ಮೈಸೂರು: ಕನ್ನಡ ಪರ ಸಂಘಟನೆಗಳಿಂದ ಎಂಇಎಸ್ ನಿಷೇಧಿಸುವಂತೆ ನಾಳೆ ಕರ್ನಾಟಕ ಬಂದ್ ಆಚರಣೆಗೆ ಖಾಸಗಿ ಬಸ್ ಚಾಲಕರು ಮತ್ತು ಆಟೋ ಚಾಲಕರು ನೈತಿಕ ಬೆಂಬಲ ಸೂಚಿಸಿದ್ದಾರೆ.
ನಗರದಲ್ಲಿ ಇಂದು(ಮಾರ್ಚ್.21) ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಆಟೋ ಚಾಲಕರು, ನಾಡಿಗಾಗಿ ಒಂದು ದಿನದ ಕೂಲಿ ಬಿಡಲು ಸಿದ್ಧರಿದ್ದೇವೆ. ಮಹಾರಾಷ್ಟ್ರದಲ್ಲಿ ನಮ್ಮ ಬಸ್ ಚಾಲಕನಿಗೆ ಹೊಡೆದಿರುವುದು ಅನ್ಯಾಯ. ನಾಳೆ ನಮಗೂ ಅದೇ ಪರಿಸ್ಥಿತಿ ಬರಬಹುದು. ಆದ್ದರಿಂದ ನಾಡಿಗಾಗಿ ನಾವು ಕನ್ನಡ ಪರ ಹೋರಾಟಕ್ಕೆ ಸಾಥ್ ನೀಡುತ್ತೇವೆ. ಒಂದು ದಿನದ ಕೂಲಿಗಾಗಿ ಗೌರವ ಕಳೆದುಕೊಳ್ಳಬಾರದು.
ನಮಗಾಗಿ ಹಾಗೂ ನಾಡಿಗಾಗಿ ಒಂದು ದಿನ ಕೆಲಸ ಮಾಡದಿದ್ದರೆ ಏನು ಸಮಸ್ಯೆ ಆಗೋದಿಲ್ಲ ಎಂದು ಹೇಳಿದ್ದಾರೆ.
ನಾಳಿನ ಬಂದ್‌ಗೆ ಖಾಸಗಿ ಬಸ್ ಚಾಲಕರು
ನಾಳಿನ ಕರ್ನಾಟಕ ಬಂದ್ ಬಗ್ಗೆ ಖಾಸಗಿ ಬಸ್ ಚಾಲಕ ಸಂಘದ ಕಾರ್ಯದರ್ಶಿ ದಯಾನಂದಸ್ವಾಮಿ ಮಾತನಾಡಿ, ಖಾಸಗಿ ಬಸ್ ಮಾಲೀಕರ ಸಂಘದಿಂದ ನೈತಿಕ ಕೇವಲ ಬೆಂಬಲವಿರುತ್ತದೆ. ಆದರೆ ಎಂದಿನಂತೆ ಖಾಸಗಿ ಬಸ್ ಸಂಚಾರ ಇರುತ್ತೆ. ಈಗಾಗಲೇ ಫ್ರೀ ಸ್ಕೀಂ ನಿಂದ ಖಾಸಗಿ ಸಾರಿಗೆ ಬಸ್ ಉದ್ಯಮ ಬಹಳ ಸಂಕಷ್ಟದಲ್ಲಿದೆ. ಅಲ್ಲದೇ ಒಂದು ಬಸ್ ನಿಲ್ಲಿಸಿದರೆ ನಮ್ಮ ನೌಕರರ ಜೀವನಕ್ಕೆ ತೊಂದರೆ ಆಗುತ್ತದೆ ಎಂದರು.
ಇನ್ನು ನಾಡು ನುಡಿ ಜಲ ವಿಚಾರಕ್ಕೆ ನಾವು ಬದ್ದರಿದ್ದೇವೆ. ಸಂಘಟನೆಯ ಪ್ರಮುಖರು ಪ್ರತಿಭಟನೆಯಲ್ಲೂ ಭಾಗಿಯುತ್ತೇವೆ. ಆದರೆ ಬಸ್ ನಿಲ್ಲಿಸಿ ನೌಕರರಿಗೆ ತೊಂದರೆ ನೀಡಲ್ಲ ಎಂದು ತಿಳಿಸಿದರು.
ಮೈಸೂರಿನಲ್ಲಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ಪೌರಕಾರ್ಮಿಕರು ಸಮವಸ್ತ್ರ, ಗುಣಮಟ್ಟದ ಬೆಳಗಿನ ಉಪಾಹಾರ ಮೊದಲಾದ ಸೌಲಭ್ಯಗಳಿಲ್ಲದೇ ಬವಣೆ ಪಡುತ್ತಿರುವುದು, ನಗರ ಪಾಲಿಕೆಯಲ್ಲಿ ೮೪…
ದೇಶದ ಪ್ರಗತಿಗೆ ಶಿಕ್ಷಣ ಪ್ರಮುಖವಾಗಿದೆ. ಶಾಲಾ, ಕಾಲೇಜು ಹಂತದ ಪರೀಕ್ಷೆಗಳು ಮತ್ತು ಸರ್ಕಾರಿ ಹುದ್ದೆಗಳ ನೇಮಕಾತಿಗೆ ನಡೆಯುವ ಪರೀಕ್ಷಾ ಕೊಠಡಿಯಲ್ಲಿ…
ಅಂಚೆ ಕಚೇರಿಗಳಲ್ಲಿ ಗ್ರಾಹಕರು ಹಣ ಕಟ್ಟುವ ಉಳಿತಾಯ ಖಾತೆ, ಆರ್‌ಡಿ , ಪಿಪಿಎಫ್, ಎಂಐಎಸ್ ಹಾಗೂ ಅಂಚೆ ಕಚೇರಿಯ ವಿವಿಧ…
ರಾಜ್ಯಗಳ ಆಡಳಿತ ಸಂವಿಧಾನಬದ್ಧವಾಗಿ ನಡೆಯುವಂತೆ ಮೇಲುಸ್ತುವಾರಿಯಾಗಿ ಕೇಂದ್ರ ಸರ್ಕಾರದ ಶಿಫಾರಸಿನಂತೆ ರಾಷ್ಟ್ರಪತಿ ಅವರು ರಾಜ್ಯಪಾಲರನ್ನು ನೇಮಕ ಮಾಡುವುದು ೧೯೫೦ರಿಂದ ನಡೆದುಕೊಂಡು…
‘ಕುಸೂ ಕುಸೂ ಹೇಳಪ್ಪ ಹೇಳು ನನ್ನ ಕಂದಾ. ಅವ್ವಾ... ನಾಳಕ ಬಾವುಟದ ಹಬ್ಬ. ಬಾವುಟ ಏರಿಸೋ ಹಬ್ಬ. ಇಸ್ಕೂಲಿಗೆ ಹೊತ್ತಿಗೆ…
ಸಂವಿಧಾನ ನಮಗೆ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ನೀಡಿದೆ. ಆದರೆ ವಾಸ್ತವದಲ್ಲಿ ನಾವು ಎಷ್ಟು ಮುಕ್ತರಾಗಿದ್ದೇವೆ? ಭ್ರಷ್ಟಾಚಾರ, ಪರಿಸರ ನಾಶ, ಮಾಲಿನ್ಯ ಹಾಗೂ…