ಮೈಸೂರು

ಸರಗೂರಿನ ನೇರಳೆ ಗ್ರಾಮಕ್ಕೆ ನೇರ ಬಸ್‌ ಕಲ್ಪಿಸಿ : ಗ್ರಾಮಸ್ಥರ ಆಗ್ರಹ

ಸರಗೂರು : ಈ ಹಿಂದೆ ನೇರಳೆ-ಮಾಗುಡಿಲು ಗ್ರಾಮಕ್ಕೆ ನೇರವಾಗಿ ಕೆಎಸ್‌ಆರ್‌ಟಿಸಿ ಬಸ್ ಸೇವೆ ಇತ್ತು. ಈಗ ಆ ಬಸ್ ನೇರಳೆಗೆ ಬರುತ್ತಿಲ್ಲ ಎಂಬ ದೂರು ಗ್ರಾಮಸ್ಥರಿಂದ ಕೇಳಿಬಂದಿದೆ.

ಶಾಲೆ, ಕಾಲೇಜು, ಆಸ್ಪತ್ರೆ ಸೇರಿದಂತೆ ದೈನಂದಿನ ಕೆಲಸಗಳಿಗೆ ಗ್ರಾಮಸ್ಥರು ಬೀಚನಳ್ಳಿಯ ಗಣೇಶಗುಡಿ ಬಳಿ ಬಂದು ಹ್ಯಾಂಡ್‌ಪೋಸ್ಟ್ ಮೂಲಕ ಸರಗೂರಿಗೆ ಹೋಗಬೇಕಾಗಿದೆ. ಈ ಮಾರ್ಗ 17 ಕಿಲೋಮೀಟರ್ ದೂರವಾಗುತ್ತಿದೆ. ಆದರೆ ನೇರಳೆ-ಮಾಗುಡಿಲು-ನೀಲವಾಗಿಲು-ತುಂಬಸೋಗೆ ಮಾರ್ಗವು ಕೇವಲ 6 ಕಿಲೋಮೀಟರ್ ಮಾತ್ರವಾಗಿದೆ. ಹೀಗಾಗಿ ನೇರಳೆ-ಮಾಗುಡಿಲು ಗ್ರಾಮಕ್ಕೆ ನೇರ ಬಸ್‌ ಕಲ್ಪಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಗ್ರಾಮಕ್ಕೆ ನೇರ ಬಸ್ ಸೇವೆಯನ್ನು ಪುನಃಸ್ಥಾಪಿಸಬೇಕು. ಇಲ್ಲವಾದರೆ ವಿದ್ಯಾರ್ಥಿಗಳು ಮತ್ತು ರೋಗಿಗಳು ತೊಂದರೆಗೀಡಾಗುತ್ತಾರೆ ಎಂದು ಗ್ರಾಮಸ್ಥ ಶಿವಕುಮಾರ್‌ ಹೇಳಿದ್ದಾರೆ.

ಆಂದೋಲನ ಡೆಸ್ಕ್

Recent Posts

ಅಮೆರಿಕ ವಶವಾದ ಇರಾನ್‌ ಹಡಗು ; ಸಶಸ್ತ್ರ ಕಡಲ್ಗಳ್ಳತನ ಎಂದ ಇರಾನ್‌

ವಾಷಿಂಗ್ಟನ್ : ಇರಾನ್ ಧ್ವಜವಿರುವ ಸರಕು ಹಡಗನ್ನು (ಟೂಸ್ಕಾ) ಒಮಾನ್ ಕೊಲ್ಲಿಯಲ್ಲಿ (ಹಾರ್ಮುಜ್ ಜಲಸಂಧಿ ಸಮೀಪ) ನಮ್ಮ ಭದ್ರತಾ ಪಡೆಗಳು…

3 mins ago

ದಲಿತ ಚಿಂತಕ ಧೀಮಂತ ನಾಯಕ ಡಾ.ಎಚ್.ಸಿ.ಮಹದೇವಪ್ಪ ಅವರ ಹೋರಾಟದ ಕತೆ……

‘ಆಂದೋಲನ’ ವಿಶೇಷ ಸಂದರ್ಶನದಲ್ಲಿ ಸಮಾಜ ಕಲ್ಯಾಣ ಸಚಿವ ಡಾ. ಎಚ್.ಸಿ.ಮಹದೇವಪ್ಪ ಅವರ ಮನದಾಳದ ಮಾತು ಇಲ್ಲಿದೆ ನಿರೂಪಣೆ.. ಆರ್‌.ಟಿ.ವಿಠ್ಠಲಮೂರ್ತಿ ನಾನು…

41 mins ago

ಬಿಸಿ ಗಾಳಿ ; ಸಮವಸ್ತ್ರ ಕಡ್ಡಾಯಗೊಳಿಸದಂತೆ ಜಿಲ್ಲಾಧಿಕಾರಿ ಆದೇಶ

ಚಾಮರಾಜನಗರ : ತೀವ್ರ ಬಿಸಿ ಗಾಳಿ (ಹೀಟ್ ವೇವ್) ಇರುವುದರಿಂದ ಜಿಲ್ಲೆಯ ಎಲ್ಲಾ ಖಾಸಗಿ ಅನುದಾನಿತ, ಅನುದಾನರಹಿತ ಹಾಗೂ ಸರ್ಕಾರಿ…

4 hours ago

ಪಿರಿಯಾಪಟ್ಟಣ : ಈಜಲು ನೀರಿಗಿಳಿದಿ ಯುವಕರಿಬ್ಬರು ಸಾವು

ಪಿರಿಯಾಪಟ್ಟಣ : ಕಾವೇರಿ ನದಿಯಲ್ಲಿ ಈಜಲು ಹೋಗಿ ಇಬ್ಬರು ಯುವಕರು ಸಾವಿಗೀಡಾಗಿರುವ ಘಟನೆ ದೊಡ್ಡ ಹರವೆ ಬಳಿ ನಡೆದಿದೆ. ಪಿರಿಯಾಪಟ್ಟಣದಲ್ಲಿ…

4 hours ago

ನಮ್ಮ ಹಕ್ಕು ಕಸಿಯಲು ಅಮೆರಿಕ ಯಾರು? ; ಟ್ರಂಪ್‌ ವಿರುದ್ಧ ಇರಾನ್‌ ವಾಗ್ದಾಳಿ

ಟೆಹ್ರಾನ್ : ಇರಾನ್‌ನ ಪರಮಾಣು ಯೋಜನೆಯ ಸುತ್ತಲಿನ ಅಂತಾರಾಷ್ಟ್ರೀಯ ಬಿಕ್ಕಟ್ಟು ಮತ್ತೆ ತಾರಕಕ್ಕೇರಿದೆ. ಒಂದು ರಾಷ್ಟ್ರದ ಕಾನೂನುಬದ್ಧ ಹಕ್ಕುಗಳನ್ನು ಕಸಿದುಕೊಳ್ಳಲು…

4 hours ago

ಕಾವೇರಿ ನದಿಯಲ್ಲಿ ಆರು ಜನ ಸಾವು ; ಸಾವಿಗೀಡಾದವರೆಲ್ಲರೂ ಒಂದೇ ಕುಟುಂಬದವರು

ಕೆ.ಆರ್.ನಗರ : ತಾಲ್ಲೂಕಿನ ಹೊರವಲಯದ ಅರ್ಕೇಶ್ವರ ದೇಗುಲ ಬಳಿಯ ಕಾವೇರಿ ನದಿಯಲ್ಲಿ ಈಜಾಡುತ್ತಿದ್ದ ವೇಳೆ ಸಾವನ್ನಪ್ಪಿದ ಆರು ಮಂದಿಯೂ ಒಂದೇ…

14 hours ago