ಮೈಸೂರು

ಸುತ್ತೂರು ಮಠಕ್ಕೆ ಜಗ್ಗಿ ವಾಸುದೇವ್‌ ಭೇಟಿ

ಮೈಸೂರು : ಚಾಮುಂಡಿಬೆಟ್ಟದ ತಪ್ಪಲಿನ ಸುತ್ತೂರುಮಠಕ್ಕೆ ಈಶಾ ಫೌಂಡೇಶನ್‌ನ ಸ್ಥಾಪಕ ಜಗ್ಗಿ ವಾಸುದೇವ್ ಅವರು ಭಾನುವಾರ ಸಂಜೆ ಭೇಟಿ ನೀಡಿದರು.

ಬೆಂಗಳೂರಿನಿಂದ ಮಠಕ್ಕೆ ಆಗಮಿಸಿದ ಅವರನ್ನು ಸಾಂಪ್ರದಾಯಿಕವಾಗಿ ಮಂತ್ರಘೋಷಗಳೊಂದಿಗೆ ಬರಮಾಡಿಕೊಳ್ಳಲಾಯಿತು. ಜೆಎಸ್‌ಎಸ್ ಮಹಾವಿದ್ಯಾಪೀಠದ ಮುಖ್ಯ ಕಾರ್ಯ ನಿರ್ವಾಹಕ ಕಾರ್ಯದರ್ಶಿ ಡಾ.ಸಿ.ಜಿ. ಬೆಟಸೂರಮಠ, ಕಾರ್ಯದರ್ಶಿ ಮಂಜುನಾಥ್‌ ಅವರು ಮೈಸೂರು ಮಲ್ಲಿಗೆ ಹಾರ ಹಾಕಿ ಸ್ವಾಗತಿಸಿದರು.

ನಂತರ, ಸುತ್ತೂರುಶ್ರೀಗಳನ್ನು ಭೇಟಿ ಮಾಡಿದರು. ಜಗ್ಗಿ ವಾಸುದೇವ್ ಅವರಿಗೆ ಶಾಲು ಹೊದಿಸಿ ಫಲತಾಂಬೂಲ ನೀಡಿದರು. ಬಳಿಕ ಉಭಯ ಕುಶಲೋಪರಿ ನಡೆಯಿತು. ಅಪರ ಜಿಲ್ಲಾಧಿಕಾರಿ ಡಾ.ಪಿ.ಶಿವರಾಜು ಮತ್ತಿತರರು ಹಾಜರಿದ್ದರು. ಬಳಿಕ ಮಾತನಾಡಿದ ಜಗ್ಗಿವಾಸುದೇವ್, ಇದೊಂದು ಸೌಜನ್ಯಯುತ ಭೇಟಿಯಾಗಿದೆ.

ಎರಡು ವರ್ಷಗಳಿಂದ ಸುತ್ತೂರು ಮಠಕ್ಕೆ ಬರಲು ಸಾಧ್ಯವಾಗಿರಲಿಲ್ಲ. ಹೃದಯಘಾತಕ್ಕೆ ಒಳಗಾಗಿ ಹೊಸದಿಲ್ಲಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಶ್ರೀಗಳು ಬಂದು ಆರೋಗ್ಯ ವಿಚಾರಿಸಿದ್ದರು. ಅಲ್ಲಿಂದ ಬರಬೇಕೆಂದು ಅಂದು ಕೊಂಡರೂ ನಾನಾ ಕಾರಣಕ್ಕೆ ಬಂದಿರಲಿಲ್ಲ. ಈಗ ಬಂದಿರುವೆ ಎಂದರು.

ಆಂದೋಲನ ಡೆಸ್ಕ್

Recent Posts

ಕೊಪ್ಪಳದ ಗವಿಸಿದ್ದೇಶ್ವರ ಸ್ವಾಮಿಗಳಿಂದ ಈ ಬಾರಿ ದಸರಾ ಉದ್ಘಾಟನೆ

ಬೆಂಗಳೂರು : ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ-2026ಕ್ಕೆ ಈ ಬಾರಿ ಕೊಪ್ಪಳದ ಶ್ರೀ ಗವಿಸಿದ್ದೇಶ್ವರ ಮಹಾಸಂಸ್ಥಾನ ಮಠದ ಪೀಠಾಧಿಪತಿಗಳಾದ ಶ್ರೀ…

9 hours ago

ಕಾಡಾನೆ ದಾಳಿಗೆ 75 ತೆಂಗಿನ ಮರ ನಾಶ: ಬೆಳೆ ಪರಿಹಾರಕ್ಕೆ ರೈತ ಕುಟುಂಬದ ಮನವಿ

ಹನೂರು: ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪಾಳ್ಯ ಗ್ರಾಮದಲ್ಲಿ ಕಾಡಾನೆಗಳ ನಿರಂತರ ದಾಳಿಯಿಂದ ಕಷ್ಟಪಟ್ಟು ಬೆಳೆದಿದ್ದ ತೆಂಗಿನ ಮರ ಸಂಪೂರ್ಣ ನಾಶವಾಗಿರುವುದರಿಂದ…

15 hours ago

ಅ.29ರಿಂದ ನ.11ರವರೆಗೆ ಹಾಸನಾಂಬಾ ಜಾತ್ರಾ ಮಹೋತ್ಸವ

ಹಾಸನ: ಹಾಸನದ ಅಧಿದೇವತೆ ಹಾಸನಾಂಬ ದೇವಿಯ ಜಾತ್ರಾ ಮಹೋತ್ಸವಕ್ಕೆ ದಿನಾಂಕ ನಿಗದಿಯಾಗಿದೆ. ಈ ಕುರಿತು ಹಾಸನ ಜಿಲ್ಲಾಧಿಕಾರಿ ಕೆ.ಎಸ್.ಲತಾಕುಮಾರಿ ಮಾಹಿತಿ…

16 hours ago

ಕರ್ನಾಟಕಕ್ಕೆ ಮತ್ತೆ ಕಾವೇರಿ ಶಾಕ್ ನೀಡಿದ ಸುಪ್ರೀಂಕೋರ್ಟ್‌

ನವದೆಹಲಿ: ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ಕರ್ನಾಟಕಕ್ಕೆ ಮತ್ತೊಂದು ಹಿನ್ನಡೆಯಾಗಿದ್ದು, CWMA ನೀಡಿರುವ ಆದೇಶವನ್ನು ಪಾಲಿಸುವಂತೆ ಸುಪ್ರೀಂಕೋರ್ಟ್‌ ಸೂಚನೆ ನೀಡಿದೆ.…

17 hours ago

ಕೋಟೆ ಟಿಎಪಿಸಿಎಂಎಸ್: ನಾಳೆ ಮೈತ್ರಿ ಪಕ್ಷದ 8 ಸದಸ್ಯರ ರಾಜೀನಾಮೆ ಭವಿಷ್ಯ ನಿರ್ಧಾರ

ಮಂಜು ಕೋಟೆ ಎಚ್.ಡಿ.ಕೋಟೆ: ತಾಲ್ಲೂಕು ಟಿಎಪಿಸಿಎಂಎಸ್‌ನ ಎಂಟು ಜನ ನಿರ್ದೇಶಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ ಅಂಗೀಕಾರ ಮಾಡಲು ಮತ್ತು…

17 hours ago

ಓದುಗರ ಪತ್ರ: ಸಿಗಲಿ ನ್ಯಾಯ!

ಸಿಗಲಿ ನ್ಯಾಯ! ಮರುಜೀವ ಬಂದಿದೆ ಹೊಸಬೆಳಕು ಮೂಡಿದೆ ಸುಪ್ರೀಂಕೋರ್ಟಿನ ಸೌಜನ್ಯಾ ಪ್ರಕರಣದ ಮರುತನಿಖೆಯ ಆದೇಶ! ಸಲಾಂ ಸುಪ್ರೀಂಗೆ! ನಡೆಯಲಿ ತನಿಖೆ…

23 hours ago