ಮೈಸೂರು

ಕುಕ್ಕರಹಳ್ಳಿ ಕೆರೆ ಏರಿ ಕುರಿತ ಡಿಸೈನ್ ವಿಂಗ್‌ನ ತಂಡದ ವರದಿ ಸಿದ್ಧ

ಮೈಸೂರು: ಕುಕ್ಕರಹಳ್ಳಿ ಕೆರೆಯನ್ನು ಪರಿಶೀಲನೆ ನಡೆಸಿದ್ದ ಕಾವೇರಿ ನೀರಾವರಿ ನಿಗಮದ ಡಿಸೈನ್ ವಿಂಗ್‌ನ ತಾಂತ್ರಿಕ ಸಲಹೆಗಾರ ಎಚ್.ಕೆ.ಸಂಪತ್ ಕುಮಾರ್ ನೇತೃತ್ವದ ತಂಡ ವರದಿಯನ್ನು ಸಿದ್ಧ ಪಡಿಸಿದೆ.

ಕರ್ನಾಟಕ ಇಂಜಿನಿಯರಿಂಗ್ ಸಂಶೋಧನಾ ಕೇಂದ್ರದ ಇಂಜಿನಿಯರ್‌ಗಳು ಕುಕ್ಕರಹಳ್ಳಿ ಕೆರೆಯ ಮಣ್ಣಿನ ಪರೀಕ್ಷೆ ನಡೆಸಿ ನೀಡುವ ವರದಿಯ ಜೊತೆಗೆ ಡಿಸೈನ್ ವಿಂಗ್‌ನ ತಂಡವು ಮೈಸೂರು ವಿಶ್ವವಿದ್ಯಾನಿಲಯಕ್ಕೆ ವರದಿಯನ್ನು ಸಲ್ಲಿಸಲಿದೆ. ಈ ತಂಡವು ಅ.31 ರಂದು ಕೆರೆಯನ್ನು ಪರಿಶೀಲನೆ ನಡೆಸಿತ್ತು.

ತುರ್ತು ಸಮಯದಲ್ಲಿ ಕೆರೆಯಲ್ಲಿನ ಪ್ರವಾಹವನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲು ಮತ್ತು ನೀರನ್ನು ಹೊರಹಾಕಲು ಸ್ಲೂಸೈ ಗೇಟ್ ಹೊರತುಪಡಿಸಿ ಮತ್ಯಾವುದೇ ಪರಿಣಾಮಕಾರಿ ವ್ಯವಸ್ಥೆ ಇಲ್ಲ. ಹೀಗಾಗಿ ಹೆಡ್ ರೆಗ್ಯುಲೇಟರ್ ಅನ್ನು ಅಳವಡಿಸಬೇಕು. ಇದನ್ನು ಅಳವಡಿಸಲು ಸೂಚಿಸಿರುವ ಜಾಗದಲ್ಲಿ ಎಸ್‌ಬಿಸಿ ಪರೀಕ್ಷೆ ಮತ್ತು ಮಣ್ಣಿನ ವರ್ಗೀಕರಣದ ವರದಿಯನ್ನು ಒದಗಿಸುವ ಅಗತ್ಯವಿದೆ ಎಂದು ತಿಳಿಸಲಾಗಿದೆ.

ಕೆರೆಯ ಬಂಡ್‌ನ ಮಣ್ಣಿನ ವರ್ಗೀಕರಣ, ತೇವಾಂಶ, ಸಾಂದ್ರತೆ, ಪ್ರವೇಶ ಸಾಧ್ಯತೆ ಮತ್ತು ನಿರ್ದಿಷ್ಟ ಗುರುತ್ವಾಕರ್ಷಣೆಯಂತಹ ಮಣ್ಣಿನ ನಿಯತಾಂಕಗಳ ಫಲಿತಾಂಶದ ವರದಿಯನ್ನು ಕೆಇಆರ್‌ಎಸ್‌ನಿಂದ ಪಡೆಯಲು ತಿಳಿಸಿದೆ. ಡೌನ್‌ಸ್ಟ್ರೀಮ್ ಬಂಡ್‌ನಲ್ಲಿ ತೇವವನ್ನು ಕಡಿಮೆ ಮಾಡಲು ಮತ್ತು ತಕ್ಷಣದ ಸುರಕ್ಷತಾ ಕ್ರಮವಾಗಿ ಸೋರಿಕೆಯಾಗುವ ನೀರನ್ನು ಸುರಕ್ಷಿತವಾಗಿ ಹೊರಹಾಕಲು ಬಂಡ್‌ನ ಕೆಳಭಾಗದಲ್ಲಿ ರಾಕ್ ಟೋ ನಿರ್ಮಿಸಲು ಸೂಚಿಸಿದೆ. ಕುಕ್ಕರಹಳ್ಳಿ ಕೆರೆ ನೀರು ಮತ್ತು ಲಿಂಗಾಂಬುಧಿ ಕೆರೆಯ ನೀರು ಒಟ್ಟಿಗೆ ಸೇರಿ ಹರಿಯಲಿದ್ದು, ಇದು ಹರಿಯವ ಕಾಲುವೆಯ ರೇಖಾಚಿತ್ರವನ್ನು ಒದಗಿಸುವಂತೆ ಕೇಳಿರುವ ಅಂಶಗಳನ್ನು ವರದಿ ಒಳಗೊಂಡಿದೆ.

 

 

 

andolana

Recent Posts

ಇಶಾ ಫೌಂಡೇಶನ್‌ ವಿರುದ್ಧದ ಪ್ರಕರಣ ವಜಾಗೊಳಿಸಿದ ಸುಪ್ರೀಂಕೋರ್ಟ್‌

ಹೊಸದಿಲ್ಲಿ: ತಮಿಳುನಾಡಿನ ಕೊಯಮತ್ತೂರಿನಲ್ಲಿರುವ ಸದ್ಗುರು ಜಗ್ಗಿ ವಾಸುದೇವ್‌ ಅವರ ಆಶ್ರಮ ಸೇರಲು ತನ್ನ ಇಬ್ಬರು ಹೆಣ್ಣುಮಕ್ಕಳನ್ನು ಬ್ರೈನ್‌ವಾಶ್‌ ಮಾಡಲಾಗಿದೆ ಎಂಬ…

1 hour ago

ಮಡಿಕೇರಿ: ಮಗನಿಂದಲೇ ತಂದೆಯ ಹತ್ಯೆ..

ಮಡಿಕೇರಿ: ಮಗನಿಂದಲೇ ತಂದೆ ಹತ್ಯೆಯಾದ ಘಟನೆ ಶ್ರೀಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯ ಚಿಕ್ಕಮಂಡೂರು ಗ್ರಾಮದಲ್ಲಿ ನಡೆದಿದೆ. ಸಿ ಎನ್ ನಾಣಯ್ಯ…

2 hours ago

ಮುಡಾ: ಇಡಿ ದಾಳಿಗೆ ರಾಜಕೀಯ ಕಾರಣವಲ್ಲ; ಅಶೋಕ್

ಜಾರಿ ನಿರ್ದೇಶನಾಲಯದ ದಾಳಿಗೆ ರಾಜಕೀಯ ಕಾರಣವಲ್ಲ, 3-4 ಸಾವಿರ ಕೋಟಿ ರೂ. ಅಕ್ರಮ ನಡೆದಿದೆ ಎಂದು ಹೇಳಿದ್ದೇ ಕಾಂಗ್ರೆಸ್‌ನವರು: ಪ್ರತಿಪಕ್ಷ…

2 hours ago

BJP ಟಿಕೆಟ್‌ ವಂಚನೆ: ಆರೋಪ ತಳ್ಳಿ ಹಾಕಿದ ಕೇಂದ್ರ ಸಚಿವ ಪ್ರಲ್ಹಾದ ಜೋಶಿ

ನವದೆಹಲಿ: ನನಗೆ ಸಹೋದರಿಯೇ ಇಲ್ಲ ಮತ್ತು ಗೋಪಾಲ್ ಜೋಶಿ ಮೇಲಿನ ಪ್ರಕರಣಕ್ಕೂ ತಮಗೂ ಯಾವುದೇ ಸಂಬಂಧವಿಲ್ಲ ಎಂದು ಕೇಂದ್ರ ಸಚಿವ…

2 hours ago

ಮಂಡ್ಯ ಟೂ ಇಂಡಿಯಾ: ಬೃಹತ್‌ ಉದ್ಯೋಗ ಮೇಳಕ್ಕೆ ಮೊದಲ ದಿನ ಅಭೂತಪೂರ್ವ ಸ್ಪಂದನೆ

ಮಂಡ್ಯ ಟೂ ಇಂಡಿಯಾ; ಸಕ್ಕರೆ ನಾಡಿನಲ್ಲಿ 2 ದಿನಗಳ ಬೃಹತ್ ಉದ್ಯೋಗ ಮೇಳ 150ಕ್ಕೂ ಹೆಚ್ಚು ಕಂಪನಿಗಳ ಭಾಗಿ, ಸಾವಿರಾರು…

3 hours ago

ಮುಡಾ ಮೇಲೆ ಇಡಿ ದಾಳಿ: ಸಿಬಿಐ ತನಿಖೆ ನಡೆಸುವರೆಗೂ ಹೋರಾಟ ಮುಂದುವರಿಕೆ: ಸ್ನೇಹಮಯಿ ಕೃಷ್ಣ

ಮೈಸೂರು: ಮುಡಾ ಮೇಲಿನ ಇಡಿ ಕಾರ್ಯಾಚರಣೆ ಕೇವಲ ಸಿಎಂ ಸಿದ್ದರಾಮಯ್ಯ ಅವರ ಕುಟುಂಬದವರ ಪ್ರಕರಣವಲ್ಲ. ಸಂಪೂರ್ಣ ಮುಡಾ ಅಕ್ರಮದ ಬಗ್ಗೆ…

3 hours ago