ಮಡಿಕೇರಿ: ಮೈಸೂರಿನ ರಂಗಾಯಣದ ವತಿಯಿಂದ ಫೆ.25ರಂದು ಶನಿವಾರ ಸಂಜೆ 6 ಗಂಟೆಗೆ ಕುಶಾಲನಗರದಲ್ಲಿ ‘ಟಿಪ್ಪು ನಿಜ ಕನಸುಗಳು’ ನಾಟಕ ಪ್ರದರ್ಶಿಸಲಾಗುವುದು ಎಂದು ರಂಗಾಯಣ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ ತಿಳಿಸಿದ್ದಾರೆ.
ಕುಶಾಲನಗರದ ನೂತನ ಕಲಾಮಂದಿರದಲ್ಲಿ ರಂಗಾಯಣದ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಈ ನಾಟಕ ರಚಿಸಿ ನಿರ್ದೇಶಿಸಿದ್ದಾರೆ. ಹೆಸರಾಂತ ಕಲಾವಿದ ಶಶಿಧರ ಅಡಪ ರಂಗವಿನ್ಯಾಸ ಮಾಡಿದ್ದು, ಪ್ರಮೋದ್ ಶಿಗ್ಗಾಂವ್ ವಸ್ತ್ರ ವಿನ್ಯಾಸ, ಆರ್.ಸಿ.ಧನಂಜಯ, ಸುಬ್ರಹ್ಮಣ್ಯ ಸಂಗೀತವಿದೆ. 38 ಕಲಾವಿದರು ನಟಿಸಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.
ರಾಜ್ಯವ್ಯಾಪಿ ‘ಟಿಪ್ಪು ನಿಜ ಕನಸುಗಳು’ ನಾಟಕ ಅತ್ಯಂತ ಯಶಸ್ವಿಯಾಗಿದ್ದು, ನಾಟಕ ಪುಸ್ತಕ ಈಗಾಗಲೇ 25 ಸಾವಿರಕ್ಕೂ ಅಧಿಕ ಪ್ರತಿಗಳು ಮಾರಾಟವಾಗಿವೆ. 80 ಸಾವಿರ ಜನರಿಗೆ ಈ ಸಾಹಿತ್ಯ ತಲುಪಿದೆ. ಕುಶಾಲನಗರದಲ್ಲಿ ಶನಿವಾರ ‘ಟಿಪ್ಪು ನಿಜ ಕನಸುಗಳು’ ನಾಟಕದ 38ನೇ ಪ್ರದರ್ಶನ ಆಯೋಜಿತವಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಟಿಕೆಟ್‌ಗಾಗಿ ಮೊ.ಸಂ. 94830 94830 ಅನ್ನು ಸಂಪರ್ಕಿಸಬಹುದಾಗಿದೆ.
ಮೈಸೂರು: ರೈಲ್ವೆ ಇಲಾಖೆಯಲ್ಲಿ ಉದ್ಯೋಗ ಪಡೆಯಲು ಕನ್ನಡಿಗರು ನಿರಾಸಕ್ತಿ ತೋರುತ್ತಿದ್ದಾರೆ ಎಂದು ಕೇಂದ್ರ ಸಚಿವ ವಿ.ಸೋಮಣ್ಣ ಬೇಸರ ವ್ಯಕ್ತಪಡಿಸಿದ್ದಾರೆ. ಈ…
ತುಮಕೂರು: ಕೃಷಿ ಹೊಂಡದಲ್ಲಿ ಸೋಡಿಯಂ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಡ್ರೋನ್ ಪ್ರತಾಪ್‌ಗೆ ಬಿಗ್ ರಿಲೀಫ್ ಸಿಕ್ಕಿದ್ದು, ಜಾಮೀನು ಮಂಜೂರು ಮಾಡಿ…
ಬೆಂಗಳೂರು: 9823 ರೂ ಕೋಟಿ ಮೌಲ್ಯದ 9 ಕೈಗಾರಿಕಾ ಯೋಜನೆಗಳಿಗೆ ರಾಜ್ಯ ಸರ್ಕಾರ ಅನುಮೋದನೆ ನೀಡಿದೆ. ಈ ಹಿನ್ನೆಲೆಯಲ್ಲಿ ಸರಿ…
ಮೈಸೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್‌ಗೆ ಜಾಮೀನು ಸಿಕ್ಕಿರುವ ಹಿನ್ನೆಲೆಯಲ್ಲಿ ವಿಜಯಲಕ್ಷ್ಮೀ ದರ್ಶನ್ ಅವರು ನಾಡಿನ…
ನವದೆಹಲಿ: ಇನ್ನು ಮುಂದೆ ಐದು ಹಾಗೂ ಎಂಟನೇ ತರಗತಿಗಳಲ್ಲೂ ವಿದ್ಯಾರ್ಥಿಗಳನ್ನು ಫೇಲ್ ಮಾಡಬಹುದು ಎಂಬ ಹೊಸ ತಿದ್ದುಪಡಿಯನ್ನು ಕೇಂದ್ರ ಸರ್ಕಾರ…
ಮೈಸೂರು: ಸಿ.ಟಿ.ರವಿ ತಪ್ಪು ಮಾಡಿದ್ದರೆ ಸಭಾಪತಿಗಳು ಶಿಕ್ಷೆಯ ಬಗ್ಗೆ ತೀರ್ಮಾನ ಮಾಡಬೇಕು. ಆದರೆ ರಾಜ್ಯದಲ್ಲಿ ಆ ದಿನ ಸಿ.ಟಿ.ರವಿ ಅವರನ್ನು…