ಮೈಸೂರು

ಮೈಸೂರು ಜಿಲ್ಲೆಯಲ್ಲಿ ಮುಂದುವರಿದ ಹುಲಿ ದಾಳಿ ಪ್ರಕರಣಗಳು: ಕಂಗಾಲಾದ ರೈತರು

ಮೈಸೂರು: ಜಿಲ್ಲೆಯಲ್ಲಿ ಹುಲಿ ದಾಳಿ ಪ್ರಕರಣಗಳು ಮುಂದುವರಿದಿದ್ದು, ಗ್ರಾಮಸ್ಥರಲ್ಲಿ ಭಾರೀ ಆತಂಕ ಮೂಡಿಸಿದೆ. ಹುಣಸೂರು ತಾಲ್ಲೂಕಿನ ಗುರುಪುರ ಕೆರೆ ಬಳಿ ಹುಲಿ ದಾಳಿಗೆ ಒಂದು ಎತ್ತು ಬಲಿಯಾಗಿದೆ.

ಗುರುಪುರ ಗ್ರಾಮದ ಹಳೇವಾರಂಚಿಯ ಮುನ್ನಾ ಎಂಬುವರಿಗೆ ಸೇರಿದ ಎತ್ತನ್ನು, ಕೆರೆ ಸಮೀಪ ಜಾನುವಾರುಗಳನ್ನು ಮೇಯಲು ಕಟ್ಟಿ ಹಾಕಿದ್ದ ವೇಳೆ ಹುಲಿ ದಾಳಿ ಮಾಡಿ ಕೊಂದಿದೆ. ಒಂದೇ ತಾಲ್ಲೂಕಿನಲ್ಲಿ ನಿರಂತರವಾಗಿ ಹುಲಿ ದಾಳಿ ನಡೆಯುತ್ತಿರುವುದರಿಂದ ಗ್ರಾಮಸ್ಥರು ತೀವ್ರ ಭಯದಲ್ಲಿದ್ದಾರೆ.

ಇದೇ ಹುಣಸೂರು ತಾಲ್ಲೂಕಿನಲ್ಲಿ ಎರಡು ಕಡೆ ಹುಲಿ ದಾಳಿ ಸಂಭವಿಸಿದ್ದು, ಹಸು ಹಾಗೂ ಎತ್ತು ಬಲಿಯಾಗಿವೆ. ಇದರಿಂದ ಆಕ್ರೋಶಗೊಂಡ ಗ್ರಾಮಸ್ಥರು ಅರಣ್ಯ ಇಲಾಖೆಯ ವಿರುದ್ಧ ಪ್ರತಿಭಟನೆಗೆ ಇಳಿದಿದ್ದಾರೆ.

ಹುಲಿ ದಾಳಿಯಲ್ಲಿ ಮೃತಪಟ್ಟ ಎತ್ತಿನ ಶವವನ್ನು ಟ್ರ್ಯಾಕ್ಟರ್‌ನಲ್ಲಿ ತಂದು ಗ್ರಾಮಸ್ಥರು ಗುರುಪುರದಲ್ಲಿ ಪ್ರತಿಭಟನೆ ನಡೆಸಿದರು. ಈ ವೇಳೆ ಎಚ್.ಡಿ.ಕೋಟೆ–ಹುಣಸೂರು ಮುಖ್ಯರಸ್ತೆಯನ್ನು ತಡೆದು ಕೆಲಕಾಲ ರಸ್ತೆ ತಡೆ ನಡೆಸಿದರು.

ಅರಣ್ಯ ಇಲಾಖೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳದೇ ನಿರ್ಲಕ್ಷ್ಯ ವಹಿಸಿದೆ ಎಂದು ಆರೋಪಿಸಿದ ಗ್ರಾಮಸ್ಥರು, ತಕ್ಷಣ ಹುಲಿಯನ್ನು ಸೆರೆ ಹಿಡಿಯಬೇಕು. ಗ್ರಾಮಗಳ ಸುತ್ತಲೂ ಪಹರೆ ಹೆಚ್ಚಿಸಬೇಕು ಹಾಗೂ ಜಾನುವಾರು ನಷ್ಟಕ್ಕೆ ಸೂಕ್ತ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.

ಹುಲಿ ದಾಳಿ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಗ್ರಾಮಸ್ಥರ ಸುರಕ್ಷತೆ ಬಗ್ಗೆ ಗಂಭೀರ ಆತಂಕ ವ್ಯಕ್ತವಾಗಿದ್ದು, ಅರಣ್ಯ ಇಲಾಖೆ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಆಂದೋಲನ ಡೆಸ್ಕ್

Recent Posts

ದಸರಾ ಲೋಪಗಳನ್ನು ಸರಿಪಡಿಸಿಕೊಳ್ಳಿ

ಅವ್ಯವಸ್ಥೆ, ಪೊಲೀಸರ ಅತಿರೇಕದ ವರ್ತನೆ, ಅಧಿಕಾರಿಗಳ ದೌಲತ್ತು, ಜನಸಾಮಾನ್ಯರ ಸಂಕಷ್ಟ- ಈ ಬಾರಿಯ ದಸರಾ ಅನೇಕ ಕಹಿ ಘಟನೆಗಳಿಗೂ ಸಾಕ್ಷಿಯಾಗಿದ್ದು…

3 hours ago

ಚರ್ಚೆಗೆ ಗ್ರಾಸವಾದ ಶಿವಮೊಗ್ಗ ಅಂಬಾರಿ ಆನೆ ರಂಪಾಟ

ಶಶಿ ಸಂಪಳ್ಳಿ ರೊಬೋಟಿಕ್ ಆನೆಗಳ ಬಳಕೆ ಪರ್ಯಾಯ ಆಯ್ಕೆ  ದಸರಾ ಜಂಬೂ ಸವಾರಿಯ ವೇಳೆ ಅಂಬಾರಿಯನ್ನು ಹೊತ್ತ ಆನೆ ದಿಕ್ಕೆಟ್ಟು…

3 hours ago

ಗೋಲ್ಡನ್ ಎರಾ ಕಂಪೆನಿಯ ಸ್ಟಿಂಗ್ ಕತೆ

ಆರ್.ಟಿ.ವಿಠ್ಠಲಮೂರ್ತಿ ಅವರ ವಾರದ ಅಂಕಣ  ಬಹುತೇಕ ನಿರ್ದೇಶಕರು ಒಂದೊಂದು ಸುಳಿಯಲ್ಲಿ ಸಿಲುಕಿದ್ದರು ವಿಮಾನ ರನ್ ವೇಯಲ್ಲಿ ಓಡುತ್ತಾ ಇದ್ದಕ್ಕಿದ್ದಂತೆ ಮೇಲಕ್ಕೆದ್ದಾಗ…

4 hours ago

ಉತ್ತರ ಕೊಡಗಿನ ಕಾಫಿ ತೋಟಗಳಲ್ಲಿ ಬಿಳಿಕಾಂಡಕೊರಕ ಕಾಟ

ಲಕ್ಷ್ಮೀಕಾಂತ್ ಕೊಮಾರಪ್ಪ ಅರೇಬಿಕಾ ಕಾಫಿ ತಳಿಯನ್ನೇ ಹೆಚ್ಚಾಗಿ ಕಾಡುತ್ತಿರುವ ರೋಗ ಫಸಲು ನೀಡುವ ಗಿಡಗಳೇ ನಾಶ, ಬೆಳೆಗಾರರಿಗೆ ಆರ್ಥಿಕ ಸಂಕಷ್ಟ …

4 hours ago

ಮೈಸೂರಿಗೆ ಪ್ರವಾಸಿಗರ ದಾಂಗುಡಿ

ಕೆ.ಬಿ.ರಮೇಶನಾಯಕ ಅರಮನೆ, ವಸ್ತುಪ್ರದರ್ಶನ, ಮೃಗಾಲಯ, ದೀಪಾಲಂಕಾರ ಕಣ್ತುಂಬಿಕೊಂಡ ಪ್ರವಾಸಿಗರು ಮೈಸೂರು: ದಸರಾ ಮಹೋತ್ಸವ ಮುಗಿದರೂ ಅರಮನೆ ಸೇರಿದಂತೆ ಸುತ್ತಮುತ್ತಲ ಪ್ರವಾಸಿ…

4 hours ago

ಸ್ವಾತಿ ಮಳೆಯ ಅಬ್ಬರ; ರಾಗಿ ಬೆಳೆಗೆ ವರದಾನ

ಭೇರ್ಯ ಮಹೇಶ್ ಕೆ.ಆರ್.ನಗರ-ಸಾಲಿಗ್ರಾಮ ಅವಳಿ ತಾಲ್ಲೂಕುಗಳ ರೈತರ ಮೊಗದಲ್ಲಿ ಮಂದಹಾಸ ಕೆ.ಆರ್.ನಗರ: ಸ್ವಾತಿ ಮಳೆಯ ಅಬ್ಬರದಿಂದಾಗಿ ಮೈಸೂರು ಜಿಲ್ಲೆಯ ಕೆ.ಆರ್…

4 hours ago