ಮೈಸೂರು: ಹುಬ್ಬಳಿಯ ಅಂಜಲಿ ಹತ್ಯೆ ಆರೋಪಿ ವಿಶ್ವ ಅಲಿಯಾಸ್ ಗಿರೀಶ್ ಮೈಸೂರಿನ ಹೋಟೆಲ್ ಒಂದರಲ್ಲಿ ಸಪ್ಲೇಯರ್ ಆಗಿ ಕೆಲಸ ನಿರ್ವಹಿಸಿದ ಮಾಹಿತಿ ಬೆಳಕಿಗೆ ಬಂದಿದೆ.
ಮೈಸೂರಿನ ಜೆಎಲ್‌ಬಿ ರಸ್ತೆಯಲ್ಲಿರುವ ಗೋರ್ವಧನ್ ಎಂಬುವವವರ ಮಾಲೀಕತ್ವದ ಮಹಾರಾಜ ಹೋಟೆಲ್‌ನಲ್ಲಿ ಕಳೆದ ನಾಲ್ಕು ತಿಂಗಳಿಂದ ಸಪ್ಲೇಯರ್ ಆಗಿ ಕೆಲಸ ಮಾಡುತ್ತಿದ್ದ ಎಂದು ತಿಳಿದು ಬಂದಿದೆ.
ವಿನಾಯಕ ನರ್ಸಿಂಗ್ ಕೇರ್ ಏಜೆನ್ಸಿ ಮೂಲಕ ಹೋಟೆಲ್ ಕೆಲಸಕ್ಕೆ ಬಂದಿದ್ದ ಆರೋಪಿ ವಿಶ್ವ ಮೊದಲಿಗೆ ನಮ್ಮ ತಂದೆ ನೋಡಿಕೊಳ್ಳಲು ನೇಮಿಸಲಾಗಿತ್ತು. ಬಳಿಕ ಇಲ್ಲಿ ಕೆಲಸ ಬಿಟ್ಟಿದ್ದ ಆರೋಪಿ ವಿಶ್ವ ಮತ್ತೆ ಬಂದು ಕೆಲಸಕ್ಕೆ ಸೇರಿಕೊಂಡನು. ಆವಾಗ ನಮ್ಮ ಹೋಟೆಲ್‌ನಲ್ಲಿ ಸಪ್ಲೇಯರ್ ಹಾಗೂ ರೂಂ ಬಾಯ್ ಗಿ ಕೆಲಸ ಮಾಡುತ್ತಿದ್ದ. ಆತ ಸರಿಯಾಗಿ ಕೆಲಸಕ್ಕೆ ಬರುತ್ತಿರಲಿಲ್ಲ. 10 ರಿಂದ 5 ದಿನ ರಜೆ ತೆಗೆದುಕೊಳ್ಳುತ್ತಿದ್ದ. ಹೀಗೆ ಬಿಟ್ಟು ಬಿಟ್ಟು ಕೆಲಸಕ್ಕೆ ಬರುತಿದ್ದ. ಕಳೆದ ಮಂಗಳವಾರ 5 ಸಾವಿರ ಹಣ ಅಡ್ವಾನ್ಸ್ ತೆಗೆದುಕೊಂಡು ಹೋದವನು ಮತ್ತೆ ವಾಪಸ್ ಬಂದಿಲ್ಲ. ಪೊಲೀಸರು ನನಗೆ ಕರೆ ಮಾಡಿದಾಗಲೇ ಈತ ಕೊಲೆ ಮಾಡಿದ್ದಾನೆ ಎಂಬುದು ತಿಳಿದಿದ್ದು ಎಂದು ಮಹರಾಜ ಹೋಟೆಲ್ ಮಾಲೀಕ ಗೋವರ್ಧನ್ ಮಾಹಿತಿ ನೀಡಿದರು.
ಆರೋಪಿ ವಿಶ್ವ ಹೆಚ್ಚು ಮಾಬೈಲ್ ನಲ್ಲಿ ಮಾತನಾಡುತಿದ್ದ ಎಂದು ನಮ್ಮ ಹೊಟೇಲ್ ಸಿಬ್ಬಂದಿ ಹೇಳಿದ್ರು, ಹೋಟೆಲ್ ಫೋನ್‌ನಿಂದಲೂ ಹೆಚ್ಚು ಮಾತನಾಡುತ್ತಿದ್ದ. ಘಟನೆ ನಡೆಯುವ ಹಿಂದಿನ ದಿನ ಜೋರಾಗಿ ಕೂಗಾಡಿ ಮೊಬೈಲ್‌ನಲ್ಲಿ ಮಾತನಾಡುತ್ತಿದ್ದನಂತೆ. ನಮ್ಮ ಹೋಟೆಲ್‌ಗೆ ಏಳು ಮಂದಿ ಪೊಲೀಸರು ಬಂದಿದ್ರು, ನಿನ್ನೆ ರಾತ್ರಿಯ ತನಕ ಪೊಲೀಸರು ಇದ್ರು. ಆತ ದಾವಣೆಗೆರೆಯಲ್ಲಿ ಸಿಕ್ಕ ಬಳಿಕ ಮಧ್ಯರಾತ್ರಿ ಪೊಲೀಸರು ಇಲ್ಲಿಂದ ತೆರಳಿದ್ದಾರೆ ಎಂದು ಮಹಾರಾಜ ಹೋಟೆಲ್ ಮಾಲೀಕ ಗೋವರ್ಧನ್ ಹೇಳಿದ್ದಾರೆ.
ಹನೂರು: ತಾಲ್ಲೂಕಿನಾದ್ಯಂತ ತೀವ್ರ ಬರಗಾಲ ಆವರಿಸಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ಬರ ಅಧ್ಯಯನ ತಂಡವು ಎರಡನೇ ದಿನವಾದ ಇಂದು ಹನೂರು…
ಯಳಂದೂರು: ತಾಲ್ಲೂಕಿನ ಕೆಸ್ತೂರು ಗ್ರಾಮದಲ್ಲಿ ರಾತ್ರಿ ಸುರಿದ ಬಿರುಗಾಳಿ ಸಹಿತ ಭಾರಿ ಮಳೆಗೆ ಕಟಾವಿಗೆ ಬಂದಿದ್ದ ಬಾಳೆ ಬೆಳೆ ಸಂಪೂರ್ಣ…
ಮಂಜು ಕೋಟೆ ಕೋಟೆ: ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ವ್ಯಾಪ್ತಿಯಲ್ಲಿ ಅರಣ್ಯ ಇಲಾಖೆಯಿಂದ ಅಳವಡಿಕೆ ಎಚ್.ಡಿ.ಕೋಟೆ: ತಾಲ್ಲೂಕಿನ ಕಾಡಂಚಿನಲ್ಲಿ ಕಾಡು ಪ್ರಾಣಿಗಳು…
ಮುಂದಿನ ಭಾನುವಾರದಿಂದ ನವರಾತ್ರಿ ಆರಂಭ. ಐತಿಹಾಸಿಕ ಮೈಸೂರು ದಸರಾ ಮಹೋತ್ಸವಕ್ಕೆ ಚಾಲನೆ. ವಿಶ್ವವಿಖ್ಯಾತ ಮೈಸೂರು ದಸರಾ ಉತ್ಸವದಲ್ಲಿ ಈ ಬಾರಿ…
ವಸಂತಕುಮಾರ್ ಮೈಸೂರು ಮಠ ಮೈಸೂರಿನ ಸ್ವಚ್ಛತೆ ಜವಾಬ್ದಾರಿ ಪೌರಕಾರ್ಮಿಕರ ಹೆಗಲ ಮೇಲಿದೆ ಇದು ನಮ್ಮ ಕಸ, ಇದರ ನಿರ್ವಹಣೆ ನಮ್ಮ…
ಬೆಂಗಳೂರು ಡೈರಿ: ಆರ್.ಟಿ.ವಿಠ್ಠಲಮೂರ್ತಿ ಅವರ ವಾರದ ಅಂಕಣ ಪ್ರಯೋಗಕೆ ಸಜ್ಜಾಗುತ್ತಿರುವ ರಾಜಕೀಯ ಪಕ್ಷಗಳು ಕರ್ನಾಟಕದ ರಾಜಕಾರಣ ಎಷ್ಟು ಆತಂಕದ ಮಟ್ಟಕ್ಕೆ…