Andolana originals

ಕಾರ್ಮಿಕರ ಹಿತ ಕಾಯುವ ಯೋಜನೆಗಳ ಜಾರಿ

‘ಆಂದೋಲನ’ ವಿಶೇಷ ಸಂದರ್ಶನದಲ್ಲಿ ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೆಮ್ಮೆಯ ನುಡಿ’

ಆಂದೋಲನ: ರಾಜ್ಯ ಸರ್ಕಾರಕ್ಕೆ ಸಾವಿರ ದಿನಗಳು ಭರ್ತಿಯಾಗಿವೆ. ಈ ಸಂದರ್ಭದಲ್ಲಿ ಕಾರ್ಮಿಕ ಸಚಿವರಾಗಿ ನಿಮ್ಮ ಕೆಲಸ ತೃಪ್ತಿ ತಂದಿದೆಯೇ?

ಸಂತೋಷ್ ಲಾಡ್: ಖಂಡಿತ. ಮುಖ್ಯಮಂತ್ರಿ  ಸಿದ್ದರಾಮಯ್ಯನವರ ನೇತೃತ್ವದಲ್ಲಿ ಅಸ್ತಿತ್ವಕ್ಕೆ ಬಂದ ಕಾಂಗ್ರೆಸ್ ಸರ್ಕಾರದಲ್ಲಿ ಕಾರ್ಮಿಕ ಸಚಿವನಾಗಿ ನನ್ನ ಕೆಲಸ ನನಗೆ ತೃಪ್ತಿ ತಂದಿದೆ. ಗುರಿಗಳು ಹಲವಾರಿವೆ. ಆದರೆ ಇದುವರೆಗೆ ಮಾಡಿದ ಸಾಧನೆ ಏನಿದೆ ಅದು ನಿಶ್ಚಿತವಾಗಿ ಸಮಾಧಾನ ತಂದಿದೆ. ದುಡಿಯುವ ಕಾರ್ಮಿಕ ವರ್ಗದ ಹಿತ ಕಾಯುವ ಯೋಜನೆಗಳನ್ನು ಜಾರಿಗೊಳಿಸಿದ ಬಗ್ಗೆ ತೃಪ್ತಿಯಿದೆ.

ಆಂದೋಲನ: ನೀವು ಸಚಿವರಾದ ನಂತರ ಕಾರ್ಮಿಕರಿಗೆ ಕೊಟ್ಟ ಕೊಡುಗೆಗಳೇನು?

ಸಂತೋಷ್ ಲಾಡ್: ಇವತ್ತು ಕಾರ್ಮಿಕ ವರ್ಗ ಏನಿದೆ ಅದು ದುಡಿಯುವ ವರ್ಗ. ಈ ವರ್ಗದಲ್ಲಿ ಸಂಘಟಿತ ಕಾರ್ಮಿಕರ ಪ್ರಮಾಣಕ್ಕಿಂತ ಅಸಂಘಟಿತ ಕಾರ್ಮಿಕರ ಪ್ರಮಾಣ ಹೆಚ್ಚು. ಸರ್ಕಾರಕ್ಕಿರುವ ಮಾಹಿತಿಯ ಪ್ರಕಾರ, ಶೇ.೮೩ರಷ್ಟು ಮಂದಿ ಕಾರ್ಮಿಕರು ಅಸಂಘಟಿತ ವಲಯಕ್ಕೆ ಸೇರಿದವರು. ಇವರಿಗೆ ಬದುಕಿನಲ್ಲಿ ಭದ್ರತೆ ಇಲ್ಲ. ಹೀಗಾಗಿ ಇದನ್ನು ಗುರುತಿಸಿ ಅಸಂಘಟಿತ ವಲಯದ ಬಹುತೇಕ ಕಾರ್ಮಿಕರಿಗೆ ಭದ್ರತೆ ನೀಡುವ ಕೆಲಸವನ್ನು ನಮ್ಮ ಸರ್ಕಾರ ಮಾಡಿದೆ.

ಆಂದೋಲನ: ಅಸಂಘಟಿತ ಕಾರ್ಮಿಕರ ಪೈಕಿ ಎಷ್ಟು ಮಂದಿಗೆ ಕಾರ್ಮಿಕ ಇಲಾಖೆಯ ಯೋಜನೆಗಳು ತಲುಪಿವೆ?

ಸಂತೋಷ್ ಲಾಡ್: ಇವತ್ತು ರಾಜ್ಯದಲ್ಲಿರುವ ಅಲೆಮಾರಿಗಳು, ಖಾಸಗಿ ವಲಯದಲ್ಲಿ ಕೆಲಸ ಮಾಡುತ್ತಿರುವ ಡ್ರೈವರ್‌ಗಳು, ಪತ್ರಿಕಾ ವಿತರಕರು, ಬಹುತೇಕ ಕಟ್ಟಡ ಕಾರ್ಮಿಕರು, ಗಿಗ್ ಕಾರ್ಮಿಕರು, ನೇಕಾರರು, ಅಕ್ಕಸಾಲಿಗರು ಹೀಗೆ ಅಸಂಘಟಿತ ವಲಯಗಳಲ್ಲಿ ಕೆಲಸ ಮಾಡುತ್ತಿರುವ ಬಹುತೇಕರ ಬದುಕಿಗೆ ಭದ್ರತೆ ನೀಡಲು ಯೋಜನೆಗಳನ್ನು ರೂಪಿಸಲಾಗಿದೆ. ಅಸಂಘಟಿತ ವಲಯಗಳಲ್ಲಿರುವ ಇನ್ನೂ ಹಲವು ಕಾರ್ಮಿಕರಿಗೆ ಭದ್ರತೆ ನೀಡಲು ಕ್ರಮ ಕೈಗೊಳ್ಳಲಾಗಿದೆ.

ಆಂದೋಲನ: ರಾಜ್ಯಾದ್ಯಂತ ಇರುವ ಕಾರ್ಮಿಕರೇನಿದ್ದಾರೆ ಇವರಲ್ಲಿ ಕಟ್ಟಡ ಕಾರ್ಮಿಕರ ಸಂಖ್ಯೆ ಗಣನಿಯವಾಗಿದೆ. ಇಂತಹವರಿಗೆ ಸರ್ಕಾರದಿಂದ ಸಿಗುತ್ತಿರುವ ಅನುಕೂಲಗಳೇನು?

ಸಂತೋಷ್ ಲಾಡ್: ಕಟ್ಟಡ ಕಾರ್ಮಿಕರಿಗೆ ಹಣಕಾಸಿನ ನೆರವು ಸೇರಿದಂತೆ ಹಲವು ಬಗೆಯ ಅನುಕೂಲಗಳನ್ನು ಒದಗಿಸಲಾಗಿದೆ. ಇವತ್ತು ಕಟ್ಟಡ ಕಾರ್ಮಿಕರು ವಾಸಿಸುವ ಸ್ಥಳಗಳಿಗೇ ಹೋಗಿ ಅವರ ಆರೋಗ್ಯ ತಪಾಸಣೆ ಮಾಡುವ, ಆ ಮೂಲಕ ಅವರಿಗೆ ಆತ್ಮವಿಶ್ವಾಸ ತುಂಬುವ ಕೆಲಸ ಮಾಡಲಾಗುತ್ತಿದೆ. ಅಷ್ಟೇ ಅಲ್ಲ, ಸಮಸ್ಯೆ ದೀರ್ಘಕಾಲೀನವಾಗಿದ್ದರೆ ಅದರ ಪರಿಹಾರಕ್ಕೆ ಸಂಬಂಽಸಿದಂತೆ ಸವಲತ್ತುಗಳನ್ನು ನೀಡಲು ಸರ್ಕಾರ ಮುಂದಾಗಿದೆ.

ಆಂದೋಲನ: ರಾಜ್ಯದ ಕಾರ್ಮಿಕರ ಹಿತದೃಷ್ಟಿಯಿಂದ ಯಾವೆಲ್ಲ ಯೋಜನೆಗಳನ್ನು ಜಾರಿಗೆ ತರಲು ಉದ್ದೇಶೀಸಿದ್ದೀರಿ?

ಸಂತೋಷ್ ಲಾಡ್: ಹಲವು ಯೋಜನೆಗಳನ್ನು ಜಾರಿಗೆ ತರುವ ಉದ್ದೇಶವಿದೆ. ಉದಾಹರಣೆಗೆ ಕಾರ್ಮಿಕರ ಸಮಗ್ರ ಹಿತ ಕಾಯಲು ಕರ್ನಾಟಕ ಕಾರ್ಮಿಕ ನೀತಿಯನ್ನು ಜಾರಿಗೊಳಿಸಲು ಬಯಸಲಾಗಿದೆ. ಕಾರ್ಮಿಕರಿಗೆ ದೊರೆಯುತ್ತಿರುವ ಕನಿಷ್ಠ ವೇತನದ ಪ್ರಮಾಣವನ್ನು ಪರಿಷ್ಕರಿಸಲು ಬಯಸಲಾಗಿದೆ. ಇಎಸ್‌ಐ ಆಸ್ಪತ್ರೆ ಗಳನ್ನು ಉನ್ನತೀಕರಣಗೊಳಿಸಲು ಬಯಸಲಾ ಗಿದೆ. ಕಟ್ಟಡ ಕಾರ್ಮಿಕರಿಗೆ ಮನೆ ನಿರ್ಮಾಣ ಮಾಡಿಕೊಡಲು ಉದ್ದೇಶಿಸಲಾಗಿದೆ.

ಆಂದೋಲನ: ರಾಜ್ಯದ ಅಸಂಘಟಿತ ಕಾರ್ಮಿಕರ ಕಲ್ಯಾಣಕ್ಕಾಗಿ ಸರ್ಕಾರ ಏನೇನು ಸೌಲಭ್ಯಗಳನ್ನು ಕಲ್ಪಿಸಿದೆ?

ಸಂತೋಷ್ ಲಾಡ್: ಅಸಂಘಟಿತ ವಲಯದ ಕಾರ್ಮಿಕರಿಗೆ ಅಪಘಾತ ಪರಿಹಾರ ಸೌಲಭ್ಯವನ್ನು ಒದಗಿಸಲಾಗಿದೆ. ಅಪಘಾತದಿಂದ ಮರಣ ಹೊಂದಿದವರ ನಾಮನಿರ್ದೇಶಿತರಿಗೆ ಒಂದು ಲಕ್ಷ ರೂಪಾಯಿ ನೀಡಲಾಗುತ್ತದೆ, ಅಪಘಾತದಿಂದ ಶಾಶ್ವತ ಹಾನಿಗೆ ಇಲ್ಲವೇ ಭಾಗಶಃ ಹಾನಿಗೊಳಗಾದರೆ ಒಂದು ಲಕ್ಷ ರೂಪಾಯಿ ಪರಿಹಾರ ನೀಡಲಾಗುತ್ತದೆ, ಮೃತರ ಅಂತ್ಯಕ್ರಿಯೆಗೆ ಹತ್ತು ಸಾವಿರ ರೂಪಾಯಿ ನೀಡಲಾಗುತ್ತದೆ. ಹೀಗೆ ಹಲವು ಸವಲತ್ತುಗಳನ್ನು ಅಸಂಘಟಿತ ಕಾರ್ಮಿಕರಿಗೆ ನೀಡಲಾಗುತ್ತಿದೆ.

ಆಂದೋಲನ: ಮುಂದಿನ ದಿನಗಳಲ್ಲಿ ಕಾರ್ಮಿಕರಿಗೆ ಶಕ್ತಿ ನೀಡಲು ರೂಪಿಸುತ್ತಿರುವ ಯೋಜನೆಗಳೇನು?

ಸಂತೋಷ್ ಲಾಡ್: ಹಲವಾರಿವೆ. ದುಡಿಯುವ ಶ್ರಮಿಕರ ತೋಳುಗಳಿಗೆ ಕಸುವು ತುಂಬುವುದೇ ನಮ್ಮ ಆದ್ಯತೆ. ಇದಕ್ಕೆ ಪೂರಕವಾದ ಹಲವು ಯೋಜನೆಗಳನ್ನು ನಾವು ಜಾರಿಗೆ ತಂದಿದ್ದೇವೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಯೋಜನೆಗಳನ್ನು ಜಾರಿಗೆ ತರಲಿದ್ದೇವೆ. ಈ ವಿಷಯದಲ್ಲಿ ನಮ್ಮ ಸರ್ಕಾರಕ್ಕೆ ಬದ್ಧತೆ ಇದೆ.

ಆಂದೋಲನ: ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳು ಕಾರ್ಮಿಕ ವಲಯಕ್ಕೆ ದೊಡ್ಡ ಶಕ್ತಿ ತುಂಬಿದೆ ಅನ್ನಿಸುತ್ತದೆಯೇ?

ಸಂತೋಷ್ ಲಾಡ್: ನಿಸ್ಸಂಶಯವಾಗಿ. ಅನ್ನಭಾಗ್ಯ ಯೋಜನೆ ಇರಬಹುದು, ಗೃಹಲಕ್ಷ್ಮೀ ಯೋಜನೆ ಇರಬಹುದು. ಸರ್ಕಾರಿ ಬಸ್ಸುಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣದ ಸೌಲಭ್ಯವೇ ಇರಬಹುದು, ಒಟ್ಟಿನಲ್ಲಿ ಸರ್ಕಾರದ ಗ್ಯಾರಂಟಿ ಯೋಜನೆಗಳು ರಾಜ್ಯದ ಕಾರ್ಮಿಕ ವಲಯಕ್ಕೆ ದೊಡ್ಡ ಮಟ್ಟದ ಶಕ್ತಿ ತಂದಿರುವುದು ನಿಸ್ಸಂಶಯ.

ಆಂದೋಲನ ಡೆಸ್ಕ್

Recent Posts

ಮೈಸೂರು | ನಾಲ್ಕೇ ದಿನಕ್ಕೆ ಮುರಿದು ಬಿದ್ದ ದಸರಾ ದೀಪಾಲಂಕಾರ ಕಟೌಟ್

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ದಸರಾ ದೀಪಾಲಂಕಾರ ಕಾಮಗಾರಿಯಲ್ಲೇ ಯಡವಟ್ಟಾಗಿದ್ದು, ನಗರದ ಗನ್ ಹೌಸ್ ವೃತ್ತದಲ್ಲಿ ಕಟ್ಟಲಾಗಿದ್ದ ದಸರಾ ದೀಪಾಲಂಕಾರದ…

4 hours ago

ಕಮಿಷನ್ ಆರೋಪ ಸುಳ್ಳು, ಎಸ್‌ಐಆರ್ ರದ್ದಾಗಬೇಕು: ಸಚಿವ ಪುಟ್ಟರಂಗಶೆಟ್ಟಿ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ಶಾಸಕರು ಕಮಿಷನ್ ಕೇಳುತ್ತಿದ್ದಾರೆ ಎಂಬ ಗುತ್ತಿಗೆದಾರರ ಆರೋಪ ಸುಳ್ಳು,ಮತದಾರರ ಪಟ್ಟಿಯ…

5 hours ago

ಯಳಂದೂರು ತಾಲ್ಲೂಕಿನಲ್ಲಿ ವರುಣನ ಕೃಪೆ: ಭತ್ತದ ನಾಟಿಗೆ ಮುಂದಾದ ರೈತರು

ಯಳಂದೂರು: ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಕಳೆದ ಕೆಲ ದಿನಗಳಿಂದ ಸತತವಾಗಿ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ರೈತರು ಭತ್ತದ ನಾಟಿ ಕಾರ್ಯದಲ್ಲಿ…

5 hours ago

ಕಾವೇರಿ ತೀರ್ಥೋದ್ಭವಕ್ಕೆ ದಿನಗಣನೆ: ಕಾವೇರಿ ನೀರಾವರಿ ನಿಗಮದಿಂದ 2 ಕೋಟಿ ರೂ ಬಿಡುಗಡೆ

ಮಡಿಕೇರಿ: ನಾಡಿನ ಜೀವನದಿ ಕಾವೇರಿ ಉಗಮಸ್ಥಾನ ತಲಕಾವೇರಿಯಲ್ಲಿ ನಡೆಯಲಿರುವ ಪವಿತ್ರ ತೀರ್ಥೋದ್ಭವಕ್ಕೆ ದಿನಗಣನೆ ಶುರುವಾಗಿದ್ದು, ಇನ್ನೇನು ಕೇವಲ 15 ದಿನಗಳಷ್ಟೇ…

5 hours ago

ಮಂಡ್ಯ | ಕೇಂದ್ರದ ಬರ ಅಧ್ಯಯನ ತಂಡದಿಂದ ಕೆಆರ್‌ಎಸ್‌ ಹಾಗೂ ಬರಪೀಡಿತ ಹಳ್ಳಿಗಳ ಪರಿಶೀಲನೆ

ಮಂಡ್ಯ: ರಾಜ್ಯದಲ್ಲಿ ಕಂಡು ಕೇಳರಿಯದ ಬರಗಾಲ ಆವರಿಸಿರುವ ಹಿನ್ನೆಲೆಯಲ್ಲಿ ಇಂದು ಕೇಂದ್ರ ಬರ ಅಧ್ಯಯನ ಸಮಿತಿ ಸದಸ್ಯರು ಮಂಡ್ಯಕ್ಕೆ ಆಗಮಿಸಿ…

5 hours ago

ಓದುಗರ ಪತ್ರ: ಐತಿಹಾಸಿಕ ಸಂಗತಿ!

ಐತಿಹಾಸಿಕ ಸಂಗತಿ! ಸರ್ಕಾರದ ನಿರ್ದೇಶನದ ಮೇರೆಗೆ ಬೆಳಗಾವಿ ನಗರಪಾಲಿಕೆ ‘ಗಡಿ ವಿಷಯದಲ್ಲಿ ಮಹಾಜನ್ ವರದಿಯೇ ಅಂತಿಮ’ಎಂಬ ನಿರ್ಣಯ ಅಂಗೀಕರಿಸಿರುವುದು ಐತಿಹಾಸಿಕ…

10 hours ago