ಮೈಸೂರು

ಮೈಸೂರು | ಇಬ್ಬರು ಹೆಂಡ್ತೀರ ಮುದ್ದಿನ ಗಂಡನ ಮೋಸದ ಮುಖವಾಡ ಬಯಲು ; ನ್ಯಾಯಕ್ಕಾಗಿ ಠಾಣೆ ಮೆಟ್ಟಿಲೇರಿದ 2ನೇ ಪತ್ನಿ

ಮೈಸೂರು : ಇಬ್ಬರು ಹೆಂಡತಿಯರ ಮುದ್ದಿನ ಗಂಡನ ಮೋಸದ ಮುಖವಾಡವೊಂದು ಬಯಲಾಗಿದ್ದು, ಮದುವೆ ಆಗಿ ಡಿವೋರ್ಸ್ ಆಗಿದ್ರು, ಮತ್ತೊಂದು ಯುವತಿಯನ್ನು ಮದುವೆ ಆಗಿ ಮೋಸ ಮಾಡಿರುವ ಆರೋಪ ಕೇಳಿಬಂದಿದೆ.

ಮೈಸೂರಿನ ಜೆ.ಪಿ.ನಗರದಲ್ಲಿ ಈ ಘಟನೆ ನಡೆದಿದ್ದು, ಪತಿ ಶಿವಕುಮಾರ್ ಮೋಸ ಮಾಡಿದ್ದಾನೆ ಎಂದು ಪತ್ನಿ ಶೋಭಾ ಆರೋಪ ಮಾಡಿ ನ್ಯಾಯಕ್ಕಾಗಿ ಪೊಲೀಸ್‌ ಠಾಣೆ ಮೆಟ್ಟಿಲೇರಿದ್ದಾರೆ. ಶೋಭಾಳನ್ನ ಮದುವೆ ಆಗುವ ಮುನ್ನವೇ ಶಿವಕುಮಾರ್‌ ಮತ್ತೊಂದು ಮದುವೆ ಆಗಿದ್ದನು.

ಕಳೆದ 2020ರಲ್ಲಿ ಶಿವಕುಮಾರ್ ನಂಜನಗೂಡು ತಾಲ್ಲೂಕಿನ ಲಾವಣ್ಯ ಎಂಬ ಯುವತಿಯ ಜೊತೆ ಮದುವೆ ಆಗಿದ್ದ ಶಿವಕುಮಾರ್, ಲಾವಣ್ಯ ಜೊತೆ ಒಂದು ವರ್ಷ ಸಂಸಾರ ಮಾಡಿ 2021ರಲ್ಲಿ ಆಕೆಗೆ ಡಿವೋರ್ಸ್ ನೀಡಿದ್ದ. ಬಳಿಕ 2022ರಲ್ಲಿ ಹಾಸನ ಜಿಲ್ಲೆಯ ಚನ್ನರಾಯನಪಟ್ಟಣದ ಯುವತಿ ಶೋಭಾ ಜೊತೆ ಮದುವೆಯಾಗಿದ್ದ. ಮನೆಯವರ ಒಪ್ಪಿಗೆಯಂತೆ ಅರೇಂಜ್ ಮ್ಯಾರೇಜ್ ಆಗಿರುವ ನೊಂದ ಮಹಿಳೆ ಶೋಭಾಗೆ ಸ್ವಲ್ಪ ವರ್ಷ ಕಳೆಯುತ್ತಿದ್ದಂತೆ ಗಂಡನ ನಿಜ ಬಣ್ಣ ಗೊತ್ತಾಗಿದೆ… ಹೀಗೆ ಒಂದು ದಿನ ಶೋಭಾಳಿಗೆ ಕರೆ ಮಾಡಿರುವ ಪೊಲೀಸರು, ನಿನ್ನ ಪತಿ ಶಿವಕುಮಾರ್ ಲಾವಣ್ಯ ಎಂಬ ಯುವತಿಯನ್ನು ಗರ್ಭಿಣಿ ಮಾಡಿದ್ದಾನೆ ಎಂದು ಹೇಳಿದ್ದಾರೆ.

ಹೀಗಿರುವಾಗಲೇ ಶಿವಕುಮಾರ್‌ ಪೊಲೀಸರಿಗೆ ಹೆದರಿ ಡಿವೋರ್ಸ್ ಆಗಿದ್ದ ಲಾವಣ್ಯಳನ್ನೇ ಮತ್ತೆ ರಿಜಿಸ್ಟರ್ ಮ್ಯಾರೇಜ್ ಆಗಿದ್ದಾನೆ. 2ನೇ ಹೆಂಡತಿ ಶೋಭಾಳಿಗೆ ಈ ವಿಚಾರ ತಿಳಿಯುತ್ತಿದ್ದಂತೆ ಮೈಸೂರಿನ ಜೆಪಿ ನಗರದಲ್ಲಿರುವ ಸ್ವಂತ ನಿವಾಸಕ್ಕೆ ಲಾವಣ್ಯಳನನ್ನು ಕರೆದುಕೊಂಡು ಬಂದಿದ್ದಾನೆ.

ಶೋಭಾ ಪ್ರಶ್ನೆ ಮಾಡಿದ್ದಕ್ಕೆ ಇಷ್ಟ ಇದ್ರೆ ಇರು, ಇಲ್ಲ ಅಂದರೆ ಮನೆ ಬಿಟ್ಟು ಹೋಗು ಎಂದು ಹಿಂಸೆ ಕೊಟ್ಟ ಆರೋಪ ಕೇಳಿಬಂದಿದ್ದು, ನೊಂದ ಮಹಿಳೆ ಶೋಭಾ ಪೊಲೀಸ್ ಠಾಣೆ ಮೆಟ್ಟಿಲೇರಿದ್ದರೂ ನ್ಯಾಯ ಸಿಗುತ್ತಿಲ್ಲ ಎಂದು ಕಣ್ಣೀರು ಹಾಕಿದ್ದಾರೆ.

ಶೋಭಾಳಿಗೆ 2 ವರ್ಷದ ಗಂಡು ಮಗು ಹಾಗೂ ಲಾವಣ್ಯಳಿಗೆ ಒಂದು ಹೆಣ್ಣು ಮಗು ಇದೆ. ಶಿವಕುಮಾರ್ ಜೊತೆ ಡಿವೋರ್ಸ್ ಆಗಿದ್ದ ಸಂದರ್ಭದಲ್ಲಿ ಲಾವಣ್ಯ ಕೇರಳದ ಪ್ರಸೂನ್ ಎಂಬುವವನ ಮತ್ತೊಂದು ಮದುವೆ ಆಗಿದ್ದಳು ಎಂದು ಶೋಭಾ ಗಂಭೀರ ಆರೋಪ ಮಾಡಿದ್ದಾರೆ.

ಪತಿ ಶಿವಕುಮಾರ್ ಕಳೆದ ಮೂರು ತಿಂಗಳಿನಿಂದಲೂ ಇಬ್ಬರು ಹೆಂಡತಿಯರು ಜೊತೆಯಲ್ಲೇ ಇರಿ ಎಂದು ಪದೇ ಪದೇ ಹಿಂಸೆ ಕೊಡುತ್ತಿದ್ದು, ಇದಕ್ಕೆ ಒಪ್ಪದ ಶೋಭಾ ನ್ಯಾಯಕ್ಕಾಗಿ ಕಣ್ಣೀರು ಹಾಕುತ್ತಿದ್ದಾರೆ.

ಆಂದೋಲನ ಡೆಸ್ಕ್

Recent Posts

ಓದುಗರ ಪತ್ರ: ವಿದ್ಯುತ್ ಕಡಿತ ಮುಂಚಿತವಾಗಿ ಪ್ರಕಟಿಸಿ

ಮಳೆ ಸರಿಯಾಗಿ ಆಗದೆ ಜಲವಿದ್ಯುತ್ ಉತ್ಪಾದನೆ ಕಡಿಮೆಯಾಗಿ ವಿದ್ಯುತ್ ಅಭಾವ ಎದುರಾಗಿರುವುದು ನಿಜ. ಆದರೆ ಯಾವುದೇ ಮುನ್ಸೂಚನೆ ಇಲ್ಲದೆ ಇದ್ದಕ್ಕಿದ್ದಂತೆ…

3 hours ago

ಓದುಗರ ಪತ್ರ: ಖುಷಿ ಕೊಡುವ ಮಾತುಗಳಷ್ಟೇ ಸ್ಪಂದನೆಯೂ ಮುಖ್ಯ

ಮೈಸೂರು ಮಹಾ ನಗರಪಾಲಿಕೆ ವತಿಯಿಂದ ಕಲಾಮಂದಿರದಲ್ಲಿ ಆಯೋಜಿಸಿದ್ದ ಪೌರ ಕಾರ್ಮಿಕರ ದಿನಾಚರಣೆ ಕಾರ್ಯಕ್ರಮದಲ್ಲಿ, ಮೈಸೂರು ಸ್ವಚ್ಛ ನಗರಿಯಾಗಲು ಪೌರ ಕಾರ್ಮಿಕರ…

3 hours ago

ಓದುಗರ ಪತ್ರ: ಬ್ಯಾಂಕ್ ಒಕ್ಕೂಟಗಳಿಗೆ ಜವಾಬ್ದಾರಿ ಇರಲಿ

ಸೆಪ್ಟೆಂಬರ್ ಕೊನೆಯಲ್ಲಿ ಆರ್ಥಿಕ ವರ್ಷದ ಅರ್ಧವಾರ್ಷಿಕ ಲೆಕ್ಕಪತ್ರ ಮುಕ್ತಾಯಗೊಳಿಸುವ ಅತ್ಯಂತ ನಿರ್ಣಾಯಕ ಸಮಯದಲ್ಲಿ ಬ್ಯಾಂಕ್ ಒಕ್ಕೂಟಗಳು (ಯುಎಫ್ಬಿ) ಮೂರು ದಿನಗಳ…

3 hours ago

ಪ್ರಶಸ್ತಿ ಪ್ರದಾನದಿಂದ ಚಿತ್ರೋತ್ಸವವರೆಗೆ ಹೊಸ ಪಯಣ

ವೈಡ್‌ ಆಂಗಲ್: ಬಾ.ನಾ.ಸುಬ್ರಹ್ಮಣ್ಯ ಅವರ ವಾರದ ಅಂಕಣ  ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ದೆಹಲಿ ಸಹಜ ವಿಳಾಸವಾಗಿತ್ತು. ದೇಶದ…

3 hours ago

ಜಂಬೂಸವಾರಿಯಲ್ಲಿ ಸ್ತಬ್ಧ ಚಿತ್ರಗಳ ‘ತ್ರಿಸಂಗಮ’

ಕೆ.ಬಿ.ರಮೇಶನಾಯಕ ಕರ್ನಾಟಕ ರಾಜ್ಯದ ಗತವೈಭವ, ದೇಶದ ಅಖಂಡತೆ ಬಿಂಬಿಸುವ ಮಾದರಿಗಳ ಸವಾರಿ ೩೧ ಜಿಲ್ಲೆಗಳ ಬದಲಿಗೆ ಆಯ್ದ ೧೫ ಜಿಲ್ಲೆಗಳ…

4 hours ago