ಮೈಸೂರು : ಅಮಾವಾಸ್ಯೆ ದಿನ ಪತಿ ಮನೆ ಮುಂದೆ ಹೆಂಡತಿ ಮಾಟ ಮಂತ್ರ ಮಾಡಿಸಿದ್ದಾಳೆ ಎಂಬ ಆರೋಪ ಕೇಳಿ ಬಂದಿದ್ದು ಮಹಿಳೆಯನ್ನು ಸಾರ್ವಜನಿಕರು ರೆಡ್ ಹ್ಯಾಂಡಾಗಿ ಹಿಡಿದಿದ್ದಾರೆ. ಮೈಸೂರಿನ ನಾಚನಹಳ್ಳಿ ಪಾಳ್ಯದ 8ನೇ ಕ್ರಾಸ್‌ನಲ್ಲಿ ಸಮ್ರೀನ್ ಎಂಬ ಮಹಿಳೆ ತನ್ನ ಪರಿ ರಫಿ ಮನೆ ಮುಂದೆ ಮಾಟ ಮಾಡಿಸಿದ್ದಾಳೆ. ಪತಿಯ ಮನೆ ಮುಂದೆ ಮಡಿಕೆ, ನಿಂಬೆಹಣ್ಣು, ಮೆಣಸಿನಕಾಯಿ, ಉಪ್ಪು ಸೇರಿ ಹಲವು ವಸ್ತುಗಳನ್ನು ಹಾಕಲು ಬಂದಿದ್ದಾಗ ಸಾರ್ವಜನಿಕರು ಮಹಿಳೆಯನ್ನು ಹಿಡಿದಿದ್ದಾರೆ.
ಕೆಲವು ದಿನಗಳಿಂದ ಪತಿಯಿಂದ ದೂರವಾಗಿದ್ದ ಸಮ್ರೀನ್, ಪ್ರತಿ ಅಮಾವಾಸ್ಯೆ ದಿನ ರಫೀ ಮನೆ ಮುಂದೆ ಮಾಟ ಮಂತ್ರ ಮಾಡಿಸುತ್ತಿದ್ದಳಂತೆ. ಪ್ರತಿ ಅಮಾವಾಸ್ಯೆಯಂದು ರಫಿ ಮನೆ ಮುಂದೆ ಮಾಟ ಮಂತ್ರದ ವಸ್ತುಗಳು ಬಿದ್ದಿರುತ್ತಿದ್ದವು. ನಿನ್ನೆ(ಮಾರ್ಚ್ 21) ರಾತ್ರಿ ಮಾಟ ಮಂತ್ರದ ವಸ್ತುಗಳನ್ನು ಹಾಕುವಾಗ ರೆಡ್ ಹ್ಯಾಂಡ್ ಆಗಿ ಸಮ್ರೀನ್‌ಳನ್ನು ಹಿಡಿದಿದ್ದಾರೆ. ವಿದ್ಯಾರಣ್ಯಪುರಂ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ.
ಅಮಾವಾಸ್ಯೆಯ ರಾತ್ರಿಗಳನ್ನು ತಂತ್ರ-ಮಂತ್ರಗಳ ಸಿದ್ಧಿಗಾಗಿ ವಿಶೇಷ ದಿನವೆಂದು ಪರಿಗಣಿಸಲಾಗುತ್ತದೆ. ಹೀಗಾಗಿ ಈ ಅಮವಾಸ್ಯೆಯ ರಾತ್ರಿಯಂದು ಅನೇಕರು ಮಾಟ ಮಂತ್ರಗಳನ್ನು ಮಾಡಿಸುತ್ತಾರೆ. ಈ ದಿನಗಳಲ್ಲಿ ತಾಂತ್ರಿಕರು ಮತ್ತು ಅಘೋರಿಗಳು ಅಮವಾಸ್ಯೆಯ ರಾತ್ರಿ ತಮ್ಮ ಶಕ್ತಿಯನ್ನು ಸಾಧಿಸುತ್ತಾರೆ ಎನ್ನಲಾಗುತ್ತದೆ. ಕೆಲ ವಿಶೇಷ ದಿನಗಳಂದು ಅವರು ಮಾಡುವ ತಾಂತ್ರಿಕ ಸಾಧನೆ ವಿಶೇಷ ಫಲಿತಾಂಶಗಳನ್ನು ನೀಡುತ್ತದೆ ಎಂದು ತಂತ್ರ ಶಾಸ್ತ್ರಗಳಲ್ಲಿ ಉಲ್ಲೇಖಿಸಲಾಗಿದೆ. ಆದ್ರೆ ಅನೇಕರು ಈ ಮಾಟ-ಮಂತ್ರಗಳನ್ನು ನಂಬುವುದಿಲ್ಲ.
ಹಾಸನ: ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ದೆಹಲಿ ಪೊಲೀಸರು ನೋಟಿಸ್ ಕೊಟ್ಟ ವಿಚಾರಕ್ಕೆ ಡಿಸಿಎಂ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. ಈ ಕುರಿತು…
ಹಾಸನ: ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಒಂದು ವರ್ಷದೊಳಗೆ ಎಲ್ಲ ಗ್ಯಾರಂಟಿ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೊಳಿಸಿದ್ದು, ಕರ್ನಾಟಕದ ಇತಿಹಾಸದಲ್ಲಿಯೇ ಕಾಂಗ್ರೆಸ್…
ನಂಜನಗೂಡು: ಜಮೀನಿನಲ್ಲಿ ಭಾರೀ ಗಾತ್ರದ ಹೆಬ್ಬಾವು ಪತ್ತೆಯಾಗಿದ್ದು, ಅರಣ್ಯ ಇಲಾಖೆ ಸಿಬ್ಬಂದಿಗಳು ರಕ್ಷಿಸಿ ಸುರಕ್ಷಿತ ಪ್ರದೇಶಕ್ಕೆ ಬಿಟ್ಟಿದ್ದಾರೆ. ಜಿಲ್ಲೆಯ ನಂಜನಗೂಡು…
ಮಂಡ್ಯ: ಸುಮಾರು 15 ತಿಂಗಳಿನಿಂದ ವೇತನ ಸಿಗದೇ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದ ಮಂಡ್ಯದ ಮೈಶುಗರ್ ಶಾಲೆಯ ಶಿಕ್ಷಕರ ಬಾಕಿ ವೇತನಕ್ಕಾಗಿ…
ಹಾಸನ: ಗ್ಯಾರಂಟಿಗೆ ಕೋಟಿಗಟ್ಟಲೇ ಹಣ ಖರ್ಚು ಮಾಡ್ತಿರೋದು ಸಮಾನತೆ ತರಲು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಈ ಕುರಿತು ಹಾಸನದಲ್ಲಿ…
ಬಳ್ಳಾರಿ: ಹೊಸಪೇಟೆ ಹೊರವಲಯದಲ್ಲಿರುವ ತುಂಗಭದ್ರಾ ಜಲಾಶಯದ ಕ್ರಸ್ಟ್ ಗೇಟ್ ಅಳವಡಿಕೆ ಕಾರ್ಯಕ್ಕೆ ಚಾಲನೆ ಸಿಕ್ಕಿದೆ. ಜಲಾಶಯದ ಮೇಲ್ಬಾಗದಲ್ಲಿ ಗೇಟ್ ಮುಂದೆ…