ಮೈಸೂರು

ಸಚಿವ ಮಹದೇವಪ್ಪ ದಲಿತ ವಿರೋಧಿ ಅಲ್ಲ

ತಿ.ನರಸೀಪುರ: ಸಾಮಾಜಿಕ ಜಾಲತಾಣ, ವಾಟ್ಸಾಪ್‌ಗಳಲ್ಲಿ ಸಚಿವ ಎಚ್. ಸಿ.ಮಹದೇವಪ್ಪ ದಲಿತ ವಿರೋಧಿ ಎಂದು ಕೆಲ ಸಂಘಟನೆ ಮುಖಂಡರು ಆಪಾದನೆ ಮಾಡುತ್ತಿದ್ದು, ವಾಸ್ತವವಾಗಿ ಸಚಿವ ಮಹದೇವಪ್ಪ ದಲಿತ ವಿರೋಧಿ ಅಲ್ಲ ಎಂದು ದಲಿತ ಸಂಘರ್ಷ ಸಮಿತಿಯ ರಾಜ್ಯ ಸಮಿತಿ ಸದಸ್ಯ ಗೋವಿಂದರಾಜು ಹೇಳಿದರು.

ಪಟ್ಟಣದ ಕಬಿನಿ ಅತಿಥಿ ಗೃಹದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಕೇವಲ ಒಂದು ಸಣ್ಣ ಘಟನೆಯನ್ನು ಗಮನದಲ್ಲಿಟ್ಟುಕೊಂಡು ಅವರನ್ನು ದಲಿತ ವಿರೋಧಿ ಎಂದು ಬಿಂಬಿಸುವುದು ಸಮಂಜಸವಲ್ಲ. ದಲಿತ ಸಮುದಾಯದ ವಿಚಾರ ಬಂದಾಗ ಯಾವುದೇ ಮರ್ಜಿಗೆ ಒಳಗಾಗದೆ ಸ್ವತಂತ್ರ ಹೇಳಿಕೆ ನೀಡುವ ಏಕೈಕ ವ್ಯಕ್ತಿ ಮಹದೇವಪ್ಪ ಎಂದರು.

ಅಲ್ಲದೆ ರಾಜ್ಯದಲ್ಲಿ ಸಂವಿಧಾನ ಪೀಠಿಕೆ ಪಠಣ, ಅಂತಾರಾಷ್ಟ್ರೀಯ ಸಂವಿಧಾನ ದಿನಾಚರಣೆ, ದೆಹಲಿ ಮಾದರಿಯಲ್ಲಿ ಕರ್ನಾಟಕ ರಾಜ್ಯದ ಶಕ್ತಿ ಕೇಂದ್ರದ ಮುಂದೆ ಡಾ. ಅಂಬೇಡ್ಕರ್ ಪುತ್ಥಳಿ ನಿರ್ಮಾಣದ ಸಂಕಲ್ಪ ಮತ್ತು ದೇಶದಲ್ಲಿ ದಲಿತ ಮಕ್ಕಳು ಐಎಎಸ್, ಐಪಿಎಸ್ ಮತ್ತು ಐಆರ್‌ಎಸ್ ಪರೀಕ್ಷೆಗಳಲ್ಲಿ ಉತ್ತಮ ಸಾಧನೆ ಮಾಡಲು ದಲಿತರಿಗಾಗಿ ತರಬೇತಿ ಕೇಂದ್ರ ಸ್ಥಾಪನೆಗೆ ಯೋಜನೆ ಇದು ಅವರ ದಲಿತ ಪರ ಕಾಳಜಿಯೇ ಹೊರೆತು ವಿರೋಧಿತನವಲ್ಲ ಎಂದರು.

ಮೈಸೂರು ನಗರದ ಅಂಬೇಡ್ಕರ್ ಭವನ ನಿರ್ಮಾಣಕ್ಕೆ 23.75ಕೋಟಿ ಅನುದಾನ, ರಾಜ್ಯದಲ್ಲಿ ಹೆಚ್ಚುತ್ತಿರುವ ದೌರ್ಜನ್ಯ ತಡೆಗಾಗಿ 33 ದಲಿತ ಪೊಲೀಸ್ ಠಾಣೆಗಳ ನಿರ್ಮಾಣಕ್ಕೆ ಕಾಳಜಿ ವಹಿಸಿರುವ ಸಚಿವ ಮಹದೇವಪ್ಪ ಅವರನ್ನು ವಾಟ್ಸಾಪ್ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ವೈಯುಕ್ತಿಕ ನಿಂದನೆ ಮತ್ತು ತೇಜೋವಧೆ ಮಾಡುತ್ತಿರುವುದು ಖಂಡನೀಯ ಎಂದರು.

ಸುದ್ದಿಗೋಷ್ಠಿಯಲ್ಲಿ ದಸಂಸ ಜಿಲ್ಲಾ ಸಂಚಾಲಕರಾದ ಯರಗನಹಳ್ಳಿ ಸುರೇಶ್, ಮಲ್ಲೇಶ್ ಚುಂಚನಹಳ್ಳಿ, ಕೃಷ್ಣ ಕೊಳಗಟ್ಟ, ಪುಟ್ಟಸ್ವಾಮಿ ದೇವರಸನಹಳ್ಳಿ ಇತರರು ಹಾಜರಿದ್ದರು.

AddThis Website Tools
ಆಂದೋಲನ ಡೆಸ್ಕ್

Recent Posts

IPL 2025 | ಕೋಲ್ಕತ್ತಗೆ 80 ರನ್‌ಗಳ ಜಯ ; ಸನ್‌ರೈಸರ್ಸ್‌ಗೆ ಹೀನಾಯ ಸೋಲುIPL 2025 | ಕೋಲ್ಕತ್ತಗೆ 80 ರನ್‌ಗಳ ಜಯ ; ಸನ್‌ರೈಸರ್ಸ್‌ಗೆ ಹೀನಾಯ ಸೋಲು

IPL 2025 | ಕೋಲ್ಕತ್ತಗೆ 80 ರನ್‌ಗಳ ಜಯ ; ಸನ್‌ರೈಸರ್ಸ್‌ಗೆ ಹೀನಾಯ ಸೋಲು

ಕೋಲ್ಕತ್ತಾ: ರಘುವಂಶಿ, ವೆಂಕಟೇಶ್‌ ಅಯ್ಯರ್‌ ಅವರ ಅಮೋಘ ಬ್ಯಾಟಿಂಗ್‌, ಅರೋರಾ ಹಾಗೂ ವರುಣ್‌ ಚಕ್ರವರ್ತಿ ಅವರ ಮಾರಕ ದಾಳಿಯ ನೆರವಿನಿಂದ…

4 hours ago
ಬ್ಯಾಂಕಾಕ್‌ | ಭೂಕಂಪ: 3,000 ದಾಟಿದ ಮೃತರ ಸಂಖ್ಯೆಬ್ಯಾಂಕಾಕ್‌ | ಭೂಕಂಪ: 3,000 ದಾಟಿದ ಮೃತರ ಸಂಖ್ಯೆ

ಬ್ಯಾಂಕಾಕ್‌ | ಭೂಕಂಪ: 3,000 ದಾಟಿದ ಮೃತರ ಸಂಖ್ಯೆ

ಬ್ಯಾಂಕಾಕ್: ಮ್ಯಾನ್ಮಾರ್‌ನಲ್ಲಿ ಸಂಭವಿಸಿದ ಭೀಕರ ಭೂಕಂಪದಲ್ಲಿ ಮೃತಪಟ್ಟವರ ಸಂಖ್ಯೆ 3,000 ದಾಟಿದೆ. ಇನ್ನೂ 4,714 ಜನರು ಗಾಯಗೊಂಡಿದ್ದಾರೆ ಮತ್ತು 341…

4 hours ago
ವಕ್ಫ್ ತಿದ್ದುಪಡಿ ಮಸೂದೆಗೆ ಬೆಂಬಲ ವ್ಯಕ್ತಪಡಿಸಿದ ಎಚ್.ಡಿ. ದೇವೇಗೌಡವಕ್ಫ್ ತಿದ್ದುಪಡಿ ಮಸೂದೆಗೆ ಬೆಂಬಲ ವ್ಯಕ್ತಪಡಿಸಿದ ಎಚ್.ಡಿ. ದೇವೇಗೌಡ

ವಕ್ಫ್ ತಿದ್ದುಪಡಿ ಮಸೂದೆಗೆ ಬೆಂಬಲ ವ್ಯಕ್ತಪಡಿಸಿದ ಎಚ್.ಡಿ. ದೇವೇಗೌಡ

ವಿಧೇಯಕ ತರುವ ಮೂಲಕ ಮೋದಿ ಅವರು ವಕ್ಫ್ ನ ₹1.2 ಲಕ್ಷ ಕೋಟಿ ಬೆಲೆಯ ಆಸ್ತಿ ರಕ್ಷಣೆ ಮಾಡಿದ್ದಾರೆ ನಾವು…

5 hours ago

ಮಂಡ್ಯ | ನಿರ್ಮಿತಿ ಕೇಂದ್ರದಲ್ಲಿ ಭಾರಿ ಭ್ರಷ್ಟಾಚಾರ ; ತನಿಖೆಗೆ ಆಗ್ರಹ

ಮಂಡ್ಯ: ಜಿಲ್ಲೆಯಲ್ಲಿ ನಿರ್ಮಿತಿ ಕೇಂದ್ರದ ಅಧಿಕಾರಿಗಳಿಂದ ವ್ಯಾಪವ ಭ್ರಷ್ಟಾಚಾರ ನಡೆದಿದ್ದು, ಅಕ್ರಮದಲ್ಲಿ ಭಾಗಿಯಾಗಿರುವವರ ವಿರುದ್ಧ ಶಿಸ್ತುಕ್ರಮ ಕೈಗೊಂಡು ಕ್ರಿಮಿನಲ್ ಮೊಕದ್ದಮೆ…

5 hours ago

ಮೈಸೂರು | ವಿಚ್ಛೇದನವಾಗಿದೆ ಎಂದು ನಂಬಿಸಿ ಮಹಿಳೆಗೆ ವಂಚನೆ

ಮೈಸೂರು: ಪತ್ನಿ ಜೊತೆಯಲ್ಲಿದ್ದರೂ ಕೂಡ ತನಗೆ ವಿಚ್ಛೇದನವಾಗಿದೆ ಎಂದು ನಂಬಿಸಿ ಮಹಿಳೆಯೊಬ್ಬರನ್ನು ವಿವಾಹವಾಗಿದ್ದಲ್ಲದೆ, ಆಕೆಯಿಂದ 50 ಲಕ್ಷ ರೂ. ಹಣವನ್ನು…

6 hours ago

ರಸ್ತೆ ಅಪಘಾತ : ಸ್ಕೂಟರ್ ಸವಾರ ಸಾವು

ಮೈಸೂರು: ಕೆಎಸ್‌ಆರ್‌ಟಿಸಿ ಬಸ್ ಹಾಗೂ ದ್ವಿಚಕ್ರ ವಾಹನದ ನಡುವೆ ಸಂಭವಿಸಿದ ಅಪಘಾತದಲ್ಲಿ ಸ್ಕೂಟರ್ ಸವಾರ ಸಾವನ್ನಪ್ಪಿರುವ ಘಟನೆ ನಗರದಲ್ಲಿ ನಡೆದಿದೆ.…

6 hours ago