ಮಂಡ್ಯ: ಕರ್ನಾಟಕ ಸಂಭ್ರಮ 50 ರ ಜ್ಯೋತಿ ರಥ ಯಾತ್ರೆಯೂ ರಾಜ್ಯಾದ್ಯಂತ ಸಂಚರಿಸಲಿದ್ದು, ರಾಮನಗರ ಜಿಲ್ಲೆಯಿಂದ ಆಗಸ್ಟ್ 18 ರಂದು ಬೆಳಿಗ್ಗೆ 9 ಗಂಟೆಗೆ ಮಂಡ್ಯ ಜಿಲ್ಲೆಗೆ ಆಗಮಿಸಲಿದೆ. ಜ್ಯೋತಿ ರಥ ಯಾತ್ರೆಯನ್ನು ಅದ್ದೂರಿಯಾಗಿ ಜಿಲ್ಲೆಗೆ ಸ್ವಾಗತಿಸೋಣ ಎಂದು ಅಪರ ಜಿಲ್ಲಾಧಿಕಾರಿ ಡಾ ಹೆಚ್ ಎಲ್ ನಾಗರಾಜು ತಿಳಿಸಿದರು.
ಅವರು ಶುಕ್ರವಾರ(ಆ.10) ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಕರ್ನಾಟಕ ಸಂಭ್ರಮ 50 ರ ಅಂಗವಾಗಿ ಜ್ಯೋತಿ ರಥಯಾತ್ರೆಯನ್ನು ಸ್ವಾಗತಿಸುವ ಕುರಿತು ಸಭೆ ನಡೆಸಿ ಮಾತನಾಡಿದರು.
1973 ರಲ್ಲಿ ಮೈಸೂರು ಪ್ರಾಂತ್ಯಕ್ಕೆ ಹೊಸದಾಗಿ ಕರ್ನಾಟಕ ರಾಜ್ಯ ಎಂದು ನಾಮಕರಣ ಮಾಡಲಾಯಿತು. ಈ ಹಿನ್ನೆಲೆ ಕರ್ನಾಟಕ ರಾಜ್ಯ ಎಂದು ನಾಮಕರಣವಾಗಿ 50 ವರ್ಷಗಳು ಕಳೆದಿದ್ದು, ಅದರ ಸುವರ್ಣ ಸಂಭ್ರಮಾಚಾರಣೆಯನ್ನು ಆಚರಿಸಲಾಗುತ್ತಿದೆ. ಈ ಸಂಬಂಧ ಜ್ಯೋತಿ ರಥ ಯಾತ್ರೆಯು ಆಗಸ್ಟ್ 18 ರಿಂದ 25 ರ ವರೆಗೆ 7 ದಿನಗಳ ಕಾಲ ಜಿಲ್ಲೆಯಲ್ಲಿ ಸಂಚರಿಸಲಿದ್ದು, ಜಿಲ್ಲೆಯ ಪ್ರತಿಯೊಬ್ಬರೂ ರಥವನ್ನು ಸ್ವಾಗತಿಸಿ ಯಾತ್ರೆಯಲ್ಲಿ ಪಾಲ್ಗೊಳ್ಳೋಣ ಎಂದರು.
ಜ್ಯೋತಿ ರಥ ಯಾತ್ರೆಯು ಆಗಸ್ಟ್ 18 ರಂದು – ಮದ್ದೂರು, 19 ರಂದು – ನಾಗಮಂಗಲ, 20 ರಂದು – ಕೆ ಆರ್ ಪೇಟೆ, 21 ರಂದು – ಪಾಂಡವಪುರ, 22 ರಂದು – ಶ್ರೀರಂಗಪಟ್ಟಣ, 23 ರಂದು – ಮಂಡ್ಯ, 24 ರಂದು – ಮಳವಳ್ಳಿ ತಾಲ್ಲೂಕಿನಲ್ಲಿ ಸಂಚಾರಿಸಲಿದೆ. ಆಗಸ್ಟ್ 25 ರಂದು ಚಾಮರಾಜನಗರ ಜಿಲ್ಲೆ ತಲುಪಲಿದೆ ಎಂದರು.
ಸ್ಥಳೀಯ ಆಡಳಿತಾಧಿಕಾರಿಗಳು, ಕನ್ನಡ ಸಾಹಿತ್ಯ ಪರಿಷತ್ ನ ಪದಾಧಿಕಾರಿಗಳು, ಗ್ರಾಮ ಪಂಚಾಯಿತಿಯ ಪಿಡಿಒ ಗಳು, ಜನ ಪ್ರತಿನಿಧಿಗಳು, ಕನ್ನಡ ಪರ ಸಂಘಟನೆಗಳು ಸೇರಿದಂತೆ ವಿವಿಧ ಸಂಘಟನೆಗಳು ಸಂಬAಧಪಟ್ಟ ಸಭೆ ನಡೆಸಿ. ಎಲ್ಲರೂ ಒಟ್ಟಾಗಿ ಸೇರಿಕೊಂಡು ಜ್ಯೋತಿ ರಥ ಯಾತ್ರೆಯನ್ನು ಬರಮಾಡಿಕೊಂಡು ಯಶಸ್ವಿಯಾಗಿ ಸ್ವಾಗತಿಸೋಣ ಎಂದರು.
ಕರ್ನಾಟಕ ಸಂಭ್ರಮ 50 ರ ಜ್ಯೋತಿ ರಥ ಯಾತ್ರೆ ಸಂಚರಿಸುವ ಮಾರ್ಗದಲ್ಲಿ ಬರುವ ಗ್ರಾಮ ಪಂಚಾಯಿತಿ, ತಾಲ್ಲೂಕು ಕಚೇರಿಗಳು ಹಬ್ಬದ ರೀತಿ ಮಾರ್ಗವನ್ನು ಶೃಂಗರಿಸಿ ಅಚ್ಚುಕಟ್ಟಾಗಿ ಕಾರ್ಯಕ್ರಮ ನಿರ್ವಹಿಸಬೇಕು ಎಂದರು.
ಜ್ಯೋತಿ ರಥ ಯಾತ್ರೆಯೂ ಸರ್ಕಾರವು ನಿಗಧಿಪಡಿಸಿರುವ ರೂಟ್ ಮ್ಯಾಪ್ ನಲ್ಲಿಯೇ ಸಂಚರಿಸಬೇಕು. ಯಾವುದೇ ಬದಲಾವಣೆಗೆ ಅವಕಾಶವಿಲ್ಲ.
ಜಿಲ್ಲೆಯ ಎಲ್ಲಾ ತಾಲ್ಲೂಕಿನ ಪುರಸಭೆಗಳು, ಶಾಲಾ ಕಾಲೇಜುಗಳು, ಅಂಗನವಾಡಿ ಕಾರ್ಯಕರ್ತೆಯರು ಸೇರಿದಂತೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಜ್ಯೋತಿ ರಥ ಯಾತ್ರೆಯ ಸಂಭ್ರಮಾಚಾರಣೆಯಲ್ಲಿ ಪಾಲ್ಗೊಳ್ಳಬೇಕು. ರಥವು ಸಂಚಾರಿಸುವ ಸ್ಥಳದಲ್ಲೆಲ್ಲ ಕನ್ನಡ ಘೋಷಣೆಗಳು, ಡೊಳ್ಳು ಕುಣಿತ ಮೆರವಣಿಗೆ, ವಿವಿಧ ಕಲಾತಂಡಗಳು ತಮ್ಮ ಕಲಾಪ್ರದರ್ಶನದೊಂದಿಗೆ ಪಾಲ್ಗೊಳ್ಳುವಂತೆ ಕಾರ್ಯಕ್ರಮ ಆಯೋಜಿಸಬೇಕು ಎಂದರು.
ಜಿಲ್ಲೆಯಲ್ಲಿ ರಥ ಯಾತ್ರೆಯು ಸಂಚಾರಿಸುವ ಮಾರ್ಗಗಳನ್ನು ಸವಿವರವಾಗಿ ಅವರು ತಿಳಿಸಿದರು.
ಸಭೆಯಲ್ಲಿ ಉಪ ವಿಭಾಗಾಧಿಕಾರಿ ಶಿವಮೂರ್ತಿ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ತುಷಾರಮಣಿ, ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯ ಉಪ ನಿರ್ದೇಶಕ ಕೃಷ್ಣಕುಮಾರ್, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಡಾ ಸಿದ್ದಲಿಂಗೇಶ್, ಪಾಂಡವಪುರ ಉಪ ವಿಭಾಗಾಧಿಕಾರಿ ನಂದೀಶ್, ಪದವಿ ಪೂರ್ವ ಕಾಲೇಜಿನ ಉಪ ನಿರ್ದೇಶಕ ಸಿ ಚೆಲುವಯ್ಯ, ಜಿಲ್ಲಾಧಿಕಾರಿಗಳ ಕಚೇರಿಯ ಸಹಾಯಕಿ ಡಾ ರೋಹಿಣಿ, ತಹಶಿಲ್ದಾರ್ ಗ್ರೇಡ್ – 2 ವಸಂತಕುಮಾರ್, ಮುಖಂಡರುಗಳಾದ ಸುಜಾತ ಕೃಷ್ಣ, ಬಿ ಎಂ ಅಪ್ಪಾಜಪ್ಪ, ಆನಂದ್, ಅರುಣ ಕುಮಾರಿ, ನಾಗರಾಜು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಚೆನ್ನೈ : ದಳಪತಿ ವಿಜಯ್ ನಟನೆಯ ‘ಜನ ನಾಯಗನ್’ ಸಿನಿಮಾದ ಪ್ರೀ ರಿಲೀಸ್ ಇವೆಂಟ್ ಡಿಸೆಂಬರ್ 27 ಮಲೇಷ್ಯಾನಲ್ಲಿ ಅದ್ಧೂರಿಯಾಗಿ…
ಬೆಂಗಳೂರು : ಕಾಂಗ್ರೆಸ್ ಎಂದರೆ ಕೇವಲ ಒಂದು ರಾಜಕೀಯ ಪಕ್ಷವಲ್ಲ. ಇದೊಂದು ಚಳುವಳಿ ಮತ್ತು ಸಿದ್ಧಾಂತ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ…
ಗೋಣಿಕೊಪ್ಪ : ಪಟ್ಟಣದಲ್ಲಿ ಬೀದಿನಾಯಿ ದಾಳಿಗೆ ಇಬ್ಬರು ವಿದ್ಯಾರ್ಥಿಗಳೂ ಸೇರಿದಂತೆ ನಾಲ್ವರು ಗಾಯಗೊಂಡಿದ್ದಾರೆ. ಈ ಘಟನೆಯಿಂದ ಎಚ್ಚೆತ್ತ ಸ್ಥಳೀಯರು ಮತ್ತಷ್ಟು…
ಹೊಸದಿಲ್ಲಿ : ಕನ್ನಡ ನಾಡು-ನುಡಿ ನಮ್ಮ ಹೆಮ್ಮೆ, ಕನ್ನಡ ಭೂಮಿ ನಮ್ಮ ಹೆಮ್ಮೆಯಾಗಿದೆ ಎಂದು ಪ್ರಧಾನಿ ನರೇಂದ್ರಮೋದಿ ಅವರು ಮುಕ್ತಕಂಠದಿಂದ…
ಮೈಸೂರು : ಕಾಂಗ್ರೆಸ್ ಪಕ್ಷ ಎಂದರೆ ಅದು ಅಹಿಂದ. ಅದನ್ನು ಅರಿಯದೆ ಅಹಿಂದ ಸಮಾವೇಶ ಮಾಡಿ ಕಾಂಗ್ರೆಸ್ ಪಕ್ಷವನ್ನು ಮುಚ್ಚಲು…
ಮೈಸೂರು : ಲಂಡನ್‌ನ ಬಂಕಿಂಗ್ ಹ್ಯಾಮ್ ಅರಮನೆಯಲ್ಲಿ ಎಲ್ಲರಿಗೂ ಪ್ರವೇಶ ಇಲ್ಲ. ದಿನಕ್ಕೆ ಇಂತಿಷ್ಟೇ ಜನ ಭೇಟಿ ನೀಡಬೇಕು ಎಂಬ…