ್ಯ ಸತತವಾಗಿ ನಡೆಯುತ್ತಿದೆ.

ಉರುಳು ಪತ್ತೆ ಕಾರ್ಯ, ಕಳ್ಳಬೇಟೆ ತಡೆ ಶಿಬಿರಗಳಲ್ಲಿ ದಿನವಿಡೀ ಕಣ್ಗಾವಲು ಹಾಕಲಾಗಿದೆ. ಈ ನಡುವೆ ವನ್ಯಜೀವಿಗಳು ಕಾಡು ಬಿಟ್ಟು ತೆರಳದಂತೆ ಅಗತ್ಯ ನೀರು, ಆಹಾರ ಸಿಗುವಂತಾಗಲು ಕ್ರಮ ವಹಿಸಲಾಗುತ್ತಿದೆ.

ಉರುಳು ಪತ್ತೆ ಕಾರ್ಯ: ನುಣುಪಾದ ಮತ್ತು ಗಟ್ಟಿಯಾದ ತಂತಿಯೊಂದನ್ನು ಪ್ರಾಣಿಯ ತಲೆ ಒಳಹೋಗುವಷ್ಟು ಅಗಲಕ್ಕೆ ವೃತ್ತಾಕಾರವಾಗಿ ಸುತ್ತಿ ಕುಣಿಕೆ ಹಾಕಿ ಪ್ರಾಣಿಗಳು ನುಸುಳಬಹುದಾದ ಪೊದೆಗಳು, ಗಿಡ ಗಂಟಿಗಳ ನಡುವೆ ಬಲವಾಗಿ ಎರಡೂ ಬದಿಯಿಂದ ಕಟ್ಟಿರುತ್ತಾರೆ. ತಂತಿಯನ್ನು ಗಮನಿಸದ ಪ್ರಾಣಿಗಳು ಪೊದೆಯೊಳಗೆ ನುಗ್ಗುವಾಗ ತಂತಿ ಕೊರಳನ್ನು ಬಿಗಿದು ಅಲ್ಲೇ ಒದ್ದಾಡಿ ಪ್ರಾಣ ಬಿಡುತ್ತವೆ. ಕಾಡಿನ ಗಡಿಭಾಗದ ಪೊದೆಗಳಲ್ಲಿ ಬೇಟೆಗಾರರು ಇದನ್ನು ಇರಿಸುವ ಮೂಲಕ ಕಾಡುಪ್ರಾಣಿಗಳನ್ನು ಬೇಟೆಯಾಡುತ್ತಾರೆ. ಇದೀಗ ಉರುಳು ಪತ್ತೆ ಕಾರ್ಯವನ್ನು ಅರಣ್ಯ ಸಿಬ್ಬಂದಿ ಚುರುಕುಗೊಳಿಸಿದ್ದಾರೆ.

ಕಳ್ಳಬೇಟೆ ತಡೆ ಶಿಬಿರದಲ್ಲಿ ಕಟ್ಟೆಚ್ಚರ: ಅರಣ್ಯದೊಳಗೆ ಅಕ್ರಮ ಬೇಟಿ ನಿಗ್ರಹಕ್ಕೆ ಮುಖ್ಯ ಭಾಗಗಳಲ್ಲಿ ಕಳ್ಳಬೇಟೆ ತಡೆ ಶಿಬಿರವನ್ನು ಸ್ಥಾಪಿಸಲಾಗುತ್ತದೆ. ಶಿಬಿರದ ಸಿಬ್ಬಂದಿ ಕೇವಲ ಕಳ್ಳ ಬೇಟೆಗಾರರ ಪತ್ತೆ ಕಾರ್ಯ ಮಾತ್ರ ಮಾಡುವುದಿಲ್ಲ. ಬದಲಾಗಿ ಅರಣ್ಯ ಸಂರಕ್ಷಣೆಗೆ ಅವಶ್ಯವಾದ ಬೀಟ್‌ಗಳು, ಆಕಸ್ಮಿಕ ಬೆಂಕಿ ಅವಘಡ ಗುರುತಿಸುವುದು, ತಪ್ಪಿಸುವ ಜವಾಬ್ದಾರಿಯೂ ಇದೆ. ವೀರನಹೊಸಳ್ಳಿ ವಲಯದಲ್ಲಿ ಸ್ಥಾಪಿಸಲಾದ ಮಣಿಕಂಠನ್ ಶಿಬಿರ ಎರಡು ಅಂತಸ್ತುಗಳನ್ನು ಹೊಂದಿದೆ. ನಾಗರಹೊಳೆ ರಾಷ್ಟ್ರೀಯ ಉದ್ಯಾನವನದದ 8 ವಲಯ ವ್ಯಾಪ್ತಿಯಲ್ಲಿ ಒಟ್ಟು 54 ಕಳ್ಳಬೇಟೆ ತಡೆ ಶಿಬಿರ ಸ್ಥಾಪಿಸಲಾಗಿದೆ. ಹುಣಸೂರು ವಲಯ ವ್ಯಾಪ್ತಿಯಲ್ಲಿ ಅತಿಹೆಚ್ಚು 11 ಕ್ಯಾಂಪ್ ಗಳು, ಆನೆಚೌಕೂರು ವಲಯ ವ್ಯಾಪ್ತಿಯಲ್ಲಿ 10, ವೀರನಹೊಸಹಳ್ಳಿಯಲ್ಲಿ 8, ಕಲ್ಲಹಳ್ಳದಲ್ಲಿ 5, ನಾಗರಹೊಳೆಯಲ್ಲಿ 4, ಮೇಟಿಕುಪ್ಪೆಯಲ್ಲಿ 6, ಅಂತರಸಂತೆಯಲ್ಲಿ 4 ಮತ್ತು ಡಿ.ಬಿ.ಕುಪ್ಪೆ ವಲಯ ವ್ಯಾಪ್ತಿಯಲ್ಲಿ 6 ಶಿಬಿರಗಳನ್ನು ಸ್ಥಾಪಿಸಲಾಗಿದೆ. 6-7 ವರ್ಷಗಳ ಹಿಂದೆ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಸುತ್ತ ಇದ್ದ 200 ಚದರ ಕಿ.ಮೀ.ಗೂ ಅಧಿಕ ಬಫರ್‌ಜೋನ್ ಪ್ರದೇಶವನ್ನೂ ವನ್ಯಜೀವಿ ವಿಭಾಗಕ್ಕೆ ಸೇರ್ಪಡೆ ಮಾಡಿಕೊಳ್ಳಲಾಯಿತು. ಇದಾದ ಬಳಿಕ ನಾಗರಹೊಳೆ ಉದ್ಯನವನದ ವಿಸ್ತಾರ 643 ಚದರ ಕಿ.ಮೀ.ಗಳಿಂದ 843 ಚದರ ಕಿ.ಮೀ.ಗಳಿಗೆ ಹೆಚ್ಚಾಗಿದೆ.

ಜೀವಜಲ ವೃದ್ಧಿಗಾಗಿ ಸಂಘ ಸಂಸ್ಥೆಗಳ ನೆರವು ಪಡೆಯಲಾಗುತ್ತಿದ್ದು, ಕೆರೆಗಳನ್ನು ಅಭಿವೃದ್ಧಿಪಡಿಸಿ, ಕಾಡಿನಲ್ಲೇ ವನ್ಯಜೀವಿಗಳಿಗೆ ನೀರು ಮತ್ತು ಆಹಾರ ಸಿಗುವಂತಾಗಲು ಇಲಾಖೆ ಸಿಬ್ಬಂದಿ ಶ್ರಮಿಸುತ್ತಿದ್ದಾರೆ.

ಆಂದೋಲನ ಡೆಸ್ಕ್

Recent Posts

2028ಕ್ಕೂ ಡಿಕೆಶಿ ಸಿಎಂ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ: ಸತೀಶ್ ಜಾರಕಿಹೊಳಿ

ಮೈಸೂರು: 2028ರಲ್ಲೂ ಡಿ.ಕೆ. ಶಿವಕುಮಾರ್ ಅವರೇ ಮುಖ್ಯಮಂತ್ರಿಯಾಗಲಿ. ಅವರ ನೇತೃತ್ವದಲ್ಲೇ ಕಾಂಗ್ರೆಸ್ ಪಕ್ಷ ಮತ್ತೆ ಅಧಿಕಾರಕ್ಕೆ ಬರಲಿ ಎಂದು ಸತೀಶ್…

2 hours ago

ಓದುಗರ ಪತ್ರ: ವಿದ್ಯುತ್ ಕಡಿತ ಮುಂಚಿತವಾಗಿ ಪ್ರಕಟಿಸಿ

ಮಳೆ ಸರಿಯಾಗಿ ಆಗದೆ ಜಲವಿದ್ಯುತ್ ಉತ್ಪಾದನೆ ಕಡಿಮೆಯಾಗಿ ವಿದ್ಯುತ್ ಅಭಾವ ಎದುರಾಗಿರುವುದು ನಿಜ. ಆದರೆ ಯಾವುದೇ ಮುನ್ಸೂಚನೆ ಇಲ್ಲದೆ ಇದ್ದಕ್ಕಿದ್ದಂತೆ…

7 hours ago

ಓದುಗರ ಪತ್ರ: ಖುಷಿ ಕೊಡುವ ಮಾತುಗಳಷ್ಟೇ ಸ್ಪಂದನೆಯೂ ಮುಖ್ಯ

ಮೈಸೂರು ಮಹಾ ನಗರಪಾಲಿಕೆ ವತಿಯಿಂದ ಕಲಾಮಂದಿರದಲ್ಲಿ ಆಯೋಜಿಸಿದ್ದ ಪೌರ ಕಾರ್ಮಿಕರ ದಿನಾಚರಣೆ ಕಾರ್ಯಕ್ರಮದಲ್ಲಿ, ಮೈಸೂರು ಸ್ವಚ್ಛ ನಗರಿಯಾಗಲು ಪೌರ ಕಾರ್ಮಿಕರ…

7 hours ago

ಓದುಗರ ಪತ್ರ: ಬ್ಯಾಂಕ್ ಒಕ್ಕೂಟಗಳಿಗೆ ಜವಾಬ್ದಾರಿ ಇರಲಿ

ಸೆಪ್ಟೆಂಬರ್ ಕೊನೆಯಲ್ಲಿ ಆರ್ಥಿಕ ವರ್ಷದ ಅರ್ಧವಾರ್ಷಿಕ ಲೆಕ್ಕಪತ್ರ ಮುಕ್ತಾಯಗೊಳಿಸುವ ಅತ್ಯಂತ ನಿರ್ಣಾಯಕ ಸಮಯದಲ್ಲಿ ಬ್ಯಾಂಕ್ ಒಕ್ಕೂಟಗಳು (ಯುಎಫ್ಬಿ) ಮೂರು ದಿನಗಳ…

8 hours ago

ಪ್ರಶಸ್ತಿ ಪ್ರದಾನದಿಂದ ಚಿತ್ರೋತ್ಸವವರೆಗೆ ಹೊಸ ಪಯಣ

ವೈಡ್‌ ಆಂಗಲ್: ಬಾ.ನಾ.ಸುಬ್ರಹ್ಮಣ್ಯ ಅವರ ವಾರದ ಅಂಕಣ  ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ದೆಹಲಿ ಸಹಜ ವಿಳಾಸವಾಗಿತ್ತು. ದೇಶದ…

8 hours ago

ಜಂಬೂಸವಾರಿಯಲ್ಲಿ ಸ್ತಬ್ಧ ಚಿತ್ರಗಳ ‘ತ್ರಿಸಂಗಮ’

ಕೆ.ಬಿ.ರಮೇಶನಾಯಕ ಕರ್ನಾಟಕ ರಾಜ್ಯದ ಗತವೈಭವ, ದೇಶದ ಅಖಂಡತೆ ಬಿಂಬಿಸುವ ಮಾದರಿಗಳ ಸವಾರಿ ೩೧ ಜಿಲ್ಲೆಗಳ ಬದಲಿಗೆ ಆಯ್ದ ೧೫ ಜಿಲ್ಲೆಗಳ…

8 hours ago