ಮೈಸೂರು: ಜನವರಿ 22ರಂದು ನಡೆಯಲಿರುವ ಶ್ರೀರಾಮನ ಭವ್ಯ ರಾಮಮಂದಿರ ಉದ್ಘಾಟನಾ ಸಮಾರಂಭಕ್ಕೆ ಕ್ಷಣಗಣನೆ ಶುರುವಾಗಿದೆ. ಮೈಸೂರಿನ ವಾಸವಿ ಟ್ರಸ್ಟ್ ವತಿಯಿಂದ ನಾಳೆ (ಸೋಮವಾರ) ಮೈಸೂರಿನಲ್ಲಿ ಶ್ರೀರಾಮನ ಮೂರ್ತಿಗೆ ಸಪ್ತ ನದಿಗಳ ನೀರಿನಿಂದ ಜಲಾಭಿಷೇಕ ನೆರವೇರಿಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಶ್ರೀರಾಮನ ಮೂರ್ತಿಯ ಅಭಿಷೇಕಕ್ಕೆ ಕಾವೇರಿ, ಕಪಿಲಾ, ನರ್ಮಾದಾ, ಸಿಂಧು, ಗಂಗಾ, ಸರಯೂ, ಯುಮುನಾ ಸಪ್ತ ನದಿಗಳ ನೀರನ್ನು ಸಂಗ್ರಹಿಸಿದ್ದು, ವಾಸವಿ ಟ್ರಸ್ಟ್ ಜಲಾಭಿಷೇಕಕ್ಕೆ ಸಕಲ ವ್ಯವಸ್ಥೆ ಮಾಡಿಕೊಂಡಿದ್ದಾರೆ.
ಜನವರಿ 22ರಂದು ಅಯೋಧ್ಯೆಯಲ್ಲಿ ರಾಮಲಲ್ಲಾ ಪ್ರಾಣಪ್ರತಿಷ್ಠೆ ನೆರವೇರಲಿದೆ. ಅದೇ ಸಮಯಕ್ಕೆ ಮೈಸೂರಿನ ದೇವಾಲಯದಲ್ಲೂ ಪ್ರಭು ಶ್ರೀರಾಮನಿಗೆ ಜಲಾಭೀಷೇಕ ನೆರವೇರಿಸಲಾಗುತ್ತದೆ. ಇದರೊಂದಿಗೆ ಪಂಚಾಮೃತ ಅಭಿಷೇಕ, 1,08,000 ತುಳಸಿ ದಳದಿಂದ ತೆಗೆದಿರುವ ರಸದಿಂದ ವಿಶೇಷ ಅಭಿಷೇಕವೂ ನೆರವೇರಲಿದೆ.
ಸೋಮವಾರ ಸಂಜೆ 6 ರಿಂದ ರಾತ್ರಿ 9 ಗಂಟೆವರೆಗೆ ಮೈಸೂರು ನಗರದ ಆಲಮ್ಮ ಛತ್ರದಲ್ಲಿ 102 ಬಗೆಯ ಆರತಿ ನೆರವೇರಿಸಲಾಗುತ್ತದೆ. ಅಯೋಧ್ಯೆ ಮತ್ತು ವಾರಣಾಸಿಯಿಂದ 102 ಬಗೆಯ ಆರತಿಗಳನ್ನು ತರಲಾಗಿದೆ. ಜೊತೆಗೆ ರಾಜ್ಯದಲ್ಲಿ ಬೆಳೆದಿರುವ ವಿಶೇಷ ಹೂಗಳಿಂದ ರಾಮನ ಅಲಂಕಾರವೂ ನಡೆಯಲಿದೆ ಎಂದು ವಾಸವಿ ಟ್ರಸ್ಟ್ ಸಿಬ್ಬಂದಿ ಖಾಸಗಿ ವಾಹಿನಿಗೆ ತಿಳಿಸಿದ್ದಾರೆ ಎಂದು ವರದಿಯಾಗಿದೆ.
ಮೈಸೂರು ಮಹಾ ನಗರಪಾಲಿಕೆ ವತಿಯಿಂದ ಕಲಾಮಂದಿರದಲ್ಲಿ ಆಯೋಜಿಸಿದ್ದ ಪೌರ ಕಾರ್ಮಿಕರ ದಿನಾಚರಣೆ ಕಾರ್ಯಕ್ರಮದಲ್ಲಿ, ಮೈಸೂರು ಸ್ವಚ್ಛ ನಗರಿಯಾಗಲು ಪೌರ ಕಾರ್ಮಿಕರ…
ಸೆಪ್ಟೆಂಬರ್ ಕೊನೆಯಲ್ಲಿ ಆರ್ಥಿಕ ವರ್ಷದ ಅರ್ಧವಾರ್ಷಿಕ ಲೆಕ್ಕಪತ್ರ ಮುಕ್ತಾಯಗೊಳಿಸುವ ಅತ್ಯಂತ ನಿರ್ಣಾಯಕ ಸಮಯದಲ್ಲಿ ಬ್ಯಾಂಕ್ ಒಕ್ಕೂಟಗಳು (ಯುಎಫ್ಬಿ) ಮೂರು ದಿನಗಳ…
ವೈಡ್ ಆಂಗಲ್: ಬಾ.ನಾ.ಸುಬ್ರಹ್ಮಣ್ಯ ಅವರ ವಾರದ ಅಂಕಣ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ದೆಹಲಿ ಸಹಜ ವಿಳಾಸವಾಗಿತ್ತು. ದೇಶದ…
ಕೆ.ಬಿ.ರಮೇಶನಾಯಕ ಕರ್ನಾಟಕ ರಾಜ್ಯದ ಗತವೈಭವ, ದೇಶದ ಅಖಂಡತೆ ಬಿಂಬಿಸುವ ಮಾದರಿಗಳ ಸವಾರಿ ೩೧ ಜಿಲ್ಲೆಗಳ ಬದಲಿಗೆ ಆಯ್ದ ೧೫ ಜಿಲ್ಲೆಗಳ…
ಬೆಂಗಳೂರು : ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ-2026ಕ್ಕೆ ಈ ಬಾರಿ ಕೊಪ್ಪಳದ ಶ್ರೀ ಗವಿಸಿದ್ದೇಶ್ವರ ಮಹಾಸಂಸ್ಥಾನ ಮಠದ ಪೀಠಾಧಿಪತಿಗಳಾದ ಶ್ರೀ…