heavy rain at hanasooru
ಹುಣಸೂರು: ಮೈಸೂರು ಜಿಲ್ಲೆ ಹುಣಸೂರಿನಲ್ಲಿ ಕಳೆದ ರಾತ್ರಿ ಧಾರಾಕಾರ ಮಳೆ ಸುರಿದಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿತ್ತು.
ಕಳೆದ ತಡರಾತ್ರಿ ಸುರಿದ ಧಾರಾಕಾರ ಮಳೆಯಿಂದ ಹುಣಸೂರಿನ ನಂದಿನಿ ಬಡಾವಣೆಯಲ್ಲಿ ಮನೆಗಳಿಗೆ ಮಳೆ ನೀರು ನುಗ್ಗಿದ ಪರಿಣಾಮ ರಾತ್ರಿಯಿಡೀ ಜನರು ಪರದಾಟ ನಡೆಸುವ ಪರಿಸ್ಥಿತಿ ನಿರ್ಮಾಣವಾಗಿತ್ತು.
ಒಳಚರಂಡಿ ನೀರು ಹಾಗೂ ಮಳೆ ನೀರು ಎರಡೂ ಕೂಡ ಮನೆಗಳಿಗೆ ನುಗ್ಗಿದ ಪರಿಣಾಮ ನಿವಾಸಿಗಳು ಮೂಗುಮುಚ್ಚಿಕೊಂಡು ಕಾಲ ಕಳೆಯುವ ಪರಿಸ್ಥಿತಿ ನಿರ್ಮಾಣವಾಗಿತ್ತು.
ಇದನ್ನೂ ಓದಿ:- ಇಂಗ್ಲಿಷ್ ಕಾಲುವೆ ಈಜಿದ ಅವಳಿ ಮಕ್ಕಳ ತಾಯಿ ತನ್ವಿ
ವಿಷಯ ತಿಳಿದು ಇಂದು ಬೆಳಿಗ್ಗೆ ಶಾಸಕ ಜಿ.ಡಿ.ಹರೀಶ್ ಗೌಡ ಅವರು, ಸ್ಥಳಕ್ಕೆ ಭೇಟಿ ನೀಡಿ ನಿವಾಸಿಗಳ ಸಮಸ್ಯೆಗಳನ್ನು ಆಲಿಸಿ, ಒಳಚರಂಡಿ ಹಾಗೂ ರಸ್ತೆ ದುರಸ್ತಿ ಮಾಡುವಂತೆ ನಗರಸಭೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ರಮಾನಂದ ಶರ್ಮ ಯಾವುದೋ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ಟೆಕ್ಕಿಯೊಬ್ಬರು ವೈದ್ಯರ ಬಳಿ ಹೋಗಿದ್ದರಂತೆ. ವೈದ್ಯರು ಅವರನ್ನು ಸ್ಥೂಲವಾಗಿ ಪರೀಕ್ಷಿಸಿ, ಮೂರು…
ತಿ.ನರಸೀಪುರ: ಪಟ್ಟಣದ ಕೆಎಸ್‌ಐಸಿ ಕಾರ್ಖಾನೆ ಆವರಣದಲ್ಲಿ ಕ್ರೀಡಾಂಗಣ ನಿರ್ಮಾಣ ವಿರೋಽಸಿ ಕಳೆದ ೧೫ ದಿನಗಳಿಂದ ವಿವಿಧ ಸಂಘಟನೆಗಳವರು ನಡೆಸುತ್ತಿದ್ದ ಪ್ರತಿಭಟನೆ…
ನವೀನ್ ಡಿಸೋಜ ಕೊಡಗು ಜಿಲ್ಲೆಯಲ್ಲಿ ಅಗತ್ಯ ಸಿದ್ಧತೆ; ಪರೀಕ್ಷೆಗೆ ನೋಂದಾಯಿಸಿಕೊಂಡಿರುವ ೬,೧೮೩ ವಿದ್ಯಾರ್ಥಿಗಳು ಮಡಿಕೇರಿ: ಮಾ.೧೮ರಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಆರಂಭವಾಗ…
ನವೀನ್ ಕುಮಾರ್ ಕ್ವಿಂಟಾಲ್ ರಾಗಿಗೆ ೪ ಕೆಜಿ ಕಳೆಯುತ್ತಿರುವುದರಿಂದ ನಷ್ಟ ಎಂಬುದು ರೈತರ ಅಳಲು ಪಿರಿಯಾಪಟ್ಟಣ: ರಾಗಿ ಖರೀದಿ ಕೇಂದ್ರಗಳಲ್ಲಿ…
ಗೋಲ್ಡ್ ಕೋಸ್ಟ್ (ಆಸ್ಟ್ರೇಲಿಯಾ) : ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಏಷ್ಯಾ ಮಹಿಳಾ ಫುಟ್ಬಾಲ್ ಕಪ್ 2026ನಲ್ಲಿ ಭಾಗವಹಿಸಿದ್ದ ಇರಾನ್ ರಾಷ್ಟ್ರೀಯ ಮಹಿಳಾ…
ಹೊಸದಿಲ್ಲಿ : ಇರಾನ್ ಮೇಲಿನ ಅಮೆರಿಕಾ-ಇಸ್ರೇಲ್ ದಾಳಿಗಳು ಮತ್ತು ಇರಾನ್‌ಗೆ ಹೊಸ ಸುಪ್ರೀಂ ಲೀಡರ್ ನೇಮಕದ ನಂತರ ಮಧ್ಯಪ್ರಾಚ್ಯದಲ್ಲಿ ತೀವ್ರ…