ಮೈಸೂರು : ನಿಸ್ಪೃಹ ಮನಸ್ಸಿನ ರಾಜಕಾರಣಿಯೇನಾದರು ಇದ್ದರೆ ಅದು ಶ್ರೀನಿವಾಸ ಪ್ರಸಾದ್ ಮಾತ್ರ ಎಂದು ಸಂಸದ ಪ್ರತಾಪ್ ಸಿಂಹ ಅಭಿಪ್ರಯಾ ವ್ಯಕ್ತಪಡಿಸಿದರು.
ದಿವಂಗತ ಸಂಸದ ವಿ ಶ್ರೀನಿವಾಸ ಪ್ರಸಾದ್ ಅವರ ಅಂತಿಮ ದರ್ಶನ ಪಡೆದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ೧೦ ವರ್ಷದ ನನ್ನ ರಾಜಕಾರಣದಲ್ಲಿ ಎಲ್ಲಾ ರೀತಿಯ ಎಲ್ಲಾ ವಿಧದ ರಾಜಕಾರಣಿಗಳನ್ನು ನೋಡಿದ್ದೇನೆ. ಆದರೆ ಹಳೆ ಮೈಸೂರಿನ ನಿಶ್ಪೃಹ ಮನಸ್ಸಿನ ಏಕಮಾತ್ರ ವ್ಯಕ್ತಿ ಎಂದರೆ ಅದು ಶ್ರೀನಿವಾಸ ಪ್ರಸಾದ್ ಎಂದರು.
ಈ ಭಾಗದಲ್ಲಿ ದ್ವೇಷ-ಅಸೂಯೆ ಇಲ್ಲದಂತ ಒಬ್ಬನೇ ಒಬ್ಬ ರಾಜಕಾರಣೀ ಎಂದರೆ ಅದು ಶ್ರೀನಿವಾಸ ಪ್ರಸಾದ್. ನನಗೆ ವಯಕ್ತಿಕವಾಗಿ ನೋವಾಗಿದೆ. ಮೊದಲ ಬಾರಿ ಸಂಸದನಾಗಿದ್ದಾಗ ಅವರು ಮೈಸೂರಿನ ಉಸ್ತುವಾರಿ ಸಚಿವರಾಗಿದ್ದರು, ಪಕ್ಷ ಬೇರೆಯಾಗಿದ್ದರು ಒಂದು ದಿನ ನನ್ನನ್ನು ಬೇರೆಯವನಂತೆ ಕಂಡಿರಲಿಲ್ಲ ಎಂದರು.
ನಾನು ಸಂಸದನಾದ ಬಳಿಕ ಮೈಸೂರು ಭಾಗದಲ್ಲಿ ಒಂದು ದಿನಕ್ಕು-ಒಂದು ಕ್ಷಣಕ್ಕು ನನ್ನು ಟೀಕೆ ಮಾಡದಂತ ಮನಸ್ಸಿದ್ದರೆ ಅದು ಪ್ರಸಾದ್ ಸಾಹೇಬರು ಎಂದು ಹೇಳುವ ವೇಳೆ ಸಂಸದ ಪ್ರತಾಪ್ ಸಿಂಹ ಗದ್ಗತಿತರಾದರು.
ಒಳ್ಳೆ ರಾಜಕಾರಣಿಗಳಿಗೆ ಕಾಲನೇ ಇಲ್ಲವೇನೋ ! : ಈತ್ತೀಚೆಗೆ ಮಾಜಿ ಸಂಸದರಾದ ಧೃವನಾರಾಯಣ್ ಅವರು ತೀರಿಹೋದರು. ಈಗ ಸಂಸದರಾದ ಶ್ರೀನಿವಾಸ ಪ್ರಸಾದ್ ತೀರಿಹೋಗಿದ್ದಾರೆ. ಯಾಕೋ ಈ ಮೈಸೂರು ಭಾಗದಲ್ಲಿ ಒಳ್ಳೆ ರಾಜಕಾರಣಿಗಳಿಗೆ ಕಾಲನೇ ಇಲ್ಲವೇನೋ ಎಂದು ಅನ್ನಿಸಿಬಿಡುತ್ತದೆ ಎಂದು ದುಖಿತರಾಗಿ ಭಾವುಕರಾದರು.
ಮೊದಲ ವಿಶ್ವಕನ್ನಡ ಸಮ್ಮೇಳನದ ಸಿದ್ಧತೆಯ ಸಂದರ್ಭ. ಬರಗಾಲದ ವೇಳೆ ದುಬಾರಿ ವೆಚ್ಚದ ಇಂತಹ ಸಮ್ಮೇಳನ ಅಗತ್ಯ ಇಲ್ಲ ಎಂದು ಇದರ…
ಇಂದು ನಮ್ಮ ದೇಶದ ಆರೋಗ್ಯ ಕ್ಷೇತ್ರದಲ್ಲಿ ಒಂದು ‘ನಿಶ್ಯಬ್ದ ಕ್ರಾಂತಿ’ ಸಂಭವಿಸುತ್ತಿದೆ. ಒಂದು ಕಾಲದಲ್ಲಿ ಪ್ಲೇಗ್, ಕಾಲರಾದಂತಹ ಸಾಂಕ್ರಾಮಿಕ ರೋಗಗಳು…
ಆರ್.ಟಿ.ವಿಠ್ಠಲಮೂರ್ತಿ ಅವರ ವಾರದ ಅಂಕಣ ಮಾಜಿ ಮುಖ್ಯಮಂತ್ರಿ ದೇವರಾಜ ಅರಸರನ್ನು ಇತಿಹಾಸ ಪದೇ ಪದೇ ಸ್ಮರಿಸುತ್ತದೆ. ಅಂದ ಹಾಗೆ ಮುಖ್ಯಮಂತ್ರಿಗಳಾದವರು…
ಎಚ್.ಡಿ.ಕೋಟೆ : ಪ್ರಭಾವಿಗಳು ಮತ್ತು ಅಧಿಕಾರಿಗಳು ನಕಲಿ ದಾಖಲೆ ಸೃಷ್ಟಿಸಿ, ಮುಗ್ಧ ಆದಿವಾಸಿ ಜನರ ೮ ಎಕರೆ ಜಮೀನು ಕಬಳಿಸಲು…
ಮೈಸೂರು : ಸಿಎಆರ್, ಡಿಎಆರ್ ಪೇದೆಗಳ ನೇಮಕಾತಿಗಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಭಾನುವಾರ ನಡೆಸಿದ ಸ್ಪರ್ಧಾತ್ಮಕ ಪರೀಕ್ಷೆಯು ಸುಗಮವಾಗಿ ನಡೆಯಿತು.…