ಜಿಲ್ಲೆಗಳು

ಹುಬ್ಬಳ್ಳಿ-ಬೆಂಗಳೂರು ಪ್ರಯಾಣಿಕರಿಗೆ ಸಿಹಿ ಸುದ್ದಿ: ಇನ್ಮುಂದೆ ಅರಸೀಕೆರೆಯಲ್ಲೂ ಎಕ್ಸಪ್ರೆಸ್​ ರೈಲನ್ನು ಹತ್ತಬಹುದು

ಹುಬ್ಬಳ್ಳಿ: ಶ್ರೀ ಸಿದ್ಧಾರೂಢ ಸ್ವಾಮೀಜಿ ರೈಲು ನಿಲ್ದಾಣ ಹುಬ್ಬಳ್ಳಿಯಿಂದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣ ಬೆಂಗಳೂರಿಗೆ ಸಂಪರ್ಕಿಸುವ (ರೈಲು ಸಂಖ್ಯೆ 07339/07340 ಮತ್ತು 07353/07354) ರೈಲು ಇನ್ಮುಂದೆ ಅರಸಿಕೇರೆ ನಿಲ್ದಾಣದಲ್ಲೂ ನಿಲ್ಲುತ್ತದೆ. ಪ್ರಯಾಣಿಕರ ಅನುಕೂಲಕ್ಕಾಗಿ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಪ್ರತಿದಿನ ಸಂಚರಿಸುವ ಎಸ್​ಎಸ್​ಎಸ್​ ಹುಬ್ಬಳ್ಳಿ -ಕೆಎಸ್​ಆರ್​ ಬೆಂಗಳೂರು -ಎಸ್​ಎಸ್​​ಎಸ್​ ಹುಬ್ಬಳ್ಳಿ ದೈನಂದಿನ ವಿಶೇಷ ಎಕ್ಸಪ್ರೆಸ್​ ರೈಲು (ರೈಲು ಸಂಖ್ಯೆ 07339/07340) ರೈಲನ್ನು ಇನ್ಮುಂದೆ ಎರಡು ಮಾರ್ಗದಲ್ಲೂ ಅರಸಿಕೇರೆ ನಿಲ್ದಾಣದಲ್ಲಿ ನಿಲ್ಲಿಸಲಾಗುತ್ತದೆ.

ರೈಲು ಸಂಖ್ಯೆ 07339 ರೈಲು ಇಂದು (ಮಾ.22) ಬೆಳಿಗ್ಗೆ 3:33ಕ್ಕೆ ಅರಸಿಕೇರೆ ತಲುಪಿದ್ದು, 3:36 ಬೆಳಗ್ಗೆ ಅಲ್ಲಿಂದ ಹೊರಟಿದೆ. ಅದೇ ರೀತಿ, ಹಿಂದಿರುಗುವ ಸಮಯದಲ್ಲಿ, ರೈಲು ಸಂಖ್ಯೆ 07340 ಕೆಎಸ್‌ಆರ್ ರಾತ್ರಿ 02:07 ಕ್ಕೆ ಅರಸೀಕೆರೆಗೆ ಆಗಮಿಸಲಿದ್ದು, ಅಲ್ಲಿಂದ 02:10 ಕ್ಕೆ ಹೊರಡಲಿದೆ.

ಮಾರ್ಚ್ 23, 2023 ರಿಂದ ಜಾರಿಗೆ ಬರುವಂತೆ, ರೈಲು ಸಂಖ್ಯೆ 07353/07354 ಕೆಎಸ್‌ಆರ್ ಬೆಂಗಳೂರು-ಎಸ್‌ಎಸ್‌ಎಸ್ ಹುಬ್ಬಳ್ಳಿ-ಕೆಎಸ್‌ಆರ್ ಬೆಂಗಳೂರು ದೈನಂದಿನ ವಿಶೇಷ ಎಕ್ಸ್‌ಪ್ರೆಸ್ ಎರಡು ದಿಕ್ಕುಗಳಲ್ಲಿ ಯಶವಂತಪುರ, ತುಮಕೂರು ಮತ್ತು ಅರಸೀಕೆರೆ ನಿಲ್ದಾಣಗಳಲ್ಲಿ ಹೆಚ್ಚುವರಿ ನಿಲುಗಡೆಗಳನ್ನು ಹೊಂದಿರುತ್ತದೆ.

ಈ ರೈಲು (07353) ಯಶವಂತಪುರಕ್ಕೆ 07:39/07:41 ಕ್ಕೆ, ತುಮಕೂರು 08:28/08:30 ಕ್ಕೆ ಮತ್ತು ಅರಸೀಕೆರೆ 09:40 ಅಥವಾ 09:43 ಕ್ಕೆ ಆಗಮಿಸಲಿದೆ. ಅದೇ ರೀತಿ, ಹಿಂದಿರುಗುವ ದಿಕ್ಕಿನಲ್ಲಿ, ರೈಲು ಸಂಖ್ಯೆ (07354) ಅರಸೀಕೆರೆಗೆ ಸಂಜೆ 07:17 ಅಥವಾ 07:20 ಕ್ಕೆ, ತುಮಕೂರು ರಾತ್ರಿ 08:48 ಅಥವಾ 08:50 ಕ್ಕೆ ಮತ್ತು ಯಶವಂತಪುರ ರಾತ್ರಿ 10:08/10:10 ಕ್ಕೆ ತಲುಪಲಿದೆ.

lokesh

Recent Posts

ಎಸ್ಐಆರ್ ಪ್ರಕ್ರಿಯೆ ರದ್ದಾಗಬೇಕು: ಸಚಿವ ಯತೀಂದ್ರ ಸಿದ್ದರಾಮಯ್ಯ

ಮೈಸೂರು: ರಾಜ್ಯದಲ್ಲಿ ನಡೆಯುತ್ತಿರುವ ಎಸ್ಐಆರ್ ಪ್ರಕ್ರಿಯೆ ರದ್ದಾಗಬೇಕು ಎಂದು ಸಚಿಚ ಯತೀಂದ್ರ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ. ಈ ಬಗ್ಗೆ ಮೈಸೂರಿನಲ್ಲಿಂದು ಸುದ್ದಿಗಾರರ…

14 hours ago

ನಾಡಹಬ್ಬ ಮೈಸೂರು ದಸರಾ: ಸಂಪ್ರದಾಯದಂತೆ ಪ್ರಮೋದಾ ದೇವಿ ಒಡೆಯರ್ ಗೆ ಆಹ್ವಾನ

ಮೈಸೂರು: ಮೈಸೂರು ದಸರಾ ಮಹೋತ್ಸವ ರಂಗೇರುತ್ತಿದೆ. ರಾಜವಂಶಸ್ಥರಾದ ಪ್ರಮೋದಾ ದೇವಿ ಒಡೆಯರ್ ಅವರಿಗೆ ದಸರಾಗೆ ಆಹ್ವಾನಿಸಲಾಗಿದೆ. ಈ ಬಗ್ಗೆ ಮಾತನಾಡಿದ…

14 hours ago

ಕೊಡಗು: ಭಾರೀ ಗಾಳಿ ಮಳೆಗೆ ಪಿಕಪ್ ವಾಹನದ ಮೇಲೆ ಬಿದ್ದ ಮರ: ಕೂದಲೆಳೆಯಲ್ಲಿ ಪಾರಾದ ಚಾಲಕ

ಕೊಡಗು: ಭಾರೀ ಗಾಳಿ ಮಳೆಗೆ ಪಿಕಪ್ ವಾಹನದ ಮೇಲೆ ಮರ ಬಿದ್ದಿದ್ದು, ಕೂದಲೆಳೆ ಅಂತರದಲ್ಲಿ ಚಾಲಕ ಪಾರಾಗಿದ್ದಾನೆ. ಕೂಡುಮಂಗಳೂರು ದೊಡ್ಡಮ್ಮತಾಯಿ…

20 hours ago

ಓದುಗರ ಪತ್ರ: ಗೊಬ್ಬಳಿ ಮರ ಬಸ್‌ನಿಲ್ದಾಣದ ಆವರಣ ಸ್ವಚ್ಛವಾಗಿರಲಿ

ಸಾಂಸ್ಕೃತಿಕ ನಗರಿ ಮೈಸೂರಿನ ದಕ್ಷಿಣ ಭಾಗದ ಜೆ. ಪಿ. ನಗರದ ಅಕ್ಕಮಹಾದೇವಿ ರಸ್ತೆಯ ಗೊಬ್ಬಳಿ ಮರ ಬಸ್ ನಿಲ್ದಾಣವು ಪ್ರತಿನಿತ್ಯ…

21 hours ago

ಓದುಗರ ಪತ್ರ: ಮಹಾತ್ಮರ ರಾಮರಾಜ್ಯದ ಕಲ್ಪನೆಯ ಸಂದೇಶ ಸಾಕಾರಗೊಳ್ಳಲಿ

ಗಾಂಧಿ ಜಯಂತಿಯಾದ ಅ.೨ರಂದು ದೇಶಾದ್ಯಂತ ರಾಷ್ಟ್ರಪಿತ ಮಹಾತ್ಮ ಗಾಂಧಿಯವರನ್ನು ನೆನೆಯಲಾಗುತ್ತದೆ. ಬಾಪು ಎಂದೇ ಕರೆಯಲ್ಪಡುವ ಗಾಂಧೀಜಿ ಈ ದೇಶದ ಸ್ವಾತಂತ್ರಕ್ಕಾಗಿ…

21 hours ago

ಓದುಗರ ಪತ್ರ: ಇಬ್ಬರು ಮಹಾನ್ ನಾಯಕರ ಆಶಯ ಮುಂದಿನ ಪೀಳಿಗೆಗೆ ದಾಟಿಸಲಿ

ದೇಶದ ಇತಿಹಾಸದಲ್ಲಿ ಅಕ್ಟೋಬರ್ ೨ಕ್ಕೆ ವಿಶೇಷವಾದ ಸ್ಥಾನವಿದೆ. ಈ ದಿನ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಜನ್ಮದಿನದ ಜೊತೆಗೆ, ಭಾರತದ ಮಾಜಿ…

21 hours ago