ಮೈಸೂರು

ರಂಗಾಯಣ | ಐದು ದಿನಗಳ ʼನಿರಂತರ ರಂಗ ಉತ್ಸವʼಕ್ಕೆ ತೆರೆ

ಮೈಸೂರು : ನಿರಂತರ ರಂಗ ತಂಡದ ‘ನಿರಂತರ ರಂಗ ಉತ್ಸವ-2025-26’ರ ಐದು ದಿನಗಳ ರಂಗೋತ್ಸವದ ಕೊನೆಯ ದಿನ ‘ಕೊಡಲ್ಲ ಅಂದ್ರೆ ಕೊಡಲ್ಲ’ ನಾಟಕ ಪ್ರದರ್ಶನದ ಮೂಲಕ ತೆರೆ ಬಿತ್ತು.

ನಗರದ ಕಲಾಮಂದಿರ ಆವರಣದ ಕಿರುರಂಗಮಂದಿರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಹೊಸದಿಲ್ಲಿಯ ಸಂಸ್ಕೃತಿ ಸಚಿವಾಲಯದ ಸಹಯೋಗದಲ್ಲಿ ನಿರಂತರ -ಫೌಂಡೇಷನ್ ಏರ್ಪಡಿಸಿದ್ದ ಐದು ದಿನಗಳ ನಿರಂತರ ರಂಗೋತ್ಸವದ ಸಮಾರೋಪ ಸಮಾರಂಭದಲ್ಲಿ ಸಂಸ್ಕೃತಿ ಚಿಂತಕ ದೇವನೂರು ಬಸವರಾಜು ಮಾತನಾಡಿ, ನಿರಂತರ ರಂಗತಂಡ ಪ್ರಗತಿಪರವಾಗಿ ಅನ್ಯಾಯಗಳ ವಿರುದ್ಧ ಧ್ವನಿ ಎತ್ತುವ ಚಿಂತನೆಗಳ ಸಮೂಹವಾಗಿದೆ. ಇವತ್ತು ಜಾತಿ, ಧರ್ಮ, ಮೌಢ್ಯತೆಗಳಿಂದ ಹದಗೆಟ್ಟ ಸ್ಥಿತಿಯ ಸಮಾಜದಲ್ಲಿ, ಸಂಸ್ಥೆ ಕ್ರಿಯಾಶೀಲವಾಗಿ ಬೆಳೆದು ಬಂದಿದೆ ಎಂದರು.

ಪ್ರಸ್ತುತದಲ್ಲಿ ಜಾತಿ, ಧರ್ಮಗಳು ಮನುಷ್ಯನನ್ನು ಮೀರಿ ಬೆಳೆದಿವೆ. ಇಂತಹ ಸಮಯದಲ್ಲಿ ಯುವ ಮನಸ್ಸುಗಳಲ್ಲಿ ಪ್ರಗತಿಪರ ಆಲೋಚನೆಗಳನ್ನು, ಚಿಂತನೆಗಳನ್ನು, ಸದೃಢ ಭವಿಷ್ಯವನ್ನು ನಿರ್ಮಾಣ ಮಾಡುವಂತಹ ಮನೋಭಾವವನ್ನು ರಂಗತಂಡಗಳು, ಕಲಾವಿದರೂ ಮಾಡಬೇಕಿದೆ. ಅದಲ್ಲದೇ ಈ ವಿಚಾರವಂತಿಕೆಯನ್ನು ಕಾಲೇಜು ವಿದ್ಯಾರ್ಥಿಗಳಲ್ಲಿ ಬಿತ್ತುವ ಕೆಲಸ ಮತ್ತಷ್ಟು ಹೆಚ್ಚಬೇಕಿದೆ ಎಂದು ಅಭಿಪ್ರಾಯಪಟ್ಟರು.

ಇವತ್ತು ರಂಗದ ಮೇಲೆ ಪ್ರಸ್ತುತದಲ್ಲಿ ನಡೆಯುತ್ತಿರುವ ವಿಚಾರಗಳ ಕುರಿತು ನಾಟಕ ಪ್ರದರ್ಶನಗಳಾಗಬೇಕಿದೆ. ಈ ನಡೆಯಲ್ಲಿ ಮೊಬೈಲ್‌ಗಳಿಂದ ಆಗುವ ಅನಾಹುತದ ‘ಮೈ ಫೈಮಿಲಿ’ ನಾಟಕ, ಹಿಂದು ಮುಸ್ಲಿಂ ಭಾವೈಕ್ಯತೆಯ ‘ಗೊರೂರು’ ನಾಟಕಗಳು ನಿದರ್ಶನಗಳಾಗಿವೆ. ನಾಟಕಗಳು ಪ್ರಗತಿಪರ ಚಿಂತನೆಗಳಿಗಾಗಿ, ನಾಳೆಯ ನೆಮ್ಮದಿಗಾಗಿ ಕಾರ್ಯನಿರ್ವಹಿಸುವ ಕೆಲಸ ಹೆಚ್ಚಾಗಿ ನಿರಂತರವಾಗಿರಲಿ ಎಂದು ಬಣ್ಣಿಸಿದರು.

ಹಿರಿಯ ರಂಗ ನಿರ್ದೇಶಕ ಚಿದಂಬರರಾವ್ ಜಂಬೆ ಮಾತನಾಡಿ, ಯುವ ತಲೆಮಾರನ್ನು ಕಟ್ಟುವ ಕೆಲಸ ನಿರಂತರ, ನಿರಂತರವಾಗಿ ಮಾಡುತ್ತಾ ಬಂದಿದೆ. ಅದು ಮುಂದೆ ಸಾಗಬೇಕಾಗಿದ್ದು, ಸಮಾಜದಲ್ಲಿನ ಇವತ್ತಿನ ವಿಕೃತಿಗೆ ಇದೊಂದೇ ಪರಿಹಾರ. ಇಂತಹ ಉತ್ಸವಗಳು ಉತ್ಕೃಷ್ಟವಾಗಿ ನಡೆಯಬೇಕಿದೆ ಎಂದು ಆಶಯ ವ್ಯಕ್ತಪಡಿಸಿದರು.

ಕಡೂರು ನವೀನ್ ಕುಮಾರ್ ಮತ್ತು ತಂಡ
ಜಾನಪದ ನೃತ್ಯ, ವೀರಗಾಸೆ ಮೇಳೈಸಿತು. ಬಳಿಕ ಶ್ರೀರಂಗಪಟ್ಟಣದ ನಿರ್ದಿಗಂತ ರಂಗ ತಂಡ ಪ್ರಸ್ತುತಿಯ ಶಕೀಲ್ ಅಹ್ಮದ್ ಅವರ ಪರಿಕಲ್ಪನೆ ಮತ್ತು ನಿರ್ದೇಶನದ ದಾರಿಯೋ – ಅವರ ‘ಕಾಂಟ್ ಪೇ ವೋಂಟ್ ಪೇ’ ಆಧಾರಿತ ‘ಕೊಡಲ್ಲ ಅಂದ್ರೆ ಕೊಡಲ್ಲ’ ನಾಟಕ ಕೊನೆಯ ದಿನ ಅದ್ಧೂರಿ ಪ್ರದರ್ಶನ ಕಂಡಿತು.

ಆಂದೋಲನ ಡೆಸ್ಕ್

Recent Posts

ಭಾರೀ ಮಳೆಗೆ ಕೊಚ್ಚಿ ಹೋದ ಚೆಕ್ ಡ್ಯಾಂ: 15 ಅಡಿಗೂ ಹೆಚ್ಚು ಪ್ರವಾಹ

ಹನೂರು: ತಾಲ್ಲೂಕಿನ ಶಾಗ್ಯ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಲಾಜರ್ ದೊಡ್ಡಿ ಗ್ರಾಮದಲ್ಲಿ ಒಡಿಪಿ ಸಂಸ್ಥೆಯಿಂದ ನಿರ್ಮಾಣ ಮಾಡಿದ್ದ ಚೆಕ್ ಡ್ಯಾಂ…

13 hours ago

ಭಾರೀ ಮಳೆಗೆ ಮನೆ ಕುಸಿತ: ಲಕ್ಷಾಂತರ ರೂ. ನಷ್ಟ

ಹನೂರು: ತಾಲ್ಲೂಕಿನ ಎಲ್ಲೇಮಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವೈಶಂಪಾಳ್ಯ ಗ್ರಾಮದಲ್ಲಿ ಭಾನುವಾರ ರಾತ್ರಿ ಸುರಿದ ಭಾರೀ ಮಳೆಗೆ ಮನೆ ಸಂಪೂರ್ಣ…

13 hours ago

ಧರ್ಮಸ್ಥಳ ಸೌಜನ್ಯ ಪ್ರಕರಣ: ಮರು ತನಿಖೆಗೆ ಸುಪ್ರೀಂಕೋರ್ಟ್ ಮಹತ್ವದ ಆದೇಶ

ನವದೆಹಲಿ: ಧರ್ಮಸ್ಥಳ ಸೌಜನ್ಯ ಪ್ರಕರಣದ ಮರು ತನಿಖೆಗೆ ಸುಪ್ರೀಂ ಕೋರ್ಟ್ ಮಹತ್ವದ ಆದೇಶ ನೀಡಿದೆ. ನವದೆಹಲಿಯಲ್ಲಿ ನಡೆದ ವಿಚಾರಣೆಯಲ್ಲಿ, ಹಲವು…

15 hours ago

ಕಾಡಾನೆ ದಾಳಿ: ವ್ಯಕ್ತಿ ಸಾವು

ಸರಗೂರು: ಆಸ್ಪತ್ರೆಗೆ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿ ನಡೆಸಿದ ಪರಿಣಾಮ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಸರಗೂರು ತಾಲ್ಲೂಕಿನ ಕಾಡಗೆರೆ ಗ್ರಾಮದ…

17 hours ago

ಗಣೇಶ ವಿಸರ್ಜನೆ ಮೆರವಣಿಗೆ ರಾಜಕೀಯ ದಾಳವಾಗದಿರಲಿ…

ಬ್ರಿಟೀಷರ ವಿರುದ್ಧ ಸಮಾಜವನ್ನು ಅದರಲ್ಲೂ ಯುವಜನರನ್ನು ಸಂಘಟಿಸಿ, ದೇಶಭಕ್ತಿಯನ್ನು ಜಾಗೃತಿಗೊಳಿಸುವ ಮೂಲಕ ಅವರನ್ನು ಸ್ವಾತಂತ್ರ್ಯಸಂಗ್ರಾಮಕ್ಕೆ ಸಜ್ಜುಗೊಳಿಸುವ ಉದ್ದೇಶದಿಂದ ಆರಂಭವಾದ ಸಾರ್ವಜನಿಕ…

20 hours ago

ಕಾಂಗ್ರೆಸ್‌ನಲ್ಲೀಗ ಆತಂಕದ ಕಾರ್ಮೋಡ…

ಬೆಂಗಳೂರು ಡೈರಿ: ಆರ್.ಟಿ.ವಿಠ್ಠಲಮೂರ್ತಿ ಅವರ ವಾರದ ಅಂಕಣ  ಕಳೆದ ಮೂರು ವರ್ಷಗಳಿಂದ ಅಧಿಕಾರ ಹಂಚಿಕೆಯ ಸಂಘರ್ಷದಲ್ಲಿ ಮುಳುಗಿದ್ದ ಆಡಳಿತಾರೂಢ ಕಾಂಗ್ರೆಸ್…

21 hours ago