ಮೈಸೂರು

ಮಾಜಿ ಐಬಿ ಅಧಿಕಾರಿ ಕುಲಕರ್ಣಿ ನಿಧನ: ಇಬ್ಬರ ಬಂಧನ

ಅಕ್ರಮ ಮನೆ ನಿರ್ಮಾಣ ಪ್ರಶ್ನಿಸಿದ್ದೇ ನಿವೃತ್ತ ಐಬಿ ಅಧಿಕಾರಿಯ ಕೊಲೆಗೆ ಕಾರಣವಾಯಿತು.

ಮೈಸೂರು : ಮಾನಸಗಂಗೋತ್ರಿ ಕ್ಯಾಂಪಸ್ ನಲ್ಲಿ ಮೃತಪಟ್ಟ ಕೇಂದ್ರ ಗುಪ್ತಚರ ದಳದ ನಿವೃತ್ತ ಅಧಿಕಾರಿ ಆರ್. ಬಿ. ಕುಲಕರ್ಣಿ ಅವರ ಕೊಲೆ ಸಂಬಂಧ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಮೈಸೂರು ನಗರ ಪೊಲೀಸರು ಯಶಸ್ವಿಯಾಗಿದ್ದಾರೆ. ಮೈಸೂರಿನ ಟಿ.ಕೆ.ಲೇಔಟ್  ನಿವಾಸಿಯಾಗಿದ್ದ 83 ವರ್ಷದ ಆರ್.ಎನ್.ಕುಲಕರ್ಣಿ ಅವರ ಕೊಲೆ ಸಂಬಂಧ ಅವರ ನೆರೆಮನೆ ನಿವಾಸಿ ಮಾದಪ್ಪ ಅವರ ಕಿರಿಯ ಮಗ ಮನು (30) ಮತ್ತು ಆತನ ಸ್ನೇಹಿತ ವರುಣ್ (30) ಎಂಬಾತನನ್ನು ಬಂಧಿಸಲಾಗಿದೆ.

ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ಮಂಗಳವಾರ ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ‘ಶುಕ್ರವಾರ ಸಂಜೆ ಮಾನಸ ಗಂಗೋತ್ರಿ ಆವರಣದಲ್ಲಿ ವಾಕ್ ಮಾಡುತ್ತಿದ್ದ ಆರ್.ಎನ್.ಕುಲಕರ್ಣಿ ಅವರಿಗೆ ಉದ್ದೇಶಪೂರ್ವಕವಾಗಿ ಕಾರಿನಿಂದ ಡಿಕ್ಕಿ ಹೊಡೆಸಿ ಅಪಘಾತ ಮಾಡಲಾಗಿತ್ತು. ಇದರಿಂದ ತಲೆಗೆ ತೀವ್ರವಾಗಿ ಗಾಯಗೊಂಡು ಅವರು ಮೃತಪಟ್ಟಿದ್ದರು. ಈ ಸಂಬಂಧ ಜಯಲಕ್ಷ್ಮಿಪುರಂ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ ೩೦೨ ಅಡಿ ಪ್ರಕರಣ ದಾಖಲಾಗಿತ್ತು. ಸ್ಥಳ ಪರಿಶೀಲನೆ ಮತ್ತು ಸಿಸಿಟಿವಿ ದೃಶ್ಯಾವಳಿಗಳನ್ನು ವೀಕ್ಷಣೆ ಮಾಡಿದ ನಂತರ ಪ್ರಕರಣದ ತನಿಖೆಗೆ ಎಸಿಪಿ ಶಿವಶಂಕರ್ ಅವರ ನೇತೃತ್ವದಲ್ಲಿ 4 ತಂಡ ರಚಿಸಲಾಗಿತ್ತು’ ಎಂದರು.

‘ತನಿಖೆ ಕೈಗೊಂಡ ತಂಡಕ್ಕೆ ಮಾದಪ್ಪ ಅವರ ಕಿರಿಯ ಮಗ ಮನು ಮತ್ತು ಆತನ ಸ್ನೇಹಿತ ಸೇರಿಕೊಂಡು ಕೃತ್ಯ ಎಸಗಿರುವುದಾಗಿ ತಿಳಿದು ಬಂದ ಹಿನ್ನೆಲೆಯಲ್ಲಿ ಮನು ಅವರನ್ನು ಬಂಧಿಸಲಾಗಿದೆ. ಆತನ ಸ್ನೇಹಿತನಿಗಾಗಿ ಶೋಧ ನಡೆಯುತ್ತಿದೆ’ ಎಂದರು.
ಕಾರಣವೇನು ? : ‘ಆರ್.ಎನ್.ಕುಲಕರ್ಣಿ ಅವರ ಮನೆಯ ಪಕ್ಕದ ಜಾಗದಲ್ಲಿ ಮಾದಪ್ಪ ಅವರು ಮನೆಯನ್ನು ಕಟ್ಟಿದ್ದರು. ಮನೆಯನ್ನು ನಿರ್ಮಾಣ ಮಾಡುವ ಆರಂಭದಲ್ಲಿಯೇ ಮಾದಪ್ಪ ಕಾನೂನುಬಾಹಿರವಾಗಿ ಮನೆ ನಿರ್ಮಾಣ ಮಾಡುತ್ತಿದ್ದಾರೆ ಎಂದು ಕುಲಕರ್ಣಿ ಅವರು ಕಾನೂನು ಹೋರಾಟ ಆರಂಭಿಸಿದ್ದರು. ಈ ವಿಷಯವಾಗಿ ಇದ್ದ ವೈಮನಸ್ಸಿನಿಂದ  ಈ ಕೃತ್ಯ ಎಸಗಲಾಗಿದೆ ಎಂಬುದು ತಿಳಿದು ಬಂದಿದ್ದು, ಬೇರೆ ಕಾರಣಗಳೇನಾದರೂ ಇದೆಯೇ ಎಂಬ ಕುರಿತು ಇನ್ನು ಹೆಚ್ಚಿನ ತನಿಖೆ ಅಗತ್ಯವಿದೆ’ ಎಂದು ತಿಳಿಸಿದರು.

ಪ್ರಕರಣದ ಸವಾಲು : ‘ಪ್ರಕರಣಕ್ಕೆ ಸಂಬಂಧಪಟ್ಟಂತೆ ಅಪಘಾತ ಮಾಡಿದೆ ಎನ್ನಲಾದ ನಂಬರ್ ಪ್ಲೇಟ್ ಇಲ್ಲದ ಕಾರನ್ನು ಪತ್ತೆ ಮಾಡುವುದು ಸವಾಲಾಗಿತ್ತು. ರಘು ಎಂಬವರು ಕಾರಿನ ಮಾಲೀಕರಾಗಿದ್ದು, ಅವರು ಈ ಕಾರನ್ನು ಮಾರಲು ಮುಂದಾಗಿದ್ದರು. ಇದನ್ನು ತಿಳಿದ ಮನು ಕಾರನ್ನು ಮಾರಾಟ ಮಾಡಿಕೊಡುವುದಾಗಿ ಪಡೆದುಕೊಂಡಿದ್ದರು ಎಂಬುದಾಗಿ ತನಿಖೆ ವೇಳೆ ತಿಳಿದು ಬಂದಿದೆ’ಎಂದು ಮಾಹಿತಿ ನೀಡಿದರು.

ಕೊಲೆಗೆ ಪ್ಲಾನ್ : ‘ಘಟನೆಯಾಗುವ ಕೆಲವು ದಿನಗಳ ಮುನ್ನ ಕುಲಕರ್ಣಿ ಅವರ ದೈನಂದಿನ ಚಟುವಟಿಕೆಯ ಬಗ್ಗೆ ವಾಚ್ ಮಾಡುವ ಕೆಲಸವನ್ನು ಆರೋಪಿಗಳು ಮಾಡಿದ್ದರು. ದಿನನಿತ್ಯ ಕುಲಕರ್ಣಿ ಅವರು ವಾಕ್ ಬರುವ ಜಾಗ ಮತ್ತು ಸಮಯವನ್ನು ತಿಳಿದುಕೊಂಡಿದ್ದರು. ಶುಕ್ರವಾರ ಸಂಜೆ ಅಪಘಾತ ಮಾಡಿದ ಕಾರಿನ ಡ್ರೈವರ್ ಸೀಟಿನಲ್ಲಿ ಮನು ಇದ್ದ. ಅವನ ಹೊರತಾಗಿ ಕಾರಿನಲ್ಲಿ ಬೇರೆ ಯಾರೂ ಇರಲಿಲ್ಲ. ಆತನ ಸ್ನೇಹಿತ ಬೈಕ್ ನಲ್ಲಿ ವಾಚ್ ಮಾಡುತ್ತಾ ಮಾಹಿತಿ ನೀಡುತ್ತಿದ್ದ ಎಂಬುದು ತನಿಖೆ ಮತ್ತು ಸಿಸಿ ಟಿವಿಯ ದೃಶ್ಯಾವಳಿಗಳಿಂದ ತಿಳಿದು ಬಂದಿದೆ’ ಎಂದು ವಿವರಿಸಿದರು.

ಎಸಿಪಿ ಶಿವಶಂಕರ್ ಅವರ ನೇತೃತ್ವದಲ್ಲಿ ನಾಲ್ಕು ತಂಡಗಳು ಕಾರ್ಯಾಚರಣೆ ನಡೆಸಿದ್ದು, ಇದಕ್ಕೆ ಸಿಸಿಬಿ ಮತ್ತು ತಾಂತ್ರಿಕ ವಿಭಾಗ ಸಹಕರಿಸಿದೆ ಎಂದರು. ಶೀಘ್ರ ಕಾರ್ಯಾಚರಣೆಯನ್ನು ಮೆಚ್ಚಿ ಎಸಿಪಿ ಶಿವಶಂಕರ್ ಅವರ ನೇತೃತ್ವದಲ್ಲಿ ತಂಡಕ್ಕೆ 50 ಸಾವಿರ ರೂ.ಬಹುಮಾನ ನೀಡಲಾಗಿದೆ.

ಸುದ್ದಿಗೋಷ್ಠಿ ಮುಗಿಯುತ್ತಿದ್ದಂತೆ ಸಿಕ್ಕ ಮತ್ತೊಬ್ಬ ಆರೋಪಿ
ಸುದ್ಧಿಗೋಷ್ಠಿ ನಡೆಸಿ ಮಾಹಿತಿ ನೀಡಿದ ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ಆರೋಪಿ ಮನು ಎಂಬಾತನನ್ನು ಮಾತ್ರ ಬಂಧಿಸಲಾಗಿದ್ದು, ಆತನ ಸ್ನೇಹಿತನಿಗೆ ಶೋಧ ನಡೆಯುತ್ತಿದೆ ಎಂದು ಹೇಳಿದ್ದರು. ಆದರೆ, ಸುದ್ದಿಗೋಷ್ಠಿ ಮುಗಿದು ಆಯುಕ್ತರು ಹೋಗುತ್ತಿದ್ದಂತೆ ತನಿಖಾ ತಂಡ ಮತ್ತೊಬ್ಬ ಆರೋಪಿ ವರುಣ್ ಎಂಬಾತನನ್ನು ಬಂಧಿಸಿದೆ ಎಂಬ ಮಾಹಿತಿ ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ.

andolana

Recent Posts

ಭಾರೀ ಮಳೆಗೆ ಕೊಚ್ಚಿ ಹೋದ ಚೆಕ್ ಡ್ಯಾಂ: 15 ಅಡಿಗೂ ಹೆಚ್ಚು ಪ್ರವಾಹ

ಹನೂರು: ತಾಲ್ಲೂಕಿನ ಶಾಗ್ಯ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಲಾಜರ್ ದೊಡ್ಡಿ ಗ್ರಾಮದಲ್ಲಿ ಒಡಿಪಿ ಸಂಸ್ಥೆಯಿಂದ ನಿರ್ಮಾಣ ಮಾಡಿದ್ದ ಚೆಕ್ ಡ್ಯಾಂ…

15 hours ago

ಭಾರೀ ಮಳೆಗೆ ಮನೆ ಕುಸಿತ: ಲಕ್ಷಾಂತರ ರೂ. ನಷ್ಟ

ಹನೂರು: ತಾಲ್ಲೂಕಿನ ಎಲ್ಲೇಮಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವೈಶಂಪಾಳ್ಯ ಗ್ರಾಮದಲ್ಲಿ ಭಾನುವಾರ ರಾತ್ರಿ ಸುರಿದ ಭಾರೀ ಮಳೆಗೆ ಮನೆ ಸಂಪೂರ್ಣ…

16 hours ago

ಧರ್ಮಸ್ಥಳ ಸೌಜನ್ಯ ಪ್ರಕರಣ: ಮರು ತನಿಖೆಗೆ ಸುಪ್ರೀಂಕೋರ್ಟ್ ಮಹತ್ವದ ಆದೇಶ

ನವದೆಹಲಿ: ಧರ್ಮಸ್ಥಳ ಸೌಜನ್ಯ ಪ್ರಕರಣದ ಮರು ತನಿಖೆಗೆ ಸುಪ್ರೀಂ ಕೋರ್ಟ್ ಮಹತ್ವದ ಆದೇಶ ನೀಡಿದೆ. ನವದೆಹಲಿಯಲ್ಲಿ ನಡೆದ ವಿಚಾರಣೆಯಲ್ಲಿ, ಹಲವು…

17 hours ago

ಕಾಡಾನೆ ದಾಳಿ: ವ್ಯಕ್ತಿ ಸಾವು

ಸರಗೂರು: ಆಸ್ಪತ್ರೆಗೆ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿ ನಡೆಸಿದ ಪರಿಣಾಮ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಸರಗೂರು ತಾಲ್ಲೂಕಿನ ಕಾಡಗೆರೆ ಗ್ರಾಮದ…

19 hours ago

ಗಣೇಶ ವಿಸರ್ಜನೆ ಮೆರವಣಿಗೆ ರಾಜಕೀಯ ದಾಳವಾಗದಿರಲಿ…

ಬ್ರಿಟೀಷರ ವಿರುದ್ಧ ಸಮಾಜವನ್ನು ಅದರಲ್ಲೂ ಯುವಜನರನ್ನು ಸಂಘಟಿಸಿ, ದೇಶಭಕ್ತಿಯನ್ನು ಜಾಗೃತಿಗೊಳಿಸುವ ಮೂಲಕ ಅವರನ್ನು ಸ್ವಾತಂತ್ರ್ಯಸಂಗ್ರಾಮಕ್ಕೆ ಸಜ್ಜುಗೊಳಿಸುವ ಉದ್ದೇಶದಿಂದ ಆರಂಭವಾದ ಸಾರ್ವಜನಿಕ…

23 hours ago

ಕಾಂಗ್ರೆಸ್‌ನಲ್ಲೀಗ ಆತಂಕದ ಕಾರ್ಮೋಡ…

ಬೆಂಗಳೂರು ಡೈರಿ: ಆರ್.ಟಿ.ವಿಠ್ಠಲಮೂರ್ತಿ ಅವರ ವಾರದ ಅಂಕಣ  ಕಳೆದ ಮೂರು ವರ್ಷಗಳಿಂದ ಅಧಿಕಾರ ಹಂಚಿಕೆಯ ಸಂಘರ್ಷದಲ್ಲಿ ಮುಳುಗಿದ್ದ ಆಡಳಿತಾರೂಢ ಕಾಂಗ್ರೆಸ್…

23 hours ago