ಜಿಲ್ಲೆಗಳು

ಮೈಸೂರು : ರಾಮಕೃಷ್ಣ ವಿದ್ಯಾ ಶಾಲೆಯಲ್ಲಿ ಇಂದು ಹಾಕಿ ಮಾಂತ್ರಿಕನ ಧ್ಯಾನ

ಮೈಸೂರು : ನಗರದ  ರಾಮಕೃಷ್ಣ ವಿದ್ಯಾ ಶಾಲೆಯಲ್ಲಿ ಇಂದು “ಮೀಟ್ ದಿ ಚಾಂಪಿಯನ್ ” ಸಂಭ್ರಮದ ಆಚರಣೆ  ಬೆಳಿಗ್ಗೆ  ಹಾಕಿ ಆಟಗಾರರಾದ ಮೇಜರ್ ಧ್ಯಾನ್ ಚಂದ್ ಸ್ಮರಣಾರ್ಥವಾಗಿ  ರಾಷ್ಟ್ರೀಯ ಕ್ರೀಡಾ ದಿನದ ಕಾರ್ಯಕ್ರಮವನ್ನು ಆಚರಿಸಲಾಯಿತು.

ಕಾರ್ಯಕ್ರಮದ ಉದ್ಘಾಟನೆ

ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಚಾಂಪಿಯನ್ ಕ್ರೀಡಾಪಟು ಮತ್ತು ಅಂತರರಾಷ್ಟ್ರೀಯ ಪ್ಯಾರಾ ಈಜುಗಾರರಾದ  ನಿರಂಜನ್ ಮುಕುಂದನ್ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಭಾರತೀಯ ಕ್ರೀಡಾ ಪ್ರಾಧಿಕಾರದ ಸ್ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ ದ ಸಹಾಯಕ ನಿರ್ದೇಶಕರಾದ ಡಾ. ಮೋನಿಕಾ ಅವರು ಕೂಡ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ವಿಶೇಷ ಈಜು ಮೂಲಕ ಅತಿಥಿಗಳಿಗೆ ಸ್ವಾಗತ : 

ವಿಶೇಷ ಈಜು ಕೌಶಲ್ಯ

ವಿದ್ಯಾಶಾಲೆಯ ಈಜುಕೊಳದ ಬಳಿ ಆರಂಭವಾದ ಕಾರ್ಯಕ್ರಮದಲ್ಲಿ ಹಲವಾರು ವಿದ್ಯಾರ್ಥಿಗಳು ವಿಶೇಷವಾದ ಈಜು ಕೌಶಲ್ಯಗಳನ್ನು ಪ್ರದರ್ಶಿಸಿ ಕವಾಯತು ಮಾಡಿ ಮುಖ್ಯ ಅತಿಥಿಗಳಿಗೆ ಸ್ವಾಗತ ಕೋರಿದರು. ಕೆಲವು ವಿದ್ಯಾರ್ಥಿಗಳನ್ನು ನಿರಂಜನ್ ಮುಕುಂದನ್ ಅವರನ್ನು ಟೇಬಲ್ ಟೆನಿಸ್ ಆಡಿ ಸಭಾ ಕಾರ್ಯಕ್ರಮದ ಸಾಂಕೇತಿಕ ಉದ್ಘಾಟನೆ ಮಾಡಿದರು.

ನಂತರ ಶಾಲೆಯ ಸಭಾಂಗಣದ ಒಳಗೆ ನಡೆದ ಕಾರ್ಯಕ್ರಮದಲ್ಲಿ ವಿವಿಧ ಶಾಲೆಯ ವಿದ್ಯಾರ್ಥಿಗಳನ್ನು ಉದ್ದೇಶಿಸಿ  ನಿರಂಜನ್ ಮುಕುಂದನ್ ಮಾತನಾಡಿದರು.

ವಿದ್ಯಾರ್ಥಿಗಳೊಂದಿಗೆ ಸಂವಾದ

ಸಮತೋಲನದ ಆಹಾರ, ಉನ್ನತವಾದ ಗುರಿಯನ್ನು ಕ್ರೀಡಾ ಕ್ಷೇತ್ರದಲ್ಲಿ ಇಟ್ಟುಕೊಳ್ಳುವ ಅಗತ್ಯ, ದಿನನಿತ್ಯದ ಸಾಧನೆ, ಪ್ರತಿಕೂಲ ಪರಿಸ್ಥಿತಿಯನ್ನು ಲೆಕ್ಕಿಸದೆ ಮುನ್ನುಗ್ಗುವ ಧೈರ್ಯದ ಮಹತ್ವವನ್ನು ಕುರಿತು ಅವರು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಟ್ಟರು. ವಿದ್ಯಾರ್ಥಿಗಳಿಗೆ ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಲು ಪ್ರೇರಣೆ ನೀಡಿದ ಅವರು ಕಷ್ಟ ಬಂದಾಗ ಕುಗ್ಗದೆ, ಧೈರ್ಯದಿಂದ ಪ್ರಯತ್ನಶೀಲರಾಗವುದರ ಮೂಲಕ ಜಯಶಾಲಿಯಾಗಬಹುದು ಎಂದು ವಿದ್ಯಾರ್ಥಿಗಳಿಗೆ ಯಶಸ್ಸಿನ ಗುಟ್ಟು ಹೇಳಿದರು

ಕಾರ್ಯಕ್ರಮದಲ್ಲಿನ ಗಣ್ಯರು

ರಸಪ್ರಶ್ನೆ  ವಿಜೇತರಿಗೆ ಒಲಂಪಿಕ್ ಜರ್ಸಿ ಬಹುಮಾನ :
ಪ್ರಧಾನಮಂತ್ರಿಯವರ ಸಂದೇಶವಿದ್ದ ವಿಡಿಯೋವನ್ನು ವಿದ್ಯಾರ್ಥಿಗಳಿಗಾಗಿ ಪ್ರದರ್ಶಿಸಲಾಯಿತು. ನಂತರ ಕ್ರೀಡೆಗೆ ಸಂಬಂಧಿಸಿದಂತೆ ನಡೆದ ಒಂದು ರಸಪ್ರಶ್ನೆ ಕಾರ್ಯಕ್ರಮದಲ್ಲಿ ವಿಜೇತ ಐದು ವಿದ್ಯಾರ್ಥಿಗಳಿಗೆ ಒಲಂಪಿಕ್ ಜರ್ಸಿಯನ್ನು ಬಹುಮಾನವಾಗಿ ವಿತರಿಸಲಾಯಿತು. ಹಲವಾರು ವಿದ್ಯಾರ್ಥಿಗಳು ಕೇಳಿದ ಪ್ರಶ್ನೆಗೆ ಸ್ಪೂರ್ತಿದಾಯಕ ಉತ್ತರವನ್ನು ನೀಡುತ್ತಾ ಅವರು ಸಂವಾದವನ್ನು ನಡೆಸಿದರು.

ಸಂವಾದ ನಡೆಸುತ್ತಿರುವುದು

ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಮೈಸೂರಿನ ಶ್ರೀರಾಮಕೃಷ್ಣ ಆಶ್ರಮದ ಅಧ್ಯಕ್ಷರಾದ  ಸ್ವಾಮಿ ಮುಕ್ತಿದಾನಂದ ಜಿ, ವಿದ್ಯಾಶಾಲೆಯ ಮುಖ್ಯಸ್ಥರಾದ ಸ್ವಾಮಿ ಯುಕ್ತೇಶಾನಂದ ಜಿ , ಪ್ರಾಂಶುಪಾಲರಾದ ಶ್ರೀ ಎಸ್ ಬಾಲಾಜಿ ಮತ್ತು ಭಾರತೀಯ ಕ್ರೀಡಾ ಪ್ರಾಧಿಕಾರದ ಉಪನಿರ್ದೇಶಕರಾದ ಡಾ. ಮೋನಿಕಾ ವೇದಿಕೆಯ ಮೇಲೆ ಉಪಸ್ಥಿತರಿದ್ದರು. ವಿದ್ಯಾಶಾಲೆಯ  ದೈಹಿಕ ಶಿಕ್ಷಣ ನಿರ್ದೇಶಕರಾದ  ಡಿ.ಸುದರ್ಶನ್ ಮತ್ತು ಬಿ.ಆರ್.ರವಿ ಅವರು ಉಪಸ್ಥಿತರಿದ್ದರು. ಹಲವಾರು ಶಿಕ್ಷಕರು ಮತ್ತು 500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಂಭ್ರಮಿಸಿದ್ದು ವಿಶೇಷವಾಗಿತ್ತು.

andolanait

Recent Posts

ಮೈಸೂರಿನಲ್ಲಿ ಮಾಗಿ ಉತ್ಸವ: ಸಂಗೀತದ ಹೊನಲು ಹರಿಸಿದ ವಿಜಯ್‌ ಪ್ರಕಾಶ್‌

ಮೈಸೂರು: ಮಾಗಿ ಉತ್ಸವದ ಅಂಗವಾಗಿ ಜಗತ್ಪ್ರಸಿದ್ಧ ಮೈಸೂರು ಅರಮನೆ ಆವರಣದಲ್ಲಿ ಇಂದು ಸಂಜೆ ಖ್ಯಾತ ಗಾಯಕ ವಿಜಯ್‌ ಪ್ರಕಾಶ್‌ ಅವರು…

23 mins ago

ಬಿಆರ್‌ಟಿ ಹುಲಿ ಸಂರಕ್ಷಿತಾರಣ್ಯದಲ್ಲಿ ಪಶು ವೈದ್ಯರ ಕೊರತೆ

ಚಾಮರಾಜನಗರ: ಬಿಆರ್‌ಟಿ ಹುಲಿ ಸಂರಕ್ಷಿತಾರಣ್ಯದಲ್ಲಿ ಪಶು ವೈದ್ಯರ ಕೊರತೆ ಎದ್ದು ಕಾಣುತ್ತಿದ್ದು, ಹೊರಗುತ್ತಿಗೆ ಆಧಾರದಲ್ಲಿ ವೈದ್ಯರ ಹುದ್ದೆಯ ನೇಮಕಾತಿಗೂ ಜಾಹೀರಾತು…

1 hour ago

ರೈತರಿಗೆ ಮತ್ತೊಂದು ಸಂಕಷ್ಟ: ಈ ಬಾರಿ ಮಾವಿನ ಇಳುವರಿ ಭಾರೀ ಇಳಿಕೆ

ಬೆಂಗಳೂರು: ರಾಜ್ಯದಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಿಂದ ಹಣ್ಣುಗಳ ರಾಣಿ ಎಂದು ಕರೆಯಿಸಿಕೊಳ್ಳುವ ಮಾವಿಗೆ ಅನೇಕ ರೋಗಗಳು ಕಾಣಿಸಿಕೊಂಡಿದ್ದು, ರೈತರಿಗೆ ಇಳುವರಿ…

1 hour ago

ಬಂಡೀಪುರದಲ್ಲಿ ಮತ್ತೊಂದು ಕಾಡಾನೆ ಸಾವು

ಗುಂಡ್ಲುಪೇಟೆ: ಗಡಿ ಜಿಲ್ಲೆ ಚಾಮರಾಜನಗರದ ಗುಂಡ್ಲುಪೇಟೆ ತಾಲ್ಲೂಕಿನಲ್ಲಿರುವ ರಾಷ್ಟ್ರೀಯ ಉದ್ಯಾನವನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕುಂದಕೆರೆ ವಲಯದ ಚಿಕ್ಕ…

2 hours ago

ಪ್ರಮುಖ ಆಕರ್ಷಣೀಯ ಕೇಂದ್ರವಾಗಿ ಹೊರಹೊಮ್ಮಿದ ಅಯೋಧ್ಯೆ ರಾಮಮಂದಿರ

ಲಕ್ನೋ: ಆಕರ್ಷಣೀಯ ಪ್ರವಾಸಿತಾಣಗಳ ಪಟ್ಟಿಯಲ್ಲಿ ಅಯೋಧ್ಯೆ ರಾಮಮಂದಿರವು ತಾಜ್‌ಮಹಲನ್ನು ಹಿಂದಿಕ್ಕಿ ನಂಬರ್‌ ಒನ್‌ ಪಟ್ಟ ಪಡೆದಿದೆ. ಈ ಮೂಲಕ ಈಗ…

2 hours ago

ಪ್ರವಾಸಿಗರಿಗೆ ಬಿಗ್‌ ಶಾಕ್: ನಂದಿಗಿರಿಧಾಮದಲ್ಲಿ ಹೊಸ ವರ್ಷಾಚರಣೆಗೆ ಬ್ರೇಕ್‌

ಚಿಕ್ಕಬಳ್ಳಾಪುರ: ನಂದಿಗಿರಿಧಾಮದಲ್ಲಿ ಹೊ ವರ್ಷಾಚರಣೆಗೆ ಬ್ರೇಕ್‌ ನೀಡಲಾಗಿದ್ದು, ಪ್ರವಾಸಿಗರಿಗೆ ಬಿಗ್‌ ಶಾಕ್‌ ಎದುರಾಗಿದೆ. ಪ್ರಕೃತಿ ಮಡಿಲಿನಲ್ಲಿ ಕುಣಿಸು ಕುಪ್ಪಳಿಸಿ ಹೊಸ…

2 hours ago