ಮಂಡ್ಯ

ಮಂಡ್ಯ: ಲಾರಿ ಹರಿದು ಬಾಲಕ ಸಾವು

ಮಂಡ್ಯ: ಲಾರಿ ಹರಿದು ಬಾಲಕನೋರ್ವ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ನಗರದ ನಗರಸಭೆ ಎದುರು ಗುರುವಾರ ಸಂಜೆ ನಡೆದಿದೆ.

ಬೆಂಗಳೂರಿನಲ್ಲಿ ವಾಸವಾಗಿರುವ, ಮೂಲತಃ ತಾಲ್ಲೂಕಿನ ಬಿಳಿದೇಗಲು ಗ್ರಾಮದ ಬಿ.ಸಿ. ಚನ್ನಕೇಶವ ಅವರ ಪುತ್ರ ಲೇಖನ್‌ಗೌಡ (11) ಮೃತ ವಿದ್ಯಾರ್ಥಿ.

ಲೇಖನ್‌ಗೌಡ ರಜೆಯ ನಿಮಿತ್ತ ತಮ್ಮ ಸ್ವಗ್ರಾಮ ಬಿಳಿದೇಗಲು ಗ್ರಾಮಕ್ಕೆ ಬಂದಿದ್ದು, ಕಾರ್ಯನಿಮಿತ್ತ ತನ್ನ ತಾತ ಕುಳ್ಳೇಗೌಡನ ಜೊತೆ ಮಂಡ್ಯ ನಗರಕ್ಕೆ ಟಿವಿಎಸ್ ಮೊಪೆಡ್‌ನಲ್ಲಿ ಬಂದಿದ್ದರು. ಕೆಲಸ ಮುಗಿಸಿಕೊಂಡು ವಾಪಸ್‌ ತೆರಳುತ್ತಿದ್ದಾಗ ಅಕ್ಕಿ ತುಂಬಿದ ಲಾರಿ ನಗರಸಭೆ ಎದುರು ಹಿಂಬದಿಯಿಂದ ಟಿವಿಎಸ್ ಮೊಪೆಡ್‌ಗೆ ಡಿಕ್ಕಿ ಹೊಡೆದಿದೆ.ಈ ಸಂದರ್ಭ ತಾತ ಕುಳ್ಳೇಗೌಡ ಅವರು ಎಡಬದಿಗೆ ಬಿದ್ದರೆ, ಲೇಖನ್‌ಗೌಡ ಬೆಂಗಳೂರು-ಮೈಸೂರು ಹೆದ್ದಾರಿಗೆ ಬಿದ್ದಾಗ ಲಾರಿಯ ಹಿಂಬದಿಯ ಚಕ್ರ ಹರಿದು ಸ್ಥಳದಲ್ಲೇ ಮೃತಪಟ್ಟನು.

ಘಟನೆಯ ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಸಂಚಾರ ಠಾಣೆ ಇನ್‌ಸ್ಪೆಕ್ಟರ್ ಸಂತೋಷ್ ಮತ್ತು ಸಿಬ್ಬಂದಿ ಲಾರಿಯನ್ನು ವಶಕ್ಕೆ ಪಡೆದು, ಚಾಲಕನನ್ನು ಬಂಧಿಸಿದ್ದಾರೆ.

ಅಪಘಾತದಲ್ಲಿ ಗಾಯಗೊಂಡ ಕುಳ್ಳೇಗೌಡ ಅವರನ್ನು ಮಿಮ್ಸ್‌ಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಸಂಚಾರ ಠಾಣೆ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

ಆಂದೋಲನ ಡೆಸ್ಕ್

Recent Posts

ಪೊಲೀಸರ ಮೇಲೆ ಹಲ್ಲೆ: 20 ಜನರ ವಿರುದ್ಧ ಕೇಸ್‌ ದಾಖಲು

ನವದೆಹಲಿ: ಮುಖ್ಯ ಚುನಾವಾಣಾ ಆಯುಕ್ತ ಜ್ಞಾನೇಶ್‌ ಕುಮಾರ್‌ ರಾಜೀನಾಮೆಗೆ ಆಗ್ರಹಿಸಿ ಸಿಜೆಪಿ ನಿನ್ನೆ ಬೃಹತ್‌ ಪ್ರತಿಭಟನೆಗೆ ಕರೆ ನೀಡಿತ್ತು. ಈ…

7 hours ago

ದೇವಿ ಕೃಪೆ ಜನರ ಮೇಲಿರಲಿ, ಜನರ ಕೃಪೆ ನಮ್ಮ ಸರ್ಕಾರದ ಮೇಲಿರಲಿ: ಸಿಎಂ ಡಿಕೆಶಿ

ಮೈಸೂರು:  ಮೈಸೂರು ದಸರಾ ಮಹೋತ್ಸವಕ್ಕೆ ಅದ್ಧೂರಿ ಚಾಲನೆ ಸಿಕ್ಕಿದೆ. ಈ ಹಿನ್ನೆಲೆಯಲ್ಲಿ ಮಾತನಾಡಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌, ದೇವಿಯ ಕೃಪೆ…

9 hours ago

ದಸರಾ ಉದ್ಘಾಟಿಸುವಷ್ಟು ದೊಡ್ಡವನು ನಾನಲ್ಲ: ಗವಿಸಿದ್ದೇಶ್ವರ ಶ್ರೀ

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಉದ್ಘಾಟನಾ ಕಾರ್ಯಕ್ರಮದಲ್ಲಿ ಕೊಪ್ಪಳದ ಗವಿಮಠದ ಶ್ರೀ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ವಿನಮ್ರ ಮಾತುಗಳನ್ನಾಡಿದ್ದಾರೆ. “ದಸರಾ…

9 hours ago

ಮನಸೆಳೆವ ಫಲ ಪುಷ್ಪ ಪ್ರದರ್ಶನ

ಪ್ರಕೃತಿಯೊಂದಿಗೆ ನಂಟನ್ನು ನೆನಪಿಸುವ ಒಂದು ಸುಂದರ ಪಯಣ. 15 ಎಕರೆ ವಿಸ್ತೀರ್ಣ, 70 ಸಸ್ಯಶಾಸ್ತ್ರೀಯ ಜಾತಿಯ 327ಕ್ಕೂ ಹೆಚ್ಚಿನ ವೈವಿಧ್ಯಮಯ…

10 hours ago

ಮೈಸೂರು ದಸರಾ ಮಹೋತ್ಸವಕ್ಕೆ ಅಧಿಕೃತ ಚಾಲನೆ

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಅದ್ಧೂರಿ ಚಾಲನೆ ಸಿಕ್ಕಿದೆ. ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಡೆಯುತ್ತಿರುವ 416ನೇ ನಾಡಹಬ್ಬ ದಸರಾ…

12 hours ago

ಓದುಗರ ಪತ್ರ: ಬಳಸಿದ ಅಡುಗೆ ಎಣ್ಣೆ: ಯೋಜನೆ ಪ್ರಶಂಸನೀಯ

ಬಳಸಿದ ಅಡುಗೆ ಎಣ್ಣೆಯನ್ನು ಸರಕಾರವೇ ಸಂಗ್ರಹಿಸಿ ಜೈವಿಕ ಇಂಧನವಾಗಿ (ಬಯೋಡೀಸೆಲ) ಪರಿವರ್ತಿಸುವ ಯೋಜನೆ ಪ್ರಶಂಸನೀಯ. ಪುನರಾವರ್ತಿತ ಎಣ್ಣೆ ಬಳಕೆಯಿಂದ ಹೊರಹೊಮ್ಮುವ…

12 hours ago