ರಾಜ್ಯ

ಯತ್ನಾಳ್‌, ಸಂತೋಷ್‌ ಲಾಡ್‌ ಮಧ್ಯ ಸೈದ್ಧಾಂತಿಕ ವಾರ್‌ : ಶಿವಾಜಿ ಮುಸ್ಮಿಂ ವಿರೋಧಿಗಳಲ್ಲ ; ಲಾಡ್‌

ಬೆಳಗಾವಿ : ಮರಾಠರು ಮುಸ್ಲಿಂ ವಿರೋಧಿ ಅಂತ‌ ಹಣೆಪಟ್ಟಿ ಕಟ್ಟಿಕೊಂಡಿದ್ದೇವೆ. ನಾವು ಮೊಘಲರ ವಿರುದ್ಧ ಇದ್ದೆವು. ಆದರೆ ಮುಸ್ಲಿಂರ ವಿರೋಧಿಗಳಾಗಿರಲಿಲ್ಲ. ಯಾರು ಶಿವಾಜಿ ‌ಮಹಾರಾಜರನ್ನು ಮುಸ್ಲಿಂ ವಿರೋಧಿ ಅಂತ ಹೇಳಬಾರದು. ಇಲ್ಲಿ ಯಾರೂ ಇತಿಹಾಸದ ಬಗ್ಗೆ ಸುಳ್ಳು ಹೇಳಬಾರದು. ನಾನು ಮರಾಠ ಸಮುದಾಯದವನೇ ಎಂದು ಕಾರ್ಮಿಕ ಸಚಿವ ಸಂತೋಷ್​​ ಲಾಡ್​ ಹೇಳಿದ್ದಾರೆ.

ಜಿಲ್ಲೆಯ ಅಥಣಿಯಲ್ಲಿ ನಡೆದ ಶಿವಾಜಿ ಪ್ರತಿಮೆ ಅನಾವರಣ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವ ಸಂತೋಷ ಲಾಡ್​, ಎಲ್ಲರೂ ಮರಾಠರ ಬಗ್ಗೆ ಮಾತನಾಡುತ್ತಾರೆ. ಆದರೆ ಯಾರೂ ಗ್ರಾಮ ಪಂಚಾಯಿತಿಯಿಂದ ಹಿಡಿದು ಬೇರೆ ಸ್ಥಾನಕ್ಕೆ ಟಿಕೆಟ್ ಕೊಡಿವುದಿಲ್ಲ ಎಂದಿದ್ದಾರೆ. ಶಿವಾಜಿ ‌ಮಹಾರಾಜರನ್ನು ಮುಸ್ಲಿಂ ವಿರೋಧಿ ಅಂತ ಯಾರು ಹೇಳಬಾರದು ಎಂದ ಸಚಿವ ಸಂತೋಷ್ ಲಾಡ್​​ಗೆ ಶಿವಾಜಿ ಸಹೋದರ ಸಂಭಾಜಿ ಮಹಾರಾಜರ ಮೇಲೆ ಮುಸ್ಲಿಂ ಸುಲ್ತಾನರು ನಡೆಸಿದ್ದ ದೌರ್ಜನ್ಯದ ವೇದಿಕೆ ಮೇಲೆ ಶಾಸಕ ಯತ್ನಾಳ್​ ವಿವರಿಸಿದರು. ಈ ಇತಿಹಾಸ ಸುಳ್ಳು ಎಂದು ವಾದಿಸಿ ಸಚಿವ ಸಂತೋಷ್​ ಲಾಡ್​​ ತಮ್ಮ ಭಾಷಣ ಮಾಡಿದರು.

ಇದನ್ನೂ ಓದಿ:-ಪಾರಂಪರಿಕ ಕಟ್ಟಡಗಳ ಸಂರಕ್ಷಣೆಗೂ ಆದ್ಯತೆ ನೀಡಬೇಕು : ಸಂಸದ ಯದುವೀರ್‌

ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಿಷ್ಟು
ಕಾರ್ಯಕ್ರಮದಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮಾತನಾಡಿದ್ದು, ಶಿವಾಜಿ ಮಹಾರಾಜರು ನಮ್ಮ ದೇಶದ ಆದರ್ಶ ವ್ಯಕ್ತಿ. ವಿಜಯಪುರದಲ್ಲಿ ಶಿವಾಜಿ ಪ್ರತಿಮೆ ಕೂರಿಸೋದು ಸುಲಭ ಅಲ್ಲ, ಏಕೆಂದರೆ ಅಲ್ಲಿ ಪಾಕಿಸ್ತಾನ ಮೇಡ್​ ಬಹಳಷ್ಟಿದೆ ಎಂದು ಕಿಡಿಕಾರಿದರು.

ಒಂದು ಮುಂಜಾನೆ ಶಿವಾಜಿ ವಿಜಯಪುರಕ್ಕೆ ಹೊರಟಿದ್ದರು. ದೇಶದ್ರೋಹಿಗಳ ರುಂಡ ಕಡಿಯುವ ಕೆಲಸ ಈಗ ಆಗಬೇಕು. 2028ಕ್ಕೆ ನಾವೆಲ್ಲಾ ಈ ಕೆಲಸ ಮಾಡಬೇಕಿದೆ. ಮರಾಠ ಅಭಿವೃದ್ಧಿ ನಿಗಮ ವಿಚಾರವಾಗಿ ಚರ್ಚೆ ನಡೆಯಿತು. ಮರಾಠಿ ಭಾಷೆ ವಿರೋಧಿಸುತ್ತೀರಿ, ಉರ್ದು ಭಾಷೆ ಎಲ್ಲಿಯದ್ದು? ಮರಾಠಿ ಭಾಷೆ ವಿರೋಧಿಸುವವರು, ಉರ್ದು ಯಾಕೆ ವಿರೋಧಿಸಲ್ಲ. ಧಮ್​, ತಾಕತ್​ ಇದ್ದರೆ ಉರ್ದು ಭಾಷೆ ಬೋರ್ಡ್ ತೆಗೆಸಿರಿ. ಇಲ್ಲಿ ನಾವು ಇನ್ಮುಂದೆ ಜೀವನ ಮಾಡುವುದೇ ಕಷ್ಟ ಇದೆ. ಎಲ್ಲರೂ ಯೋಗಿ ಆದಿತ್ಯನಾಥ್ ಆಗಬೇಕು. ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು. ಬಸನಗೌಡ ಇದ್ದವ ನಾನು ಬಷೀರ್‌ ಅಹ್ಮದ್ ಆಗಬೇಕಾಗುತ್ತಿತ್ತು ಎಂದು ಹೇಳಿದ್ದಾರೆ.

ಆಂದೋಲನ ಡೆಸ್ಕ್

Recent Posts

ಭಾರೀ ಮಳೆಗೆ ಕೊಚ್ಚಿ ಹೋದ ಚೆಕ್ ಡ್ಯಾಂ: 15 ಅಡಿಗೂ ಹೆಚ್ಚು ಪ್ರವಾಹ

ಹನೂರು: ತಾಲ್ಲೂಕಿನ ಶಾಗ್ಯ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಲಾಜರ್ ದೊಡ್ಡಿ ಗ್ರಾಮದಲ್ಲಿ ಒಡಿಪಿ ಸಂಸ್ಥೆಯಿಂದ ನಿರ್ಮಾಣ ಮಾಡಿದ್ದ ಚೆಕ್ ಡ್ಯಾಂ…

9 hours ago

ಭಾರೀ ಮಳೆಗೆ ಮನೆ ಕುಸಿತ: ಲಕ್ಷಾಂತರ ರೂ. ನಷ್ಟ

ಹನೂರು: ತಾಲ್ಲೂಕಿನ ಎಲ್ಲೇಮಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವೈಶಂಪಾಳ್ಯ ಗ್ರಾಮದಲ್ಲಿ ಭಾನುವಾರ ರಾತ್ರಿ ಸುರಿದ ಭಾರೀ ಮಳೆಗೆ ಮನೆ ಸಂಪೂರ್ಣ…

9 hours ago

ಧರ್ಮಸ್ಥಳ ಸೌಜನ್ಯ ಪ್ರಕರಣ: ಮರು ತನಿಖೆಗೆ ಸುಪ್ರೀಂಕೋರ್ಟ್ ಮಹತ್ವದ ಆದೇಶ

ನವದೆಹಲಿ: ಧರ್ಮಸ್ಥಳ ಸೌಜನ್ಯ ಪ್ರಕರಣದ ಮರು ತನಿಖೆಗೆ ಸುಪ್ರೀಂ ಕೋರ್ಟ್ ಮಹತ್ವದ ಆದೇಶ ನೀಡಿದೆ. ನವದೆಹಲಿಯಲ್ಲಿ ನಡೆದ ವಿಚಾರಣೆಯಲ್ಲಿ, ಹಲವು…

10 hours ago

ಕಾಡಾನೆ ದಾಳಿ: ವ್ಯಕ್ತಿ ಸಾವು

ಸರಗೂರು: ಆಸ್ಪತ್ರೆಗೆ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿ ನಡೆಸಿದ ಪರಿಣಾಮ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಸರಗೂರು ತಾಲ್ಲೂಕಿನ ಕಾಡಗೆರೆ ಗ್ರಾಮದ…

12 hours ago

ಗಣೇಶ ವಿಸರ್ಜನೆ ಮೆರವಣಿಗೆ ರಾಜಕೀಯ ದಾಳವಾಗದಿರಲಿ…

ಬ್ರಿಟೀಷರ ವಿರುದ್ಧ ಸಮಾಜವನ್ನು ಅದರಲ್ಲೂ ಯುವಜನರನ್ನು ಸಂಘಟಿಸಿ, ದೇಶಭಕ್ತಿಯನ್ನು ಜಾಗೃತಿಗೊಳಿಸುವ ಮೂಲಕ ಅವರನ್ನು ಸ್ವಾತಂತ್ರ್ಯಸಂಗ್ರಾಮಕ್ಕೆ ಸಜ್ಜುಗೊಳಿಸುವ ಉದ್ದೇಶದಿಂದ ಆರಂಭವಾದ ಸಾರ್ವಜನಿಕ…

16 hours ago

ಕಾಂಗ್ರೆಸ್‌ನಲ್ಲೀಗ ಆತಂಕದ ಕಾರ್ಮೋಡ…

ಬೆಂಗಳೂರು ಡೈರಿ: ಆರ್.ಟಿ.ವಿಠ್ಠಲಮೂರ್ತಿ ಅವರ ವಾರದ ಅಂಕಣ  ಕಳೆದ ಮೂರು ವರ್ಷಗಳಿಂದ ಅಧಿಕಾರ ಹಂಚಿಕೆಯ ಸಂಘರ್ಷದಲ್ಲಿ ಮುಳುಗಿದ್ದ ಆಡಳಿತಾರೂಢ ಕಾಂಗ್ರೆಸ್…

16 hours ago