ಚಿತ್ರ: ಗಮಿಮಠ ರವಿ
ಮೈಸೂರು: ವಿಧಾನ ಪರಿಷತ್ ಚುನಾವಣಾ ಹಿನ್ನಲೆಯಲ್ಲಿ ದಕ್ಷಿಣ ಶಿಕ್ಷಕರ ಕ್ಷೇತ್ರ ಗೆಲ್ಲಲು ಮೈಸೂರಿನಲ್ಲಿಂದು (ಮಂಗಳವಾರ, ಮೇ.21) ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ ಕುಮಾರಸ್ವಾಮಿ ಹಾಗೂ ಬಿಜೆಪಿ ಶಾಸಕ ಅಶ್ವಥ್ ನಾರಾಯಣ್ ನೇತೃತಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಬಲ ಪ್ರದರ್ಶನ ಮಾಡಿದರು.
ಇಲ್ಲಿನ ನಿವೇದಿತಾ ನಗರ ಕಲ್ಯಾಣ ಮಂಟಪದಲ್ಲಿ ನಡೆದ ಮೈತ್ರಿ ಸಭೆಯಲ್ಲಿ ದಕ್ಷಿಣ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿ ಕೆ. ವಿವೇಕಾನಂದ ಗೆಲ್ಲಿಸಲು ಒಮ್ಮತದಿಂದ ಸಹಕರಿಸುವಂತೆ ಕೋರಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ, ರಾಜ್ಯದಲ್ಲಿ ಒಂದು ಲಕ್ಷ ಶಿಕ್ಷಕರ ನೇಮಕಾತಿ ಮಾಡಿದ್ದು, ಎಚ್.ಡಿ ದೇವೇಗೌಡರ ಸರ್ಕಾರ ಬಳಿಕ 2006-07 ರಲ್ಲಿ 50 ಸಾವಿರ ಶಿಕ್ಷಕರ ನೇಮಕಾತಿ ಮಾಡಿದ್ದು, ಬಿಜೆಪಿ-ಜೆಡಿಎಸ್ ಮೈತ್ರಿ ಸರ್ಕಾರವಾಗಿದೆ. ಹೀಗಾಗಿ ಈ ಬಾರಿ ಶಿಕ್ಷಕರು ನಮ್ಮ ಕೈ ಹಿಡಿಯಲಿದ್ದಾರೆ ಎಂದು ಎಚ್‌ಡಿಕೆ ವಿಶ್ವಾಸ ವ್ಯಕ್ತಪಡಿಸಿದರು.
ಶಿಕ್ಷಕರ ಮನವೊಲಿಸಲು ಮತದಾರರ ಮನೆ ಖುದ್ದು ಕಾರ್ಯಕರ್ತರು ಭೇಟಿ ನೀಡಿ ಮತ ನೀಡುವಂತೆ ಮನವಿ ಮಾಡಬೇಕು. ಮೈಸೂರು-ಚಾಮರಾಜನಗರ-ಮಂಡ್ಯ-ಹಾಸನ ಶಿಕ್ಷಕರು ದಾಖಲೆಯ ಅಂತರದಲ್ಲಿ ನಮ್ಮ ಅಭ್ಯರ್ಥಿ ವಿವೇಕಾನಂದ ಅವರನ್ನು ಗೆಲ್ಲಿಸಿಕೊಡಬೇಕು ಎಂದು ಮನವಿ ಮಾಡಿದರು.
ಬಳಿಕ ಮಾತನಾಡಿದ ಶಾಸಕ ಅಶ್ವಥ್ ನಾರಾಯಣ, ನಮ್ಮ ಮೈತ್ರಿ ಪಕ್ಷದ ಶಕ್ತಿಯನ್ನು ರಾಜ್ಯದ ಜನತೆ ನೋಡಿದ್ದಾರೆ. ಈ ಮೈತ್ರಿಯಿಂದ ಪರಿಷತ್ ಚುನಾವಣೆಯಲ್ಲಿ ನಮ್ಮ ಶಕ್ತಿ ಹೆಚ್ಚಿರುವುದರಿಂದ ಸರ್ಕಾರ ಭಯ ಶುರುವಾಗಿದೆ. ಈ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿಗಳು ಜಯ ದಾಖಲಿಸಲಿದ್ದಾರೆ. ಈ ಚುನಾವಣೆಯಲ್ಲಿ ನಮ್ಮನ್ನು ಬೆಂಬಲಿಸುವ ಮೂಲಕ ಶಿಕ್ಷಣ ವಿರೋಧಿ ಕಾಂಗ್ರೆಸ್‌ಗೆ ತಕ್ಕ ಪಾಠ ಕಲಿಸಬೇಕು ಎಂದು ಕರೆ ನೀಡಿದರು.
ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಜಿ.ಟಿ ದೇವೇಗೌಡ ಮಾತನಾಡಿ, ಕಾಂಗ್ರೆಸ್ ಪಕ್ಷದ ದರ್ಪ, ಅಹಂಕಾರದ ಆಡಳಿತ ವಿರುದ್ಧ ನಾವೆಲ್ಲರೂ ಒಟ್ಟಾಗಿ ಹೋರಾಡಬೇಕು. ನಮ್ಮ ಒಗ್ಗಟ್ಟಿನ ಹೋರಾಟದಿಂದ ಮಾತ್ರವೇ ಶಾಸ್ವತ ಉಳಿಗಾಲ ಸಿಗಲಿದೆ ಎಂದು ತಿಳಿಸಿದರು.
ಶಾಸಕ ಸಾ.ರಾ ಮಹೇಶ್, ಟಿ.ಎಸ್ ಶ್ರೀವಸ್ತ, ಸ್ವರೂಪ್ ಗೌಡ, ಎಚ್.ಡಿ ರೇವಣ್ಣ, ಎನ್. ಮಹೇಶ್ ಸೇರಿದಂತೆ ಹಲವು ಜೆಡಿಎಸ್-ಬಿಜೆಪಿ ಮುಖಂಡರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಮಂಡ್ಯ: ನಗರದ ಗಾಂಧಿನಗರದಲ್ಲಿ ವ್ಯಕ್ತಿಯೊಬ್ಬರನ್ನು ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ನಡೆದಿದೆ. ಗಾಂಧಿನಗರ ನಿವಾಸಿ 47 ವರ್ಷದ ಪುರುಷೋತ್ತಮ್…
ಮೈಸೂರು ನಗರದಲ್ಲಿ ಸ್ವಚ್ಛತಾ ಕಾರ್ಯ ನಿರ್ವಹಿಸುತ್ತಿರುವ ಸ್ವಚ್ಛತೆಯ ಜೀವನಾಡಿಗಳಾಗಿರುವ ಪೌರಕಾರ್ಮಿಕರಿಗೆ, ಮೈಸೂರು ಮಹಾನಗರ ಪಾಲಿಕೆ ವತಿಯಿಂದ ಮಣಿಪಾಲ್ ಆಸ್ಪತ್ರೆಯಲ್ಲಿ ಆಯೋಜಿಸಿದ್ದ…
ಮಂಡ್ಯ ಜಿಯ ಮದ್ದೂರಿನಲ್ಲಿ ಭಾನುವಾರ ಗಣೇಶೋತ್ಸವ ಕಾರ್ಯಕ್ರಮದಲ್ಲಿ ಮುಸ್ಲಿಮರೇ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು, ಗೌರಿ -ಗಣೇಶ ಮೂರ್ತಿಗಳನ್ನು ಹೊತ್ತ ಟ್ರ್ಯಾಕ್ಟರ್…
ನಾಡಿಗೆ ಮಾದರಿ! ವಿವಿಧ ಧರ್ಮ ಸಮುದಾಯಗಳ ಮನಸುಗಳ ಅಕ್ಕರೆಯಲಿ ಬೆಸೆವ ಸ್ನೇಹ ಸೌಹಾರ್ದ ಸಾಮರಸ್ಯದ ಪ್ರತೀಕ, ಹಬ್ಬ ಉತ್ಸವಗಳು! ನಾಡಿಗೆ…
ನಾವಿಬ್ಬರು ಪ್ರೊ. ಬಿ. ಪಿ. ಮಹೇಶ್ ಚಂದ್ರ ಗುರುಗಳ ಶಿಷ್ಯರು. ನಮ್ಮಿಬ್ಬರಿಗೂ ಪ್ರೊ. ಗುರು ಇಷ್ಟ. ನೀನು ಮಂಗಳೂರು ವಿವಿ,…
ಶ್ರೇಯಸ್ ದೇವನೂರು ಅಭಿವೃದ್ಧಿಯ ಹೆಸರಿನಲ್ಲಿ ಅರ್ಧ ಕಾಮಗಾರಿ, ಸಂಚಾರದ ಹೆಸರಿನಲ್ಲಿ ಹೆಚ್ಚುತ್ತಿರುವ ಸಂಕಷ್ಟ ಮೈಸೂರು ದಸರಾ ಎಂದರೆ ಕೇವಲ ಹತ್ತು…