2 ಕಿ.ಮೀ.ವ್ಯಾಪ್ತಿಯಲ್ಲಿ ರಾಸಾಯನಿಕ ವಾಸನೆಯಿಂದ ಆತಂಕ
ಮೈಸೂರು : ಬಾತ್ ರೂಮ್ ಆಸಿಡ್ ತಯಾರು ಮಾಡುವ ಕಟ್ಟಡದಲ್ಲಿ ಬಾರಿ ಪ್ರಮಾಣದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಕಟ್ಟಡಕ್ಕೆ ಭಾಗಶಃ ಹಾನಿಯಾಗಿದ್ದು, ಕಟ್ಟಡದಲ್ಲಿ ಇದ್ದ ರಸಾಯನಿಕಗಳು ಬೆಂಕಿಗೆ ಆಹುತಿಯಾಗಿವೆ. ಆದರೆ, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ನಗರದ ಯಾದವಗಿರಿಯ ಮೇದರ್ ಬ್ಲಾಕ್‌ನಲ್ಲಿ ರೈಲ್ವೆ ಟ್ರ್ಯಾಕ್ ಎದುರು ನಾಗರಾಜ ಎಂಬವರಿಗೆ ಸೇರಿದ ಕಟ್ಟಡದಲ್ಲಿ ಬುಧವಾರ ಸಂಜೆ ೬ ಗಂಟೆ ಸಮಯದಲ್ಲಿ ಘಟನೆ ಸಂಭವಿಸಿದೆ. ಇಲ್ಲಿ ಬೆಂಕಿ ಹತ್ತಿಕೊಂಡ ಪರಿಣಾಮ ಹೊಗೆ ಮತ್ತು ವಾಸನೆ ಸುಮಾರು ೨ ರಿಂದ ೩ ಕಿ.ಮೀ.ನಗರದ ಸುತ್ತಲು ಒಂದುವರೆ ಗಂಟೆಗಳ ಕಾಲ ಸುತ್ತುವರಿದಿತ್ತು. ಇದರಿಂದ ಆತಂಕದ ವಾತಾವರಣ ಉಂಟಾಗಿತ್ತು.
ಈ ಕಟ್ಟಡವಿರುವ ಆವರಣವನ್ನು ನಾಗರಾಜು ಎಂಬವರು ನಾಲ್ವರಿಗೆ ಬಾಡಿಗೆ ನೀಡಿದ್ದು, ಈ ಜಾಗದಲ್ಲಿ ಒಂದು ಕಟ್ಟಡದಲ್ಲಿ ಆಸಿಡ್, ಥಿನ್ನರ್ ಮತ್ತು ಪೇಯಿಂಟ್ ಕೆಮಿಕಲ್‌ಗಳು ಇದ್ದರೆ. ಮತ್ತೊಂದು ಕಡೆ ರೂಲರ್ ಕೆಮಿಕಲ್, ಪೇಪರ್ ಸಂಬಂಧಿ ವಸ್ತುಗಳ ತಯಾರಿ ನಡೆಯುತ್ತದೆ. ಜೊತೆಗೆ ಪ್ಲಾಸ್ಟಿಕ್ ವೇಸ್ಟ್ ಹಾಕುವುದಕ್ಕೂ ಜಾಗ ಮಾಡಿಕೊಳ್ಳಲಾಗಿದ್ದು, ಬಾಡಿಗೆ ಪಡೆದಿರುವ ಇಮ್ರಾನ್ ಪಾಷ ಎಂಬವರು ಬಾತ್ ರೂಮ್ ಆಸಿಡ್ ತಯಾರಿಸುವ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಇಲ್ಲಿ ಕೆಮಿಕಲ್‌ಗಳು ಇದ್ದ ಕಾರಣ ಕೆಲವೇ ನಿಮಿಷಗಳಲ್ಲಿ ಭಾರೀ ಪ್ರಮಾಣ ಬೆಂಕಿ ಕಾಣಿಸಿಕೊಂಡಿದೆ. ಈ ವೇಳೆ ಕಟ್ಟಡದಲ್ಲಿ ಇಬ್ಬರು ಕೆಲಸ ಮಾಡುತ್ತಿದ್ದರು ಎನ್ನಲಾಗಿದ್ದು, ಅವರು ಹೊರೆಗೆ ಓಡಿ ಬಂದಿದ್ದಾರೆ. ತಕ್ಷಣ ಸ್ಥಳೀಯರು ಅಗ್ನಿಶಾಮಕ ಠಾಣಾ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ.
ಕಾರ್ಯಾಚರಣೆ : ಮುಖ್ಯ ಅಗ್ನಿಶಾಮಕ ಅಧಿಕಾರಿ ಪಿ.ಎಸ್.ಜಯರಾಮಯ್ಯ ಅವರ ನೇತೃತ್ವದಲ್ಲಿ ನಗರದ ಹೆಬ್ಬಾಳ, ಬನ್ನಿಮಂಟಪ, ಸರಸ್ವತಿಪುರಂ ಮೂರು ಅಗ್ನಿಶಾಮಕ ಠಾಣೆಗಳಿಂದ ೬೦ ಸಿಬ್ಬಂದಿ, ೬ ಅಗ್ನಿಶಾಮಕ ವಾಹನಗಳಲ್ಲಿ ಬಂದು ಸುಮಾರು ಒಂದೂವರೆ ಘಂಟೆಗಳ ಕಾಲ ಕಾರ್ಯಾಚರಣೆ ನಡೆಸಲಾಗಿದೆ. ಏಕಿವಿಯಸ್ ಫಿಲ್ಮಂ ಫಾರ್ಮಿಂಗ್ ಪೋಮ್ (ಎಎಫ್‌ಎಫ್‌ಎಫ್) ಎಂಬ ರಾಸಾಯನಿಕವನ್ನು ಬಳಸಿ ಬೆಂಕಿಯನ್ನು ಆರಿಸಲಾಗಿದೆ.
ಬೆಂಕಿ ಹೇಗೆ ಹತ್ತಿಕೊಂಡಿದೆ ಎಂಬುದನ್ನು ಈಗ ತಿಳಿದುಕೊಳ್ಳಬೇಕು. ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಕಟ್ಟಡಕ್ಕೆ ಮಾಲೀಕರಾಗಲಿ, ಇದನ್ನು ಬಾಡಿಗೆ ಪಡೆದವರಾಗಲಿ ಯಾರೂ ಬಂದು ಏನೂ ಹೇಳುತ್ತಿಲ್ಲ. ಒಳಗೆ ಏನೆಲ್ಲ ಇತ್ತು. ಎಷ್ಟು ನಷ್ಟವಾಗಿದೆ ಎಂಬ ಅಂದಾಜನ್ನು ಅವರಿಂದ ಮಾಹಿತಿ ಪಡೆದ ನಂತರವೇ ಹೇಳಬೇಕು.
–ಪಿ.ಎಸ್.ಜಯರಾಮಯ್ಯ, ಅಗ್ನಿಶಾಮಕ ಅಧಿಕಾರಿ
ಮೈಸೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ಬೆನ್ನಲ್ಲೇ ನಟ ದರ್ಶನ್‌ಗೆ ಮತ್ತೊಂದು ಕಾನೂನು ಸಂಕಷ್ಟ ಎದುರಾಗಿದೆ. ಮೈಸೂರಿನ…
ಕೊಪ್ಪಳ: ಐತಿಹಾಸಿಕ ಅಂಜನಾದ್ರಿಗೆ ಸಂಸದ ಯದುವೀರ್ ಒಡೆಯರ್ ಭೇಟಿ ನೀಡಿ ದೇವರ ದರ್ಶನ ಪಡೆದರು. ಹನುಮ ಹುಟ್ಟಿದ ನಾಡು ಎಂದು…
ನವದೆಹಲಿ: ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರು ಬರೋಬ್ಬರಿ 7 ವರ್ಷಗಳ ಬಳಿಕ ಭಾರತಕ್ಕೆ ಆಗಮಿಸಲಿದ್ದಾರೆ. ಸೆಪ್ಟೆಂಬರ್ 12ರಂದು ದೆಹಲಿಗೆ…
ಮೈಸೂರಿನ ಪ್ರಮುಖ ಜೀವವೈವಿಧ್ಯ ತಾಣ ಕುಕ್ಕರಹಳ್ಳಿ ಕೆರೆಗೆ ಪ್ರತಿದಿನ ನೂರಾರು ಸಂಖ್ಯೆಯಲ್ಲಿ ವಾಯುವಿಹಾರಿಗಳು, ಪ್ರವಾಸಿಗರು ಮತ್ತು ಸ್ಥಳೀಯರು ಭೇಟಿ ನೀಡುತ್ತಾರೆ.…
ಬೆಂಗಳೂರಿನ ಯಶವಂತಪುರ ಎಪಿಎಂಸಿ ಮಾರುಕಟ್ಟೆಗೆ ದಿಢೀರ್ ಭೇಟಿ ನೀಡಿ ಅಲ್ಲಿನ ಪರಿಸ್ಥಿತಿಗಳ ಬಗ್ಗೆ ಪರಿಶೀಲಿಸುವ ವೇಳೆ ಅಪ್ರಾಪ್ತ ಮಕ್ಕಳಿಂದ ಕೆಲಸ…
ಮುಂಗಾರು ಬೆಳೆ ಸಮೀಕ್ಷೆಗೆ ಮೊಬೈಲ್ ಆಪ್ ಕಡ್ಡಾಯಗೊಳಿಸಿರುವುದು ತಾಂತ್ರಿಕವಾಗಿ ಉತ್ತಮ ಹೆಜ್ಜೆಯಾದರೂ, ವಾಸ್ತವದಲ್ಲಿ ಇದು ರೈತರಿಗೆ ಕಂಟಕವಾಗುತ್ತಿದೆ. ರಾಜ್ಯದಲ್ಲಿ ಶೇ.೮೦ಕ್ಕೂ…