ಮೈಸೂರು

ಮಾದಕ ವಸ್ತುಗಳ ವಿರುದ್ಧ ಹೋರಾಟ ಅತ್ಯಗತ್ಯ : ವಿನಯ್‌ ಗುರೂಜಿ

ಮೈಸೂರು : ಸಮಾಜಕ್ಕೆ ಮಾರಕವಾಗಿರುವ ಮಾದಕ ದ್ರವ್ಯಗಳ ಸೇವನೆ, ಮಾರಾಟದ ವಿರುದ್ಧ ಯುದ್ಧದ ಮಾದರಿಯಲ್ಲಿ ಹೋರಾಟ ಮಾಡಬೇಕಾಗಿದೆ ಎಂದು ಅವಧೂತ ವಿನಯ್ ಗುರೂಜಿ ಹೇಳಿದರು.

ನಗರದ ಶ್ರೀ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಎದುರು ಭಾನುವಾರ ವಿ.ಆರ್.ಟ್ರಸ್ಟ್, ರೋಟರಿ, ಲಯನ್ಸ್ ಇಂಟರ್‌ನ್ಯಾಷನಲ್ ಸೇರಿದಂತೆ ಹಲವು ಸಂಘ-ಸಂಸ್ಥೆಗಳ ವತಿಯಿಂದ ಆಯೋಜಿಸಿದ್ದ ಬೈಕ್ ರ‍್ಯಾಲಿಯಲ್ಲಿ 500ಕ್ಕೂ ಬೈಕ್‌ಗಳಲ್ಲಿ ಸಂಚರಿಸಿದ ಸವಾರರು, ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಕೂಡಲೇ ಮಾದಕ ವ್ಯಸ್ತುಗಳನ್ನು ತ್ಯಜಿಸುವಂತೆ ಸಾರ್ವಜನಿಕರಲ್ಲಿ ಅರಿವು ಮೂಡಿಸಿದರು.

ಶ್ರೀ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದಿಂದ ಆರಂಭವಾದ ಬೈಕ್ ರ‍್ಯಾಲಿ ಹಾರ್ಡಿಂಗ್ ಸರ್ಕಲ್, ಚಾಮರಾಜ ಜೋಡಿ ರಸ್ತೆ, ರಾಮಸ್ವಾಮಿ ಸರ್ಕಲ್, ಜೆಎಲ್‌ಬಿ ರಸ್ತೆ ಮಾರ್ಗವಾಗಿ ಮುಡಾ ಸರ್ಕಲ್, ರೈಲ್ವೆ ನಿಲ್ದಾಣ ವೃತ್ತ, ಇರ್ವಿನ್ ರಸ್ತೆ ಮಾರ್ಗವಾಗಿ ಅಶೋಕ ರಸ್ತೆ ಮೂಲಕ ಪುನಃ ಶ್ರೀ ಕೋಟೆ ಆಂಜನೇಯಸ್ವಾಮಿ ಎದುರು ಮುಕ್ತಾಯಗೊಂಡಿತು.

ರ‍್ಯಾಲಿಗೆ ಚಾಲನೆ ನೀಡುವ ಮುನ್ನ ಮಾತನಾಡಿದ ಅವಧೂತ ಗುರೂಜಿ ಅವರು, ಭೂಮಿಯಲ್ಲಿ ಶಾಂತಿ ಸಿಗುವುದು ಒಂದು ತಾಯಿ ಗರ್ಭ ಹಾಗೂ ಭೂ ಗರ್ಭ ಎಂಬುದನ್ನು ನಾವೆಲ್ಲ ಅರಿಯಬೇಕು. ಯುವಕತು ಎಲ್ಲಿಯ ತನಕ ಡ್ರಗ್ಸ್ ವಿರುದ್ದ ಎಚ್ಚರಿಕೆಯಿಂದ ಇರುವುದಿಲ್ಲವೋ ಅಲ್ಲಿ ತನಕ ಜೀವನದಲ್ಲಿ ಮುಂದು ಬರಲು ಸಾಧ್ಯವಿಲ್ಲ ಎಂದರು. ಮೈಸೂರಲ್ಲಿ ಡ್ರಗ್ ಕೇಸ್ ಸಿಗುತ್ತಿದೆ ಎಂದರೆ ಅದು ನೋವಿನ ಸಂಗತಿ ಇಡೀ ಕರ್ನಾಟಕದಲ್ಲಿ ಟ್ರಾಫಿಕ್ ಸಮಸ್ಯೆ ಕಡಿಮೆ ಇದ್ದು ಉತ್ತಮವಾದ ಪರಿಸರ ಸಿಗುವುದು ಮೈಸೂರಲ್ಲಿಯೇ ಅಂತರದಲ್ಲಿ ಡ್ರಗ್ಸ್ ಜಾಲ ಹೆಚ್ಚುತ್ತಿರುವುದು ಅಸಮಾಧಾನ ವಿಚಾರ ಎಂದು ಹೇಳಿದರು.

ಇದನ್ನು ಓದಿ:ರಾಜ್ಯದಲ್ಲಿ ತಗ್ಗಿದ ವರುಣನ ಆರ್ಭಟ: ಈ ಜಿಲ್ಲೆಗಳಲ್ಲಿ ಮುಂದುವರಿಯಲಿದೆ ಮಳೆ

ಡ್ರಗ್ಸ್ ಮಾರುವವರಿಗೆ ಕಠಿಣ ಶಿಕ್ಷೆ ನೀಡುವಂತೆ ಸರ್ಕಾರಕ್ಕೆ ಒತ್ತಾಯ ಮಾಡಲಾಗುತ್ತದೆ. ಅಲ್ಲದೇ ಯಾರು ಏನೇ ಹೇಳಲ್ಲಿ ನಮ್ಮ ಬದುಕು ನಮಗೆ ಮುಖ್ಯ ಎಂಬುದನ್ನು ಪ್ರತಿಯೊಬ್ಬರು ಅರಿಯಬೇಕು. ಮಾದಕ ದ್ರವ್ಯ ಸೇವಿಸುವವರ ಸಂಖ್ಯೆ ಹೆಚ್ಚಾಗಿದ್ದು, ಅದರಲ್ಲೂ ಯುವ ಜನತೆ ಅಧಿಕ ಪ್ರಮಾಣದಲ್ಲಿದ್ದಾರೆ. ಆದರೆ, ನಗರ ಪ್ರದೇಶಗಳಲ್ಲಿ ಮಾದಕ ದ್ರವ್ಯಗಳ ಸೇವನೆ ನಿರಂತರವಾಗಿದ್ದು, ಮಾನಸಿಕ ಮತ್ತು ದೈಹಿಕ ಆರೋಗ್ಯ ಸಂಪೂರ್ಣ ಹಾಳಾಗುತ್ತದೆ. ಮಾದಕ ವಸ್ತುಗಳು ವಿವಿಧ ರೂಪಗಳಲ್ಲಿ ಮಾರಾಟ ಆಗುತ್ತಿದ್ದು, ನಿಯಂತ್ರಣಕ್ಕೆ ಸರ್ಕಾರ ಹಲವು ಕ್ರಮಗಳನ್ನು ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದರು.

ಡ್ರಗ್ ಎಂಬುದು ಹಿಂದಿನಿಂದಲೂ ನಿರಂತರವಾಗಿ ನಡೆಯುತ್ತ ಬಂದಿದ್ದು ಇಂತಹ ಕಾರ್ಯಕ್ರಮದ ಮೂಲಕ ಶಾಲಾ ಕಾಲೇಜು ಹಾಗೂ ಪೋಷಕರಿಗೂ ಇದರ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು ಜೊತೆಗೆ ಪೊಲೀಸ್ ಇಲಾಖೆ ಜೊತೆಗೆ ನಮ್ಮ ಸಹಕಾರ ಕೂಡ ನೀಡಿದರಷ್ಟೇ ಡ್ರಗ್ಸ್ ಮುಕ್ತ ಮಾಡಬಹುದು ಎಂದು ಅಭಿಪ್ರಾಯಪಟ್ಟರು.

ಬಳಿಕ ಮಾತನಾಡಿದ ಗೋಪಾಲಗೌಡ ಆಸ್ಪತ್ರೆ ಮುಖ್ಯಸ್ಥ ಡಾ.ಶುಶ್ರುತ್‌ಗೌಡ, ದೇಶದಲ್ಲಿ ಮಾದಕ ವಸ್ತುಗಳ ದುರುಪಯೋಗ ವೀಪರಿತ ಹೆಚ್ಚುತ್ತಿದೆ. ಇಂದು ಭಾರತದಲ್ಲಿ ಸುಮಾರು 3 ಕೋಟಿ ಜನರು ಮಾದಕ ವಸ್ತುಗಳ ವ್ಯಸನಿಗಳಾಗಿದ್ದಾರೆ. ಈ ಹಿಂದೆ ಪಂಜಾಬ್, ಹಿಮಾಚಲ ಪ್ರದೇಶ, ಮಣಿಪುರ ಮತ್ತು ಹರಿಯಾಣದಂತಹ ರಾಜ್ಯಗಳು ಮಾದಕ ವಸ್ತುಗಳ ಮಾರಾಟದ ಕೇಂದ್ರಗಳಾಗಿ ಗುರುತಿಸಿಕೊಂಡಿದ್ದವು. ಬೇಸರವೆಂದರೆ ಕರ್ನಾಟಕವು ಸಹ ಅವುಗಳ ಸಾಲಿಗೆ ಸೇರುವಂತಾಗಿರುವುದು ತೀರ ಆಘಾತಕಾರಿ ಸಂಗತಿ ಎಂದು ಕಳವಳ ವ್ಯಕ್ತಪಡಿಸಿದರು.

ಮಾದಕ ವಸ್ತುಗಳ ಪಿಡುಗನ್ನು ಪೊಲೀಸರು ಮತ್ತು ಸರ್ಕಾರ ಮಾತ್ರ ನಿರ್ಲಕ್ಷ್ಯ ವಹಿಸದಂತೆ ಕಟ್ಟೆಚ್ಚರದ ಕಠಿಣ ಕ್ರಮ ಜಾರಿ ಮಾಡಬೇಕು. ಅಲ್ಲದೇ ಈ ಸಮಸ್ಯೆ ಪ್ರತಿಯೊಬ್ಬ ಪ್ರಜೆಗಳ ಜವಾಬ್ದಾರಿ. ಎನ್‌ಜಿಒಗಳು, ಕಾಲೇಜುಗಳು, ಯುವ ಪ್ರತಿಮೆಗಳು ಮತ್ತು ಕುಟುಂಬಗಳು ಎಲ್ಲರೂ ಒಟ್ಟಾಗಿ ಬರಬೇಕು. ಪೊಲೀಸರು ತಮ್ಮ ಸಾಮರ್ಥ್ಯಕ್ಕೂ ಮೀರಿ ಕೆಲಸ ಮಾಡುತ್ತಿದ್ದಾರೆ, ಆದರೆ ಮಾದಕ ವಸ್ತುಗಳ ವಿರುದ್ಧದ ಹೋರಾಟಕ್ಕೆ ಒಗ್ಗಟ್ಟಿನ ಸಮಾಜ ಬೇಕು” ಎಂದು ಕರೆಕೊಟ್ಟರು.

ಮಾದಕ ವಸ್ತುಗಳ ಮಾರಾಟಗಾರರು ಕೊಲೆಗಾರರಿಗಿಂತ ಕಡಿಮೆಯಿಲ್ಲ. ಅವರು ನಮ್ಮ ಮಕ್ಕಳ ಭವಿಷ್ಯವನ್ನು ನಾಶಗೊಳಿಸುತ್ತಾರೆ ಮತ್ತು ಕುಟುಂಬಗಳ ನಡುವೆ ಅಶಾಂತಿ, ಬಿರುಕುಗಳನ್ನು ಮೂಡಿಸಲು ಕಾರಣಿಕೃತರಾಗುತಿದ್ದಾರೆ. ಇಂತಹವರು ಕೊಲೆಗಾರರಂತೆಯೇ ಕಠಿಣ ಕಾನೂನುಗಳನ್ನು ಎದುರಿಸಬೇಕು” ಎಂದು ಒತ್ತಾಯಿಸಿದರು.

ಜಿಎಸ್‌ಎಸ್ ಸಂಸ್ಥೆ ಮುಖ್ಯಸ್ಥ ಶ್ರೀಹರಿ ಮಾತನಾಡಿ, ಕರ್ನಾಟಕ ಬಹಳಷ್ಟು ವಿಷಯದಲ್ಲಿ ಮುಂದಿದೆ ಆದರೆ ಮಾದಕ ದ್ರವ್ಯ ಬಳಸುವ ರಾಜ್ಯಗಳಲ್ಲಿ ನಮ್ಮ ಕರ್ನಾಟಕ ಕೂಡ ಸೇರಿರುವುದು ದುರಷ್ಟಕಾರ ಸಂಗತಿಯಾಗಿದೆ. ಅಲ್ಲದೇ ಪೊಲೀಸ್ ಇಲಾಖೆ ಕೂಡ ಇದನ್ನು ತಡೆಗಟ್ಟಲು ಬಹಳಷ್ಟು ಶ್ರಮಪಡುತ್ರಿದ್ದು ಅವರ ಜೊತೆಗೆ ನಮ್ಮ ಸಹಕಾರ ಕೂಡ ನೀಡಬೇಕಾಗಿದೆ ಎಂದು ಹೇಳಿದರು.

ಮಾಜಿ ಮೇಯರ್ ಸಂದೇಶ್ ಸ್ವಾಮಿ ಲಯನ್ಸ್ ಕ್ಲಬ್ ಗವರ್ನರ್ ರಾಜಶೇಖರ್, ಅರುಣ್ ಯೋಗಿರಾಜ್, ಡಾ ಎಚ್.ಕೆಚೇತನ್‌ ಇದ್ದರು

ಆಂದೋಲನ ಡೆಸ್ಕ್

Recent Posts

ಓದುಗರ ಪತ್ರ: ಪೌರ ಕಾರ್ಮಿಕರಿಗೆ ಸೌಲಭ್ಯ ಕಲ್ಪಿಸಿ

ಮೈಸೂರಿನಲ್ಲಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ಪೌರಕಾರ್ಮಿಕರು ಸಮವಸ್ತ್ರ, ಗುಣಮಟ್ಟದ ಬೆಳಗಿನ ಉಪಾಹಾರ ಮೊದಲಾದ ಸೌಲಭ್ಯಗಳಿಲ್ಲದೇ ಬವಣೆ ಪಡುತ್ತಿರುವುದು, ನಗರ ಪಾಲಿಕೆಯಲ್ಲಿ ೮೪…

4 hours ago

ಓದುಗರ ಪತ್ರ: ಪರೀಕ್ಷೆ ವೇಳೆ ಆರೋಗ್ಯ ಏರುಪೇರಾದರೆ ಬದಲಿ ವ್ಯವಸ್ಥೆ ಕಲ್ಪಿಸಿ

ದೇಶದ ಪ್ರಗತಿಗೆ ಶಿಕ್ಷಣ ಪ್ರಮುಖವಾಗಿದೆ. ಶಾಲಾ, ಕಾಲೇಜು ಹಂತದ ಪರೀಕ್ಷೆಗಳು ಮತ್ತು ಸರ್ಕಾರಿ ಹುದ್ದೆಗಳ ನೇಮಕಾತಿಗೆ ನಡೆಯುವ ಪರೀಕ್ಷಾ ಕೊಠಡಿಯಲ್ಲಿ…

4 hours ago

ಓದುಗರ ಪತ್ರ: ಅಂಚೆ ಕಚೇರಿ ಚಲನ್‌ಗಳು ಕನ್ನಡದಲ್ಲಿರಲಿ

ಅಂಚೆ ಕಚೇರಿಗಳಲ್ಲಿ ಗ್ರಾಹಕರು ಹಣ ಕಟ್ಟುವ ಉಳಿತಾಯ ಖಾತೆ, ಆರ್‌ಡಿ , ಪಿಪಿಎಫ್, ಎಂಐಎಸ್ ಹಾಗೂ ಅಂಚೆ ಕಚೇರಿಯ ವಿವಿಧ…

4 hours ago

ಶಿವಾಜಿ ಗಣೇಶನ್‌ ಅವರ ವಾರದ ಅಂಕಣ: ರಾಜ್ಯ ಸರ್ಕಾರದ ಮೇಲೆ ರಾಜ್ಯಪಾಲರ ಸವಾರಿಗೆ ಬೇಕಿದೆ ಕಡಿವಾಣ

ರಾಜ್ಯಗಳ ಆಡಳಿತ ಸಂವಿಧಾನಬದ್ಧವಾಗಿ ನಡೆಯುವಂತೆ ಮೇಲುಸ್ತುವಾರಿಯಾಗಿ ಕೇಂದ್ರ ಸರ್ಕಾರದ ಶಿಫಾರಸಿನಂತೆ ರಾಷ್ಟ್ರಪತಿ ಅವರು ರಾಜ್ಯಪಾಲರನ್ನು ನೇಮಕ ಮಾಡುವುದು ೧೯೫೦ರಿಂದ ನಡೆದುಕೊಂಡು…

4 hours ago

ಮೂಗಿನ ನೇರಕ್ಕೆ ಇತಿಹಾಸವನ್ನು ತಿರುಚುವುದಿದೆಯಲ್ಲಾ….

‘ಕುಸೂ ಕುಸೂ ಹೇಳಪ್ಪ ಹೇಳು ನನ್ನ ಕಂದಾ. ಅವ್ವಾ... ನಾಳಕ ಬಾವುಟದ ಹಬ್ಬ. ಬಾವುಟ ಏರಿಸೋ ಹಬ್ಬ. ಇಸ್ಕೂಲಿಗೆ ಹೊತ್ತಿಗೆ…

4 hours ago

ಸಂವಿಧಾನ ನಮ್ಮ ಬಳಿ ಇದೆ, ಆದರೆ ಅದರ ಧ್ವನಿ ಎಲ್ಲಿದೆ?

ಸಂವಿಧಾನ ನಮಗೆ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ನೀಡಿದೆ. ಆದರೆ ವಾಸ್ತವದಲ್ಲಿ ನಾವು ಎಷ್ಟು ಮುಕ್ತರಾಗಿದ್ದೇವೆ? ಭ್ರಷ್ಟಾಚಾರ, ಪರಿಸರ ನಾಶ, ಮಾಲಿನ್ಯ ಹಾಗೂ…

4 hours ago