ಮೈಸೂರು

ಮೈಸೂರಿನ ಈ ಪ್ರದೇಶಗಳಲ್ಲಿ ನಾಳೆ (ಮೇ.೧೪) ವಿದ್ಯುತ್ ವ್ಯತ್ಯಯ

ಮೈಸೂರು: ನಗರದ ಹಲವೆಡೆ ನಿರ್ವಹಣಾ ಕಾಮಾಗಾರಿ ಹಮ್ಮಿಕೊಂಡಿರುವುದರಿಂದ ಮೇ.೧೪ ರಂದು ವಿದ್ಯುತ್‌ ವಿತರಣೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಚೆಸ್ಕಾಂ ತಿಳಿಸಿದೆ.

66/11 ಕೆ.ವಿ ದೇವನೂರು ಮತ್ತು ರಾಜೀವನಗರ ವಿದ್ಯುತ್ ವಿತರಣಾ ಕೇಂದ್ರಗಳಲ್ಲಿ ಕ.ವಿ.ಪ್ರ.ನಿ.ನಿ ವತಿಯಿಂದ 2ನೇ ತ್ರೈಮಾಸಿಕ ಅವಧಿಯ ನಿರ್ವಹಣಾ ಕಾಮಗಾರಿಯನ್ನು ಹಮ್ಮಿಕೊಳ್ಳಲಾಗಿರುವುದರಿಂದ ಬೆಳಿಗ್ಗೆ 10:00 ರಿಂದ ಸಂಜೆ 5:30 ಘಂಟೆಯವರೆಗೆ ವಿದ್ಯುತ್‌ ಪ್ರಸರಣದಲ್ಲಿ ವ್ಯತ್ಯಯ ಉಂಟಾಗಲಿದೆ.

ದೇವನೂರು ವಿದ್ಯುತ್‌ ವಿತರಣಾ ಕೇಂದ್ರದ ವ್ಯಾಪ್ತಿಯ ಬಿ.ಡಿ ಕಾಲೋನಿ, ಅಜೀಜ್ ಸೇಲ್ ನಗರ, 320 ಮನೆ, ಕೆಸರಿ ಕಾಲೋನಿ, ಮಹದೇವಪುರ ಮುಖ್ಯ ರಸ್ತೆ, ಶಕ್ತಿನಗರ, ರಾಜ್‌ಕುಮಾರ್ ರಸ್ತೆ, ಕಲ್ಯಾಣಗಿರಿ, ಅಕ್ಷಯ ಭಂಡಾರ್. ರಮ್ಮನಹಳ್ಳಿ, ಕಾಳಿಸಿದ್ದನಹುಂಡಿ, ಹಂಚ್ಯ, ಸಾತಗಳ್ಳಿ, ಗಳಗರಹುಂಡಿ, ನೆಹರು ನಗರ, ಸಾತಗಳ್ಳಿ ಗ್ರಾಮ,ಡಿ.ಟಿ.ಎಸ್ ರಾವ್ ನಗರ. ವಿ.ಟಿ.ಯೂ ಕಾಲೇಜು ಎದುರು, ಸನ್ ಪ್ಯೂರ್ ಬಡಾವಣೆ, ಸಾತಗಳ್ಳಿ ಬಿ ಜೋನ್, ವಿಟಿಯೂ ಕಾಲೇಜು, ಭಾರತ್ ನಗರ, ಹಾಗೂ ಸುತ್ತ-ಮುತ್ತಲಿನ ಪ್ರದೇಶಗಳು.

ರಾಜೀವ್‌ನಗರ ವಿ.ವಿ ಕೇಂದ್ರದ ವ್ಯಾಪ್ತಿಯ ರಾಜೀವನಗರ 2ನೇ ಹಂತ, ಕ್ರಿಶ್ಚಿಯನ್ ಕಾಲೋನಿ, ಯಾಸಿನ್ ಮಸ್ಜಿದ್, ಎಸ್.ಬಡಾವಣೆ, ಸೂರ್ಯನಾರಾಯಣ ದೇವಸ್ಥಾನ ರಸ್ತೆ, ಆಲ್ ಬಜಾರ್ ಮಸ್ಜಿದ್, ವೃತ್ತ, ಅಂಬೇಡ್ಕರ್ ಭವನ ರಸ್ತೆ, ಕ್ಯೂಬಾ ಮಸ್ಜಿದ್ ವೃತ್ತ, ನಾರಾಯಣ ಹೃದಯಾಲಯ ಆಸ್ಪತ್ರೆ, ಕಾಮನಕೆರೆಹುಂಡಿ, ಕೆ.ಹೆಚ್.ಬಿ. ಬಡಾವಣೆ, RTO-55, ಆಸೀನಾ ಬಡಾವಣೆ, ರಾಜೀವನಗರ 3ನೇ ಹಂತ ಹಾಗೂ ಸುತ್ತ-ಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್‌ ವಿತರಣೆಯಲ್ಲಿ ವ್ಯತ್ಯಯ ಉಂಟಾಗಲಿದ್ದು, ಸಾರ್ವಜನಿಕರು ಹಾಗೂ ಕೈಗಾರಿಕೋಧ್ಯಮಿಗಳು ಸಹಕರಿಸಬೇಕೆಂದು ಚೆಸ್ಕಾಂ ಮನವಿ ಮಾಡಿದೆ.

 

 

ಚಂದು ಸಿಎನ್

ಮೈಸೂರು ಜಿಲ್ಲೆಯ ಹುಣಸೂರಿನ ಚಲ್ಲಹಳ್ಳಿ ಗ್ರಾಮದವನಾದ ನಾನು ಒಂದು ದಶಕದಿಂದ ಮೈಸೂರಿನಲ್ಲಿ ನೆಲೆಸಿದ್ದೇನೆ. ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪತ್ರಿಕೋದ್ಯಮ ಪದವಿ ಪಡೆದು ಅಂದಿನಿಂದಲೇ ಹವ್ಯಾಸಿ ಪತ್ರಕರ್ತನಾಗಿ ವೃತ್ತಿ ಆರಿಸಿಕೊಂಡೆ. ನಂತರ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ವಿಷಯದಲ್ಲಿ ಸ್ನಾತಕೋತ್ತರ ಪದವಿ ಮುಗಿಸಿದ ಬಳಿಕ ಪತ್ರಿಕೋದ್ಯಮ ಕ್ಷೇತ್ರದಲ್ಲಿ 2 ವರ್ಷಗಳ ಕಾಲ ಅನುಭವ ಪಡೆದಿದ್ದೇನೆ. ಸದ್ಯ ಮೈಸೂರಿನ ಪ್ರತಿಷ್ಠಿತ ಆಂದೋಲನ ಪತ್ರಿಕೆಯ ಡಿಜಿಟಲ್‌ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಪ್ರಾಚೀನ ಪಳಿಯುಳಿಕೆ ಹಾಗೂ ಇತಿಹಾಸದ ಕಡೆ ಎಲ್ಲಿಲ್ಲದ ಒಲವು. ಪ್ರವಾಸ, ಪುಸ್ತಕ ಓದುವುದು ನೆಚ್ಚಿನ ಹವ್ಯಾಸಗಳಾಗಿವೆ. ಮೊಬೈಲ್‌ ಸಂಖ್ಯೆ: 9164535321.

Recent Posts

ದಸರೆಯ ಹಿಂದೆ ಸಾಗುವ ಗಜಪಡೆ ಮಹಾಯಾನ

ಶ್ರೇಯಸ್ ದೇವನೂರು, ವನ್ಯಜೀವಿ ಛಾಯಾಗ್ರಾಹಕ ಮಾವುತ - ಆನೆ ನಡುವೆ ಹೃದಯಸ್ಪರ್ಶಿ ಸಂಬಂಧ ಮೈಸೂರು ದಸರಾ ಎಂದಾಕ್ಷಣ ನಮ್ಮ ಕಣ್ಣ…

23 seconds ago

ಗರ್ಭಕೋಶ ಕ್ಯಾನ್ಸರ್‌ಗೆ ಲಸಿಕೆ ಅಸ್ತ್ರ

ಚಿರಂಜೀವಿ ಸಿ. ಹುಲ್ಲಹಳ್ಳಿ ಜಿಲ್ಲೆಯಲ್ಲಿ ಎಚ್‌ಪಿವಿ ಅಭಿಯಾನ; ಶೇ.೬೮.೮ರಷ್ಟು ಪ್ರಗತಿ ೧೫,೫೧೮ ಬಾಲಕಿಯರಿಗೆ ಲಸಿಕೆ ನೀಡುವ ಗುರಿ; ೮,೩೬೦ ಸಾಧನೆ…

5 mins ago

ಕೊಡಗಿನಲ್ಲಿ ಇಂದು ಕೈಲ್‌ಪೊಳ್ದ್ ಸಂಭ್ರಮ

ಎಸ್.ಎ. ಹುಸೇನ್ ಆಯುಧಗಳಿಗೆ ವಿಶೇಷ ಪೂಜೆ; ಜಿಲ್ಲೆಯಾದ್ಯಂತ ಸಂಭ್ರಮದ ಹಬ್ಬದಾಚರಣೆಗೆ ಸಿದ್ಧತೆ ಮಡಿಕೇರಿ: ಕೊಡಗಿನ ವಿಶಿಷ್ಟ ಸಂಸ್ಕೃತಿ ಹಾಗೂ ಪರಂಪರೆಯ…

11 mins ago

ಬೈಕ್ ನಿಲ್ದಾಣವಾಗಿ ಮಾರ್ಪಟ್ಟ ಬಸ್ ನಿಲ್ದಾಣ!

ಮಂಜು ಕೋಟೆ ಕೋಟೆ: ಬಸ್ ನಿಲ್ದಾಣದಲ್ಲಿ ದೊರೆಯದ ಶುದ್ಧ ಕುಡಿಯುವ ನೀರು, ಪ್ರಯಾಣಿಕರಿಗೆ ಸಮಸ್ಯೆ  ಎಚ್.ಡಿ.ಕೋಟೆ: ಪಟ್ಟಣದ ಕೆಎಸ್‌ಆರ್‌ಟಿಸಿ ಬಸ್…

16 mins ago

ವರ್ಷಾಂತ್ಯಕ್ಕೆ ಮೈಸೂರಿನಲ್ಲಿ ವಿಟಿಎಂಎಸ್ ವ್ಯವಸ್ಥೆ ಜಾರಿ

ಕೆ.ಬಿ.ರಮೇಶನಾಯಕ ಕೆಎಸ್‌ಆರ್‌ಟಿಸಿ ಬಸ್ಗಳಲ್ಲೂ ಬಿಎಂಟಿಸಿ ಮಾದರಿ ತಂತ್ರಾಂಶ ಅಳವಡಿಕೆ ೨೦ ನುರಿತ ತಂತ್ರಜ್ಞರಿಂದ ನಗರದಲ್ಲಿ ಸರ್ವೆ ಕಾರ್ಯ ಪ್ರಾರಂಭ ೮,೦೦೦…

21 mins ago