ಮೇ ಒಳಗೆ ಅಶೋಕಪುರಂ ರೈಲು ನಿಲ್ದಾಣ ಮೇಲ್ದರ್ಜೆ ಕಾಮಗಾರಿ ಪೂರ್ಣ : ಸಂಸದ ಪ್ರತಾಪಸಿಂಹ
ಮೈಸೂರು: ಮುಂದಿನ 30 ರಿಂದ 50 ವರ್ಷಗಳಲ್ಲಿ ಪ್ರಯಾಣಿಕರ ಓಡಾಟ, ಹೆಚ್ಚುವರಿ ರೈಲುಗಳ ಸಂಚಾರದಿಂದ ಎದುರಾಗುವ ಒತ್ತಡ ತಗ್ಗಿಸಿ, ಪ್ರಯಾಣಿಕರಿಗೆ ಮತ್ತಷ್ಟು ಅನುಕೂಲ ಮಾಡಿಕೊಡಲು ಅಶೋಕಪುರಂ ರೈಲು ನಿಲ್ದಾಣವನ್ನು ಎರಡನೇ ನಿಲ್ದಾಣವನ್ನಾಗಿ ಅಭಿವೃದ್ಧಿಪಡಿಸಲು 30 ಕೋಟಿ ರೂ.ವೆಚ್ಚದಲ್ಲಿ ನಡೆಯುತ್ತಿರುವ ಕಾಮಗಾರಿ ನಾಲ್ಕೈದು ತಿಂಗಳಲ್ಲಿ ಮುಗಿಯಲಿದೆ.
ಬೆಳಗೊಳ ಬಳಿ ಎರಡು ಪ್ಲಾಟ್ ಫಾ-ರಂ ಹಾಗೂ ಅಶೋಕಪುರಂ ನಿಲ್ದಾಣದಲ್ಲಿ ಹೆಚ್ಚುವರಿಯಾಗಿ ಎರಡು -ಪ್ಲಾಟ್ ಫಾ-ರಂಗಳು ನಿರ್ಮಾಣವಾಗುವುದರಿಂದ ಕೇಂದ್ರೀಯ ರೈಲು ನಿಲ್ದಾಣದ ಮೇಲೆ ಸಾಕಷ್ಟು ಒತ್ತಡ ಕಡಿಮೆಯಾಗಲಿದೆ. ಕೇಂದ್ರೀಯ ರೈಲು ನಿಲ್ದಾಣದಿಂದ ಓಡಾಡುವ ರೈಲುಗಳಲ್ಲಿ ಕೆಲವು ರೈಲುಗಳನ್ನು ಅಶೋಕಪುರಂ ನಿಲ್ದಾಣದಿಂದ ಪ್ರಾರಂಭವಾಗುವಂತೆ ಮಾಡುವ ಯೋಚನೆಯಿದೆ. ಹೀಗಾಗಿ, ಅಶೋಕಪುರಂ ನಿಲ್ದಾಣದ ಬಳಿ ಕೈಗೊಂಡಿರುವ ವಿವಿಧ ಕಾಮಗಾರಿಗಳು ಭರದಿಂದ ಸಾಗಿದೆ.
ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಸದಸ್ಯ ಪ್ರತಾಪ್ ಸಿಂಹ ಅವರು, ಅಶೋಕಪುರಂ ರೈಲು ನಿಲ್ದಾಣದಲ್ಲಿ ನಡೆಯುತ್ತಿರುವ ಕಾಮಗಾರಿಯನ್ನು ಅಧಿಕಾರಿಗಳೊಂದಿಗೆ ವೀಕ್ಷಿಸಿದರು.
ರೈಲ್ವೆ ವಿಭಾಗೀಯ ನಿಯಂತ್ರಣಾಧಿಕಾರಿ ರಾಹುಲ್ ಅಗರವಾಲ್ ಅವರು ಕಾಮಗಾರಿ ಪ್ರಗತಿ ಕುರಿತು ಮಾಹಿತಿ ನೀಡಿದರೆ, ಉಪ ವಿಭಾಗಾಽಕಾರಿ ಕಮಲಾ ಭಾಯಿ ಅವರು ಭೂ ಸ್ವಾಧೀನಕ್ಕೆ ಸಂಬಂಧಿಸಿದಂತೆ ಆಗಬೇಕಿರುವ ಕೆಲಸದ ಬಗ್ಗೆ ವಿವರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಪ್ರತಾಪ್ ಸಿಂಹ, ಬೆಂಗಳೂರಿನಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದ ಒತ್ತಡ ತಗ್ಗಿಸಲು ಕಂಟೋನ್‌ಮೆಂಟ್, ಬೈಯಪ್ಪನಹಳ್ಳಿ, ಕೆಂಗೇರಿ, ಯಶವಂತಪುರ ರೈಲು ನಿಲ್ದಾಣಗಳನ್ನು ವಿಸ್ತರಿಸಲಾಗಿದೆ. ಅದೇ ರೀತಿ ಮುಂದಿನ 50 ವರ್ಷಗಳ ಪ್ರಯಾಣಿಕರ ಓಡಾಟವನ್ನು ಗಮನದಲ್ಲಿಟ್ಟುಕೊಂಡು ರೈಲು ನಿಲ್ದಾಣಗಳಿಗೆ ಬೇಡಿಕೆ ಬರುವ ಕಾರಣ ಅಶೋಕಪುರಂ ರೈಲು ನಿಲ್ದಾಣವನ್ನು ಎರಡನೇ ನಿಲ್ದಾಣವನ್ನಾಗಿ ಮೇಲ್ದರ್ಜೇಗೇರಿಸಿ ಅಭಿವೃದ್ಧಿಪಡಿಸಲಾಗುವುದು ಎಂದರು.
ವಿಶ್ವಮಾನವ ಎಕ್ಸ್‌ಪ್ರೆಸ್ ರೈಲನ್ನು ಅಶೋಕಪುರಂ ನಿಲ್ದಾಣದಿಂದಲೇ ಆರಂಭಿಸಬೇಕೆಂಬ ಯೋಚನೆ ಇತ್ತಾದರೂ ಅದು ಸಾಧ್ಯವಾಗಿರಲಿಲ್ಲ. ಈಗ ಹೆಚ್ಚುವರಿಯಾಗಿ ಎರಡು -ಪ್ಲಾಟ್ ಫಾ-ರಂ, ಎರಡು ಸ್ಟೇಬಲಿನ್ ಲೇನ್(ರೈಲುಗಳು ಬಂದು ನಿಲ್ಲುವ ಜಾಗ)ಗಳನ್ನು ನಿರ್ಮಿಸಲಾಗುತ್ತದೆ. ಮೊದಲ ಹಂತದಲ್ಲಿ 15.15 ಕೋಟಿ ಮತ್ತು ಎರಡನೇ ಹಂತದ 13.50 ಕೋಟಿ ಸೇರಿ ಅಂದಾಜು 28.65 ಕೋಟಿ ರೂ. ಖರ್ಚಾಗುತ್ತಿದೆ. ಅಶೋಕಪುರಂ ನಿಲ್ದಾಣ ಭವಿಷ್ಯದಲ್ಲಿ ದೊಡ್ಡ ನಿಲ್ದಾಣವಾಗಲಿದೆ ಎಂದರು.
ಮೇಲ್ಸೇತುವೆ ವಿಸ್ತರಣೆ: ಅಶೋಕಪುರಂ ನಿಲ್ದಾಣಕ್ಕೆ ಬರುವವರು ಎರಡೂ ಬದಿಯಲ್ಲಿ ಬರುವುದಕ್ಕೆ ಸಾಧ್ಯವಾಗದೆ ಸುತ್ತಿ ಬಳಸಿ ಬರುವುದನ್ನು ತಪ್ಪಿಸಲು ಮೇಲ್ಸೇತುವೆ ನಿರ್ಮಾಣ ಮಾಡಲಾಗುತ್ತದೆ. ಈಗ ನಿಲ್ದಾಣದ ಪ್ರವೇಶದಿಂದ ಮೂರು -ಪ್ಲಾಟ್ ಫಾ-ರಂ ತನಕ ಬ್ರಿಡ್ಜ್ ಇದೆ. ಇದನ್ನು ಐದು -ಪ್ಲಾಟ್ ಫಾ-ರಂ ದಾಟಿ ಬರುವಂತೆ ಮಾಡುವ ಜತೆಗೆ ಮತ್ತೊಂದು ಪ್ರವೇಶ ದ್ವಾರ ಮಾಡಲಾಗುತ್ತದೆ. ಈ ಕಡೆಯಿಂದ ಆ ಕಡೆಗೆ ಹೋಗುವುದಕ್ಕೆ ಅನುಕೂಲ ಕಲ್ಪಿಸಲಾಗುವುದು.ಇದರಿಂದ ಜಯನಗರ, ಕುವೆಂಪುನಗರ ಮೊದಲಾದ ಕಡೆಗಳಿಂದ ಬರುವವರಿಗೆ ಅನುಕೂಲವಾಗಲಿದೆ ಎಂದು ವಿವರಿಸಿದರು.
ಕುಡಿಯುವ ನೀರು ಸೇರಿದಂತೆ ಮೂಲ ಸೌಕರ್ಯಗಳನ್ನು ಒದಗಿಸಲಾಗುವುದು. ಕೇಂದ್ರೀಯ ರೈಲು ನಿಲ್ದಾಣದಲ್ಲಿ ಹೆಚ್ಚುವರಿ ರೈಲುಗಳನ್ನು ನಿಲ್ಲಿಸಲು ಸಾಧ್ಯವಾಗದೆ ಇರುವ ಕಾರಣ ಅಶೋಕಪುರಂ ನಿಲ್ದಾಣಕ್ಕೆ ಬಂದು ನಿಲುಗಡೆ ಮಾಡಬಹುದು. ಅದಕ್ಕಾಗಿ ಐದು ಸಾವಿರ ಚದರ ಅಡಿ ಜಾಗದಲ್ಲಿ ಎರಡು ಸ್ಬೇಬಲಿನ್ ಲೇನ್‌ಗಳನ್ನು ನಿರ್ಮಾಣ ಮಾಡಲಾಗುತ್ತದೆ ಎಂದು ನುಡಿದರು.
ಜಾಗದ ಸಮಸ್ಯೆಗೆ ಶೀಘ್ರ ಇತ್ಯರ್ಥ
ನಿಲ್ದಾಣದ ಬಳಿ ರೈಲ್ವೆ ಇಲಾಖೆಗೆ ಸೇರಿದ ಜಾಗವನ್ನು ನಗರಪಾಲಿಕೆಗೆ ಹಸ್ತಾಂತರಿಸಲಾಗಿತ್ತು. ಇದೀಗ ವಾಪಸ್ ಪಡೆಯಲಾಗುತ್ತಿದೆ. ಅದೇ ರೀತಿ ಮೂರು ಸಾವಿರ ಚದರ ಅಡಿ ಜಾಗವು ಖಾಸಗಿಯವರಲ್ಲಿದ್ದು, ಭೂ ಪರಿಹಾರ ಕೊಟ್ಟು ವಶಕ್ಕೆ ಪಡೆಯಲಾಗುತ್ತದೆ. ಉಪ ವಿಭಾಗಾಧಿಕಾರಿಗಳು ಈ ಬಗ್ಗೆ ವರದಿ ಸಲ್ಲಿಸುತ್ತಿದ್ದಂತೆ ಭೂ ಪರಿಹಾರ ಕಲ್ಪಿಸಲಾಗುವುದು ಎಂದು ಹೇಳಿದರು.
ಉಪ ವಿಭಾಗಾಧಿಕಾರಿ ಕಮಲಾಭಾಯಿ, ವಿಭಾಗೀಯ ರೈಲ್ವೆ ನಿಯಂತ್ರಣಾಧಿಕಾರಿ ರಾಹುಲ್ ಅಗರ್‌ವಾಲ್, ಸೀನಿಯರ್ ಡಿವಿಷನಲ್ ಇಂಜಿನಿಯರ್ ರವಿಚಂದ್ರ, ಕಾರ್ಯಪಾಲಕ ಇಂಜಿನಿಯರ್ ಕೆ.ಪಿ.ನಾಯ್ಡು, ಕೇಶವಮೂರ್ತಿ ಹಾಜರಿದ್ದರು. –
ಬೆಂಗಳೂರು : ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಅವರು ಬುಧವಾರ (ಜನವರಿ 7) ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ…
ಮೈಸೂರು : ಮಾದಕ ವ್ಯಸನಿಗಳಾದ ನಾಲ್ವರು ಯುವಕರ ತಂಡ ಪೊಲೀಸ್ ಕಾನ್‌ಸ್ಟೇಬಲ್ ಮೇಲೆ ಹಲ್ಲೆ ನಡೆಸಿ ನಗದು ಹಾಗೂ ಮೊಬೈಲ್…
ಸಾವಿರಾರು ಹೆಜ್ಜೆಗಳೊಂದಿಗೆ ಆರೋಗ್ಯದ ಸಂದೇಶ ಜ.11ರಂದು ನಡೆಯಲಿರುವ ಜಾಗೃತಿ ಅಭಿಯಾನ ಮೈಸೂರು : ಹಲವು ಮೊದಲುಗಳಿಗೆ ನಾಂದಿ ಹಾಡಿರುವ ಸಾಂಸ್ಕೃತಿಕ…
ರಾಂಚಿ : ಉತ್ತರ ಭಾರತವು ತೀವ್ರ ಶೀತಗಾಳಿಗೆ ತತ್ತರಿಸಿದ್ದು, ಭಾರೀ ಹಿಮಪಾತದಿಂದ ಪಟ್ಟಣಗಳು, ದೇವಾಲಯಗಳು ಮತ್ತು ಸುತ್ತಮುತ್ತಲಿನ ಬೆಟ್ಟಗಳು ದಟ್ಟ…
ಸಿದ್ದಾಪುರ : ವಿರಾಜಪೇಟೆ ತಾಲೂಕು ಮಠ ಗ್ರಾಮದಲ್ಲಿ ಬುಧವಾರ ಸಂಜೆ ಹುಲಿಯೊಂದು ಹಾಲು ಕರೆಯುವ ಹಸುವಿನ ಮೇಲೆ ದಾಳಿ ನಡೆಸಿ…
ಹಾವೇರಿ : ಉತ್ತರ ಕರ್ನಾಟಕದ ಹೆಬ್ಬಾಗಿಲು ಎನಿಸಿಕೊಂಡಿರುವ ಹಾವೇರಿ ಜಿಲ್ಲೆಯಲ್ಲಿ ಕ್ಯಾನ್ಸರ್, ಟ್ರಾಮಾ ಸೆಂಟರ್ ಹಾಗೂ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ…