ಮಂಡ್ಯ: ಮೂರು ದಿನಗಳ ಕಾಲ ಸಕ್ಕರೆ ನಾಡು ಮಂಡ್ಯದಲ್ಲಿ ನಡೆಯಲಿರುವ ಕನ್ನಡ ನುಡಿ ಜಾತ್ರೆಗೆ ನಾಳೆ ಅದ್ಧೂರಿ ಚಾಲನೆ ಸಿಗಲಿದ್ದು, ಸಮ್ಮೇಳನಕ್ಕೆ ಬರುವವರಿಗೆ ಭರ್ಜರಿ ಭೋಜನದ ವ್ಯವಸ್ಥೆ ಮಾಡಿಕೊಳ್ಳಲಾಗಿದೆ.
ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಬರುವ ಜನರಿಗೆ ಉಪಾಹಾರ ಹಾಗೂ ಊಟ ನೀಡಲು 140 ಕೌಂಟರ್‌ಗಳನ್ನು ತೆರಯಲಾಗಿದೆ. ಸಮ್ಮೇಳನದಲ್ಲಿ ಭಾಗವಹಿಸುವ ಎಲ್ಲರಿಗೂ ಒಂದೇ ಮೆನುವನ್ನು ಈಗಾಗಲೇ ಸಿದ್ಧ ಮಾಡಲಾಗಿದೆ. ನೂರಾರು ಬಾಣಸಿಗರು ಹಾಗೂ ಸಾವಿರಾರು ಸಹಾಯಕರಿಂದ ಖಾದ್ಯಗಳು ತಯಾರಾಗುತ್ತಿವೆ.
ಇನ್ನು ಈಗಾಗಲೇ ಸಿಹಿ ತಿನಿಸು ತಯಾರಿಕೆ ಆರಂಭವಾಗಿದ್ದು, ಹೋಳಿಗೆ, ಮೈಸೂರು ಪಾಕ್, ಬರ್ಫಿ, ಲಾಡುಗಳನ್ನು ತಯಾರು ಮಾಡಲಾಗುತ್ತಿದೆ.
ನಾಳೆಯಿಂದ ಮೆನು ಪ್ರಕಾರ ಊಟ ರೆಡಿಯಾಗಲಿದ್ದು, ಈ ಬಾರಿ ಮಂಡ್ಯ ಶೈಲಿಯಲ್ಲಿ ಊಟ ಇರಲಿದೆ. ಇದರ ಜೊತೆಗೆ ರಾಜ್ಯದ ಪ್ರಮುಖ ಊಟದ ಮೆನು ಸಹ ಇರಲಿದೆ. ಸಾಹಿತ್ಯ ಸಮ್ಮೇಳನ ನಡೆಯುವ ಮೂರು ದಿನವೂ ಬೆಳಿಗ್ಗೆ ತಿಂಡಿ, ಮಧ್ಯಾಹ್ನ ಹಾಗೂ ರಾತ್ರಿ ಊಟದ ವ್ಯವಸ್ಥೆ ಮಾಡಲಾಗಿದೆ.
ನುರಿತ ಅಡುಗೆ ಸಿಬ್ಬಂದಿ ಅತ್ಯಂತ ಶುಚಿತ್ವದಿಂದ ಖಾದ್ಯಗಳನ್ನು ತಯಾರು ಮಾಡಲಾಗುತ್ತಿದ್ದು, ಅನುಮತಿ ಪಡೆದವರಷ್ಟೇ ಅಡುಗೆ ಮಾಡುವ ಸ್ಥಳಕ್ಕೆ ಪ್ರವೇಶವಿದೆ. ಇಲ್ಲೂ ಕೂಡ ಯಾವುದೇ ಘಟನೆಗಳು ನಡೆಯದಂತೆ ಪೊಲೀಸರನ್ನು ಸಹ ನಿಯೋಜನೆ ಮಾಡಲಾಗಿದೆ.
ವರದಿ ರೂಪ: ರವಿಚಂದ್ರ ಚಿಕ್ಕೆಂಪಿಹುಂಡಿ ಮಾಗಡಿ ರಸ್ತೆಯಲ್ಲಿತ್ತು ದೊಡ್ಡ ಮೋರಿ, ಮರಗಳ ತೋಪು, ಸುತ್ತಲೂ ಕತ್ತಲಿನಿಂದ ಕೂಡಿದ್ದ ನಿರ್ಜನ ಪ್ರದೇಶ…
ಮತದಾರರಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಹೆಸರಿನಲ್ಲಿ ಕೇಂದ್ರ ಚುನಾವಣಾ ಆಯೋಗ ಮತದಾರರ ಸಂವಿಧಾನಬದ್ಧ ಹಕ್ಕನ್ನು ಕಸಿದುಕೊಳ್ಳಲು ಹೊರಟಿದೆ ಎಂದು…
ಆಶಾದಾಯಕ ಕನಸು ಬಿತ್ತುವ ಕೆಲಸಕ್ಕೆ ಚಾಲನೆ ಸಿಗಬೇಕು ಕರ್ನಾಟಕದ ರಾಜಕೀಯ ಚರಿತ್ರೆಯ ದಿಕ್ಕು ೧೯೮೩ ರಲ್ಲಿ ಬದಲಾಯಿತು. ಅರ್ಥಾತ್, ಸ್ವಾತಂತ್ರ್ಯೋತ್ತರ…
ವರದಿ ರೂಪ: ರವಿಚಂದ್ರ ಚಿಕ್ಕೆಂಪಿಹುಂಡಿ ಡೆಡ್ ಬಾಡಿ ಬಿಸಾಕುವ ಸಮಯದಲ್ಲಿ ರಾಘವೇಂದ್ರ ಮತ್ತು ಕಾರ್ತಿಕ್ ಮಧ್ಯೆ ಗಲಾಟೆಯಾಗಿ, ಆತ ಸರೆಂಡರ್…
ನವೀನ್ ಡಿಸೋಜ ೫೦ ಮಳಿಗೆಗಳಲ್ಲಿ ಕಾಫಿ ವೈವಿಧ್ಯ; ೧೩ ಸಾಧಕ ಕೃಷಿಕರಿಗೆ ಸನ್ಮಾನ, ೬೮ ಪೌರಕಾರ್ಮಿಕರಿಗೆ ಗೌರವ ಮಡಿಕೇರಿ: ಮಂಜಿನ…
ಮಂಜು ಕೋಟೆ ವರದರಾಜಸ್ವಾಮಿ, ಚಾಮುಂಡೇಶ್ವರಿ ದೇವಸ್ಥಾನಗಳಲ್ಲಿ ೯ ದಿನಗಳು ವಿವಿಧ ಕಾರ್ಯಕ್ರಮ ಎಚ್.ಡಿ.ಕೋಟೆ: ವಿಶ್ವ ವಿಖ್ಯಾತ ಮೈಸೂರು ದಸರಾ ಭಾನುವಾರ…