ಮೇಲುಕೋಟೆ: ಇಲ್ಲಿನ ಚೆಲುವನಾರಾಯಣಸ್ವಾಮಿ ಸಮೂಹ ದೇವಾಲಯಗಳಿಂದ ತ್ರೈಮಾಸಿಕ ಅವಧಿಯಲ್ಲಿ 42,02,955 ಲಕ್ಷ ರೂ. ಹುಂಡಿಕಾಣಿಕೆ ಸಂಗ್ರಹವಾಗಿದೆ.
ಮಂಗಳವಾರ ಯೋಗನರಸಿಂಹಸ್ವಾಮಿ ಮತ್ತು ಬುಧವಾರ ಚೆಲುವನಾರಾಯಣಸ್ವಾಮಿ ದೇವಾಲಯದಲ್ಲಿ ಹುಂಡಿಗಳನ್ನು ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಮಹೇಶ್ ಸಮಕ್ಷಮದಲ್ಲಿ ತೆರೆದು ಎಣಿಕೆ ಮಾಡಲಾಯಿತು.
ಯೋಗಾನರಸಿಂಹಸ್ವಾಮಿ ಬೆಟ್ಟದ ದೇವಾಲಯದಲ್ಲಿ ೧೦,೩೯,೦೭೬ ರೂ., ಚೆಲುವನಾರಾಯಣಸ್ವಾಮಿ ದೇವಾಲಯದಲ್ಲಿ ೩೧,೬೩,೮೭೯ ರೂ. ಸೇರಿ ಒಟ್ಟು ೪೨,೦೨,೯೫೫ ರೂ. ನಗದು ೨೨ಗ್ರಾಂ ಚಿನ್ನ ೭೦೯ಗ್ರಾಂ ಬೆಳ್ಳಿ ಸಂಗ್ರವಾಗಿದೆ. ಪ್ರತಿ ಸಲಕ್ಕಿಂತ ಈ ಸಲ ಹುಂಡಿಯ ಕಾಣಿಕೆ ಸಂಗ್ರಹ ಹೆಚ್ಚಳವಾಗಿದೆ. ಹುಂಡಿಯ ಜೊತೆಗೆ ಇ-ಹುಂಡಿಯಲ್ಲೂ ಭಕ್ತರು ಕಾಣಿಕೆ ಸಲ್ಲಿಸಿದ್ದಾರೆ.
ಹುಂಡಿಗೆ ಭಕ್ತರು ಸುಲಭವಾಗಿ ಹೆಚ್ಚಿನ ಕಾಣಿಕೆ ಹಾಕಲು ಅನುವಾಗುವಂತೆ ಹುಂಡಿಗಳನ್ನು ಇಟ್ಟು ದೇವಾಲಯದ ಆದಾಯ ಹೆಚ್ಚಸಲು ಶ್ರಮಿಸಲಾಗುತ್ತದೆ ಎಂದು ಇಒ ಮಹೇಶ್ ಸುದ್ದಿಗಾರರಿಗೆ ಮಾಹಿತಿ ನೀಡಿದ್ದಾರೆ. ಎರಡು ದಿನಗಳ ಹುಂಡಿ ಎಣಿಕೆಯಲ್ಲಿ ಸ್ಥಳೀಯ ಎಸ್‌ಬಿಐ ವ್ಯವಸ್ಥಾಪಕರು ಮತ್ತು ಸಿಬ್ಬಂದಿ, ಸ್ರೀತ್ತೃಶಕ್ತಿಸಂಘದ ಕಾರ್ಯಕರ್ತರು ದೇವಾಲಯದ ಸಿಬ್ಬಂದಿ ಭಾಗವಹಿಸಿದ್ದರು.
ಬೆಳಗಾವಿ : ಮರಾಠರು ಮುಸ್ಲಿಂ ವಿರೋಧಿ ಅಂತ ಹಣೆಪಟ್ಟಿ ಕಟ್ಟಿಕೊಂಡಿದ್ದೇವೆ. ನಾವು ಮೊಘಲರ ವಿರುದ್ಧ ಇದ್ದೆವು. ಆದರೆ ಮುಸ್ಲಿಂರ ವಿರೋಧಿಗಳಾಗಿರಲಿಲ್ಲ.…
ಮೈಸೂರು : ‘ಹಳೆಯ ಮೈಸೂರು ರಕ್ಷಣೆಯ ನಿಟ್ಟಿನಲ್ಲಿ ಕಾಲಕಾಲಕ್ಕೆ ಸೂಕ್ತ ಕ್ರಮ ವಹಿಸಬೇಕು. ಪಾರಂಪರಿಕ ಕಟ್ಟಡಗಳ ಸಂರಕ್ಷಣೆಗೂ ಆದ್ಯತೆ ನೀಡಬೇಕು.…
ಬೆಳಗಾವಿ : ಕರ್ನಾಟಕ ಬಾಲವಿಕಾಸ ಅಕಾಡೆಮಿಯಿಂದ ಇದೇ ಪ್ರಥಮಬಾರಿಗೆ ಬೆಳಗಾವಿ ಸುವರ್ಣ ವಿಧಾನಸೌಧದ ಉತ್ತರ ಪ್ರವೇಶ ದ್ವಾರದ ಬಳಿ ಇರುವ…
ಹನೂರು : ಅಕ್ರಮ ಗಾಂಜಾ ಮಾರಾಟ ಮಾಡುತ್ತಿದ್ದ ಮಹಿಳೆಯೋರ್ವಳನ್ನು ಮಲೆ ಮಹದೇಶ್ವರ ಬೆಟ್ಟ ಪೊಲೀಸರು ಬಂಧಿಸಿರುವ ಘಟನೆ ಜರುಗಿದೆ. ಹನೂರು…
ಹೊಸದಿಲ್ಲಿ : ದೇಶದ 140 ಕೋಟಿ ಜನರ ಮತದಾನದ ಹಕ್ಕು ಉಳಿಸಲು ನಾವು ಮತಕಳ್ಳತನದ ವಿರುದ್ಧ ಹೋರಾಟ ಮಾಡುತ್ತಿದ್ದೇವೆ. ಇದರಲ್ಲಿ…
ಚಿಕ್ಕಮಗಳೂರು : ಅದೊಂದು ಬಹುಕಾಲದ ಪ್ರೀತಿ, ಪ್ರೀತಿ ಮಾಡಿ, ಪ್ರೇಯಸಿಯಿಂದ ಹಣ ಪಡೆದು, ಇದೀಗ ಬೇರೊಂದು ಮದುವೆಗೆ ಸಿದ್ಧವಾಗಿದ್ದ ಹುಡಗ…