ಮಂಡ್ಯ: ಕನ್ನಡ ಕರ್ನಾಟಕ ಫೌಂಡೇಶನ್, ಎಂಪ್ಟಿ ಪಾಕೆಟ್ ಡ್ರೀಮ್ಸ್ ಜೊತೆಗೂಡಿ ಆಯೋಜಿಸಿದ್ದ ಆಪ್ತ ಸಂವಾದ: ಒಂದು ಪುಸ್ತಕ ಕ್ರಾಂತಿ ಕಾರ್ಯಕ್ರಮದ ಮೂರನೇಯ ಸಂಚಿಕೆ ಯಶಸ್ವಿಯಾಗಿ ಜರುಗಿತು.
ನಾಟಕ ನೋಡುವುದಕ್ಕೇ ಜನ ಬರುವುದಿಲ್ಲ ಇನ್ನೂ ನಾಟಕ ಕೃತಿ ಓದಿಕೊಂಡು ಬಂದು ಸಂವಾದ ನಡೆಸುವುದು ಉಂಟೇ ಎಂಬ ಸಂಶಯವನ್ನು ತುಂಬಿದ ಸಭಾಂಗಣ ಹಾಗೂ ಎರಡು ತಾಸಿನ ಚರ್ಚೆ ಸುಳ್ಳು ಮಾಡಿತು. ಬೀದಿ ನಾಟಕದಿಂದ ಶುರುವಾಗಿ ವಾಟ್ಸ್ ಅಪ್ ಯೂನಿವರ್ಸಿಟಿವೆರೆಗೆ ಹಲವು ವಿಷಯಗಳು ಬಂದು ಹೋದವು, ಜೇನ್ ಪಾಲ್ ಸಾರ್ತ್ರೆಯಿಂದ ಕೆ. ವಿ. ಶಂಕರಗೌಡ, ಜಿ. ಮಾದೇಗೌಡರರವೆರೆಗೆ ರಾಜಕೀಯ ಸಿದ್ಧಾಂತ ಹಾಗೂ ಜನಪರ ವ್ಯಕ್ತಿತ್ವ ಹಾಗೂ ನಿಲುವುಗಳ ಕುರಿತೂ ಮಾತುಕತೆಯಾಯಿತು.
ಕಲೆಗಾಗಿ ಕಲೆ, ಕಲಾವಿದ ಯಾವ ಪಂಥಕ್ಕೂ ಸೇರಬಾರದು ಎಂಬ ಸ್ವಲಾಭ ಕೇಂದ್ರೀತ ಚಿಂತನೆಗಳನ್ನು ರಾಷ್ಟ ಪ್ರಶಸ್ತಿ ವಿಜೇತ ಚಲನಚಿತ್ರ ನಿರ್ದೇಶಕರಾದರೂ ತಮ್ಮನ್ನು ರಂಗಕರ್ಮಿ ಎಂತಲೇ ಹೆಮ್ಮೆಯಿಂದ ಕರೆದುಕೊಳ್ಳುವ ಬಿ. ಸುರೇಶರವರು ಯಾವ ಮುಲಾಜೂ ಇಲ್ಲದೇ ಧೂಳಿಪಟವಾಗಿಸಿಬಿಟ್ಟರು.
ಸಂವಾದವನ್ನು ಕಳೆದ ಎರಡು ಸಂಚಿಕೆ ಗಳಿಗಿಂತ ಭಿನ್ನವಾಗಿಸಿದ ಬಿ. ಸುರೇಶರಿಗೆ ಕಾರ್ಯಕ್ರಮದ ಯಶಸ್ಸಿಗೆ ದುಡಿದವರಿಗೆ, ಪ್ರಾಯೋಜಕರಿಗೆ, ಸುದ್ದಿ ಮನೆಯ ಮಿತ್ರರಿಗೆ, ಪುಸ್ತಕ ಓದಿ ಸಂವಾದ ನಡೆಸಿದ ಓದುಗರಿಗೆ, ಭಾಗವಹಿಸಿದ ಸಾರ್ವಜನಿಕರಿಗೆ, ದೂರದಿಂದಲೇ ಹರಸಿದ ಎಲ್ಲರಿಗೆ ತುಂಬು ಹೃದಯದ ಧನ್ಯವಾದಗಳು.
(ಇದು ಪ್ರತೀ ತಿಂಗಳ ಮೊದಲ ಭಾನುವಾರ ಮಂಡ್ಯದ ಗಾಂಧಿ ಭವನದಲ್ಲಿ ನಡೆಯುವ ಖಾಯಂ ಕಾರ್ಯಕ್ರಮ. ಆಪ್ತ ಸಂವಾದ ಕಮ್ಯೂನಿಟಿ ಸೇರುವ ಮೂಲಕ ನೀವೂ ಸಹ ತಿಂಗಳಿಗೊಂದು ಪುಸ್ತಕ ಓದಿ ಆ ಪುಸ್ತಕದ ಲೇಖಕರೊಡನೆ ಸಂವಾದ ನಡೆಸಬಹುದು. ಆಸಕ್ತ ವಿದ್ಯಾರ್ಥಿಗಳು ಹಾಗೂ ಓದುಗರಿಗೆ ಪುಸ್ತಕ ಓದಲು ಸ್ಕಾಲರ್ಷಿಪ್ ನೀಡಬಹುದು, ಕಾರ್ಯಕ್ರಮವನ್ನು ಪ್ರಾಯೋಜಿಸಬಹುದು)
ಎಚ್.ಡಿ.ಕೋಟೆ : ಪ್ರಭಾವಿಗಳು ಮತ್ತು ಅಧಿಕಾರಿಗಳು ನಕಲಿ ದಾಖಲೆ ಸೃಷ್ಟಿಸಿ, ಮುಗ್ಧ ಆದಿವಾಸಿ ಜನರ ೮ ಎಕರೆ ಜಮೀನು ಕಬಳಿಸಲು…
ಮೈಸೂರು : ಸಿಎಆರ್, ಡಿಎಆರ್ ಪೇದೆಗಳ ನೇಮಕಾತಿಗಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಭಾನುವಾರ ನಡೆಸಿದ ಸ್ಪರ್ಧಾತ್ಮಕ ಪರೀಕ್ಷೆಯು ಸುಗಮವಾಗಿ ನಡೆಯಿತು.…
ದೆಹಲಿ : ನೈಋತ್ಯ ದೆಹಲಿಯ ಸತ್ಯ ನಿಕೇತನದಲ್ಲಿ ಇಂದು ಮಧ್ಯಾಹ್ನ ಆರು ಅಂತಸ್ತಿನ ಕಟ್ಟಡ ಕುಸಿದು ಹಲವರು ಅವಶೇಷಗಳಡಿ ಸಿಲುಕಿರುವ…
ಬೆಂಗಳೂರು : ತಮಗೆ ಅಶ್ಲೀಲ ಸಂದೇಶ ಕಳಿಸಿದವರ ವಿರುದ್ಧ ನಟಿ ರಮ್ಯಾ ಅವರು ಕಾನೂನು ಸಮರ ಸಾರಿದ್ದು, ರಾಜಿಯಾಗುವ ಪ್ರಶ್ನೆಯೇ…
ಸಿದ್ದಾಪುರ: ಪಟ್ಟಣದೊಳಗೆ ಭಾನುವಾರ ಬೆಳಗಿನ ಜಾವ ಐದು ಕಾಡಾನೆಗಳು ಸಂಚರಿಸಿರುವ ಘಟನೆ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಸಿದ್ದಾಪುರದಿಂದ ಮೈಸೂರು ಕಡೆಗೆ…
ಸೋಮವಾರಪೇಟೆ: ಪಟ್ಟಣದ ಎಂ.ಜಿ. ರಸ್ತೆಯಲ್ಲಿರುವ ಎಸ್‌ಬಿಐ ಬ್ಯಾಂಕ್‌ಗೆ ಹೊಂದಿಕೊಂಡಿರುವ ಎಟಿಎಂ ಅನ್ನು ದರೋಡೆ ಮಾಡಲು ಖದೀಮರ ತಂಡವೊಂದು ಯತ್ನಿಸಿರುವ ಘಟನೆ…