ಜಿಲ್ಲೆಗಳು

ವೇಶ್ಯಾವಾಟಿಕೆಯಿಂದ ಅಪ್ರಾಪ್ತ ಬಾಲಕಿಯ ರಕ್ಷಣೆ

ಮೈಸೂರು: ವೇಶ್ಯಾವಾಟಿಕೆಗೆಂದು ಕರೆತರಲಾಗಿದ್ದ ಆಂಧ್ರ ಮೂಲದ ಅಪ್ರಾಪ್ತ ಬಾಲಕಿಯನ್ನು ಒಡನಾಡಿ ಸೇವಾ ಸಂಸ್ಥೆ, ನಗರ ಮಾನವ ಸಾಗಾಣಿಕೆ ನಿಗ್ರಹ ದಳ ಮತ್ತು ಜಿಲ್ಲಾ ಮಕ್ಕಳ ಪೊಲೀಸ್ ಘಟಕದ ಜಂಟಿ ಕಾರ್ಯಾಚರಣೆಯ ಮೂಲಕ ನಗರದ ಗ್ರಾಮಾಂತರ ಬಸ್ ನಿಲ್ದಾಣದಲ್ಲಿ ರಕ್ಷಿಸಲಾಗಿದೆ.
ಆಂಧ್ರ ಮೂಲದ ೧೫ ವರ್ಷದ ಅಪ್ರಾಪ್ತ ಬಾಲಕಿಯನ್ನು ರಕ್ಷಿಸಲಾಗಿದ್ದು, ಈಗಾಗಲೇ ಆಕೆ ಆಂಧ್ರದ ಅನಂತಪುರ ಜಿಲ್ಲೆಯಲ್ಲಿ ಒಂದು ವರ್ಷದಿಂದ ಲೈಂಗಿಕವಾಗಿ ವೇಶ್ಯಾವಾಟಿಕೆಗೆ ಬಳಕೆಯಾಗಿರುತ್ತಾಳೆ ಎಂಬುದು ವಿಚಾರಣೆ ವೇಳೆ ತಿಳಿದುಬಂದಿದೆ.
ಕಳೆದ ಕೆಲವು ದಿನಗಳಿಂದ ಇಬ್ಬರು ಮಹಿಳೆಯರು ಈಕೆಯನ್ನು ತಮ್ಮ ಬಳಿ ಇಟ್ಟುಕೊಂಡಿದ್ದಾರೆ. ಅವರಲ್ಲಿ ಒಬ್ಬಳನ್ನು ಬಾಲಕಿಯು ಅಮ್ಮ ಎಂದು ಕರೆಯುತ್ತಾಳಾದರೂ, ಮಹಿಳೆಯರಿಬ್ಬರೂ ಲೈಂಗಿಕ ವೃತ್ತಿಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಇರುವುದು ಖಾತ್ರಿಯಾಗಿದೆ. ಬಾಲಕಿಗೂ ಅವರಿಗೂ ಯಾವುದೇ ರಕ್ತ ಸಂಬಂಧವಿಲ್ಲ.
ಬಾಲಕಿ ಹೇಳುವ ಪ್ರಕಾರ ಆಕೆ ೯ನೇ ತರಗತಿಯವರೆಗೆ ಓದಿದ್ದಾಳೆ. ಆಕೆಯ ತಂದೆ ತಾಯಿ ಇಬ್ಬರು ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಬಾಲಕಿಯ ಸಹೋದರಿಯರು ಎಂದು ಹೇಳಿಕೊಳ್ಳುವ ಸುಮಾರು ೨೩, ೨೪ ವಯಸ್ಸಿನ ಮಹಿಳೆಯರಿಬ್ಬರು ಈಕೆಯನ್ನು ಕರೆದುಕೊಂಡು ಮೈಸೂರಿಗೆ ಬಂದು ಲಾಡ್ಜ್ ಒಂದರಲ್ಲಿ ಉಳಿದುಕೊಂಡಿದ್ದರು.
ಇವರು ಈ ಮೊದಲು ಮೈಸೂರಿಗೆ ವೇಶ್ಯಾವಾಟಿಕೆ ನಡೆಸುವ ಉದ್ದೇಶದಿಂದ ಬಂದು ಹೋಗುತ್ತಿದ್ದರು ಎಂದು ಮಹಿಳೆಯರು ಖುದ್ದು ತಾವೇ ಹೇಳಿಕೊಂಡಿದ್ದಾರೆ. ಇಲ್ಲಿನ ಕೆಲ ಪಿಂಪ್‌ಗಳೊಂದಿಗೆ ಅವರು ಸಂಪರ್ಕದಲ್ಲಿದ್ದರು ಎಂದು ತಿಳಿದುಬಂದಿದೆ. ಈ ಸಂಬಂಧ ಒಡನಾಡಿ ಸೇವಾ ಸಂಸ್ಥೆಗೆ ಮಾಹಿತಿ ಬಂದಿತ್ತು.
ಹೀಗಾಗಿ ಮಂಗಳವಾರ ಬೆಳಿಗ್ಗೆ ಒಡನಾಡಿ ಸೇವಾ ಸಂಸ್ಥೆ ಕಾರ್ಯಕರ್ತರು ಬಾಲಕಿಯ ರಕ್ಷಣೆಗೆ ಕಾರ್ಯಾಚರಣೆ ನಡೆಸಿದ್ದರು. ಈ ವಿಚಾರ ತಿಳಿದ ಅವರು ಆಟೋದಲ್ಲಿ ಎಲ್ಲರನ್ನೂ ಕುಳ್ಳಿರಿಸಿಕೊಂಡು ಗ್ರಾಮಾಂತರ ಬಸ್‌  ನಿಲ್ದಾಣದಲ್ಲಿ ಇವರನ್ನು ಇಳಿಸಿ ಪರಾರಿಯಾಗಿದ್ದಾನೆ.
ಈ ವೇಳೆ ಮಹಿಳೆಯರು ಹಾಗೂ ಬಾಲಕಿಯನ್ನು ನಗರ ಮಾನವ ಸಾಗಾಣಿಕೆ ನಿಗ್ರಹದಳದ ನಿರೀಕ್ಷಕಿ ಅರುಣ್ ಕುಮಾರಿ, ಜಿಲ್ಲಾ ಮಕ್ಕಳ ವಿಶೇಷ ಪೊಲೀಸ್ ಘಟಕದ ಎಸ್.ಶೀಲಾ ಅವರೊಂದಿಗೆ ಒಡನಾಡಿಯ ಸ್ಟ್ಯಾನ್ಲಿ, ಪರಶು, ಪ್ರದೀಪ್, ಶಶಾಂಕ್, ಸುಜನ, ಮಹಾಲಕ್ಷ್ಮಿ, ಸುಮಾ ಅವರ ತಂಡ ಬಾಲಕಿಯನ್ನು ರಕ್ಷಿಸಿದ್ದಾರೆ. ಬಾಲಕಿಯ ಹೇಳಿಕೆಯ ಆಧಾರದ ಮೇಲೆ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ.

andolanait

Recent Posts

ಓದುಗರ ಪತ್ರ: ಪೌರಕಾರ್ಮಿಕರಿಗೆ ಉಚಿತ ಆರೋಗ್ಯ ತಪಾಸಣೆ ಸ್ವಾಗತಾರ್ಹ

ಮೈಸೂರು ನಗರದಲ್ಲಿ ಸ್ವಚ್ಛತಾ ಕಾರ್ಯ ನಿರ್ವಹಿಸುತ್ತಿರುವ ಸ್ವಚ್ಛತೆಯ ಜೀವನಾಡಿಗಳಾಗಿರುವ ಪೌರಕಾರ್ಮಿಕರಿಗೆ, ಮೈಸೂರು ಮಹಾನಗರ ಪಾಲಿಕೆ ವತಿಯಿಂದ ಮಣಿಪಾಲ್ ಆಸ್ಪತ್ರೆಯಲ್ಲಿ ಆಯೋಜಿಸಿದ್ದ…

2 hours ago

ಓದುಗರ ಪತ್ರ: ನಿಜವಾದ ಭಾವೈಕ್ಯತೆಯ ಸಂಗಮ

ಮಂಡ್ಯ ಜಿಯ ಮದ್ದೂರಿನಲ್ಲಿ ಭಾನುವಾರ ಗಣೇಶೋತ್ಸವ ಕಾರ್ಯಕ್ರಮದಲ್ಲಿ ಮುಸ್ಲಿಮರೇ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು, ಗೌರಿ -ಗಣೇಶ ಮೂರ್ತಿಗಳನ್ನು ಹೊತ್ತ ಟ್ರ್ಯಾಕ್ಟರ್…

2 hours ago

ಓದುಗರ ಪತ್ರ: ನಾಡಿಗೆ ಮಾದರಿ!

ನಾಡಿಗೆ ಮಾದರಿ! ವಿವಿಧ ಧರ್ಮ ಸಮುದಾಯಗಳ ಮನಸುಗಳ ಅಕ್ಕರೆಯಲಿ ಬೆಸೆವ ಸ್ನೇಹ ಸೌಹಾರ್ದ ಸಾಮರಸ್ಯದ ಪ್ರತೀಕ, ಹಬ್ಬ ಉತ್ಸವಗಳು! ನಾಡಿಗೆ…

2 hours ago

ಓದುಗರ ಪತ್ರ: ಪ್ರೀತಿಯ ಅಣ್ಣ ಪ್ರತಾಪ್ ಸಿಂಹ…

ನಾವಿಬ್ಬರು ಪ್ರೊ. ಬಿ. ಪಿ. ಮಹೇಶ್ ಚಂದ್ರ ಗುರುಗಳ ಶಿಷ್ಯರು. ನಮ್ಮಿಬ್ಬರಿಗೂ ಪ್ರೊ. ಗುರು ಇಷ್ಟ. ನೀನು ಮಂಗಳೂರು ವಿವಿ,…

2 hours ago

ದಸರಾ ಬರುತ್ತಿದೆ, ಮೈಸೂರು ಸಿದ್ಧವಾಗುತ್ತಿದೆಯೇ?

ಶ್ರೇಯಸ್ ದೇವನೂರು ಅಭಿವೃದ್ಧಿಯ ಹೆಸರಿನಲ್ಲಿ ಅರ್ಧ ಕಾಮಗಾರಿ, ಸಂಚಾರದ ಹೆಸರಿನಲ್ಲಿ ಹೆಚ್ಚುತ್ತಿರುವ ಸಂಕಷ್ಟ  ಮೈಸೂರು ದಸರಾ ಎಂದರೆ ಕೇವಲ ಹತ್ತು…

2 hours ago

ಫಾಲ್ಕೆ ಪ್ರಶಸ್ತಿ ಕಲಾಸೇವೆಗೆ ಸಂದ ಗೌರವ: ಅನಂತ್ ನಾಗ್‌

ಸಂದರ್ಶನ: ಬಾನಾಸು  ಇಂದು ಗುಜರಾತಿನ ಕೆವಾಡಿಯಾದಲ್ಲಿ ೭೨ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ನಡೆಯಲಿದೆ. ಚಿತ್ರರಂಗಕ್ಕೆ ಸಲ್ಲಿಸಿದ ಅಮೋಘ ಸೇವೆಗಾಗಿ…

2 hours ago